ETV Bharat / health

ಪ್ರತಿನಿತ್ಯ ವಾಕ್​ ಮಾಡುವುದರಿಂದ ಏನ್‌ ಪ್ರಯೋಜನ ಅನ್ಬೇಡಿ! 5 ಅತ್ಯಂತ ಪ್ರಮುಖ ಸಂಗತಿಗಳು ನಿಮಗೆ ಗೊತ್ತಾ? - Walking Benefits - WALKING BENEFITS

ವಾಕಿಂಗ್ ಕೂಡ ಒಂದು ವ್ಯಾಯಾಮ. ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ಹಾಗಾಗಿ, ನಡಿಗೆ ನಮ್ಮ ಆರೋಗ್ಯಕ್ಕೊಂದು ವರದಾನ. ವಾಕಿಂಗ್‌ನಿಂದ ಲಭಿಸುವ 5 ಪ್ರಮುಖ ಪ್ರಯೋಜನಗಳು ಹೀಗಿವೆ.

WALKING IMPROVES MENTAL HEALTH  WALKING IMPROVES PHYSICAL HEALTH  WALKING IMPROVES IMMUNITY SYSTEM  IMMUNITY BOOSTER EXERCISE
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Aug 20, 2024, 6:15 PM IST

ವಾಕಿಂಗ್ ಅಥವಾ ಯಾವುದೇ ದೈಹಿಕ ವ್ಯಾಯಾಮ ನಮ್ಮ ಒಟ್ಟಾರೆ ಆರೋಗ್ಯಕ್ಕೆ ವರದಾನವಾಗಿದೆ. ಪ್ರತಿನಿತ್ಯ ವಾಕಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಬಹಳಷ್ಟು ಪ್ರಯೋಜನಗಳು ದೊರೆಯುತ್ತವೆ. ನಿಯಮಿತವಾಗಿ ವಾಕಿಂಗ್‌ ಮಾಡುವುದರಿಂದ ಬಹಳ ಮುಖ್ಯವಾಗಿ ಐದು ಪ್ರಮುಖ ಪ್ರಯೋಜನಗಳಿವೆ.

ತೂಕ ಉತ್ತೇಜಿಸುವ ಜೀನ್‌ಗಳ ಪರಿಣಾಮ ತಡೆಯುತ್ತೆ: ಹಾರ್ವರ್ಡ್ ಸಂಶೋಧಕರು, 12,000ಕ್ಕಿಂತ ಹೆಚ್ಚು ಜನರಲ್ಲಿ 32 ಪ್ರಕಾರದ ಬೊಜ್ಜು ಉತ್ತೇಜಿಸುವ ಜೀನ್‌ಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಜೀನ್‌ಗಳು ದೇಹದ ತೂಕ ಹೆಚ್ಚಾಗಲು ಎಷ್ಟು ಕೊಡುಗೆ ನೀಡುತ್ತವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಜೊತೆಗೆ, ದಿನಕ್ಕೆ ಸುಮಾರು ಒಂದು ಗಂಟೆ ಚುರುಕಾಗಿ ವಾಕಿಂಗ್​ ಮಾಡುವವರ ಕುರಿತೂ ಅಧ್ಯಯನ ನಡೆದಿದೆ. ಚುರುಕಾಗಿ ವಾಕಿಂಗ್​ ಮಾಡುವವರಲ್ಲಿ ಜೀನ್‌ಗಳ ಪರಿಣಾಮಗಳು ಅರ್ಧದಷ್ಟು ಕಡಿಮೆ ಎಂಬುದು ಇದರಲ್ಲಿ ಕಂಡು ಬಂದ ಅಂಶ.

ಸಿಹಿ ತಿಂಡಿಗಳನ್ನು ಸೇವಿಸುವ ಬಯಕೆ ನಿಯಂತ್ರಣ: ಎಕ್ಸೆಟರ್ ವಿಶ್ವವಿದ್ಯಾನಿಲಯದ ಎರಡು ಅಧ್ಯಯನಗಳು ತಿಳಿಸುವಂತೆ, ಪ್ರತಿನಿತ್ಯ 15 ನಿಮಿಷಗಳ ವಾಕಿಂಗ್​ನಿಂದ ಮಾಡುವುದರಿಂದ ಚಾಕೊಲೇಟ್ ಸೇರಿದಂತೆ ಸಿಹಿ ತಿನಿಸುಗಳನ್ನು ಸೇವಿಸುವ ಬಯಕೆಗಳು ಕಡಿಮೆ ಆಗುತ್ತವೆ. ಒತ್ತಡದ ಸಂದರ್ಭಗಳಲ್ಲಿ ನೀವು ತಿನ್ನುವ ಚಾಕೊಲೇಟ್ ಪ್ರಮಾಣವನ್ನು ಇದು ತಗ್ಗಿಸುತ್ತದೆ. ನಿಯಮಿತವಾಗಿ ವಾಕಿಂಗ್​ನಿಂದ ವಿವಿಧ ರೀತಿಯ ಸಿಹಿ ತಿಂಡಿಗಳ ಸೇವಿಸುವ ಬಯಕೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಸಂಶೋಧನೆ ದೃಢಪಡಿಸುತ್ತದೆ.

ಸ್ತನ ಕ್ಯಾನ್ಸರ್ ಅಪಾಯ ಕಡಿಮೆ: ವಾಕಿಂಗ್​ನಿಂದ ಸ್ತನ ಕ್ಯಾನ್ಸರ್ ಬೆಳವಣಿಗೆಯ ಅಪಾಯ ಕಡಿಮೆ ಮಾಡುತ್ತದೆ. ಯಾವುದೇ ರೀತಿಯ ದೈಹಿಕ ಚಟುವಟಿಕೆಯು ಸ್ತನ ಕ್ಯಾನ್ಸರ್ ಅಪಾಯವನ್ನು ದೂರ ಮಾಡುತ್ತದೆ ಎಂದು ಸಂಶೋಧಕರು ಈಗಾಗಲೇ ಅಧ್ಯಯನದ ಮೂಲಕ ತಿಳಿಸಿದ್ದಾರೆ. ಸ್ತನ ಕ್ಯಾನ್ಸರ್ ಅಪಾಯಕಾರಿ ಅಂಶಗಳಿರುವ ಮಹಿಳೆಯರಿಗೆ ವಾಕಿಂಗ್ ರಕ್ಷಣೆ ನೀಡುತ್ತದೆ. ಪ್ರಮುಖವಾಗಿ ಅಧಿಕ ತೂಕ ನಿಯಂತ್ರಣಕ್ಕೂ ಪೂರಕ.

ಕೀಲು ನೋವು ಕಡಿಮೆ: ವಾಕಿಂಗ್​ನಿಂದ ಕೀಲು ನೋವು ಕಡಿಮೆಯಾಗಲು ಸಾಧ್ಯವಾಗುತ್ತದೆ. ಸಂಧಿವಾತ-ಸಂಬಂಧಿತ ನೋವನ್ನು ಕಡಿಮೆ ಮಾಡುತ್ತದೆ ಮತ್ತು ವಾರಕ್ಕೆ ಐದರಿಂದ ಆರು ಮೈಲುಗಳಷ್ಟು ನಡೆಯುವುದು ಸಂಧಿವಾತ ರೂಪಿಸುವುದನ್ನು ತಡೆಯುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಹಿಡಿದಿವೆ. ವಾಕಿಂಗ್​ ಕೀಲುಗಳನ್ನು ರಕ್ಷಿಸುತ್ತದೆ (ವಿಶೇಷವಾಗಿ ಮೊಣಕಾಲು ಮತ್ತು ಸೊಂಟ) ಮತ್ತು ಅವುಗಳನ್ನು ನಯಗೊಳಿಸಿ ಮತ್ತು ಅವುಗಳನ್ನು ಬೆಂಬಲಿಸುವ ಸ್ನಾಯುಗಳನ್ನು ಬಲಪಡಿಸುವ ಮೂಲಕ ಸಂಧಿವಾತವನ್ನು ತಡೆಯಬಹುದು.

ರೋಗನಿರೋಧಕ ಶಕ್ತಿ ಹೆಚ್ಚುತ್ತೆ: ವಾಕಿಂಗ್​ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಾಗುತ್ತದೆ. ಶೀತ-ಜ್ವರದ ಸಮಯದಲ್ಲಿ ವಾಕಿಂಗ್ ನಿಮಗೆ ರಕ್ಷಣೆ ನೀಡುತ್ತದೆ. 1,000ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರ ಮೇಲೆ ನಡೆಸಿದ ಅಧ್ಯಯನವು ವಾರಕ್ಕೆ ಕನಿಷ್ಠ 20 ನಿಮಿಷಗಳ ಕಾಲ ನಡೆದಾಡುವವರಿಗೆ, ವಾರಕ್ಕೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಬಾರಿ ವ್ಯಾಯಾಮ ಮಾಡುವವರಿಗೆ ಸಂಶೋಧನೆಗೆ ಒಳಪಾಡಸಲಾಯಿತು. ಅಂದರೆ, ವಾಕಿಂಗ್​ ಮತ್ತು ವ್ಯಾಯಾಮ ಮಾಡುವವರಲ್ಲಿ ಶೇ 43ಕ್ಕಿಂತ ಕಡಿಮೆ ಜನರು ಅನಾರೋಗ್ಯಕ್ಕೆ ಒಳಾಗಿದ್ದಾರೆ. ಅವರ ಅನಾರೋಗ್ಯ ಸ್ಥಿತಿಯು ಅಲ್ಪಾವಧಿಗೆ ಸೀಮಿತವಾಗಿರುತ್ತದೆ ಮತ್ತು ಅವರ ರೋಗಲಕ್ಷಣಗಳು ತೀರಾ ಕಡಿಮೆಯಾಗಿರುತ್ತದೆ ಎಂದು ಅಧ್ಯಯನದಿಂದ ಗೊತ್ತಾಗಿದೆ.

ಓದುಗರ ಗಮನಕ್ಕೆ: ಇಲ್ಲಿ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಕಿಡ್ನಿ ಆರೋಗ್ಯಕ್ಕಾಗಿ ಯಾವ ಆಹಾರ, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? - Kidney Health Tips

ETV Bharat Logo

Copyright © 2025 Ushodaya Enterprises Pvt. Ltd., All Rights Reserved.