ETV Bharat / health

ಮಾನಸಿಕ ಆರೋಗ್ಯ ಸವಾಲುಗಳಿಗೆ ಸಂಜೀವಿನಿ Tele MANASಗೆ ಪ್ರತಿನಿತ್ಯ 3,500 ಕರೆ - Tele MANAS - TELE MANAS

ದೇಶದಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುವ ಉದ್ದೇಶದಿಂದ ಟೆಲಿ ಮಾನಸ್​ ಅನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲಾಗಿದೆ.

national tele mental health programme in India receives 3,500 calls per day
ರಾಷ್ಟ್ರೀಯ ಟೆಲಿ-ಮೆಂಟಲ್ ಹೆಲ್ತ್ ಪ್ರೋಗ್ರಾಂ (IANS)
author img

By ETV Bharat Karnataka Team

Published : May 30, 2024, 11:36 AM IST

Updated : May 30, 2024, 12:00 PM IST

ನವದೆಹಲಿ: ಯಾವುದೇ ವಯಸ್ಸಿನಲ್ಲಿಯೂ ವ್ಯಕ್ತಿ ಖಿನ್ನತೆ, ಒತ್ತಡದಂತಹ ಸಮಸ್ಯೆಯಿಂದ ಬಳಲುತ್ತಿರಬಹುದು. ಇಂತಹ ಸಮಯದಲ್ಲಿ ಕಾಡುವ ಒಂದು ಯೋಚನೆ ದೊಡ್ಡ ದುರ್ಘಟನೆಗೂ ದಾರಿ ಮಾಡಿಕೊಡಬಹುದು. ಇಂತಹ ಜನರಿಗೆ ಆ ಕ್ಷಣದಲ್ಲಿ ಸಿಗುವ ಒಂದು ಸಾಂತ್ವನ ಅವರ ಬದುಕು ಬದಲಾಯಿಸುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲಿ ರಾಷ್ಟ್ರೀಯ ಟೆಲಿ-ಮೆಂಟಲ್ ಹೆಲ್ತ್ ಪ್ರೋಗ್ರಾಂ (ಟೆಲಿ ಮಾನಸ್​) ಎಂಬ ಟೋಲ್​ ಫ್ರಿ ಸಹಾಯವಾಣಿ ಆರಂಭಿಸಿತು. ಇದೀಗ ಈ ಸಹಾಯವಾಣಿಗೆ ದಿನಕ್ಕೆ ಸರಾಸರಿ 3,500 ಕರೆಗಳು ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

2022ರ ಅಕ್ಟೋಬರ್​ನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು 51 ಟೆಲಿ ಮಾನಸ್​ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಟೆಲಿ ಮಾನಸ್​ ಟೋಲ್​ ಫ್ರೀ ಸಂಖ್ಯೆ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಕರೆಯನ್ನು ಸ್ವೀಕರಿಸಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ದೇಶದೆಲ್ಲೆಡೆ ಮಾನಸಿಕ ಆರೋಗ್ಯ ಸೇವೆ ನೀಡಲು 14416 ಅಥವಾ 1-800-891-4416 ಎಂಬ ಟೋಲ್​ ಫ್ರೀ ಸಂಖ್ಯೆ ನೀಡಲಾಗಿದೆ. ಬಹುಭಾಷೆಯ ಸೌಲಭ್ಯ ಇದರಲ್ಲಿದೆ. ಈ ಮೂಲಕ ಕರೆ ಮಾಡುವವರ ಭಾಷೆಯಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರು ಸಂವಹನ ನಡೆಸಿ, ಸಮಸ್ಯೆ ಬಗೆಹರಿಸಲಾಗುತ್ತಿದೆ.

ಸಚಿವಾಲಯದ ಪ್ರಕಾರ, 2022ರಲ್ಲಿ 12 ಸಾವಿರ ಕರೆಯನ್ನು ಈ ಟೆಲಿ ಮಾನಸ್​ ಮೂಲಕ ಸ್ವೀಕರಿಸಲಾಗಿದೆ. 2024ರಲ್ಲಿ ಈ ಸಂಖ್ಯೆ 90 ಸಾವಿರಕ್ಕೇರಿದೆ. ಈ ಮೂಲಕ ಸಹಾಯವಾಣಿಗೆ ಕರೆಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳ ಕಂಡುಬಂದಿದೆ. ಇದರ ಜೊತೆಗೆ ಕರೆ ಮಾಡಿದವರಿಗೆ ಆಗ ಮಾತ್ರ ಸಾಂತ್ವನ ನೀಡಿ ಸುಮ್ಮನಾಗದ ಆರೋಗ್ಯ ವೃತ್ತಿಪರರು ಅವರಿಗೆ ಮರು ಕರೆ ಮಾಡಿ, ಫಾಲೋ ಅಪ್​ ಮಾಡುವುದರಿಂದ ಅವರ ಸಂಪೂರ್ಣ ಮಾನಸಿಕ ಆರೋಗ್ಯ ಸುಧಾರಣೆಗೆ ನೆರವಾಗುತ್ತಾರೆ.

ಈ ರೀತಿ ವ್ಯಕ್ತಿಯೊಬ್ಬನ ಮಾನಸಿಕ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳುವ ಮೂಲಕ ಮಾನಸಿಕ ಆರೋಗ್ಯ ಉಪಕ್ರಮಗಳ ವಿಸ್ತರಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಲಾಗುತ್ತದೆ. ಇದರೊಂದಿಗೆ ಪ್ರತಿಯೊಬ್ಬರಿಗೂ ಅವರಿಗೆ ಅಗತ್ಯವಿರುವ ಬೆಂಬಲವನ್ನು ಖಚಿತಪಡಿಸಲಾಗುವುದು.

ಪ್ರಸ್ತುತ ಲಭ್ಯವಿರುವ ಮಾನಸಿಕ ಆರೋಗ್ಯ ಸಂಪನ್ಮೂಲವನ್ನು ಲಿಂಕ್​ ಮಾಡುವುದರೊಂದಿಗೆ ಸಮಗ್ರ ಡಿಜಿಟಲ್​ ನೆಟ್​​ವರ್ಕ್​ ಸ್ಥಾಪಿಸಿ, ದೇಶದ ಮಾನಸಿಕ ಆರೋಗ್ಯ ಅಗತ್ಯತೆಗಳನ್ನು ಪರಿಹರಿಸಲು ಟೆಲಿ ಮಾನಸ್ ಪ್ರಮುಖ ವೇದಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದುರ್ಬಲ ಮಾನಸಿಕ ಆರೋಗ್ಯ ಹೊಂದಿರುವವರನ್ನು ಗುರಿಯಾಗಿಸಿಕೊಂಡು ದೇಶ ಎದುರಿಸುತ್ತಿರುವ ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸುವಲ್ಲಿ ಈ ಕಾರ್ಯಕ್ರಮ ಮಹತ್ವದ ಮೈಲಿಗಲ್ಲಾಗಿದೆ. ಇದರ ಪರಿಣಾಮಕಾರಿತ್ವದ ಹೆಚ್ಚಳಕ್ಕೆ ಇ-ಸಂಜೀವಿನಿಯಂತಹ ಉಪಕ್ರಮಗಳೊಂದಿಗೆ ಸಂಯೋಜಿಸಲಾಗುವುದು. ಟೆಲಿ ಮಾನಸ್​​ ದೇಶದಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಸಚಿವಾಲಯ ಮಾಹಿತಿ ಒದಗಿಸಿದೆ.(ಐಎಎನ್​ಎಸ್​)

ಇದನ್ನೂ ಓದಿ: ಶೇ 80ರಷ್ಟು ಭಾರತೀಯರು ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವುದಿಲ್ಲ: ವೈದ್ಯರು

Last Updated : May 30, 2024, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.