ETV Bharat / health

ಮಳೆಗಾಲದಲ್ಲಿ ಸೊಳ್ಳೆ ಕಾಟ ತಡೆಯೋಕಾಗ್ತಿಲ್ವಾ? ಈ ಮನೆಮದ್ದು​ ಬಳಸಿ - How To Keep Away Mosquitoes

ಮಳೆಗಾಲದಲ್ಲಿ ಎಲ್ಲಿಬೇಕೆಂದರಲ್ಲಿ ನೀರು ನಿಲ್ಲುತ್ತದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ವಿಜೃಂಭಿಸುತ್ತವೆ. ಹೀಗಾಗಿ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ ಈ ನೈಸರ್ಗಿಕ ಟಿಪ್ಸ್ ಪಾಲಿಸಿ ಸೊಳ್ಳೆಗಳನ್ನು ಸುಲಭವಾಗಿ ಓಡಿಸುವ ವಿಧಾನದ ಬಗ್ಗೆ ತಿಳಿಯೋಣ..

author img

By ETV Bharat Karnataka Team

Published : Jul 21, 2024, 7:50 PM IST

Updated : Jul 25, 2024, 6:23 PM IST

HOW TO KEEP AWAY MOSQUITOES
ಸಂಗ್ರಹ ಚಿತ್ರ (ETV Bharat)

ಸಾಮಾನ್ಯ ದಿನಗಳಲ್ಲೇ ಸೊಳ್ಳೆಗಳ ಹಾವಳಿ ಹೆಚ್ಚಿರುತ್ತದೆ. ಇನ್ನು ಮಳೆಗಾಲದಲ್ಲಿ ಪರಿಸ್ಥಿತಿ ಹೇಗಿರುತ್ತದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಅಪಾಯಕಾರಿ ಕಾಯಿಲೆಗಳು ಬರುತ್ತವೆ. ಹೀಗಾಗಿ ಜನರು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಮಸ್ಕಿಟೋ ಕಾಯಿಲ್​ ಮತ್ತು ರಿಪೆಲ್ಲಂಟ್ಸ್​ಗಳನ್ನು ಬಳಸುತ್ತಾರೆ. ಇವುಗಳಿಂದ ಸೊಳ್ಳೆಗಳು ಸಾಯುತ್ತವೆ. ಆದರೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿಯೇ ಸೊಳ್ಳೆಗಳನ್ನು ನೈಸರ್ಗಿಕವಾಗಿ ಓಡಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಕರ್ಪೂರ: ನಮ್ಮೆಲ್ಲರ ಮನೆಗಳಲ್ಲಿ ದೇವರಿಗೆ ಮಂಗಳಾರತಿ ಮಾಡಲು ಕರ್ಪೂರವನ್ನು ಬಳಸುತ್ತೇವೆ. ಇದರ ಮೂಲಕ ಸೊಳ್ಳೆಗಳನ್ನು ಸುಲಭವಾಗಿ ಓಡಿಸಬಹುದು ಎಂದು ನಿಮಗೆ ಗೊತ್ತಾ?. ಅದ್ಹೇಗೆ ಎಂದರೆ.. ರಾತ್ರಿ ಆಗುತ್ತಲೇ ಮನೆಯಲ್ಲಿ ಒಂದು ಸಣ್ಣ ಪ್ಲೇಟಿಗೆ ಕರ್ಪೂರ ಹಾಕಿ ಅರ್ಧ ಗಂಟೆ ಒಂದು ಮೂಲೆಯಲ್ಲಿಡಿ. ಹೀಗೆ ಮಾಡಿದರೆ ಮನೆಯೊಳಗೆ ಸೊಳ್ಳೆಗಳು ಸುಳಿಯುವುದಿಲ್ಲ.

ಬೆಳ್ಳುಳ್ಳಿ ಘಾಟು ವಾಸನೆಗೆ ಸೊಳ್ಳೆಗಳು ಪರಾರಿ: ಬೆಳ್ಳುಳ್ಳಿ ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ಸೊಳ್ಳೆಗಳನ್ನು ಓಡಿಸಲು ನೆರವಾಗುತ್ತವೆ. ಕೆಲ ಬೆಳ್ಳುಳ್ಳಿ ಎಸಳನ್ನು ಜಜ್ಜಿ, ಅವುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಬಳಿಕ ಆ ನೀರನ್ನು ಸ್ಪ್ರೇ ಬಾಟಲ್​ಗೆ ಹಾಕಿಕೊಂಡು ರಾತ್ರಿ ವೇಳೆ ಮನೆಯಲ್ಲಿ ಸ್ಪ್ರೇ ಮಾಡಿ. ಹೀಗೆ ಮಾಡಿದರೆ ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

ಲ್ಯಾವೆಂಡರ್ ಎಣ್ಣೆ: ಸೊಳ್ಳೆಗಳಿಗೆ ಲ್ಯಾವೆಂಡರ್ ಎಣ್ಣೆ ವಾಸನೆ ಹಿಡಿಸುವುದಿಲ್ಲ. ಈ ವಾಸನೆ ಇರುವ ಸ್ಥಳದಲ್ಲಿ ಅವು ಇರುವುದಿಲ್ಲ. ಆದ್ದರಿಂದ, ಮನೆಯಲ್ಲಿ ಲ್ಯಾವೆಂಡರ್ ಎಣ್ಣೆ ಸ್ಪ್ರೇ ಮಾಡಿ. ಸೊಳ್ಳೆಗಳು ತುಂಬಾ ಹೆಚ್ಚಿದ್ದರೆ ಲ್ಯಾವೆಂಡರ್ ಆಯಿಲ್‌ ಅನ್ನು ಕೈ, ಕಾಲುಗಳಿಗೆ ಹಚ್ಚಿಕೊಳ್ಳಿ. ಹೀಗೆ ಮಾಡಿದರೆ ಒಂದು ಸೊಳ್ಳೆಯೂ ನಿಮ್ಮನ್ನು ಕಚ್ಚುವುದಿಲ್ಲ.

ಪುದೀನದಿಂದ ಸೊಳ್ಳೆಗಳಿಗೆ ಚೆಕ್: ನಾನ್​ವೆಜ್​ ಕರಿ, ಸಾಂಬಾರ್​ಗೆ ಘಮಗುಡಬೇಕೆಂದರೆ ಪುದೀನಾ ಹಾಕಲೇಬೇಕು. ಪುದೀನಾ ಎಲೆಗಳು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇನ್ನು ಮನೆಯಲ್ಲಿ ಸೊಳ್ಳೆಗಳು ಹೆಚ್ಚಿದ್ದರೆ ಪುದೀನಾ ಕಟ್ಟನ್ನು ಅಥವಾ ಪುದೀನಾ ಆಯಿಲ್ ಅನ್ನು ಇರಿಸಿದರೆ ಸೊಳ್ಳೆಗಳು ಓಡಿಹೋಗುತ್ತವೆ ಎಂದು ಎಂದು ತಜ್ಞರು ಹೇಳುತ್ತಾರೆ.

2012 ರಲ್ಲಿ 'ಪ್ಯಾರಾಸಿಟಾಲಜಿ' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಪುದೀನ ಎಲೆಗಳ ವಾಸನೆಯು ತುಂಬಾ ಪರಿಣಾಮಕಾರಿ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಲ್ಲದೆ ಪುದಿನಾ ಸೊಪ್ಪಿನ ವಾಸನೆ ಬರುವ ಪ್ರದೇಶದಲ್ಲಿ ಸೊಳ್ಳೆಗಳು ಕಡಿಮೆ ಇರುವುದು ಕಂಡು ಬಂದಿದೆ. ಈ ಸಂಶೋಧನೆಯಲ್ಲಿ ಮಲೇಷ್ಯಾದ ಯೂನಿವರ್ಸಿಟಿ ಸೈನ್ಸ್​ನ ಡಾ. ಎಂ.ಎ. ಕಮರುದ್ದೀನ್ ಭಾಗವಹಿಸಿದ್ದರು. ಪುದೀನಾ ಸೊಪ್ಪಿನ ವಾಸನೆ ಇರುವ ಕಡೆ ಸೊಳ್ಳೆಗಳ ಕಾಟ ಕಡಿಮೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಡುಗೆ ಮನೆಯ ಸಿಂಕ್​ನಲ್ಲಿ ನೀರು ತುಂಬಿ ಕೆಟ್ಟ ದುರ್ವಾಸನೆ ಬರುತ್ತಿದೆಯೇ?, ಈ ಸಿಂಪಲ್ ಟಿಪ್ಸ್​​ ಒಮ್ಮೆ ಪಾಲಿಸಿ ನೋಡಿ.. - SINK CLEANIN TIPS

Last Updated : Jul 25, 2024, 6:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.