SALT WATER BATH FOR SKIN: ಉಪ್ಪುನೀರು ಕುಡಿಯುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ ಎಂಬುದು ನಮಗೆ ಗೊತ್ತೇ ಇದೆ. ಅದೇ ಉಪ್ಪು ನೀರಿನಲ್ಲಿ ಸ್ನಾನ ಮಾಡಿದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಉಪ್ಪು ನೀರಿನಿಂದ ಸ್ನಾನ ಮಾಡಿದರೆ ಬೆನ್ನು ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇಂತಹ ಪ್ರಶ್ನೆಗಳಿಗೆ ಆರ್ಥೋಪೆಡಿಕ್ಸ್ ಮತ್ತು ಜಾಯಿಂಟ್ ರಿಪ್ಲೇಸ್‌ಮೆಂಟ್‌ನ ಅಸೋಸಿಯೇಟ್ ಡೈರೆಕ್ಟರ್ ಡಾ.ಅಖಿಲೇಶ್ ಯಾದವ್ ಉತ್ತರಿಸಿದ್ದಾರೆ. ಉಪ್ಪು ನೀರಿನಲ್ಲಿ ಸ್ನಾನ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ. ಸ್ನಾನದ ನೀರಿನಲ್ಲಿ ಎಪ್ಸಮ್ ಉಪ್ಪು ವಿಶೇಷವಾಗಿ ಬೆನ್ನು ನೋವಿನಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ ಎಂದು ಯಾದವ್ ಹೇಳಿದ್ದಾರೆ.
ಎಪ್ಸಮ್ ಉಪ್ಪು ಎಂದರೇನು?: ಮೆಗ್ನೀಸಿಯಮ್, ಸಲ್ಫರ್ ಮತ್ತು ಆಮ್ಲಜನಕದ ಸಂಯೋಜನೆಯಿಂದ ರೂಪುಗೊಂಡ ಖನಿಜವನ್ನು ಎಪ್ಸಮ್ ಉಪ್ಪು ಎಂದು ಕರೆಯಲಾಗುತ್ತದೆ. ಸ್ನಾಯು ನೋವು, ಊತ, ಒತ್ತಡ ಮತ್ತು ನಿದ್ರಾಹೀನತೆಯಂತಹ ಹಲವು ರೀತಿಯ ಸಮಸ್ಯೆಗಳಿಂದ ರಕ್ಷಿಸುವ ರಾಮಬಾಣ ಎನ್ನುತ್ತಾರೆ ತಜ್ಞರು.
ಬೆನ್ನು ನೋವು ಹೇಗೆ ಕಡಿಮೆಯಾಗುತ್ತದೆ?: ಈ ಸ್ನಾನದಿಂದ ಸ್ನಾಯುಗಳನ್ನು ವಿಶ್ರಾಂತಿಗೊಳ್ಳುವಂತೆ ಮಾಡಬಹುದು. ದೇಹದ ವಿವಿಧ ಭಾಗಗಳಲ್ಲಿ ಉರಿಯೂತ, ಊತ ಮತ್ತು ನೋವಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ದೇಹವನ್ನು ಪುನರ್ ಯೌವನಗೊಳಿಸಲು ರಕ್ತದ ಶಾಖ - ಪ್ರೇರಿತ ಪರಿಚಲನೆಯು ಈ ಸಮಸ್ಯೆಗಳನ್ನು ನಿವಾರಿಸುತ್ತದೆ. ಎಪ್ಸಮ್ ಉಪ್ಪಿನೊಂದಿಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಇದು ಬೆನ್ನಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ನೀರಿನಲ್ಲಿರುವುದರಿಂದ ಗುರುತ್ವಾಕರ್ಷಣೆಯ ಬಲವು ಕಡಿಮೆಯಾಗುತ್ತದೆ, ಇದರ ಪರಿಣಾಮವಾಗಿ ಕೀಲುಗಳು ಮತ್ತು ಬೆನ್ನಿನ ಮೇಲೆ ಕಡಿಮೆ ಒತ್ತಡ ಉಂಟಾಗುತ್ತದೆ.
ಮತ್ತೊಂದೆಡೆ, ಇದೇ ವಿಷಯದ ಕುರಿತು ಹಿರಿಯ ಸಲಹೆಗಾರ ಆರ್ಥೋಪೆಡಿಕ್, ರೊಬೊಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಮತ್ತು ಆರ್ತ್ರೋಸ್ಕೋಪಿಕ್ ಸರ್ಜನ್ ಡಾ.ಸುನೀಲ್ ದಾಗೆಪಲ್ಲಿ ಹೀಗೆ ಹೇಳಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ಸ್ನಾನಕ್ಕೆ ಎಪ್ಸಮ್ ಉಪ್ಪನ್ನು ಬಳಸುತ್ತಾರೆ. ಉಗುರು ಬೆಚ್ಚನೆಯ ನೀರಿನಲ್ಲಿ ಎಪ್ಸಮ್ ಉಪ್ಪು ನೆನೆಯುವುದರಿಂದ ಚರ್ಮವು ಇದನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಪರಿಣಾಮವಾಗಿ, ಕಿರಿಕಿರಿ, ಉರಿಯೂತ, ತುರಿಕೆ, ಸೋರಿಯಾಸಿಸ್, ಎಸ್ಜಿಮಾ, ಕಾಂಟ್ಯಾಕ್ಟ್ ಡರ್ಮಟೈಟಿಸ್ ಮತ್ತು ಸೋಂಕುಗಳಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ತ್ವಚೆಯಲ್ಲಿರುವ ನಿರ್ಜೀವ ಕೋಶಗಳು ನಿವಾರಣೆಯಾಗಿ ಸುಂದರ ಹಾಗೂ ಆರೋಗ್ಯಕರವಾಗುವಂತೆ ಮಾಡುತ್ತದೆ.
ನೀರಿನಲ್ಲಿ ಸ್ವಲ್ಪ ಹೊತ್ತು ಇದ್ದು ಅಥವಾ ಆ ನೀರಿನಿಂದ ಸ್ನಾನ ಮಾಡುವುದರಿಂದ ಬೆನ್ನುನೋವಿನಿಂದ ಉತ್ತಮ ಪರಿಹಾರ ಸಿಗುತ್ತದೆ.
ಇದನ್ನು ಓದಿ:ಒಂದು ನಿಮಿಷವೂ ಮೂತ್ರವನ್ನು ತಡೆಯಲಾಗುತ್ತಿಲ್ಲವೇ?: ಈ ಸಮಸ್ಯೆಗೆ ಕಾರಣವೇ ಇದು! - Urinary incontinence problem