ETV Bharat / health

ಅತಿಯಾದ ಸಕ್ಕರೆ ಸೇವನೆಯಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳಿವೆ ಗೊತ್ತಾ? ತಪ್ಪದೇ ತಿಳಿದುಕೊಳ್ಳಿ - Sugar Side Effects - SUGAR SIDE EFFECTS

ಅಧಿಕ ಪ್ರಮಾಣದ ಸಕ್ಕರೆ ಸೇವನೆಯು ಮಾನವನ ಮೆದುಳಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿವೆ.

ಸಕ್ಕರೆ ಸೇವನೆ ಮೆದುಳಿಗೆ ಎಪೆಕ್ಟ್
ಸಕ್ಕರೆ ಸೇವನೆ ಮೆದುಳಿಗೆ ಎಪೆಕ್ಟ್
author img

By ETV Bharat Karnataka Team

Published : Mar 27, 2024, 6:55 AM IST

ಅತಿಯಾದ ಸಕ್ಕರೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಹೀಗಿದ್ದರೂ ಕೆಲವು ಸಿಹಿಪ್ರಿಯರಿಗೆ ಸಕ್ಕರೆ ಬಿಟ್ಟು ಬದುಕಲಾರದಷ್ಟು ನಂಟು. ಆದರೆ, ವಿಪರೀತ ಸಕ್ಕರೆ ಸೇವಿಸುವುದರಿಂದ ಮೆದುಳಿನ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂಬುದು ಗಮನಾರ್ಹ.

ಹಾರ್ಮೋನ್‌ಗಳಲ್ಲಿ ಅಸಮತೋಲನ: ನಾವು ಸಿಹಿ ಪದಾರ್ಥಗಳನ್ನು ಸೇವಿಸಿದಾಗ ಅವು ನಮ್ಮ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಯನ್ನು ಪ್ರಚೋದಿಸುತ್ತದೆ. ಇದರಿಂದ ಮೆದುಳಿನ ಪ್ರತಿಫಲ ವ್ಯವಸ್ಥೆಯಲ್ಲಿ ಡೋಪಮೈನ್​ ಮತ್ತು ಸಿರೊಟೋನಿನ್‌ನಂತಹ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇವೆರಡೂ ನಮಗೆ ಸಂತೋಷ ಮತ್ತು ನಿರಾಳವಾಗಿರಲು ಸಹಾಯ ಮಾಡುತ್ತವೆ. ಆದರೆ ನೆನಪಿಡಿ, ಸಕ್ಕರೆಯನ್ನು ಹಿತಮಿತವಾಗಿ ಬಳಸುತ್ತಿದ್ದರೆ ಮಾತ್ರ ಇದು ಸಾಧ್ಯ. ಮಿತಿ ಮೀರಿ ಸೇವಿಸಿದಾಗ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ನಿದ್ರಾಹೀನತೆ, ಮಾನಸಿಕ ಖಿನ್ನತೆ: ಹೆಚ್ಚಿನ ಸಕ್ಕರೆ ಸೇವನೆ ನಿದ್ರಾಹೀನತೆಗೆ ಕಾರಣವಾಗುತ್ತದೆ. ದೇಹವು ಸಕ್ಕರೆಯನ್ನು ಜೀರ್ಣಿಸಿದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್​ ನಿದ್ರಾಹೀನತೆಗೆ ಕಾರಣವಾಗುತ್ತದೆ.

ಅಷ್ಟೇ ಅಲ್ಲದೇ, ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಿಹಿ ಆಹಾರಗಳು ಖಿನ್ನತೆಗೂ ಕಾರಣ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಅಂತಾರಾಷ್ಟ್ರೀಯ ಜರ್ನಲ್‌ವೊಂದರಲ್ಲಿ ಪ್ರಕಟವಾದ 2017ರ ಅಧ್ಯಯನ ವರದಿ, ಹೆಚ್ಚು ಸಕ್ಕರೆ ಪಾನೀಯಗಳನ್ನು ಸೇವಿಸುವ ಜನರಲ್ಲಿ ಖಿನ್ನತೆಯ ಮಟ್ಟ ಶೇ.23ರಷ್ಟು ಹೆಚ್ಚಿದೆ ಎಂದು ಕಂಡುಹಿಡಿದಿದೆ.

ಇಲಿಗಳ ಮೇಲೆ ಪ್ರಯೋಗ: ಡಾ.ನಿಕೋಲ್ ಅವೆನಾ ಎಂಬ ವೈದ್ಯರು ಸಕ್ಕರೆಯಿಂದ ಉಂಟಾಗುವ ಪರಿಣಾಮಗಳನ್ನು ಕಂಡುಹಿಡಿಯಲು ಇಲಿಗಳ ಮೇಲೆ ಸಂಶೋಧನೆ ನಡೆಸಿದ್ದರು. ಈ ಸಂಶೋಧನೆಯ ಭಾಗವಾಗಿ, ಇಲಿಗಳಿಗೆ ನೀರಿನ ಬದಲು ಸಕ್ಕರೆ ನೀರು ನೀಡಲಾಗಿತ್ತು. ಇಲ್ಲಿ ಕಂಡುಬಂದ ವಿಚಾರವೇನು ಗೊತ್ತಾ?. ಇಲಿಗಳ ಮೆದುಳಿನ ಮೇಲೆ ಒತ್ತಡ ಹೆಚ್ಚಾಯಿತು. ಇಲಿಗಳು ಹೆಚ್ಚು ನೀರು ಕುಡಿಯಲು ಪ್ರಾರಂಭಿಸಿದವು. ಅದಾದ ಬಳಿಕ ಅವುಗಳಿಗೆ ಸಾಮಾನ್ಯ​ ನೀರು ನೀಡಿದ್ದು, ಅವುಗಳು ಯಾವುದೇ ಒತ್ತಡ ಇಲ್ಲದೇ ಇದ್ದವು ಎಂದು ಗೊತ್ತಾಗಿದೆ.

ಹೆಚ್ಚಿನ ಸಕ್ಕರೆಯ ಆಹಾರ ಬಳಕೆ ಮೆದುಳಿನ ಭಾಗವಾಗಿರುವ ಹಿಪೊಕ್ಯಾಂಪಸ್ ಮೇಲೆ ತೊಂದರೆ ಉಂಟುಮಾಡುತ್ತದೆ. ಹಿಪೊಕ್ಯಾಂಪಸ್ ಮೆದುಳಿನ ಒಂದು ಭಾಗವಾಗಿದ್ದು ಸ್ಮರಣೆ, ಕಲಿಕೆ, ಭಾವನೆಗಳಿಗೆ ಸಂಬಂಧಿಸಿದ್ದಾಗಿದೆ.

ಓದುಗರಿಗೆ ಸೂಚನೆ: ಇಲ್ಲಿ ಒದಗಿಸಲಾದ ಎಲ್ಲಾ ಆರೋಗ್ಯ ಮಾಹಿತಿ ವೈದ್ಯಕೀಯ ಸಲಹೆಗಳಿಂದ ಪಡೆದಿದ್ದಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಗಳನ್ನು ಆಧರಿಸಿ ಈ ಮಾಹಿತಿಯನ್ನು ಒದಗಿಸಲಾಗಿದೆ. ಹೀಗಿದ್ದರೂ ಇವುಗಳನ್ನು ಪಾಲಿಸುವ ಮುನ್ನ ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನೀವು ರಾತ್ರಿ 12ರ ನಂತರ ಮಲಗುತ್ತೀರಾ? ಇದು ಅನಾರೋಗ್ಯದ ಎಚ್ಚರಿಕೆಯ ಘಂಟೆ! - late night sleep

ETV Bharat Logo

Copyright © 2025 Ushodaya Enterprises Pvt. Ltd., All Rights Reserved.