Alcohol Side Effects: ಕೆಲವರು ಪ್ರತಿದಿನ ಆಲ್ಕೊಹಾಲ್ ಅನ್ನು ಸೇವನೆ ಮಾಡುತ್ತಾರೆ. ಮತ್ತೆ ಕೆಲವರು ವಾರಕ್ಕೊಮ್ಮೆ ಮತ್ತು ಆಗಾಗ್ಗೆ ಮದ್ಯ ಸೇವಿಸುತ್ತಾರೆ. ಆಲ್ಕೊಹಾಲ್ ಸೇವನೆ ಯಾವ ವಯಸ್ಸಿನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಪ್ರಶ್ನೆಯು ಹಲವರನ್ನು ಕಾಡುತ್ತದೆ. ಆದ್ರೆ, ಸಂಶೋಧನಾ ವರದಿಯೊಂದರ ಪ್ರಕಾರ, ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ಗೊತ್ತಾಗಿದೆ. ಜರ್ನಲ್ JAMA ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯು 60 ವರ್ಷ ವಯಸ್ಸಿನ ನಂತರ ಪ್ರತಿದಿನ ಕುಡಿಯುವವರಿಗೆ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಕೆ ನೀಡಿದೆ.
JAMA ನೆಟ್‌ವರ್ಕ್ ಓಪನ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ವಯಸ್ಸಾದ ವ್ಯಕ್ತಿಗಳಲ್ಲಿ ಆಲ್ಕೊಹಾಲ್ ಸೇವನೆಯಿಂದ ಉಂಟಾಗುವ ಅಪಾಯಗಳನ್ನು ಎತ್ತಿ ತೋರಿಸುತ್ತದೆ. ಮುಖ್ಯವಾಗಿ ಕ್ಯಾನ್ಸರ್, ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳ ಅಪಾಯ ಉಂಟಾಗುತ್ತದೆ. ಯಾವ ಪ್ರಮಾಣದಲ್ಲಿ ಆಲ್ಕೋಹಾಲ್ ಅನ್ನು ಸೇವಿಸಬೇಕು ಎಂದು ಲೆಕ್ಕಿಸುವುದಿಲ್ಲ. ಇದರಿಂದ ಈ ರೋಗಗಳಿಗೆ ತುತ್ತಾಗುವ ಅಪಾಯವು ಹೆಚ್ಚಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಮದ್ಯ ಕುಡಿಯುವುದರಿಂದ ಯಾವುದೇ ಹಾನಿ ಇಲ್ಲ ಎಂದು ಬಹಳ ಹಿಂದಿನಿಂದಲೂ ನಂಬಲಾಗಿದೆ. ಆದ್ರೆ, ಇದು ನಿಜವಲ್ಲ ಎಂದು ಇತ್ತೀಚಿನ ಅಧ್ಯಯನವು ಸೂಚಿಸುತ್ತದೆ. ಯುಕೆ ಬಯೋಬ್ಯಾಂಕ್‌ನಲ್ಲಿ 1.35 ಲಕ್ಷ ಜನರ ಆರೋಗ್ಯ ವಿವರಗಳನ್ನು ಪರಿಶೀಲಿಸಿದ ನಂತರ ಈ ಅಂಶ ಬಹಿರಂಗವಾಗಿದೆ.
ಈ ವಯಸ್ಸಿನವರಿಗೆ ಹೈ ರಿಸ್ಕ್: ಅಧ್ಯಯನದ ಪ್ರಾರಂಭದಲ್ಲಿ ಅವರ ಸರಾಸರಿ ವಯಸ್ಸು 64 ವರ್ಷದವರನ್ನು ಪರಿಗಣನೆಗೆ ತೆಗೆದುಕೊಳ್ಳಲಾಯಿತು. ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಮದ್ಯ ಮಾಡುವುದು 'ಹೈ ರಿಸ್ಕ್' ವರ್ಗಕ್ಕೆ ಸೇರಿಸಲಾಗುತ್ತದೆ. ಆದರೆ, ವಾರಕ್ಕೆ ಎರಡಕ್ಕಿಂತ ಕಡಿಮೆ ಮದ್ಯ ಸೇವಿಸವವರನ್ನು 'ಸಾಂದರ್ಭಿಕ ಕುಡಿಯುವವರು' ಎಂದು ಪರಿಗಣಿಸಲಾಗುತ್ತದೆ. ಅವರನ್ನು 12 ವರ್ಷಗಳ ಕಾಲ ಗಮನಿಸಲಾಯಿತು. ಸಾಂದರ್ಭಿಕವಾಗಿ ಕುಡಿಯುವವರಿಗೆ ಹೋಲಿಸಿದರೆ, ಹೆಚ್ಚಿನ ಅಪಾಯದ ಗುಂಪಿನಲ್ಲಿರುವವರು ಅಕಾಲಿಕ ಮರಣದ ಅಪಾಯವನ್ನು ಶೇ. 33 ಮತ್ತು ಕ್ಯಾನ್ಸರ್ನಿಂದ ಸಾಯುವ ಅಪಾಯವು ಶೇ. 39% ಮತ್ತು ಹೃದಯರಕ್ತನಾಳದ ಸಮಸ್ಯೆಗಳಿಂದ ಸಾಯುವ ಅಪಾಯವು ಶೇ. 21 ಹೆಚ್ಚು ಇದೆ ಎಂದು ತಿಳಿದಿದೆ.
ಕ್ಯಾನ್ಸರ್ನಿಂದ ಸಾಯುವ ಅಪಾಯ: ಮಧ್ಯಮ ಪ್ರಮಾಣದಲ್ಲಿ ಮದ್ಯ ಸೇವಿಸುವವರಿಗೂ ಸಹ ಸಾವಿನ ಅಪಾಯ ಹೆಚ್ಚಿರುತ್ತದೆ. ದಿನಕ್ಕೆ ಸರಾಸರಿ ಒಂದಕ್ಕಿಂತ ಕಡಿಮೆ ಬಾರಿ ಮದ್ಯ ಸೇವಿಸುವವರಿಗೆ ಕ್ಯಾನ್ಸರ್ನಿಂದ ಸಾಯುವ ಅಪಾಯವು ಶೇ. 11ರಷ್ಟಿದೆ. ಅತಿಯಾದ ಮದ್ಯಪಾನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಿವೆ ಎಂಬುದನ್ನು ಅಧ್ಯಯನಗಳು ಮೊದಲಿನಿಂದಲೂ ಒತ್ತಿಹೇಳುತ್ತಿವೆ. ಮಧ್ಯಮ ಪ್ರಮಾಣದಲ್ಲಿ ಮದ್ಯ ಸೇವನೆಯು ಸುರಕ್ಷಿತವಾಗಿದೆ ಎಂಬ ಕಲ್ಪನೆಯಿಂದಲೂ ಸವಾಲು ಎದುರಾಗುತ್ತದೆ. ಸಂಶೋಧಕರು, ಮದ್ಯ ಸೇವಿಸುವ ಅಭ್ಯಾಸವನ್ನು ಮರು-ಮೌಲ್ಯಮಾಪನ ಮಾಡುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ. ವಿಶೇಷವಾಗಿ ವಯಸ್ಸಾದವರಲ್ಲಿ ಹೆಚ್ಚಿದ ಮರಣ ಮತ್ತು ತೀವ್ರ ಆರೋಗ್ಯ ಸಮಸ್ಯೆಗಳ ಸಂಭವನೀಯತೆ ಹೆಚ್ಚಿದೆ ಅನ್ನೋದು ಸಂಶೋಧನೆಯಿಂದ ಸ್ಪಷ್ಟವಾಗಿದೆ.
ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ಸಂಪರ್ಕಿಸಬಹುದು:
https://jamanetwork.com/journals/jamanetworkopen/fullarticle/2822215
ಓದುಗರ ಗಮನಕ್ಕೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.