ETV Bharat / health

ಉಲ್ಬಣಗೊಂಡ ಚಂಡೀಪುರ ವೈರಸ್​; ಗುಜರಾತ್​ನಲ್ಲಿ 140 ಕೇಸ್​ ದಾಖಲು - CHANDIPURA VIRUS

author img

By ETV Bharat Karnataka Team

Published : Aug 1, 2024, 4:56 PM IST

ಜುಲೈ 31ರ ವರೆಗೆ ಒಟ್ಟಾರೆ 148 ಎಇಎಸ್​​ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಗುಜರಾತ್ ರಾಜ್ಯವೊಂದರಲ್ಲೇ 140 ಕೇಸ್​ಗಳು ವರದಿಯಾಗಿವೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Reiterating the outbreak of Chandipura virus in Gujarat
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಗುಜರಾತ್​ನಲ್ಲಿ ಚಂಡೀಪುರ ವೈರಸ್​ ಅಬ್ಬರ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಜ್ಯದಲ್ಲಿ ಜುಲೈ 31ರ ವರೆಗೆ 140 ಅಕ್ಯೂಟ್​ ಎನ್ಸೆಫಾಲಿಟಿಸ್ ಸಿಂಡ್ರೊಮ್ (ಎಇಎಸ್​) ಪ್ರಕರಣಗಳು ಕಂಡುಬಂದಿವೆ. ಈ ಸೋಂಕು ಮಧ್ಯಪ್ರದೇಶ, ರಾಜಸ್ಥಾನ್​​ ಮತ್ತು ಮಹಾರಾಷ್ಟ್ರದಲ್ಲೂ ಕಾಣಿಸಿಕೊಂಡಿದೆ.

ಜುಲೈ31 ರ ವರೆಗೆ ಒಟ್ಟಾರೆ 148 ಎಇಎಸ್​​ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 140 ಕೇಸ್​ಗಳು ಗುಜರಾತ್​ನಲ್ಲಿ ಕಂಡ ಬಂದಿವೆ. ಮಧ್ಯಪ್ರದೇಶದಲ್ಲಿ 4, ರಾಜಸ್ಥಾನದಲ್ಲಿ 3 ಮತ್ತು ಮಹಾರಾಷ್ಟ್ರದಲ್ಲಿ 1 ಕೇಸ್​ ವರದಿಯಾಗಿದೆ. ಇದರಲ್ಲಿ 59 ಪ್ರಕರಣದಲ್ಲಿ ಸಾವು ಸಂಭವಿಸಿದೆ. 51 ಚಂಡೀಪುರ ವೈರಸ್​ ಪ್ರಕರಣಗಳು ದೃಢಪಟ್ಟಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸೋಂಕಿನ ಉಲ್ಬಣತೆ ಹಿನ್ನೆಲೆ ಆರೋಗ್ಯ ಇಲಾಖೆ ನಿರ್ದೇಶಕರು ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನಿರ್ದೇಶಕರು ಮತ್ತು ಐಸಿಎಂಆರ್​​ ಡಿಜಿ ಜಂಟಿಯಾಗಿ ಪರಿಸ್ಥಿತಿ ಅವಲೋಕಿಸಿದ್ದಾರೆ.

ಈ ನಡುವೆ ಸೋಂಕಿನ ಪ್ರಕರಣಗಳಲ್ಲಿ ದೈನಂದಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿವೆ. ಜುಲೈ 19ರಂದು ಹೊಸ ಎಇಎಸ್​ ಪ್ರಕರಣ ದೃಢಪಟ್ಟಿತ್ತು. ಗುಜರಾತ್​ನಲ್ಲಿ ಅನೇಕ ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿನ ನಿಯಂತ್ರಣಕ್ಕೆ ಕೀಟನಾಶಕ ಬಳಕೆ ಮಾಡಲಾಗಿದೆ. ಐಎಇಸಿ, ವೈದ್ಯಕೀಯ ಸಿಬ್ಬಂದಿಗಳು ಕಾಲ ಕಾಲಕ್ಕೆ ಪರಿಸ್ಥಿತಿ ಅವಲೋಕನ, ಚಿಕಿತ್ಸೆ ನಡೆಸಿದ್ದಾರೆ ಇಲಾಖೆ ವಿವರಿಸಿದೆ.

ಸೋಂಕಿನ ಉಲ್ಬಣತೆ ಮತ್ತು ಅದರ ಮಾಹಿತಿ ಸಂಗ್ರಹಿಸಿ, ಸಾರ್ವಜನಿಕ ಆರೋಗ್ಯ ಕ್ರಮ ನಡೆಸಲು ಎನ್​ಜೆಒಆರ್​ಟಿಯನ್ನು ಗುಜರಾತ್​ ಸರ್ಕಾರಕ್ಕೆ ಸಹಾಯ ಮಾಡಲು ನಿಯೋಜಿಸಲಾಗಿದೆ. ನೆರೆಯ ರಾಜ್ಯಗಳಲ್ಲಿ ಕೂಡ ಎಇಎಸ್​ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆ ಎನ್​ಸಿಡಿಸಿ ಮತ್ತು ಎನ್​ಸಿವಿಬಿಡಿಸಿ ಮಾರ್ಗಸೂಚಿ ಪ್ರಕಟಿಸಿದೆ.

ಚಂಡೀಪುರ ವೈರಸ್ (ಸಿಹೆಚ್​ಪಿವಿ) ರಾಬ್ಡೋವಿರಿಡೆ ವರ್ಗಕ್ಕೆ ಸೇರಿದ್ದು, ಮರಳು ನೊಣಗಳು ಮತ್ತು ಉಣ್ಣೆಗಳಂತಹ ಜೀವಿಗಳಿಂದ ಹರಡುತ್ತದೆ. ಈ ಸೋಂಕು ತೀವ್ರವಾದ ಎನ್ಸೆಫಾಲಿಟಿಸ್, ಮೆದುಳಿನ ಉರಿಯೂತವನ್ನು ಉಂಟುಮಾಡಬಹುದು. 15 ವರ್ಷದೊಳಗಿನ ಮಕ್ಕಳಲ್ಲಿ ಈ ಸೋಂಕು ಹೆಚ್ಚಾಗಿ ಕಾಣುತ್ತದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ, ಸ್ನಾಯು ನೋವು, ತಲೆನೋವು, ಲಕ್ಷಣವನ್ನು ಹೊಂದರುತ್ತದೆ. ವೈಯಕ್ತಿಕ ರಕ್ಷಣಾ ಕ್ರಮಗಳು ಮತ್ತು ಪರಿಸರ ನಿಯಂತ್ರಣದ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಅಲ್ಲದೇ ಸೋಂಕು ತಡೆಯಲ್ಲಿ ಮರಳುನೊಣದ ನಿಯಂತ್ರಣ ಅಗತ್ಯವಾಗಿದೆ.

ಇದನ್ನೂ ಓದಿ: ಚಂಡೀಪುರ ವೈರಸ್​ಗೆ ನಾಲ್ವರು ಮಕ್ಕಳು ಸಾವು: ಏನಿದು ಸೋಂಕು, ಲಕ್ಷಣಗಳೇನು - ಪರಿಹಾರೋಪಾಯಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.