ಹೈದರಾಬಾದ್: ಮೆಗ್ನಿಶಿಯಂ ಅತ್ಯಂತ ಮಹತ್ವದ ಪೌಷ್ಟಿಕಾಂಶವಾಗಿದೆ. ಹೃದಯ ಬಡಿತ, ಸ್ನಾಯು, ರಕ್ತದೊತ್ತಡ ನಿಯಂತ್ರಣ, ಮೂಳೆ ರಚನೆ. ಶಕ್ತಿ ರೂಪುಗೊಳ್ಳುವಿಕೆ ಸೇರಿದಂತೆ ದೇಹದ 300 ಅಗತ್ಯ ಕಾರ್ಯಾಚರಣೆಗೆ ಮೆಗ್ನಿಶಿಯಂ ಅವಶ್ಯವಾಗಿ ಬೇಕೇಬೇಕು. ಆದಾಗ್ಯೂ ಬಹುತೇಕ ಮಂದಿಯಲ್ಲಿ ಈ ಮೆಗ್ನಿಶಿಯಂ ಮಟ್ಟ ಕಡಿಮೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಿಮ್ಮ ಆಹಾರದಲ್ಲಿ ಮೆಗ್ನಿಶಿಯಂ ಇರುವಂತೆ ನೋಡಿಕೊಳ್ಳುವುದು ಅಗತ್ಯ.
ಅನೇಕ ಆಹಾರಗಳಲ್ಲಿ ನೈಸರ್ಗಿಕವಾಗಿ ಮೆಗ್ನಿಶಿಯಂ ಲಭ್ಯವಾಗುತ್ತದೆ. ಇನ್ನು ಮೆಗ್ನಿಶಿಯಂ ಪ್ರಮಾಣ ಎಲ್ಲ ವಯೋಮಾನ ಮತ್ತು ಲಿಂಗದ ಜನರಿಗೆ ಸಮಾವಾಗಿಲ್ಲ. ಆದರೆ, ಸರಾಸರಿ ವ್ಯಕ್ತಿಯೊಬ್ಬರಿಗೆ ದಿನವೊಂದಕ್ಕೆ 310 ರಿಂದ 420 ಎಂಜಿ ಮೆಗ್ನಿಶಿಯಂ ಬೇಕೇ ಬೇಕು. ಹಾಗೆಂದ ಮಾತ್ರಕ್ಕೆ ನೀವು ತಿನ್ನುವ ಪ್ರತಿ ಆಹಾರದಲ್ಲಿ ಇದರ ಮಾಪನ ಮಾಡಬೇಕು ಎಂದಿಲ್ಲ. ಮೇಗ್ನಿಶಿಯಂ ಹೊಂದಿರುವ ವಸ್ತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಆಯ್ಕೆ ಮಾಡಿದರೆ ಸಾಕು. ಹಾಗಾದರೆ ಯಾವ ಆಹಾರದಲ್ಲಿ ಇದು ಲಭ್ಯ. ಮೆಗ್ನಿಶಿಯಂ ಹೊಂದಿರುವ ಪದಾರ್ಥ ಯಾವುದು ಎಂಬುದಕ್ಕೆ ಇಲ್ಲಿದೆ ಉತ್ತರ.
ನಟ್ಸ್ ಅಂಡ್ ಸೀಡ್: ಒಣ ಹಣ್ಣುಗಳು ಮತ್ತು ಇತರ ಕಾಳುಗಳು ಪೋಷಕಾಂಶದ ಅತ್ಯುತ್ತಮ ಮೂಲವಾಗಿದೆ. ಇವು ಪ್ರೋಟಿನ್ ಸಮೃದ್ದವಾಗಿರುವ ಜೊತೆಗೆ ಫೈಬರ್, ಆರೋಗ್ಯಕರ ಕೊಬ್ಬು ಮತ್ತು ಮೆಗ್ನಿಶಿಯಂನಂತಹ ಖನಿಜಾಂಶವನ್ನು ಹೊಂದಿವೆ. 30 ಗ್ರಾಂ ಬಾದಾಮಿಯಲ್ಲಿ 80 ಎಂಜಿ ಮೆಗ್ನಿಶಿಯಂ ಇದ್ದರೆ, ಇದೇ ಪ್ರಮಾಣ ಗೋಡಂಬಿಯಲ್ಲಿ 72 ಎಂಬಿ, ಕಡಲೆಕಾಯಿಯಲ್ಲಿ 49 ಎಂಜಿ, ಕುಂಬಳಕಾಯಿ ಬೀಜದಲ್ಲಿ 150 ಎಂಜಿಯಷ್ಟಿದೆ.
ಬೇಳೆ - ಕಾಳುಗಳು: ಇದರಲ್ಲೂ ಕೂಡ ಮೆಗ್ನಿಶಿಯಂನ ಪ್ರಮಾಣ ಇರುತ್ತದೆ. ಮಸೂರ್ ದಾಲ್, ಹೆಸರು ಕಾಳು, ಕಡಲೆಬೀಜ ಮತ್ತು ತೊಗರಿ ಬೇಳೆಯಲ್ಲಿ ಸಮೃದ್ಧ ಪ್ರಮಾಣದ ಮೆಗ್ನಿಶಿಯಂ ಇದೆ. ಅರ್ಧ ಕಪ್ ಬೇಯಿಸಿದ ಕಡಲೆಕಾಳಿನಲ್ಲಿ 60 ಎಂಜಿ ಮತ್ತು ಬಾದಾಮಿಯಲ್ಲಿ 40 ಎಂಜಿ ಮೆಗ್ನಿಶಿಯಂ ಸಿಗುತ್ತದೆ.
ಹಾಲು ಮತ್ತು ಮೊಸರು: ಹಾಲು ಮತ್ತು ಮೊಸರಿನಲ್ಲಿ ಕೇವಲ ಕ್ಯಾಲ್ಸಿಯಂ ಮಾತ್ರವಲ್ಲದೇ, ಮೆಗ್ನಿಶಿಯಂ ಕೂಡ ಹೆಚ್ಚಿದೆ. ಒಂದು ಕಪ್ ಹಾಲಿನಲ್ಲಿ 27 ಎಂಜಿ ಮತ್ತು ಕಾಲು ಲೀಟರ್ ಮೊಸರಿನಲ್ಲಿ 42 ಎಂಜಿ ಮೆಗ್ನಿಶಿಯಂ ಇರುತ್ತದೆ.
ತರಕಾರಿ ಮತ್ತು ಹಸಿರು ಸೊಪ್ಪುಗಳು: ಕಡು ಹಸಿರು ಸೊಪ್ಪಿನಲ್ಲಿ ಮೆಗ್ನಿಶಿಯಂ ಯಥೇಚ್ಛವಾಗಿ ಲಭ್ಯವಿರುತ್ತದೆ. ಬೇಯಿಸಿದ ಅರ್ಧ ಕಪ್ ಲೆಟ್ಯೂಸ್ನಲ್ಲಿ 78 ಎಂಜಿ ಮೆಗ್ನಿಶಿಯಂ ಲಭ್ಯವಿದೆ. ತರಕಾರಿಯಲ್ಲಿ ಕೂಡ ಮೆಗ್ನಿಶಿಯಂ ಲಭ್ಯವಿದೆ. ಬಟಾಣಿಯಲ್ಲಿ 31 ಎಂಜಿ ಮತ್ತು ತರಕಾರಿಯಲ್ಲಿ 48 ಎಂಜಿ ಮೆಗ್ನಿಶಿಯಂ ಲಭ್ಯವಾಗಲಿದೆ.
ಇದನ್ನೂ ಓದಿ: ಸಮತೋಲಿತ ಆಹಾರ ಸೇವಿಸಿ, ಕ್ಷಯರೋಗದಿಂದ ದೂರವಿರಿ: ಆರೋಗ್ಯ ಸಚಿವಾಲಯ