ETV Bharat / health

ಅಸ್ಥಿಸಂಧಿವಾತ ರೋಗಿಗಳಲ್ಲಿ ಉರಿಯೂತವಿಲ್ಲದೆ ಕಾಡುವ ನೋವಿಗೆ ಕಾರಣ ಪತ್ತೆ ಮಾಡಿದ ಸಂಶೋಧಕರು - rheumatoid arthritis problem

ಅಸ್ಥಿಸಂಧಿವಾತದ ರೋಗಿಗಳಲ್ಲಿ ಉರಿಯೂತ ಹೊರತಾದ ನೋವಿಗೆ ಕಾರಣವಾಗುವ ಅಂಶವನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.

research-revels-the-reason-for-rheumatoid-arthritis-have-pain-without-inflammation
research-revels-the-reason-for-rheumatoid-arthritis-have-pain-without-inflammation (File photo)
author img

By ETV Bharat Karnataka Team

Published : May 9, 2024, 5:04 PM IST

ನ್ಯೂಯಾರ್ಕ್​: ಇತ್ತೀಚಿನ ವರ್ಷದಲ್ಲಿ ಅಸ್ಥಿ ಸಂಧಿವಾತದ ಚಿಕಿತ್ಸೆ ಗಮನಾರ್ಹವಾಗಿ ಅಭಿವೃದ್ಧಿ ಕಂಡಿದೆ. ಬಹುತೇಕ ಪರಿಸ್ಥಿತಿಗಳಲ್ಲಿ ಔಷಧಗಳ ಸಂಯೋಜನೆಯು ಕೀಲಿನ ಸುತ್ತ ಉಂಟಾಗುವ ಊತ ಮತ್ತು ಉರಿಯೂತವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಆದರೂ ಕೆಲವು ಕಾರಣಗಳಿಂದ ಶೇ 20ರಷ್ಟು ರೋಗಿಗಳು ಉರಿಯೂತವಿಲ್ಲದ ನೋವನ್ನು ಅನುಭವಿಸುತ್ತಾರೆ.

ಕೆಲವು ಪ್ರಕರಣದಲ್ಲಿ ಕೀಲುಗಳಲ್ಲಿ ಉರಿಯೂತ ಇರುವುದಿಲ್ಲ. ಇಂತಹ ರೋಗಿಗಳ ಕೀಲುಗಳನ್ನು ಒತ್ತಿದಾಗ ಅವರಲ್ಲಿ ದ್ರವ್ಯ ಸಾಂಧ್ರತೆ ಮತ್ತು ಬಲವಾದ ಸ್ಪರ್ಶವನ್ನು ಅನುಭವಿಸುತ್ತಾರೆ. ಆದರೆ, ಇದು ಒಳನುಸುಳುವ ಪ್ರತಿರಕ್ಷಣಾ ಕೋಶಗಳಿಂದ ಉಂಟಾಗುವುದಿಲ್ಲ. ಅವರಲ್ಲಿ ಅಧಿಕ ಅಂಗಾಂಶ ಬೆಳವಣಿಗೆ ಇದ್ದು, ಯಾವುದೇ ಉರಿಯೂತವಿರುವುದಿಲ್ಲ ಎಂದು ಅಧ್ಯಯನದ ಸಹ ಹಿರಿಯ ಲೇಖಕರಾದ ದಾನಾ ಆರೆಂಜ್​ ತಿಳಿಸಿದ್ದಾರೆ.

ಈ ರೋಗಿಗಳು 815 ವಂಶವಾಹಿಗಳ ಸೂಟ್ ಅನ್ನು ಹೊಂದಿದ್ದಾರೆ. ಇದು ಅಂಗಾಂಶಗಳಲ್ಲಿ ಸಂವೇದನಾ ನರಗಳ ಅಸಹಜ ಬೆಳವಣಿಗೆಯನ್ನು ಸಕ್ರಿಯಗೊಳಿಸುತ್ತದೆ. ಈ ಅಂಗಾಂಶಗಳು ಕೀಲಿನ ಮೇಲೆ ಪರಿಣಾಮ ಬೀರುತ್ತವೆ.

ಈ 815 ಜೀನ್ಸ್​​ ಸಂವೇದನಾ ನರವನ್ನು ಮತ್ತೆ ಧರಿಸುತ್ತದೆ. ಇದೇ ಕಾರಣಕ್ಕೆ ಕೆಲವು ರೋಗಿಗಳಲ್ಲಿ ಉರಿಯೂತ ವಿರೋಧಿ ಜೌಷಧಗಳು ಕೆಲಸ ಮಾಡುವುದಿಲ್ಲ. ಇಂತಹ ಹೊರ ಪದರ ಹೊಂದಿರುವವರಿಗೆ ಹೊಸ ಚಿಕಿತ್ಸೆಯ ಈ ಅಧ್ಯಯನದ ಫಲಿತಾಂಶ ದಾರಿ ಮಾಡಿಕೊಡುತ್ತದೆ ಎಂದಿದ್ದಾರೆ.

ಅಸ್ಥಿ ಸಂಧಿವಾತ ಎಂಬುದು ದೀರ್ಘ ಕಾಲದ ಸಮಸ್ಯೆ. ಕೀಲುಗಳಲ್ಲಿ ಬಿಗಿತನ, ಊತ, ಸೀಮಿತ ಚಲನೆ ಮತ್ತು ನೋವನ್ನು ರೋಗಿಗಳು ಅನುಭವಿಸುತ್ತಾರೆ. ಇದು ಆಲಸ್ಯ ಮತ್ತು ಖಿನ್ನತೆಗೂ ಕೂಡ ಕಾರಣವಾಗುತ್ತದೆ.

ಅಸ್ಥಿಸಂಧಿವಾತದಂತಹ ಬಹುತೇಕ ಪ್ರಕರಣಗಳಲ್ಲಿ ಪ್ರತಿರೋಧಕ ಕೋಶ ಉತ್ಪಾದಕಗಳಾದ ಸೈಟಿಕಿನ್ಸ್​​ ಬ್ರಾಡಿಕಿನಿನ್ಸ್​ ಅಥವಾ ಪ್ರಿಸ್ಟನೊಯ್ಡ್ಸ್​​​ ಸೈನೋವಿಯಂ ಅನ್ನು ಆಕ್ರಮಿಸುತ್ತದೆ. ಪ್ರತಿರೋಧಕವನ್ನು ಗುರಿಯಾಗಿಸಿ ನೀಡುವ ಔಷಧಗಳು ಸಹಿಷ್ಣು ಪರಿಸ್ಥಿತಿ ಹೊಂದಿರುತ್ತದೆ. ಉರಿಯೂತ ಮತ್ತು ನೋವಿನ ನಡುವಿನ ಸಂಪರ್ಕ ಕಡಿತಕ್ಕೆ ಬಳಗಾದವರು ಇದರ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.

ಇಂತಹ ರೋಗಿಗಳಿಗೆ ವೈದ್ಯರು ಆಗಾಗ್ಗೆ ಉರಿಯೂತ ವಿರೋಧಿ ಔಷಧಗಳನ್ನು ಶಿಫಾರಸ್ಸು ಮಾಡುತ್ತಾರೆ. ಈ ಮೂಲಕ ನೋವಿನ ಶಮನಕ್ಕೆ ಪ್ರಯತ್ನಿಸುತ್ತಾರೆ. ಫಲಿತಾಂಶವಾಗಿ ಹೆಚ್ಚಿನ ಔಷಧಗಳನ್ನು ಪಡೆಯುವ ರೋಗಿಗಳಲ್ಲಿ ಇದು ಪ್ರತಿರೋಧಕವನ್ನು ಹತ್ತಿಕ್ಕಬಹುದು.

ಅಸ್ಥಿಸಂಧಿವಾತ ಹೊಂದಿದ್ದು, ನೋವಿನ ಜೊತೆಗೆ ಕೊಂಚ ಉರಿಯೂತ ಹೊಂದಿರುವ 39 ರೋಗಿಗಳ ಅಂಗಾಂಶದ ಮಾದರಿ ಮತ್ತು ಸ್ವಯಂ ವರದಿ ನೋವಿನ ಕುರಿತು ಸಂಶೋಧಕರು ನೋಡಿದ್ದಾರೆ. ಅಲ್ಲದೇ, ಈ ಸಂಬಂಧ ಮಷಿನ್​ ಲರ್ನಿಂಗ್​ ವಿಶ್ಲೇಷಣೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು GbGMI ಎಂದು ಕರೆಯಲಾಗಿದೆ.

GbGMI ಪರೀಕ್ಷೆಯೂ ದತ್ತಾಂಶ ಸೆಟ್‌ನಲ್ಲಿರುವ ವಂಶವಾಹಿಗಳ ಪ್ರತಿಯೊಂದು ಸಂಭವನೀಯ ಸಂಯೋಜನೆಯನ್ನು ಪರೀಕ್ಷಿಸುತ್ತದೆ. ಅದು ಒಟ್ಟಾಗಿ ಉದ್ದೇಶಿತ ಕ್ಲಿನಿಕಲ್ ವೈಶಿಷ್ಟ್ಯದೊಂದಿಗೆ ಸಂಯೋಜಿಸುವ ಅತ್ಯುತ್ತಮ ಜೀನ್‌ಗಳನ್ನು ನಿರ್ಧರಿಸುತ್ತದೆ.

ಭವಿಷ್ಯದಲ್ಲಿ, ನೋವು-ಸೂಕ್ಷ್ಮ ನರಕೋಶಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಫೈಬ್ರೊಬ್ಲಾಸ್ಟ್‌ಗಳು ಉತ್ಪಾದಿಸುವ ಇತರ ಉತ್ಪನ್ನಗಳ ಮೇಲೆ ಗುರಿಯಾಗಿಸಿದ್ದಾರೆ. ಸಂಶೋಧನೆಯಲ್ಲಿ ಕೀಲು ನೋವಿನ ಮೇಲೆ ಪರಿಣಾಮ ಬೀರಬಹುದಾದ ಇತರ ರೀತಿಯ ಸಂವೇದನಾ ನರಗಳನ್ನು ಸಹ ಪರಿಶೀಲಿಸಲಾಗಿದೆ ಎಂದು ಕೂಡ ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಕೀಲಿನ ಆರೋಗ್ಯ ಸುಧಾರಣೆಗೆ ಆರಂಭಿಕ ಹಂತದಲ್ಲೇ ಅಸ್ಥಿಸಂಧಿವಾತ ಪತ್ತೆ ಮುಖ್ಯ; ಸಂಶೋಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.