ದಾಳಿಂಬೆ ಹಣ್ಣು ಸಾಕಷ್ಟು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ವಿಶೇಷ ರುಚಿ ಹೊಂದಿರುವ ಈ ಹಣ್ಣಿಗೆ ಬಹುಬೇಡಿಕೆ ಇದೆ. ಫ್ಲೇವನಾಯ್ಡ್‌ಗಳು ಮತ್ತು ಆಂಥೋಸಯಾನಿನ್‌ಗಳಂತಹ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಇದು ಹೊಂದಿದ್ದು, ಒತ್ತಡ ಮತ್ತು ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆ ಕಡಿಮೆ ಮಾಡಲು ಸಹಾಯಕ.
ದಾಳಿಂಬೆಯ ಪ್ರಯೋಜನಗಳಿವು: ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುವ ದಾಳಿಂಬೆ, ಸಂಧಿವಾತ ಸಮಸ್ಯೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಗರ್ಭದಾರಣೆಗೂ ದಾಳಿಂಬೆ ಸಹಾಯ ಮಾಡುತ್ತದೆ. ಇಷ್ಟೆಲ್ಲಾ ವಿವಿಧ ರೀತಿಯಲ್ಲಿ ಆರೋಗ್ಯಕ್ಕೆ ಒಳಿತಾಗಿರುವ ದಾಳಿಂಬೆ ಕೆಲವು ಅಡ್ಡ ಪರಿಣಾಮಗಳನ್ನೂ ಹೊಂದಿದೆ.
ಇವು ಅಡ್ಡ ಪರಿಣಾಮಗಳು: ಅತಿಯಾದ ದಾಳಿಂಬೆ ಸೇವನೆ ಕೆಲವೊಮ್ಮೆ ಅತಿಸಾರಕ್ಕೂ ಕಾರಣವಾಗುತ್ತದೆ. ತುರಿಕೆ ಮತ್ತು ಊತದಂತಹ ಅಲರ್ಜಿ ಸಮಸ್ಯೆಗಳು ಉಂಟಾಗುತ್ತವೆ. ದಿನಕ್ಕೆ ಅರ್ಧ ಕಪ್ ದಾಳಿಂಬೆಯನ್ನು ತಿಂದರೂ ಅಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ದಾಳಿಂಬೆ ಹಣ್ಣುಗಳು ಆರೋಗ್ಯಕ್ಕೆ ಪ್ರಯೋಜನ ನೀಡಿದರೂ ಈ ಹಣ್ಣನ್ನು ಬೇರೆ ಹಣ್ಣಿನೊಂದಿಗೆ ಅಥವಾ ಔಷಧಗಳೊಂದಿಗೆ ಸೇವಿಸುವುದರಿಂದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ದಾಳಿಂಬೆ ಸಣ್ಣ ಪ್ರಮಾಣದಲ್ಲಿ ಆಮ್ಲ ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಬಾಳೆಹಣ್ಣಿನಂತಹ ಸಿಹಿ ಹಣ್ಣಿನೊಂದಿಗೆ ಇದನ್ನು ಸೇವಿಸಬಾರದು. ಈ ಎರಡು ಹಣ್ಣಿನ ಸಂಯೋಜನೆ ಚಯಾಪಚಯನ ಕ್ರಿಯೆಗೆ ಅಡ್ಡಿಯಾಗುತ್ತದೆ.
ವಾರ್ಫಾರಿಸ್: 2018ರಲ್ಲಿ ಫುಡ್ ಆ್ಯಂಡ್ ಡ್ರಗ್ ಅನಾಲಿಸಿಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದಂತೆ, ದಾಳಿಂಬೆ ವಾರ್ಫಾರಿನ್ ಮಾತ್ರೆಯೊಂದಿಗೆ ಸಂಯೋಜನೆ ಹೊಂದುತ್ತದೆ. ಈ ವಾರ್ಫಾರಿಸ್ ಔಷಧವನ್ನು ರಕ್ತ ತೆಳುವಾಗುವುದನ್ನು ತಡೆಯಲು ಉಪಯೋಗಿಸಲಾಗುತ್ತದೆ.
ನೈಟ್ರೆಂಡಿಪೈನ್: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವರು ಕ್ಯಾಲ್ಸಿಯಂ ಚಾನಲ್ ಬ್ಲಾಕರ್ ಆಗಿ ಇದನ್ನು ಬಳಸುತ್ತಾರೆ. ಈ ಔಷಧ ಬಳಸುವವರು ದಾಳಿಂಬೆ ಸೇವನೆ ಮಾಡುವುದರಿಂದ ಚಯಾಪಚಯಮ ಶಕ್ತಿ ಕಡಿಮೆಯಾಗುತ್ತದೆ.
ಸ್ಟಾಟಿನ್: ಕಡಿಮೆ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟಕ್ಕಾಗಿ ಸ್ಟಾಟಿನ್ ಬಳಸಲಾಗುತ್ತದೆ. ಈ ಔಷಧಿಯ ಜೊತೆಗೆ ದಾಳಿಂಬೆ ಸೇವನೆ ರಾಬ್ಡೋಮಿಯೋಲಿಸಿಸ್ಸ್‌ಗೆ ಕಾರಣವಾಗಬಹುದು. ಇದು ಸ್ನಾಯು ಅಂಗಾಂಶದ ಸ್ಥಗಿತ ಮತ್ತು ಮೂತ್ರಪಿಂಡದ ಹಾನಿಯ ಅಪಾಯಕ್ಕೂ ಕಾರಣವಾಗುತ್ತದೆ.
ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ಒದಗಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಆಪ್ತ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಬೇಕಾ? ಹಾಗಾದ್ರೆ ಬೆಳ್ಳುಳ್ಳಿ ಸೇವಿಸಿ