ETV Bharat / health

ಸ್ಯಾಮ್​​ಸಂಗ್​​ ಗ್ಯಾಲಕ್ಸಿ ವಾಚ್​ನಲ್ಲಿ ಸ್ಲೀಪ್​ ಅಪ್ನಿಯಾ ಫೀಚರ್​ ಬಳಕೆಗೆ ಎಫ್​ಡಿಎ ಅನುಮೋದನೆ

author img

By ETV Bharat Karnataka Team

Published : Feb 10, 2024, 3:43 PM IST

Samsung Galaxy Watch: ಸ್ಯಾಮ್​ಸಂಗ್​ ಗ್ಯಾಲಕ್ಸಿ ವಾಚ್​ ಮತ್ತು ಫೋನ್​ ಬಳಕೆದಾರರು ತಮ್ಮ ಆರೋಗ್ಯ ನಿರ್ವಹಣೆ ಆ್ಯಪ್​ನಲ್ಲಿ ಈ​ ಸ್ಲೀಪ್​ ಅಪ್ನಿಯಾ ಲಕ್ಷಣವನ್ನು ಪತ್ತೆ ಮಾಡಬಹುದಾಗಿದೆ.

sleep-apnea-feature-on-samsung-galaxy-watch

ಸ್ಯಾನ್​ ಪ್ರಾನ್ಸಿಸ್ಕೊ: ತನ್ನ ಸ್ಮಾರ್ಟ್​ವಾಚ್​ನ ಆರೋಗ್ಯ ನಿರ್ವಹಣೆ ಆ್ಯಪ್​ನಲ್ಲಿ ಸ್ಲೀಪ್​ ಅಪ್ನಿಯಾ ಫೀಚರ್​​ ಅಳವಡಿಸಿಕೊಳ್ಳಲು ಅಮೆರಿಕದ ಫುಡ್​​ ಅಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್​ (ಎಫ್​ಡಿಎ) ಅನುಮೋದನೆ ನೀಡಿದೆ ಎಂದು ಸ್ಯಾಮ್​​ಸಂಗ್​ ಎಲೆಕ್ಟ್ರಾನಿಕ್ಸ್​​​ ಪ್ರಕಟಿಸಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ವಾಚ್​ ಮತ್ತು ಫೋನ್​ ಬಳಕೆದಾರರು ತಮ್ಮ ಆರೋಗ್ಯ ನಿರ್ವಹಣೆ ಆ್ಯಪ್​ನಲ್ಲಿ ಈ​ ಸ್ಲೀಪ್​ ಅಪ್ನಿಯಾ ಲಕ್ಷಣವನ್ನು ಪತ್ತೆ ಮಾಡಬಹುದುದಾಗಿದೆ. ದಕ್ಷಿಣ ಕೊರಿಯಾದಲ್ಲಿ ಕಳೆದ ಅಕ್ಟೋಬರ್​ನಲ್ಲಿ ಆಹಾರ ಮತ್ತು ಔಷಧ ಸುರಕ್ಷತಾ ಸಚಿವಾಲಯ ಈ ಫೀಚರ್​ ಬಳಕೆಗೆ ಅನುಮತಿ ನೀಡಿತು.

22 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಬಳಕೆದಾರರಲ್ಲಿ ಈ ಸ್ಲೀಪ್​ ಅಪ್ನಿಯಾ ಫೀಚರ್​ ಬಳಕೆ ಲಭ್ಯವಿದೆ. ಈ ಲಕ್ಷಣವನ್ನು ಹೊಂದಿಲ್ಲದವರಲ್ಲಿ ಎರಡು ರಾತ್ರಿಗಳ ಅವಧಿಯ ನಿರ್ವಹಣೆಯನ್ನು ಮಾಡುವ ಮೂಲಕ ಸ್ಲೀಪ್​ ಅಪ್ನಿಯಾ ಅವರಲ್ಲಿ ಸುಧಾರಿತ ಅಥವಾ ಗಂಭೀರವಾಗಿದೆಯೇ ಎಂಬುದನ್ನು ಇದು ಪತ್ತೆ ಮಾಡುತ್ತದೆ.

ಈ ಫೀಚರ್​ ಬಳಕೆಗೆ ಬಳೆದಾರರು 10 ದಿನಗಳ ಅವಧಿಯಲ್ಲಿ ತಮ್ಮ ನಿದ್ದೆಯನ್ನು 4 ಗಂಟೆಗಳ ಕಾಲ ಎರಡು ಬಾರಿ ಟ್ರಾಕ್​ ಮಾಡಲಿದೆ.

ಸ್ಲೀಪ್​ ಅಪ್ನಿಯಾ ಟ್ರಾಕ್​ ಮಾಡಲು ಕಾರಣ: ಸ್ಲೀಪ್​ ಅಪ್ನಿಯಾ ಎಂಬುದು ಗಂಭೀರ ಸಮಸ್ಯೆಯಾಗಿದೆ. ಸೂಕ್ತ ಚಿಕಿತ್ಸೆ ರಹಿತ ಸ್ಲಿಪ್​ ಅಪ್ನಿಯಾದಿಂದ ಹೃದಯದ ಸಮಸ್ಯೆಗಳಾದ ಅಧಿಕ ರಕ್ತದೊತ್ತಡ, ಹೃದಯ ವೈಫಲ್ಯ, ಪಾರ್ಶ್ವವಾಯುನಂತಹ ಅಪಾಯವನ್ನು ಹೊಂದಿದೆ.

ಈ ಫೀಚರ್​ ಗ್ಯಾಲಕ್ಸಿ ವಾಚ್​ನ ಸರಣಿಯಲ್ಲಿ ಅಮೆರಿಕದಲ್ಲಿ ಸ್ಯಾಮ್​ಸಂಗ್​ ಹೆಲ್ತ್​ ಮಾನಿಟರ್​ ಆ್ಯಪ್​ ಮೂಲಕ ಲಭ್ಯವಿದೆ. ಬಳಕೆದಾರರು ತಜ್ಞ ವೈದ್ಯರಿಂದ ಸಾಂಪ್ರದಾಯಿಕ ರೀತಿಯ ರೋಗ ಪತ್ತೆ ಬದಲಾಗಿ ಈ ಫೀಚರ್​ ಅನ್ನು ಬಳಕೆ ಮಾಡಬಾರದು. ಈ ಫೀಚರ್​ನಲ್ಲಿ ಲಭ್ಯವಾಗುವ ದತ್ತಾಂಶವೂ ವೈದ್ಯಕೀಯವಾಗಿ ನಿದ್ರೆಯ ತೊಂದರೆಯನ್ನು ಪತ್ತೆ ಮಾಡುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಏನಿದು ಸ್ಲೀಪ್​ ಅಪ್ನಿಯಾ: ನಿದ್ರೆಯ ವೇಳೆ ಮೂಗು ಕಟ್ಟಿಕೊಂಡು ಬಾಯಿಯಿಂದ ಉಸಿರಾಡುವುದು ಅಸ್ವಸ್ಥತೆಯ ಸಂಕೇತ. ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ಹೈಪೋಥೈರಾಯ್ಡಿಸಮ್, ಚಯಾಪಚಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಸ್ಲೀಪ್​ ಅಪ್ನಿಯಾ ತೊಂದರೆ ಎದುರಿಸುತ್ತಾರೆ. ಉಚ್ವಾಸ, ನಿಶ್ವಾಸದ ವ್ಯತ್ಯಯದಿಂದ ಮೆದುಳು, ಹೃದಯ, ಶ್ವಾಸಕೋಶಕ್ಕೆ ಹಾನಿ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ವೈದ್ಯರ ಎಚ್ಚರಿಕೆಯಾಗಿದೆ. ವೈದ್ಯಕೀಯವಾಗಿ ಪಾಲಿಸೋಮ್ನೋಗ್ರಫಿ ಎಂದು ಕರೆಯಲ್ಪಡುವ ನಿದ್ರೆಯ ಅಧ್ಯಯನದಿಂದ ಸ್ಲೀಪ್ ಅಪ್ನಿಯಾವನ್ನು ಪತ್ತೆ ಮಾಡಬಹುದು. (ಐಎಎನ್​ಎಸ್​)

ಇದನ್ನೂ ಓದಿ: ಕಳಪೆ ನಿದ್ರೆಯಿಂದ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.