ನ್ಯೂಯಾರ್ಕ್: ಆಸ್ಪತ್ರೆಯ ಸಿಂಕ್ಗಳು ಬಹು ಔಷಧ ನಿರೋಧ ಬ್ಯಾಕ್ಟೀರಿಯಾ ಹರಡುವ ಆಗರವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. 2017 ರಲ್ಲಿ ಟೋಕಿಯೊದ ಟೊಹೊ ಯೂನಿವರ್ಸಿಟಿ ಒಮೊರಿ ಮೆಡಿಕಲ್ ಸೆಂಟರ್‌ನಲ್ಲಿ ಮಕ್ಕಳ ವಾರ್ಡ್‌ನಲ್ಲಿ ಸೂಪರ್‌ಬಗ್ ಕಾರ್ಬಪೆನೆಮಾಸ್ ಉತ್ಪಾದಿಸುವ ಎಂಟರ್‌ಬ್ಯಾಕ್ಟೀರಲ್ಸ್ (ಸಿಪಿಇ) ಹರಡುವಿಕೆ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.
ಈ ಅಧ್ಯಯನವನ್ನು ಅಮೆರಿಕನ್ ಜರ್ನಲ್ ಆಫ್ ಇನ್ಫೆಕ್ಷನ್ ಕಂಟ್ರೋಲ್ನಲ್ಲಿ ಪ್ರಕಟಿಸಲಾಗಿದೆ. ಜೂನ್ 2016 ರಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ಒಂದು ವರ್ಷದ ಬಾಲಕನಲ್ಲಿ ಸಿಪಿಇ ಸೋಂಕು ಕಂಡು ಬಂದಿತ್ತು. ಒಂಬತ್ತು ತಿಂಗಳ ಬಳಿಕ ಮಾರ್ಚ್ 2017ರಲ್ಲಿ 15 ವರ್ಷದ ಬಾಲಕ ಎರಡನೇ ಬಾರಿ ಈ ಮಾರಾಣಾಂತಿಕ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗಿದ್ದ. ಜತೆಗೆ ಇದು 10 ಮಕ್ಕಳಲ್ಲಿ ಹರಡಿತ್ತು. ತನಿಖೆಯಲ್ಲಿ ಆಸ್ಪತ್ರೆಯ ಸಿಂಕ್ ಸಿಪಿಇ ಸೋಂಕಿನ ಆಗರವಾಗಿದೆ ಎಂಬ ವಿಚಾರ ಪತ್ತೆಯಾಗಿತ್ತು.
ಈ ಪ್ರಕರಣದಲ್ಲಿ 6 ಸಿಪಿಇ ಪಾಸಿಟಿವ್ ರೋಗಿಗಳಿರುವ ಆಸ್ಪತ್ರೆ ಕೊಠಡಿಗಳಿಂದ ಮತ್ತು 3 ನರ್ಸ್ ಸೆಂಟರ್, ತ್ಯಾಜ್ಯ ಕೊಠಡಿ ಮತ್ತು ಐಸ್ ಮೆಷಿನ್ನಿಂದ ಬಂದಿದೆ ಎಂಬುದು ಅಧ್ಯಯನದ ವೇಳೆ ಬಯಲಾಗಿತ್ತು. ಕ್ಲೆಬ್ಸಿಯೆಲ್ಲಾ ವೇರಿಕೋಲಾ, ಕ್ಲೆಬ್ಸಿಯೆಲ್ಲಾ ಕ್ವಾಸಿಪ್ನ್ಯೂಮೋನಿಯಾ, ಮತ್ತು ಎಸ್ಚೆರಿಚಿಯಾ ಕೋಲಿಯಂತಹ ಬ್ಯಾಕ್ಟೀರಿಯಾದ ತಳಿಗಳನ್ನು ಜೆನೋಮಿಕ್ ವಿಶ್ಲೇಷಣೆಯಲ್ಲಿ ಗುರುತಿಸಲಾಗಿದೆ.
ಸೋಂಕಿಗೆ ಕಾರಣವಾಗುತ್ತಿದ್ದ ಎಲ್ಲ ಸಿಂಕ್ಗಳನ್ನು ತೆಗೆದ ಬಳಿಕವೂ ಸಿಪಿಎಫ್ ಸೋಂಕು ಮುಂದುವರೆದಿದ್ದನ್ನು ಗಮನಿಸಬಹುದಾಗಿದೆ. ಸೋಂಕಿನ ಡಿಎನ್ಎ ಅನುಕ್ರಮವೂ ಬ್ಯಾಕ್ಟೀರಿಯಾದ ಜಾತಿಯಿಂದ ಇನ್ನೊಂದಕ್ಕೆ ಪ್ರತಿರೋಧ ಕಾರ್ಯವಿಧಾನವನ್ನು ರವಾನಿಸಬಹುದು ಎಂದು ತೋರಿಸಿದೆ. ಈ ಅಂಶವೂ ಸಿಂಕ್ಗಳಲ್ಲಿ ಅದೇ ಬ್ಯಾಕ್ಟೀರಿಯಾದ ಪ್ರಭೇದಗಳಲ್ಲಿ ಕಂಡು ಬಂದಿದೆ . ಸಿಂಕ್ ಸಂಪರ್ಕಿತ ಡ್ರೈನ್ ಮೂಲಕ ರೋಗ ಪ್ರಸರಣ ಕಂಡು ಬಂದಿದೆ ಎಂದು ತಂಡ ತಿಳಿಸಿದೆ.
ಈ ಸೋಂಕು ಹರಡದಂತೆ ಮಾಡಲು ಇರುವ ಮುನ್ನೆಚ್ಚರಿಕೆ ಎಂದರೆ ಸಿಂಕ್ ಬಳಕೆ ನಂತರ ಕೈ ಸ್ವಚ್ಛ ಮಾಡುವುದು. ಸಿಂಕ್ ಸ್ವಚ್ಛಕ್ಕೆ ಬಳಸಿ ಬಿಸಾಡುವ ಸಾಧನ ಬಳಕೆ, ಸಿಂಕ್ ನೀರಿನಲ್ಲಿ ಬಾಯಿ ತೊಳೆಯುವುದನ್ನು ನಿಷೇಧಿಸುವುದು, ಸಿಂಕ್ ಅನ್ನು ಬಣಗಿಸುವುದನ್ನು ಮಾಡಬಹುದಾಗಿದೆ. ಈ ಕ್ರಮ ನಡೆಸಿದ ಬಳಿಕ 2017ರಲ್ಲಿ ಈ ಸೋಂಕು ಹರಡುವಿಕೆ ನಿಂತಿತು ಎಂದು ಟೊಹೊ ವಿಶ್ವವಿದ್ಯಾಲಯದಲ್ಲಿ ಮೈಕ್ರೋಬಯಾಲಜಿ ಮತ್ತು ಇನ್ಫೆಕ್ಷನ್ ಡಿಸಿಸ್ನ ಅಸಿಸ್ಟಂಟ್ ಪ್ರೊಫೆಸರ್ ಸಡಕೊ ಯೋಶಿಜುವಾ ತಿಳಿಸಿದ್ದಾರೆ.
ನಮ್ಮ ಅನುಭವನ ಪ್ರಮುಖ ಅಂಶ ಎಂದರೆ ಆಸ್ಪತ್ರೆಯ ಸಿಂಕ್ ಸೇರಿದಂತೆ ನೀರಿನ ಸಂಬಂದ ಪ್ರದೇಶಗಳ ಕುರಿತು ಹೆಚ್ಚಿನ ಕಾಳಜಿವಹಿಸುವುದಾಗಿದೆ. ಇವು ಸಿಪಿಇ ಹರಡುವಿಕೆಯಲ್ಲಿ ನಿರ್ಣಾಯಕವಾಗಿದೆ ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಜಾನುವಾರುಗಳ ಚರ್ಮಗಂಟು ರೋಗ: ವೈರಸ್ನ ಮೂಲ ಪತ್ತೆ ಮಾಡಿದ ಐಐಎಸ್ಸಿ ವಿಜ್ಞಾನಿಗಳು