ETV Bharat / health

ಇಡ್ಲಿ, ದೋಸೆ ಹಿಟ್ಟು ತುಂಬಾ ಹುಳಿಯಾಗುವುದನ್ನು ತಡೆಯಲು ಇಲ್ಲಿವೆ ಸುಲಭ ಟಿಪ್ಸ್​..​ - Sour Idli Batter Tips

author img

By ETV Bharat Health Team

Published : Sep 3, 2024, 5:17 PM IST

Sour Idli Batter Tips: ನೀವು ಇಡ್ಲಿ ಅಥವಾ ದೋಸೆ ಹಿಟ್ಟು ಹುಳಿಯಾಗಿದೆ ಎಂದು ಹೊರಗೆ ಎಸೆಯುತ್ತೀರಾ? ಹಾಗಿದ್ದರೆ ಈ ಸ್ಟೋರಿ ನಿಮಗಾಗಿ. ಮನೆಯ ಕೆಲವು ಪದಾರ್ಥಗಳೊಂದಿಗೆ ಆ ಹಿಟ್ಟನ್ನು ಹೇಗೆ ಮರುಬಳಕೆ ಮಾಡುವುದು ಎಂಬುದರ ಕುರಿತು ತಿಳಿಯೋಣ ಬನ್ನಿ..

REDUCE SOURNESS IN IDLI BATTER  FIX OVER FERMENTED DOSA BATTER  USING SOUR IDLY BATTER  SOUR IDLI BATTER TIPS
ಸಾಂದರ್ಭಿಕ ಚಿತ್ರ (Getty Images)

REDUCE SOURNESS IN IDLI, DOSA BATTER: ವಾರಾಂತ್ಯ ಬಂತೆಂದರೆ ಮನೆಯಲ್ಲಿ ಬಹುತೇಕರು ಒಂದು ವಾರದ ಮಟ್ಟಿಗೆ ಆಗುವಷ್ಟು ಇಡ್ಲಿ, ದೋಸೆ ಹಿಟ್ಟು ರುಬ್ಬಿಕೊಂಡು ಫ್ರಿಡ್ಜ್​​ನಲ್ಲಿ ಇಡುತ್ತಾರೆ. ಅದರ ನಂತರ, ತಮಗೆ ಯಾವಾಗ ಬೇಕೋ ಆಗ ಅಂದ್ರೆ, ಬೆಳಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಇಡ್ಲಿ ಮತ್ತು ದೋಸೆಯನ್ನು ಸಿದ್ಧಪಡಿಸುತ್ತಾರೆ. ಆದರೆ, ವಾರದ ಕೊನೆಯ ಮೂರು ದಿನಗಳ ನಂತರ, ಕೆಲವೊಮ್ಮೆ ಹಿಟ್ಟು ಹುಳಿಯಾಗುತ್ತದೆ. ಅನೇಕರು ಅದನ್ನು ಎಸೆಯುತ್ತಾರೆ. ಆದರೆ, ಕೆಲವು ಸಲಹೆಗಳನ್ನು ಅನುಸರಿಸುವುದರಿಂದ, ಆ ಹಿಟ್ಟಿನ ಹುಳಿಯನ್ನು ಕಡಿಮೆ ಮಾಡಬಹುದು. ಹುಳಿಯಾದ ಹಿಟ್ಟನ್ನು ಮರುಬಳಕೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್: ಇಡ್ಲಿ ಹಿಟ್ಟು ಹುಳಿಯಾಗಲು ಪ್ರಾರಂಭಿಸಿದರೆ, ಹಿಟ್ಟಿಗೆ ಸ್ವಲ್ಪ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್ ಅನ್ನು ಸೇರಿಸಿ. ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್​ ಹಿಟ್ಟಿನ ಹುಳಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದೋಸೆ ಹಿಟ್ಟಿಗೂ ನೀವು ಇದೇ ಟಿಪ್ಸ್​ ಅನ್ನೇ ಬಳಸಬಹುದು.

ಸಕ್ಕರೆ ಅಥವಾ ಬೆಲ್ಲ: ಮೊದಲು ಹುಳಿಯಾದ ಇಡ್ಲಿ ಅಥವಾ ದೋಸೆ ಹಿಟ್ಟಿಗೆ ಒಂದು ಚಮಚ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ. ಹೀಗಾಗಿ, ಹುಳಿ ರುಚಿ ಕಡಿಮೆಯಾಗುತ್ತದೆ ಮತ್ತು ಹಿಟ್ಟಿನ ರುಚಿ ಹೆಚ್ಚಾಗುತ್ತದೆ.

ಅಕ್ಕಿ ಹಿಟ್ಟು: ಇಡ್ಲಿ ಹಿಟ್ಟು ಹುಳಿ ಎನಿಸಿದರೆ ಈ ಬಾರಿ ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ. ಹೀಗೆ ಮಾಡುವುದರಿಂದ ಹುಳಿ ಕಡಿಮೆಯಾಗುತ್ತದೆ. ರುಬ್ಬಿದ ಹಿಟ್ಟಿಗೆ ಅಕ್ಕಿ ಹಿಟ್ಟು ಸೇರಿಸುವುದರಿಂದ ರುಚಿ ಕಡಿಮೆಯಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ, ನಿಜವಾಗಿ ಹೀಗೆ ಮಾಡುವುದರಿಂದ ಇಡ್ಲಿ ಮೃದುವಾಗುತ್ತದೆ.

ತಾಜಾ ಹಿಟ್ಟು ಸೇರಿಸಿ: ನಿಮ್ಮ ಬಳಿ ತಾಜಾ ಇಡ್ಲಿ ಅಥವಾ ದೋಸೆ ಹಿಟ್ಟು ಇದ್ದರೆ, ಅದರಲ್ಲಿ ಸ್ವಲ್ಪ ಹುಳಿ ಹಿಟ್ಟಿಗೆ ಸೇರಿಸಿ. ಹೀಗೆ ಮಾಡುವುದರಿಂದ ಹುಳಿ ಹೋಗುವುದಲ್ಲದೆ ಹಿಟ್ಟು ವ್ಯರ್ಥವಾಗದಂತೆ ನೋಡಿಕೊಳ್ಳುತ್ತದೆ.

ಹಿಟ್ಟನ್ನು ಹುಳಿಯಾಗದಂತೆ ತಡೆಯಲು ಕೆಲವು ಸಲಹೆಗಳು:

  • ಹಿಟ್ಟನ್ನು ರುಬ್ಬುವಾಗ ಉಪ್ಪನ್ನು ಅತಿಯಾಗಿ ಬಳಸುವುದರಿಂದ, ಕೆಲವೊಮ್ಮೆ ಹಿಟ್ಟು ಬೇಗನೆ ಉಳಿಯಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ರುಚಿಗೆ ತಕ್ಕಂತೆ ಉಪ್ಪನ್ನು ಬಳಸಿ.
  • ಹೆಚ್ಚಿನ ತಾಪಮಾನದ ಸಮಯದಲ್ಲಿ ಹಿಟ್ಟು ನಾಲ್ಕು ಗಂಟೆಗಳಲ್ಲಿ ಹುದುಗುತ್ತದೆ (ಫರ್ಮಂಟೆಷನ್​). ಹೀಗಾಗಿ, ನೀವು ರಾತ್ರಿಯಿಡೀ ಹಿಟ್ಟನ್ನು ಹೊರಗೆ ಬಿಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ನಿಯತಕಾಲಿಕವಾಗಿ ಹಿಟ್ಟನ್ನು ಪರಿಶೀಲಿಸಿ. ಶೀತ ವಾತಾವರಣದಲ್ಲಿ, ಹಿಟ್ಟು ಗಂಟೆಗಳವರೆಗೆ ಬೇಗ ಹುಳಿಯಾಗುವುದಿಲ್ಲ. ಈ ಸಮಯದಲ್ಲಿ ಹಿಟ್ಟು ಗಾತ್ರದಲ್ಲಿ ದ್ವಿಗುಣಗೊಂಡರೆ, ಅದನ್ನು ಚೆನ್ನಾಗಿ ಹುದುಗಿಸಲಾಗುತ್ತದೆ ಎಂದು ಪರಿಗಣಿಸಲಾಗುತ್ತದೆ.
  • ಪ್ರತಿ ಬಾರಿ ದೋಸೆ ಅಥವಾ ಇಡ್ಲಿ ಮಾಡುವಾಗ ಫ್ರಿಡ್ಜ್‌ನಿಂದ ಹಿಟ್ಟನ್ನು ತೆಗೆಯುವುದು ವಾಡಿಕೆ. ಆದರೆ ಹೀಗೆ ಮಾಡುವುದರಿಂದ ಹಿಟ್ಟು ವೇಗವಾಗಿ ಹುದುಗುತ್ತದೆ. ಆದ್ದರಿಂದ, ನೀವು ಸಂಪೂರ್ಣ ಹಿಟ್ಟನ್ನು ಹೊರತೆಗೆಯಬಾರದು, ಆದರೆ ಅಗತ್ಯವಿರುವ ಮೊತ್ತವನ್ನು ಮಾತ್ರ ತೆಗೆದುಕೊಂಡು ಅದನ್ನು ಬಳಸಬೇಕು ಎಂದು ಅವರು ಹೇಳುತ್ತಾರೆ.
  • ಹೆಚ್ಚು ಉದ್ದಿನ ಬೇಳೆಯನ್ನು ಬಳಸಿದರೂ, ಹಿಟ್ಟು ವೇಗವಾಗಿ ಫರ್ಮಂಟೆಷನ್​ ಆಗುತ್ತದೆ. ಕಾರಣವೆಂದರೆ ಉದ್ದಿನ ಬೇಳೆಯು ಹುದುಗುವಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಆದ್ದರಿಂದ, ಹೆಚ್ಚು ಉದ್ದಿನ ಬೇಳೆಯನ್ನು ಬಳಸದಂತೆ ನೋಡಿಕೊಳ್ಳಿ.
  • ದೋಸೆಯನ್ನು ಟೇಸ್ಟಿ ಮತ್ತು ಮೃದುವಾಗಿಸಲು ಮೆಂತ್ಯವನ್ನು ಬಳಸಲಾಗುತ್ತದೆ. ಆದರೆ ಇವುಗಳಲ್ಲಿ ಹೆಚ್ಚಿನದನ್ನು ಸೇರಿಸುವುದರಿಂದ ಹಿಟ್ಟು ವೇಗವಾಗಿ ಫರ್ಮಂಟೆಷನ್​ ಆಗಲು ಕಾರಣವಾಗುತ್ತದೆ. ಹಿಟ್ಟು ಬೇಗ ಹುಳಿಯಾಗಬಾರದೆಂದರೆ, ಅದನ್ನು ಎಚ್ಚರಿಕೆಯಿಂದ ಬಳಸಿ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.