ಮೆಹಬೂಬನಗರ, ತೆಲಂಗಾಣ: ಮಿಕ್ಕಿದ ತರಕಾರಿ ಮತ್ತು ಹಣ್ಣುಗಳಿಂದ ಎಣ್ಣೆಯನ್ನು ಉತ್ಪಾದನೆ ಮಾಡುವ ಸಂಶೋಧನಾ ಪ್ರಯೋಗಕ್ಕೆ ತೆಲಂಗಾಣದ ಪಲಮರು ಯುನಿವರ್ಸಿಟಿ ಮತ್ತು ನೋಯ್ಡಾದ ಅಮಿಟಿ ಯುನಿವರ್ಸಿಟಿ ಮುಂದಾಗಿದೆ. 2023ರಲ್ಲಿ ಅಮಿಟಿ ಯುನಿವರ್ಸಿಟಿ ಪ್ರೊ ದಿಬರ್ಟಿ ಪೌಲ್ ಮತ್ತು ಮೈಕ್ರೋಬಯೋಲಾಜಿ ವಿಭಾಗದ ಮುಖ್ಯಸ್ಥ ಡಾ ಮಧುಸೂದನ್ ರೆಡ್ಡಿ ಈ ಯೋಜನೆ ಆರಂಭಿಸಿದ್ದರು.
ಕಳೆದ ವರ್ಷ ಸೈನ್ಸ್ ಅಂಡ್ ಇಂಜಿನಿಯರಿಂಗ್ ರಿಸರ್ಚ್ ಬೋರ್ಡ್ (ಎಸ್ಇಆರ್ಬಿ)ಯಲ್ಲಿ ಈ ಪ್ರಸ್ತಾವವನ್ನು ಮಂಡಿಸಿದ್ದರು. ಇದನ್ನು ಪರಿಗಣಿಸಿ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಮಂಡಳಿ ಈ ಯೋಜನೆ ಅನುಮತಿ ನೀಡಿದ್ದು, ಇದರ ಸಂಶೋಧನೆಗೆ 45,74,560 ರೂಪಾಯಿಗಳನ್ನು ಬಿಡುಗಡೆ ಮಾಡಿದೆ.
ಈ ಯೋಜನೆ ಕುರಿತು ಪಿಎಚ್ಡಿ ವಿದ್ಯಾರ್ಥಿಗಳೊಂದಿಗೆ ನೋಯ್ಡಾದಲ್ಲಿ ಪ್ರೊಫೆಸರ್ ತಮ್ಮ ಸಂಶೋಧನಾ ಕೆಲಸ ಆರಂಭಿಸಿದ್ದಾರೆ. 2027ರ ಹೊತ್ತಿಗೆ ಸಂಶೋಧನೆ ಮುಗಿಸುವ ಗುರಿಯನ್ನು ತಂಡ ರೂಪಿಸಿದ್ದು, ಇದಕ್ಕಾಗಿ ಮೆಷಿನ್ ಒಂದನ್ನು ಖರೀದಿ ಮಾಡಲಾಗಿದೆ ಎಂಬ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಮಾರುಕಟ್ಟೆಯಲ್ಲಿ ಸಿಗುವ ಕೆಲವು ಎಣ್ಣೆಗಳು ಕಲಬೆರಕೆಯಾಗಿದ್ದು, ಇವುಗಳಲ್ಲಿ ಅಪಾಯಕಾರಿ ರಾಸಾಯನಿಕಗಳು, ಜಾನುವಾರ ಮೂಳೆ ಮತ್ತು ಕರಗುವ ಕೊಬ್ಬನ್ನು ಒಳಗೊಂಡಿದೆ ಎಂದು ಪ್ರೊ ತಿಳಿಸಿದ್ದಾರೆ. ಇಂತಹ ಗುಣಮಟ್ಟದ ಎಣ್ಣೆಗಳು ಕಡಿಮೆ ದರದಲ್ಲಿ ಲಭ್ಯವಾಗುವುದರಿಂದ ಅನೇಕ ಹಾಸ್ಟೆಲ್ ಮತ್ತು ಫಾಸ್ಟ್ ಫುಡ್ ಸೆಂಟರ್ಗಳು ಇವುಗಳ ಬಳಕೆಗೆ ಮುಂದಾಗಿದೆ.
ಇಂತಹ ಎಣ್ಣೆಗಳಲ್ಲಿ ಮಾಡಿದ ಆಹಾರ ಸೇವಿಸಿದಾಗ ರಕ್ತದೊತ್ತಡ ಹೆಚ್ಚುತ್ತದೆ. ಹಾಗೇ ಮೂತ್ರಪಿಂಡ, ಯಕೃತ್ ಮತ್ತು ಇತರ ಅಂಗಾಂಗಗಳ ಮೇಲೆ ಪರಿಣಾಮ ಬೀರಲಿದೆ. ಇಂತಹ ಕಲಬೆರಕೆ ತಡೆಯಲು ಮತ್ತು ಕೈಗೆಟಕುವ ಬೆಲೆಯಲ್ಲಿ ಆರೋಗ್ಯಯುತ ಎಣ್ಣೆ ನೀಡುವ ಉದ್ದೇಶದಿಂದ ಈ ಯೋಜನೆ ನಡೆಸಲಾಗಿದೆ. ಅಳಿದು - ಉಳಿದ ತರಕಾರಿಗಳು, ಹಣ್ಣುಗಳು ಮತ್ತು ಚರ್ಮದಿಂದ ಎಣ್ಣೆ ತಯಾರಿಸಬಹುದು. ಇದರಿಂದ ಆಹಾರ ಮತ್ತು ಕಚ್ಚಾ ವಸ್ತುಗಳ ವ್ಯರ್ಥವಾಗುವುದನ್ನು ತಪ್ಪಿಸಬಹುದು.
ಹೆಚ್ಚು ಉತ್ಪಾದನೆಯಿಂದ ತರಕಾರಿಗಳು ವ್ಯರ್ಥವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಶೋಧನೆಗಾಗಿ, ಮಹಬೂಬ್‌ನಗರ ರೈತ ಬಜಾರ್ ಮತ್ತು ದೆಹಲಿಯ ಇತರ ಮಾರುಕಟ್ಟೆಗಳಿಂದ ಉಳಿದ ತರಕಾರಿಗಳನ್ನು ಸಂಗ್ರಹಿಸಿ, ನೋಯ್ಡಾದಲ್ಲಿ ಪ್ರಯೋಗಗಳನ್ನು ನಡೆಸಲಾಗಿದೆ. ಸುಧಾರಿತ ಯಂತ್ರಗಳ ಸಹಾಯದಿಂದ ತರಕಾರಿ ಮತ್ತು ಹಣ್ಣುಗಳಲ್ಲಿರುವ ಬ್ಯಾಕ್ಟೀರಿಯಾವನ್ನು ತೆಗೆದು ತೈಲವನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ಮುಂದಿನ ವರ್ಷದಲ್ಲಿ ಮುಗಿಸುವ ಗುರಿಯನ್ನು ಹೊಂದಿರುವುದಾಗಿ ಡಾ ರೆಡ್ಡಿ ತಿಳಿಸಿದ್ದಾರೆ.
ತರಕಾರಿಗಳು, ಹಣ್ಣುಗಳು ಮತ್ತು ಇತರ ತ್ಯಾಜ್ಯ ವಸ್ತುಗಳಿಂದ ಜೈವಿಕ ಡೀಸೆಲ್ ಅನ್ನು ಹೊರತೆಗೆಯಲಾಯಿತು. ಈ ರೀತಿ ಅನೇಕ ವ್ಯವಸ್ಥೆಗಳು ದೇಶದ ಹಲವು ರಾಜ್ಯಗಳಲ್ಲಿದೆ. ಇದರಿಂದ ಸ್ಪೂರ್ತಿಗೊಂಡು ಮಿಕ್ಕ ತರಕಾರಿಗಳು ಮತ್ತು ತ್ಯಾಜ್ಯದಿಂದ ಅಡುಗೆ ಎಣ್ಣೆ ತಯಾರಿಸಲು ಸಂಶೋಧನೆ ನಡೆಸಲಾಗಿದೆ. ಮುಂದಿನ ವರ್ಷಾಂತ್ಯಕ್ಕೆ ಈ ಯೋಜನೆ ಕುರಿತು ಫಲಿತಾಂಶದ ಅಂದಾಜು ಸಿಗುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಭಾರತದಲ್ಲಿ ಎಷ್ಟು ಮಾವಿನ ತಳಿಗಳಿವೆ ಗೊತ್ತೇ? ಹಲವು ಆರೋಗ್ಯ ಪ್ರಯೋಜನ ನೀಡುವ 'ಹಣ್ಣುಗಳ ರಾಜ'