ನವದೆಹಲಿ: ಮೇ ತಿಂಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪೂರ್ವ ಅನುಮತಿ ನೀಡಿದ್ದ ಡೆಂಗ್ಯೂ ನಿರೋಧಕ ಲಸಿಕೆ 'ಕ್ಯೂಡೆಂಗಾ' ಶೇ 50ರಷ್ಟು ಪರಿಣಾಮಕಾರಿಯಾಗಿದೆ ಎಂದು 19 ಅಧ್ಯಯನಗಳು ತಿಳಿಸಿವೆ.
ಈ ಅಧ್ಯಯನದ ಮೊದಲ ಸಮಗ್ರ ಜಾಗತಿಕ ವಿಶ್ಲೇಷಣೆಯಲ್ಲಿ ಶೇ 20 ಸಾವಿರ ಜನರು ಭಾಗಿಯಾಗಿದ್ದರು. ಭಾಗೀದಾರರಿಗೆ ಎರಡು ಡೋಸ್ ಲಸಿಕೆ ನೀಡಲಾಗಿದ್ದು, ಶೇ 90ರಷ್ಟು ವಯಸ್ಕರು ಮತ್ತು ಮಕ್ಕಳಲ್ಲಿ ಡಿಇಎನ್ವಿ ವೈರಸ್ಗೆ ಕಾರಣವಾಗುವ ನಾಲ್ಕು ತಳಿಯ ಡೆಂಗ್ಯೂವಿನ ವಿರುದ್ಧ ಪ್ರತಿರಕ್ಷಣೆ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಷ್ಯಾ ಮತ್ತು ದಕ್ಷಿಣಾ ಅಮೆರಿಕನ್ ದೇಶಗಳಲ್ಲಿ ರೋಗದ ದತ್ತಾಂಶವನ್ನು ಬಳಸಿ 19 ಅಧ್ಯಯನಗಳನ್ನು ವಿಶ್ಲೇಷಣೆ ನಡೆಸಲಾಗಿದೆ.
ಡೆಂಗ್ಯೂ ನಿಯಂತ್ರಿಸುವಲ್ಲಿ ಇದರ ಎರಡು ಡೋಸ್ ಲಸಿಕೆಗಳು ನಿಸ್ಸಂಶಯವಾಗಿ ಪ್ರಮುಖ ಪರಿಣಾಮಕಾರಿ ಸಾಧನವಾಗಿದ್ದು, ಸುರಕ್ಷತೆ ಮತ್ತು ಸಾಮರ್ಥ್ಯ, ಇಮ್ಯುನೊಜೆನಿಸಿಟಿ ಹೊಂದಿವೆ ಎಂದು ಅಧ್ಯಯನದ ಪ್ರಮುಖ ಲೇಖಕ ಇಟಲಿಯ ಫೆರ್ರಾರ್ ಯುನಿವರ್ಸಿಟಿ ಮರಿಯಾ ಎಲೆನಾ ಫ್ಲಕ್ಕೊ ತಿಳಿಸಿದ್ದಾರೆ. ಜರ್ನಲ್ ವಾಕ್ಸಿನ್ಸ್ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ.
ಕ್ಯೂಡೆಂಗಾ ಲಸಿಕೆಯನ್ನು ಜಪಾನ್‌ನ ಟಕೆಡಾ ಫಾರ್ಮಾಸ್ಯೂಟಿಕಲ್ ಇಂಡಸ್ಟ್ರಿ ಲಿಮಿಟೆಡ್ ಅಭಿವೃದ್ಧಿ ಮಾಡಿದ್ದು, ಟಿಎಕೆ -003 ಎಂದೂ ಕೂಡ ಗುರುತಿಸಲಾಗಿದೆ. ಇದು ಡಿಇಎನ್ವಿ ವೈರಸ್ನ ನಾಲ್ಕು ವಿಧವನ್ನು ತಗ್ಗಿಸುವ ಗುಣ ಹೊಂದಿದೆ. ಟಿಎಕೆ-003 ಎರಡು ಡೋಸ್ ಲಸಿಕೆ ಅತ್ಯುತ್ತಮ ಸುರಕ್ಷತೆ ಮತ್ತು ಪ್ರತಿರಕ್ಷಣೆ ಹೊಂದಿದೆ ಎಂದು ಲೇಖಕರು ವಿವರಿಸಿದ್ದಾರೆ.
ಲಸಿಕೆಯ ಒಂದು ಡೋಸ್ ಪಡೆದಲ್ಲಿ ಮಕ್ಕಳು ಮತ್ತು ವಯಸ್ಕರಲ್ಲಿ ಶೇ 70ರಷ್ಟು ಮತ್ತು ಎರಡು ಡೋಸ್ ಲಸಿಕೆ ಪಡೆದವರಲ್ಲಿ ಶೇ 90ರಷ್ಟು ಮಂದಿಗೆ ಸೋಂಕಿನ ವಿರುದ್ಧ ಸಾಮರ್ಥ್ಯ ಹೆಚ್ಚಾಗಿದೆ. ಕಳೆದ ಫೆಬ್ರವರಿಯಲ್ಲಿ ಹೈದರಾಬಾದ್ ಟಕೆಡಾ ಮತ್ತು ಬಯೋಲಾಜಿಕಲ್ ಇ ಲಿಮಿಟೆಡ್ ಕ್ಯೂಡೆಕಾ ಲಸಿಕೆಯನ್ನು ಜಂಟಿ ಸಹಭಾಗಿತ್ವದೊಂದಿಗೆ ಲಭ್ಯತೆ ನೋಡಿಕೊಳ್ಳುವ ಕುರಿತು ಘೋಷಿಸಿದ್ದವು. ಪ್ರಸ್ತುತ ಈ ಲಸಿಕೆಗೆ ಭಾರತದಲ್ಲಿ ಅನುಮೋದನೆ ಸಿಕ್ಕಿಲ್ಲ.
ಕ್ಯೂಡೆಂಗಾ ಲಸಿಕೆ ಫಲಿತಾಂಶ ಭರವಸೆದಾಯಕವಾಗಿದೆ. ಪರಿಣಾಮಕಾರಿ ಮತ್ತು ಸುರಕ್ಷತೆಯ ಸಮಗ್ರ ಅಂದಾಜು ಇನ್ನೂ ಲಭ್ಯವಾಗಿಲ್ಲ ಎಂದು ಲೇಖಕರು ಹೇಳಿದ್ದಾರೆ.
ಹೆಣ್ಣು ಸೊಳ್ಳೆ ಈಡಿಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಡೆಂಗ್ಯೂಗೆ ಕಾರಣವಾಗುವ ಡಿಇಎನ್ವಿ ಸೋಂಕು ಹರಡುತ್ತದೆ. ಈ ಸೋಂಕು ಅಧಿಕ ಜ್ವರ, ತಲೆನೋವು, ಕೀಲು ನೋವು ಮತ್ತು ದದ್ದಿನಂತಹ ಸಾಮಾನ್ಯ ಲಕ್ಷಣಗಳನ್ನು ಹೊಂದಿದ್ದು, ಕೆಲವು ಪ್ರಕರಣಗಳು ಮಾರಣಾಂತಿಕವಾಗಿದೆ. ಅರ್ಧದಷ್ಟು ಜಗತ್ತು ಡೆಂಗ್ಯೂ ಅಪಾಯ ಹೊಂದಿದ್ದು, ಇತ್ತೀಚಿನ ದಶಕಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗಿದೆ. 2000ದಲ್ಲಿ 5 ಲಕ್ಷವಿದ್ದ ಪ್ರಕರಣಗಳು 2019ರಲ್ಲಿ 52 ಲಕ್ಷಕ್ಕೆ ಏರಿಕೆ ಕಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಜಾಗತಿಕ ಜನಸಂಖ್ಯೆಗೆ ಹೋಲಿಸಿಡಿದಾಗ ಶೇ 70ರಷ್ಟು ಪ್ರಕರಣಗಳು ಏಷ್ಯಾ ದೇಶಗಳಲ್ಲಿ ಕಂಡು ಬಂದಿದೆ. ಆಫ್ರಿಕಾದ 100 ದೇಶಗಳಲ್ಲಿ, ಅಮೆರಿಕ ಮತ್ತು ಪಶ್ಚಿಮ ಫೆಸಿಫಿಕ್ನಲ್ಲಿ ಇದು ಸ್ಥಳೀಯ ಸೋಂಕಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಏಜೆನ್ಸಿ ತಿಳಿಸಿದೆ.
ಇದನ್ನೂ ಓದಿ: ಡೆಂಗ್ಯೂವಿನಿಂದ ಮಿದುಳಿನ ನರಮಂಡಲದ ಮೇಲೆ ಗಂಭೀರ ಪರಿಣಾಮ: ತಜ್ಞರು