ಹೈದರಾಬಾದ್: ಆಫ್ರಿಕಾ ಖಂಡದಲ್ಲಿ ಆತಂಕ ಮೂಡಿಸಿರುವ ಮಂಕಿಪಾಕ್ಸ್ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವುದರಿಂದ ಈ ಸೋಂಕು ಭಾರತದಲ್ಲಿ ಹರಡುವ ಅಪಾಯ ಕಡಿಮೆಯಾಗಿದೆ. ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಪ್ರಧಾನ ಆರೋಗ್ಯ ಸೇವಾ ನಿರ್ದೇಶಕ ಡಾ ಅತುಲ್ ಗೋಯೆಲ್ ತಿಳಿಸಿದ್ದಾರೆ.
ಆಗಸ್ಟ್ 14ರಂದು ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿಯಾಗಿ ಘೋಷಿಸಿದೆ. ಆಫ್ರಿಕಾದಲ್ಲಿ ಹರಡಿರುವ ಸೋಂಕು ಭಾರತದಲ್ಲಿ ಕಾಣಿಸಿಕೊಂಡರೆ ಅದನ್ನು ಎದುರಿಸಲು ಭಾರತ ಸಕಲ ಸಿದ್ಧತೆ ನಡೆಸಿದೆ.
ಈ ಸೋಂಕು ಇಲ್ಲಿಯವರೆಗೆ ಭಾರತದಲ್ಲಿ ಕಂಡು ಬಂದಿಲ್ಲ. ಈ ಹಿನ್ನೆಲೆ ಯಾವುದೇ ಆತಂಕ ಬೇಡ. ಎನ್ಸಿಡಿಸಿ ಜಂಟಿ ನಿರ್ವಹಣೆ ಸಂಸ್ಥೆ ಇದರ ಹರಡುವಿಕೆ ಅಪಾಯದ ಮೌಲ್ಯಮಾಪನ ನಡೆಸುತ್ತಿದೆ. ಈ ಸೋಂಕು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡುವ ಅಪಾಯ ಕಡಿಮೆ ಇದೆ. ಒಂದು ವೇಳೆ ಪ್ರಕರಣಗಳಿದ್ದರೆ ಪ್ರವೇಶ ಹಂತದಲ್ಲೇ ಎಚ್ಚರಿಸಲಾಗುವುದು. ಇದಕ್ಕೆಂದು ಗುರುತಿಸಿದ ಆಸ್ಪತ್ರೆಗೆ ಅವುಗಳ ವರ್ಗಾವಣೆ ಮಾಡಲಾಗುವುದು. ಈ ರೀತಿಯ ಪ್ರತ್ಯೇಕತೆ ಮತ್ತು ನಿರ್ವಹಣೆಗಾಗಿ ಗೊತ್ತುಪಡಿಸಿದ ಸಂಸ್ಥೆಗಳನ್ನು ಸ್ಥಾಪಿಸಲು ಕೇಳಿದ್ದೇವೆ ಎಂದರು.
ಎಂಪಾಕ್ಸ್ ಸೋಂಕಿನ ವಿರುದ್ಧ ದೇಶದಲ್ಲಿನ ಸಿದ್ಧತೆ ಮತ್ತು ಇದಕ್ಕೆ ಸಂಬಂಧಿತ ಸಾರ್ವಜನಿಕ ಆರೋಗ್ಯ ಕ್ರಮದ ಕುರಿತಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕಾರ್ಯದರ್ಶಿ ಡಾ ಪಿ ಕೆ ಮಿಶ್ರಾ ಅವರನ್ನೊಳಗೊಂಡ ಉನ್ನತ ಮಟ್ಟದ ಸಭೆ ನಡೆಸಲಾಗಿತ್ತು. ಈ ವೇಳೆ ದೇಶದಲ್ಲಿ ಈ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸುತ್ತಿರುವುದಾಗಿ ವಕ್ತಾರರು ತಿಳಿಸಿದ್ದರು.
ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ 16,000 ಸೋಂಕಿನ ಶಂಕಿತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 2,500 ದೃಢಪಟ್ಟಿದ್ದು, 500 ಸಾವು ಸಂಭವಿಸಿವೆ ಎಂದು ಡಾ ಗೋಯೆಲ್ ಮಾಹಿತಿ ನೀಡಿದರು.
ಸ್ವೀಡನ್ನಲ್ಲಿ ಈ ಸೋಂಕು ದೃಢಪಟ್ಟ ನಂತರ ವಿಶ್ವ ಆರೋಗ್ಯ ಸಂಸ್ಥೆ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು. ಕಳೆದ ಸೋಂಕಿನ ತಳಿಗಿಂತ ಇದರಿಂದ ಹೆಚ್ಚಿನ ಸಾವು ಸಂಭವ ಇದೆ. ಇನ್ನು, ಈ ಸೋಂಕು ನಿಕಟ ಸಂಪರ್ಕದಲ್ಲಿದ್ದವರಲ್ಲಿ ಮಾತ್ರ ವರದಿಯಾಗಿದ್ದು, ಹೆಚ್ಚು ಸೋಂಕಿತವಲ್ಲ. ನಿಕಟ ಉಸಿರಾಟ ಸಂಬಂಧವಿದ್ದಲ್ಲಿ ಇದರ ಹರಡುವಿಕೆ ಕಂಡಿದೆ ಎಂದಿದ್ದಾರೆ.
ಇದನ್ನೂ ಓದಿ: ನಿಮಗೆ ಈ ರೋಗ ಲಕ್ಷಣಗಳಿದ್ದರೆ ಜಾಗರೂಕರಾಗಿರಿ: ಅದು 'ಮಂಕಿಪಾಕ್ಸ್' ಆಗಿರಬಹುದು!