ನವದೆಹಲಿ: ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಆರು ಜೀನ್ಸ್ (ವಂಶವಾಹಿ)ಗಳು ನಿರ್ಣಾಯಕ ಪಾತ್ರವಹಿಸುತ್ತದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಇವುಗಳು ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದ ಭಾವನೆಗಳ ಅಭಿವ್ಯಕ್ತಿ, ವ್ಯಕ್ತಿತ್ವದ ನಿರ್ಧಾರ, ಪ್ರದರ್ಶನ ಮತ್ತು ವ್ಯಕ್ತಿಯ ಗ್ರಹಿಕೆ ಮೇಲೆ ಪ್ರಮುಖವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಈ ಜೀನ್ಗಳು ಏಕಕೋಶೀಯ ಜೀವಿಗಳಿಂದ ಆಧುನಿಕ ಮಾನವನವರೆಗೆ ವಿಕಾಸದ ಹಾದಿಯಲ್ಲಿ ಬದಲಾವಣೆಗೆ ಒಳಗಾಗದೇ ಬಹಳ ಸುರಕ್ಷಿತವಾಗಿವೆ. ಭೂಮಿಯ ಮೇಲಿನ ಜೀವಿಗಳ ನಡವಳಿಕೆ ನಿರ್ಧರಿಸುವಲ್ಲಿ ಇವು ಪ್ರಮುಖ ಪಾತ್ರವಹಿಸುತ್ತವೆ ಎಂದು ಅಧ್ಯಯನದಲ್ಲಿ ವಿವರಿಸಲಾಗಿದೆ
ಜೀನ್ಗಳು ಲಕ್ಷಣ ಮತ್ತು ನಡುವಳಿಕೆ ಬದಲಾವಣೆ ಗಮನಿಸಬಹುದಾಗಿದೆ. ಇವುಗಳನ್ನು ಅಭಿವ್ಯಕ್ತಿ ಜೀನ್ ಎಂದು ಕರೆಯಲಾಗುತ್ತಿದೆ. ಸ್ಪೇನ್ನ ಗ್ರನಡ ಯುನಿವರ್ಸಿಟಿ ವಿಜ್ಞಾನಿಗಳ ಅಂತಾರಾಷ್ಟ್ರೀಯ ತಂಡ ಇದರ ಆರೋಗ್ಯ ಪ್ರಯೋಜನವನ್ನು ಪರೀಕ್ಷಿಸಿದೆ. ಫಿನ್ಲ್ಯಾಂಡನ್ ನಲ್ಲಿ ನಾಲ್ಕು ದಶಕಗಳ ಕಾಲ 459 ಜನರ ದತ್ತಾಂಶಗಳನ್ನು ಸಂಗ್ರಹಿಸಿ ಅವುಗಳನ್ನು ಕೃತಕ ಬುದ್ಧಿಮತ್ತೆ (ಎಐ)ನೊಂದಿಗೆ ವಿಶ್ಲೇಷಿಸಲಾಗಿದೆ. ಇದರಲ್ಲಿ ವ್ಯಕ್ತಿಗಳ ಆರೋಗ್ಯ, ದೈಹಿಕ ಪರಿಸ್ಥಿತಿ, ಜೀವನಶೈಲಿ ಮತ್ತು ವ್ಯಕ್ತಿತ್ವಕ್ಕೆ ಅನುಗುಣವಾದ ಹವ್ಯಾಸ, ಭಾವನಾತ್ಮಕ ಪ್ರತಿಕ್ರಿಯೆ, ಗುರಿ, ವ್ಯಕ್ತಿ ಸಂಪಾದಿಸಿದ ಮೌಲ್ಯ ಸಂಬಂಧಿತ ಮಾಹಿತಿ ಸಂಗ್ರಹಿಸಲಾಗಿದೆ.
ಜೀನ್‌ಗಳ ಅಭಿವ್ಯಕ್ತಿ ಮತ್ತು ಗುಂಪು ರಚನೆಯು ವ್ಯಕ್ತಿತ್ವದ ಆಧಾರದ ಮೇಲೆ ನಡೆಯುತ್ತಿದೆ ಎಂದು ಗಮನಿಸಲಾಗಿದೆ. ಮೆದುಳಿನ ನಿರ್ದಿಷ್ಟ ಪ್ರದೇಶಗಳಲ್ಲಿ 4,000 ವಂಶವಾಹಿಗಳ ಅಭಿವ್ಯಕ್ತಿಯನ್ನು ಒಳಗೊಂಡ ಜಾಲವನ್ನು ಅವರು ಗಮನಿಸಿದರು. ಇವುಗಳಲ್ಲಿ ಕೆಲವು ಮಾನವ ವ್ಯಕ್ತಿತ್ವದ ಉತ್ತರಾಧಿಕಾರಕ್ಕೆ ಕೊಡುಗೆ ನೀಡುತ್ತವೆ ಎಂಬುದು ಈಗಾಗಲೇ ಬಹಿರಂಗವಾಗಿದೆ. ಕೆಲವು ನಿರ್ದಿಷ್ಟ ಗುಂಪುಗಳಾಗಿ ರೂಪುಗೊಳ್ಳುವ ಮೂಲಕ ಅನೇಕ ಮಾದರಿಗಳ ಮೂಲಕ ರೂಪಾಂತರವಾಗುತ್ತದೆ. ಇವು ಜೀನ್ ಅಭಿವ್ಯಕ್ತಿಯನ್ನು ನಿಯಂತ್ರಿಸುತ್ತವೆ ಎಂದು ಹೇಳಲಾಗುತ್ತದೆ. ಸಂಬಂಧಪಟ್ಟ ವ್ಯಕ್ತಿಯ ಸಂದರ್ಭಗಳಿಗೆ ಅನುಗುಣವಾಗಿ ಅವುಗಳನ್ನು ಸರಿಹೊಂದಿಸಲಾಗುತ್ತಿದೆ ಎಂದು ಗಮನಿಸಲಾಗಿದೆ. ಈ ಮಾದರಿಗಳನ್ನು ಸುಲಭವಾಗಿ ಆನ್ ಮತ್ತು ಆಫ್ ಮಾಡಬಹುದು ಎಂದು ಸಂಶೋಧಕರು ವಿವರಿಸಿದ್ದಾರೆ. ಈ ಮೂಲಕ ನಿತ್ಯ ಎದುರಿಸುತ್ತಿರುವ ಸವಾಲುಗಳಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆರು ಜೀನ್‌ಗಳಿಂದ ಮಾಡಲ್ಪಟ್ಟ ಒಂದು ನಿಯಂತ್ರಣ ಕೇಂದ್ರವು, ಭಾವನೆಗಳು ಮತ್ತು ಮಾದರಿಗಳ ನಿಯಂತ್ರಣವನ್ನು ನೋಡಿಕೊಳ್ಳುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಜೀವನದ ಕೆಲವು ದೃಷ್ಟಿಕೋನಗಳು ಆರೋಗ್ಯಕರ, ದೀರ್ಘಾವಧಿಯ ಜೀವನಕ್ಕೆ ಅನುಕೂಲಕರವಾಗಿದ್ದರೆ, ಮತ್ತೆ ಕೆಲವು ಒತ್ತಡದ, ಅನಾರೋಗ್ಯಕರ ಮತ್ತು ಅಲ್ಪ ಜೀವನಕ್ಕೆ ಕಾರಣವಾಗುತ್ತದೆ ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.
ಇದನ್ನೂ ಓದಿ: ಇಸ್ರೇಲ್ನಲ್ಲಿ ಆಟಿಸಂ ರೋಗಿಗಳ ಪ್ರಮಾಣ ಶೇ.41ರಷ್ಟು ಏರಿಕೆ