ETV Bharat / health

ನಿತ್ಯ ಬೆಳಗಿನ ಉಪಹಾರ ತಿನ್ನುತ್ತಿಲ್ಲವೇ? ಹಾಗಾದರೆ ನಿಮ್ಮ ಆರೋಗ್ಯಕ್ಕೆ ಇದೆ ದೊಡ್ಡ ಅಪಾಯ!: ಸಂಶೋಧನೆ - BREAKFAST SKIPPING EFFECTS

Breakfast Skipping Effects on Health: ದಿನನಿತ್ಯ ಬೆಳಗಿನ ಉಪಹಾರ ಸೇವಿಸದೇ ಇರುವ ಜನರಲ್ಲಿ ಹೃದಯ ಸಮಸ್ಯೆಗಳು ಕಾಣಿಸುತ್ತದೆ ಎಂದು ಇಕಾನ್ ಸ್ಕೂಲ್ ಆಫ್ ಮೆಡಿಸಿನ್ ಅಧ್ಯಯನವು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದೆ.

BREAKFAST SKIPPING EFFECTS  SKIPPING BREAKFAST IS NOT GOOD  SKIPPING BREAKFAST CAUSESS  KIPPING BREAKFAST EFFECTS ON BODY
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : 2 hours ago

Updated : 1 hours ago

Breakfast Skipping Effects on Health: ನೀವು ಪ್ರತಿನಿತ್ಯ ಬೆಳಗಿನ ಉಪಹಾರ ಸೇವಿಸುತ್ತಿಲ್ಲವೇ? ಹಾಗಾದರೆ, ನಿಮಗೆ ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಸೋಸಿಯೇಷನ್ ​​ಆಫ್ ಸ್ಕಿಪ್ಪಿಂಗ್ ಬ್ರೇಕ್ಫಾಸ್ಟ್ ವಿತ್ ಕಾರ್ಡಿಯೋವಾಸ್ಕುಲರ್ ಮತ್ತು ಆಲ್-ಕಾಸ್ ಮಾರ್ಟಲಿಟಿ ಜರ್ನಲ್ ಆಫ್ ಸರ್ಕ್ಯುಲೇಷನ್‌ನಲ್ಲಿ ಪ್ರಕಟವಾಗಿರುವ ಅಧ್ಯಯನವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ಮೌಂಟ್ ಸಿನೈನಲ್ಲಿ ಇಲಿಗಳ ಮೇಲೆ ಫಿಲಿಪ್ ಸ್ವಿರ್ಸ್ಕಿ ನೇತೃತ್ವದ ಇತ್ತೀಚಿನ ಅಧ್ಯಯನವು ಈ ಮಾಹಿತಿಯನ್ನು ಬಹಿರಂಗಪಡಿಸಿದೆ (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

ಏನು ಹೇಳುತ್ತೆ ಸಂಶೋಧನೆ: ಉಪವಾಸ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಆದರೆ, ಅಧ್ಯಯನದ ನೇತೃತ್ವ ವಹಿಸಿರುವ ಫಿಲಿಪ್ ಸ್ವಿರ್ಸ್ಕಿ, ಬೆಳಗಿನ ಉಪಹಾರವನ್ನು ಸೇವಿವುದು ಅಗತ್ಯವಿದೆ ಹಾಗೂ ಸೇವಿಸದೇ ಇದ್ದರೆ, ಆರೋಗ್ಯಕ್ಕೆ ಹಾನಿಯಾಗುವ ಅಪಾಯವಿದೆ ಎಂದು ವಿವರಿಸಿದರು. ನರಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಮಧ್ಯೆ ಹಾಗೂ ಉಪವಾಸ, ಸಂವಹನದ ನಡುವೆ ಸಂಬಂಧವಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

24 ಗಂಟೆಗಳ ಕಾಲ ಉಪವಾಸದ ಕುರಿತ ಪರಿಣಾಮ ಏನು?: ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಕೆಲವು ಗಂಟೆಗಳ ಕಾಲ ಹಾಗೂ ತೀವ್ರವಾಗಿ 24 ಗಂಟೆಗಳ ಕಾಲ ಉಪವಾಸದ ಕುರಿತ ಪರಿಣಾಮವನ್ನು ಸಂಶೋಧಕರು ವಿಶ್ಲೇಷಣೆ ಮಾಡಿದ್ದಾರೆ. ಇದಕ್ಕಾಗಿ, ಕೆಲವು ಇಲಿಗಳು ಎದ್ದ ತಕ್ಷಣ ಆಹಾರವನ್ನು ನೀಡಿದರೆ, ಇತರವುಗಳು ಉಪವಾಸ ಮಾಡಲ್ಪಟ್ಟವು. ಇದಲ್ಲದೇ, ಅವರ ರಕ್ತದ ಮಾದರಿಗಳನ್ನು ಎದ್ದ ತಕ್ಷಣ, ನಾಲ್ಕು ಗಂಟೆಗಳ ನಂತರ ಹಾಗೂ ಎಂಟು ಗಂಟೆಗಳ ನಂತರ ಸಂಗ್ರಹಿಸಲಾಯಿತು.

ಉಪವಾಸ ಇರುತ್ತಿದ್ದ ಇಲಿಗಳಲ್ಲಿ ಮೊನೊಸೈಟ್ಸ್ ಎಂಬ ಬಿಳಿ ರಕ್ತ ಕಣಗಳ ಸಂಖ್ಯೆಯಲ್ಲಿ ಗಮನಾರ್ಹ ವ್ಯತ್ಯಾಸಗಳನ್ನು ಗಮನಿಸಲಾಗಿದೆ. ಅಸ್ಥಿಮಜ್ಜೆಯಿಂದ ತಯಾರಾದ ಈ ಜೀವಕೋಶಗಳು ದೇಹದಾದ್ಯಂತ ಸಂಚರಿಸಿ ಸೋಂಕುಗಳ ವಿರುದ್ಧ ಹೋರಾಡುತ್ತವೆ. ಅವು ಹೃದ್ರೋಗ ಮತ್ತು ಕ್ಯಾನ್ಸರ್​ನ ವಿರುದ್ಧ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಂಶೋಧನಾ ವರದಿಯಲ್ಲಿ ವಿವರಿಸಲಾಗಿದೆ.

ಆರಂಭದಲ್ಲಿ ಎಲ್ಲ ಇಲಿಗಳಲ್ಲಿ ಮೊನೊಸೈಟ್​ಗಳ ಸಂಖ್ಯೆಯು ಒಂದೇ ರೀತಿಯದ್ದಾಗಿತ್ತು. ಆದರೆ, ಉಪವಾಸ ಮಾಡಿದ ಇಲಿಗಳಲ್ಲಿ ನಾಲ್ಕು ಗಂಟೆಗಳ ನಂತರ ಇದು ಗಮನಾರ್ಹವಾಗಿ ಕುಸಿಯಿತು. ಆರಂಭದಲ್ಲಿ, ಮೊನೊಸೈಟ್​​ಗಳು ರಕ್ತದಿಂದ ಶೇ90 ರ ವರೆಗೆ ಕಣ್ಮರೆಯಾಯಿತು. ಆದರೆ, ಎಂಟು ಗಂಟೆಗಳ ನಂತರ, ಅವು ಮತ್ತಷ್ಟು ಕಡಿಮೆಯಾಗುತ್ತವೆ. ಈ ಮೊನೊಸೈಟ್​ಗಳು ಅಸ್ಥಿಮಜ್ಜೆಗೆ ಮರಳಿದವು, ಸುಪ್ತ ಸ್ಥಿತಿಗೆ ಹೋದವು. ಇದರಿಂದಾಗಿ ಅಸ್ಥಿಮಜ್ಜೆಯಲ್ಲಿ ಹೊಸ ಕೋಶಗಳ ಉತ್ಪಾದನೆ ಕುಸಿದಿದೆ. ಹಳೆಯ ಕೋಶಗಳು ದೀರ್ಘಕಾಲ ಉಳಿಯುವುದರಿಂದ ರಕ್ತದಲ್ಲಿನ ಮೊನೊಸೈಟ್‌ಗಳಿಗಿಂತ ವಿಭಿನ್ನವಾಗಿ ತಯಾರಿಸಲ್ಪಟ್ಟಿದೆ ಎಂದು ತಜ್ಞರು ತಿಳಿಸುತ್ತಾರೆ.

ಒಂದು ದಿನದ ನಂತರ ಆಹಾರ ನೀಡಿದಾಗ ಆಗಿದ್ದೇನು?: ಒಂದು ದಿನದ ನಂತರ, ಇಲಿಗಳಿಗೆ ಆಹಾರವನ್ನು ನೀಡಿದಾಗ, ಮೂಳೆ ಮಜ್ಜೆಯಲ್ಲಿ ಅಡಗಿದ್ದ ಮೊನೊಸೈಟ್​ಗಳು ಕೆಲವೇ ಗಂಟೆಗಳಲ್ಲಿ ರಕ್ತಕ್ಕೆ ಮರಳಿದವು. ಊತ ಪ್ರಕ್ರಿಯೆ (ಉರಿಯೂತ) ದೊಡ್ಡ ಪ್ರಮಾಣದಲ್ಲಿ ಹುಟ್ಟಿಕೊಂಡಿದೆ. ಈ ಬದಲಾದ ಜೀವಕೋಶಗಳು ಸೋಂಕಿನಿಂದ ರಕ್ಷಿಸುವ ಬದಲು ಉರಿಯೂತವನ್ನು ಹೆಚ್ಚಿಸುತ್ತವೆ. ಪರಿಣಾಮವಾಗಿ, ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ. ಇದು ಹೃದ್ರೋಗ ಹಾಗೂ ಕ್ಯಾನ್ಸರ್​ನತಹ ಕಾಯಿಲೆಗಳಿಗೆ ಮೂಲ ಕಾರಣವಾಗಿದೆ.

ಮೆದುಳಿನಲ್ಲಿನ ಒತ್ತಡದ ಪ್ರತಿಕ್ರಿಯೆಯಿಂದಾಗಿ ಉಪವಾಸವು ಹಸಿವಿನ ಸಂಕಟವನ್ನು ಪ್ರಚೋದಿಸುತ್ತದೆ. ಇದು ಬಿಳಿ ಕಣಗಳು ರಕ್ತದಿಂದ ಅಸ್ಥಿಮಜ್ಜೆಗೆ ಮತ್ತು ಮತ್ತೆ ಮಜ್ಜೆಯಿಂದ ರಕ್ತಕ್ಕೆ ಚಲಿಸಲು ಸಹಾಯ ಮಾಡುತ್ತಿದೆ ಎಂದು ಕಂಡು ಹಿಡಿಯಲಾಗಿದೆ. ಉಪವಾಸದಿಂದ ಮೆಟಬಾಲಿಸಂ ದೃಷ್ಟಿಯಿಂದ ಒಳ್ಳೆಯ ಲಾಭಗಳಿವೆ. ಆದರೆ, ಎಲ್ಲಾ ಲಾಭಗಳೂ ಸಿಗುತ್ತವೆ ಎಂದುಕೊಳ್ಳಬೇಡಿ. ಈ ಅಧ್ಯಯನವು ದೇಹದ ವ್ಯವಸ್ಥೆಗಳ ಮೇಲೆ ಉಪವಾಸದ ಪರಿಣಾಮಗಳ ಬಗ್ಗೆ ಆಳವಾದ ತಿಳುವಳಿಕೆಗೆ ಕೊಡುಗೆ ನೀಡುತ್ತದೆ ಎಂದು ಸಂಶೋಧಕರು ಮಾಹಿತಿ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://pmc.ncbi.nlm.nih.gov/articles/PMC6787634/

ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನೂ ಓದಿ:

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.