ETV Bharat / health

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ: ಯಾವೆಲ್ಲ ಪೌಷ್ಠಿಕಾಂಶಗಳು ಅತ್ಯಗತ್ಯ? - National Nutrition Week

author img

By ETV Bharat Health Team

Published : Sep 1, 2024, 6:38 AM IST

Updated : Sep 1, 2024, 6:45 AM IST

National Nutrition Week 2024: ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ ಪರಿಕಲ್ಪನೆ ಮೊದಲು ಅಮೆರಿಕದಲ್ಲಿ ಪರಿಚಯವಾಯಿತು. ಪೌಷ್ಟಿಕಾಂಶದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು ಇದರ ಉದ್ದೇಶ.

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ
ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹ (ETV Bharat)

ಭಾರತದಲ್ಲಿ ವಾರ್ಷಿಕವಾಗಿ ಸೆಪ್ಟಂಬರ್ 1ರಿಂದ 7 ರವರೆಗೆ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲಾಗುತ್ತದೆ. ಇದು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಪಕ್ರಮ. ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವು ಭಾರತದಲ್ಲಿ ಮಹತ್ವದ ವಾರ್ಷಿಕ ಕಾರ್ಯಕ್ರಮವಾಗಿದೆ. ನಮ್ಮ ಜೀವನದಲ್ಲಿ ಪೌಷ್ಟಿಕಾಂಶದ ನಿರ್ಣಾಯಕ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಹಿನ್ನೆಲೆ: ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಪರಿಕಲ್ಪನೆಯನ್ನು ಮೊದಲು ಅಮೆರಿಕದಲ್ಲಿ ಮಾರ್ಚ್ 1973ರಲ್ಲಿ ಅಮೆರಿಕನ್ ಡಯೆಟಿಕ್ ಅಸೋಸಿಯೇಷನ್ ​​(ಸದ್ಯ ಅಕಾಡೆಮಿ ಆಫ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಎಂದು ಕರೆಯಲಾಗುತ್ತದೆ) ಪರಿಚಯಿಸಿತು. ಪೌಷ್ಟಿಕಾಂಶದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದು, ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುವುದು ಇದರ ಉದ್ದೇಶ. ಇದರ ಯಶಸ್ಸಿನಿಂದಾಗಿ ಈ ಉಪಕ್ರಮ ಜನಪ್ರಿಯತೆ ಗಳಿಸಿತು. ಭಾರತವನ್ನೂ ಒಳಗೊಂಡಂತೆ ವಿವಿಧ ದೇಶಗಳಲ್ಲಿ ವಾರ್ಷಿಕ ಆಚರಣೆ ಪ್ರಾರಂಭಿಸಲಾಯಿತು.

ಭಾರತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ 1982ರಲ್ಲಿ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು ಆಚರಿಸಲು ಪ್ರಾರಂಭಿಸಿತು. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಇಂಡಿಯಾದ ಪ್ರಕಾರ, 1982ರಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ಮಂಡಳಿಯಿಂದ ಪ್ರಾರಂಭವಾದ ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹವನ್ನು (1-7 ಸೆಪ್ಟೆಂಬರ್)ವಾರ್ಷಿಕವಾಗಿ ಆಚರಿಸಲಾಗುತ್ತಿದೆ. ಜನಸಾಮಾನ್ಯರಲ್ಲಿ ಪೌಷ್ಟಿಕಾಂಶ, ಆರೋಗ್ಯ ಸಂಬಂಧಿತ ಜಾಗೃತಿ ಮೂಡಿಸುವ ಗುರಿಯನ್ನು ಇದು ಹೊಂದಿದೆ.

ಸಪ್ತಾಹದ ಉದ್ದೇಶವೇನು?: ಈ ವರ್ಷದ ಥೀಮ್ ಪ್ರಕಾರ ಪ್ರಾರಂಭದಿಂದಲೇ ಸರ್ಕಾರವು ಸರಿಯಾದ ಮಾಹಿತಿಯನ್ನು ನೀಡಲು ಮತ್ತು ಸೆಮಿನಾರ್‌ಗಳ ಮೂಲಕ ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ರಚಿಸಿದೆ. ಶಿಬಿರಗಳ ಮೂಲಕ ಪ್ರತಿ ಮಗುವಿಗೆ ಮತ್ತು ಭಾರತದ ನಾಗರಿಕರಿಗೆ ಹುಟ್ಟಿನಿಂದಲೇ ಸರಿಯಾದ ಪೌಷ್ಟಿಕಾಂಶದ ಆಹಾರದಿಂದ ಮಕ್ಕಳು ಹೇಗೆ ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಸಲಾಗುತ್ತದೆ. ರಾಷ್ಟ್ರೀಯ ಪೌಷ್ಟಿಕಾಂಶ ಸಪ್ತಾಹದ ಉದ್ದೇಶವು ಸಮುದಾಯದ ಜನರಲ್ಲಿ ಅಳವಡಿಸಿಕೊಳ್ಳಬಹುದಾದ ತರಬೇತಿ, ಸಕಾಲಿಕ ಶಿಕ್ಷಣ, ಸೆಮಿನಾರ್‌ಗಳು, ವಿವಿಧ ಸ್ಪರ್ಧೆಗಳು, ರೋಡ್ ಶೋಗಳು ಮತ್ತು ಇತರ ಅನೇಕ ಅಭಿಯಾನಗಳ ಮೂಲಕ ಪೌಷ್ಟಿಕ ಅಭ್ಯಾಸದ ಅರಿವನ್ನು ಹೆಚ್ಚಿಸುವುದು ಮತ್ತು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸುವುದು.

6 ಅಗತ್ಯ ಪೋಷಕಾಂಶಗಳು ಯಾವುವು?: ಆರು ಅಗತ್ಯ ಪೋಷಕಾಂಶಗಳೆಂದರೆ ಜೀವಸತ್ವಗಳು, ಖನಿಜಗಳು, ಪ್ರೋಟೀನ್, ಕೊಬ್ಬುಗಳು, ನೀರು ಮತ್ತು ಕಾರ್ಬೋಹೈಡ್ರೇಟ್‌ಗಳು. ದೇಹದ ಸರಿಯಾದ ಕಾರ್ಯಕ್ಕಾಗಿ ಜನರು ಆಹಾರದ ಮೂಲಗಳಿಂದ ಈ ಪೋಷಕಾಂಶಗಳನ್ನು ಸೇವಿಸಬೇಕು. ಈ ಅಗತ್ಯ ಪೋಷಕಾಂಶಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಮೈಕ್ರೋನ್ಯೂಟ್ರಿಯೆಂಟ್ಸ್ ಮತ್ತು ಮ್ಯಾಕ್ರೋನ್ಯೂಟ್ರಿಯೆಂಟ್ಸ್. ಸೂಕ್ಷ್ಮ ಪೋಷಕಾಂಶಗಳು (ಮೈಕ್ರೋನ್ಯೂಟ್ರಿಯೆಂಟ್ಸ್) ಒಬ್ಬ ವ್ಯಕ್ತಿಗೆ ಸಣ್ಣ ಪ್ರಮಾಣದಲ್ಲಿ ಅಗತ್ಯವಿರುವ ಪೋಷಕಾಂಶಗಳಾಗಿವೆ. ಸೂಕ್ಷ್ಮ ಪೋಷಕಾಂಶಗಳು ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತವೆ. ದೇಹಕ್ಕೆ ಸಣ್ಣ ಪ್ರಮಾಣದಲ್ಲಿ ಮಾತ್ರ ಅಗತ್ಯವಿದೆ. ಇವುಗಳ ಕೊರತೆಯು ಅನಾರೋಗ್ಯಕ್ಕೆ ಕಾರಣವಾಗಬಹುದು.

ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು ಒಬ್ಬ ವ್ಯಕ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಪೋಷಕಾಂಶಗಳಾಗಿವೆ. ಮ್ಯಾಕ್ರೋನ್ಯೂಟ್ರಿಯೆಂಟ್ಸ್ ನೀರು, ಪ್ರೋಟೀನ್, ಕಾರ್ಬೋಹೈಡ್ರೇಟ್​ಗಳು ಮತ್ತು ಕೊಬ್ಬುಗಳನ್ನು ಒಳಗೊಂಡಿರುತ್ತದೆ.

ಉತ್ತಮ ಪೌಷ್ಟಿಕಾಂಶ ಏಕೆ ಮುಖ್ಯ?: ವೈಜ್ಞಾನಿಕವಾಗಿ, ಪೌಷ್ಟಿಕಾಂಶವು ಜೀವರಾಸಾಯನಿಕ ಮತ್ತು ಶಾರೀರಿಕ ಪ್ರಕ್ರಿಯೆಯಾಗಿದ್ದು, ಅದರ ಮೂಲಕ ಜೀವಿ ಜೀವಂತವಾಗಿರುತ್ತದೆ. ನಾವು ಸೇವಿಸುವ ಆಹಾರಗಳು ನಮ್ಮ ಮೆದುಳಿನ ರಚನೆ ಮತ್ತು ದೇಹದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಉತ್ತಮ ಪೌಷ್ಟಿಕಾಂಶ ಮಾನವನ ಆರೋಗ್ಯ ಮತ್ತು ಅಭಿವೃದ್ಧಿಯ ನಿರ್ಣಾಯಕ ಭಾಗವಾಗಿದೆ.

ರೋಗನಿರೋಧಕ ಶಕ್ತಿ: ಆರೋಗ್ಯಕರ ಪೌಷ್ಟಿಕಾಂಶಯ ಸೇವನೆಯು ರೋಗಗಳ ವಿರುದ್ಧ ನಮ್ಮ ರಕ್ಷಣೆಯನ್ನು ಸುಧಾರಿಸುತ್ತದೆ. ನೀವು ಆರೋಗ್ಯಕರ ಮತ್ತು ವೈವಿಧ್ಯಮಯ ಆಹಾರವನ್ನು ಸೇವಿಸಿದಾಗ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಮೆದುಳಿನ ಆರೋಗ್ಯ: ಅಲ್ಪಾವಧಿಯ ಮತ್ತು ದೀರ್ಘಾವಧಿಯ ಮೆದುಳಿನ ಆರೋಗ್ಯವನ್ನು ಉತ್ತೇಜಿಸುವ ಪೌಷ್ಟಿಕಾಂಶ ಆಹಾರವನ್ನು ಸೇವಿಸಬೇಕು. ಉದಾಹರಣೆಗೆ, ಒಮೆಗಾ -3 ಕೊಬ್ಬಿನಾಮ್ಲಗಳು ಮೆದುಳಿನ ಕೋಶಗಳನ್ನು ನಿರ್ಮಿಸಲು ಮತ್ತು ಸರಿಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ, ವಿಟಮಿನ್ ಸಿ ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳು ಅರಿವಿನ ಕುಸಿತ ಮತ್ತು ಬುದ್ಧಿಮಾಂದ್ಯತೆಯಿಂದ ರಕ್ಷಿಸುವ ಆಹಾರಗಳಾಗಿ ಗುರುತಿಸಲಾಗಿದೆ.

ಆರೋಗ್ಯವಂತ ಮಕ್ಕಳು: ಆರೋಗ್ಯವಂತ ವ್ಯಕ್ತಿಗಳು ಆರೋಗ್ಯವಂತ ಮಕ್ಕಳನ್ನು ಸಂತಾನೋತ್ಪತ್ತಿ ಮಾಡುತ್ತಾರೆ. ದೇಹವು ಅಭಿವೃದ್ಧಿ ಹೊಂದಲು ಸರಿಯಾದ ಪೋಷಕಾಂಶಗಳ ಅಗತ್ಯವಿರುತ್ತದೆ.

ಭಾರತದಲ್ಲಿ ಪೌಷ್ಟಿಕಾಂಶದ ಸ್ಥಿತಿಗತಿ: ಭಾರತೀಯ ಜನಸಂಖ್ಯೆಯ ಕನಿಷ್ಠ 38 ಪ್ರತಿಶತದಷ್ಟು ಜನರು ಅನಾರೋಗ್ಯಕರ ಆಹಾರವನ್ನು ಸೇವಿಸಿದ್ದಾರೆ ಎಂದು 2024ರ ಜಾಗತಿಕ ಆಹಾರ ನೀತಿ ವರದಿ ತಿಳಿದಿದೆ. ಆದರೆ, ಕೇವಲ 28 ಪ್ರತಿಶತದಷ್ಟು ಜನರು ಎಲ್ಲಾ ಐದು ಶಿಫಾರಸು ಮಾಡಿದ ಆಹಾರಗಳು ಸೇವಿಸುತ್ತಾರೆ. ಇದರಲ್ಲಿ ಕನಿಷ್ಠ ಒಂದು ಪಿಷ್ಟ ಪ್ರಧಾನ ಆಹಾರ, ಒಂದು ತರಕಾರಿ, ಒಂದು ಹಣ್ಣು, ಒಂದು ದ್ವಿದಳ ಧಾನ್ಯ, ಕಾಯಿ ಅಥವಾ ಬೀಜ ಮತ್ತು ಒಂದು ಪ್ರಾಣಿ ಮೂಲದ ಆಹಾರ ಸೇರಿವೆ. ಜಾಗತಿಕವಾಗಿ, 35.4 ಪ್ರತಿಶತ ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಅಸಮರ್ಥರಾಗಿದ್ದಾರೆ. ಇವುಗಳಲ್ಲಿ 64.8 ಪ್ರತಿಶತ ಆಫ್ರಿಕಾದಲ್ಲಿ ಮತ್ತು 35.1 ಪ್ರತಿಶತ ಏಷ್ಯಾದಲ್ಲಿವೆ. ಭಾರತ ದೇಶದಲ್ಲಿ ಅಂದಾಜು 56.4% ರಷ್ಟು ರೋಗಗಳು ಅನಾರೋಗ್ಯಕರ ಆಹಾರಕ್ರಮಕ್ಕೆ ಕಾರಣವಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ತಿಳಿಸಿದೆ.

ನ್ಯೂಟ್ರಿಯೆಂಟ್‌ ಸಮೃದ್ಧ ಆಹಾರಗಳಿವು:

ನೀರು: ಪ್ರತಿದಿನ 8ರಿಂದ 12 ಕಪ್‌ಗಳಷ್ಟು ನೀರು ಕುಡಿಯಿರಿ.

ಹಸಿರು ತರಕಾರಿಗಳು: ವಾರದಲ್ಲಿ ಕನಿಷ್ಠ 3ರಿಂದ 4 ಬಾರಿ ಹಸಿರು ತರಕಾರಿಗಳನ್ನು ಸೇವಿಸಿ. ಇದಕ್ಕಾಗಿ ಉತ್ತಮ ಆಯ್ಕೆಗಳೆಂದರೆ, ಬ್ರೊಕಲಿ, ಕರಿ ಮೆಣಸು, ಬ್ರಸೆಲ್ ಸ್ಪ್ರೌಟ್ಸ್ ಹಾಗು ಅರಿವೆ ಸೊಪ್ಪು ಅಥವಾ ಪಾಲಕ್ ಮುಂತಾದವು.

ಬೀಜಗಳು, ಕಾಳುಗಳು: ವಾರಕ್ಕೆ ಒಂದು ಬಾರಿ ಬೀಜಗಳು ಅಥವಾ ಕಾಳು ಮಿಶ್ರಿತ ಭೋಜನ ಸೇವಿಸಿ. ಇದರೊಂದಿಗೆ ಬೇಳೆ ಕಾಳುಗಳು, ಸೂಪ್, ಸಲಾಡ್‌ಗಳೂ ಇದ್ದರೆ ಇನ್ನೂ ಚೆನ್ನ.

ಧಾನ್ಯಗಳು: ಪ್ರತಿ ದಿ ಕನಿಷ್ಠ 2 ರಿಂದ 3 ಬಾರಿ ಧಾನ್ಯಗಳನ್ನು ಸೇವಿಸಿ. ಉದಾಹರಣೆಗೆ- ಗೋಧಿ ಹಿಟ್ಟು, ಚಿಕ್ಕ ಗೋಧಿ ಕಾಳು, ಓಟ್ಸ್, ಬಾರ್ಲಿ, ನವಣೆ ಅಥವಾ ಬಹು ಧಾನ್ಯಗಳು. 3ರಿಂದ 4 ಗ್ರಾಂಗಳಷ್ಟು ನಾರಿನಾಂಶ ಆರೋಗ್ಯಕ್ಕೆ ಉತ್ತಮ. ಆದರೆ, 5 ಗ್ರಾಂ ಅಥವಾ ಹೆಚ್ಚು ನಾರಿನಾಂಶ ಅತ್ಯುತ್ತಮ.

ಮೀನು: ವಾರಕ್ಕೆ 2 ರಿಂದ 3 ಬಾರಿ ಮೀನು ಸೇವಿಸಿ. ಇದಕ್ಕಾಗಿ ಆಯ್ಕೆಗಳು ಹೀಗಿವೆ- ಸಾಲ್ಮನ್, ಸಿಹಿ ನೀರಿನ ಮೀನು, ಬ್ಲೂ ಫಿಶ್, ಸಾರ್ಡೈನ್ಸ್ ಮತ್ತು ಟುನಾ.

ಬೆರೀಸ್: ಪ್ರತಿದಿನದ ಡಯಟ್‌ನಲ್ಲಿ ಹಣ್ಣುಗಳಿರುವಂತೆ ನೋಡಿಕೊಳ್ಳಿ. ಇದಕ್ಕಾಗಿ ರಾಸ್‌ಬೆರೀಸ್, ಬ್ಲೂ ಬೆರೀಸ್, ಬ್ಲ್ಯಾಕ್ ಬೆರೀಸ್ ಮತ್ತು ಸ್ಟ್ರಾಬೆರೀಸ್ ಉತ್ತಮ ಆಯ್ಕೆಗಳು.

ವಿಂಟರ್ ಸ್ಕ್ವಾಷ್: ಕಿತ್ತಾಳೆ, ಸಿಹಿ ಗೆಣಸು, ಮಾವು ಇತ್ಯಾದಿಗಳ ಸೇವನೆ ಆರೋಗ್ಯಕ್ಕೆ ಉತ್ತಮ.

ಸೋಯಾ ಉತ್ಪನ್ನಗಳು: ಲೋ ಫ್ಯಾಟ್‌ ಡಯಟ್ ಅಥವಾ ದೇಹದ ಕೊಬ್ಬಿನಾಂಶ ಇಳಿಸಲು ಪ್ರತಿದಿನ 25 ಗ್ರಾಂ ಸೋಯಾ ಪ್ರೋಟೀನ್ ಸೇವಿಸಿ. ಸೋಯಾ ಹಾಲು ಆರೋಗ್ಯಕರ ಆಯ್ಕೆ.

ಅಗಸೆ, ಮತ್ತಿತರೆ ಬೀಜಗಳು: ನಿಮ್ಮ ಪ್ರತಿದಿನದ ಡಯಟ್‌ನಲ್ಲಿ 1ರಿಂದ 2 ಟೇಬಲ್ ಸ್ಪೂನ್‌ಗಳಷ್ಟು ಅಗಸೆ ಬೀಜಗಳಿರಲಿ.

ಸಾವಯವ ಮೊಸರು: 19 ಮತ್ತು 50ರ ವಯಸ್ಸಿನ ಮಹಿಳೆಯರು ಮತ್ತು ಪುರುಷರಿಗೆ 1,000 ಮಿಲಿಗ್ರಾಂನಷ್ಟು ಕ್ಯಾಲ್ಸಿಯಂ ಅವಶ್ಯಕತೆ ಇರುತ್ತದೆ. 50 ವರ್ಷ ಮೇಲ್ಪಟ್ಟವರಿಗೆ 1,200 ಗ್ರಾಂ ಕ್ಯಾಲ್ಸಿಯಂ ಬೇಕು. ಇದಕ್ಕಾಗಿ ಕ್ಯಾಲ್ಸಿಯಂ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು.

Last Updated : Sep 1, 2024, 6:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.