ನವದೆಹಲಿ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಂತಸದ ಸುದ್ದಿಯನ್ನು ಕ್ಯಾಲಿಫೋರ್ನಿಯಾ ಸಂಶೋಧಕರು ನೀಡಿದ್ದಾರೆ. ಹಾನಿಗೊಂಡ ಕಿಡ್ನಿ ಕೋಶವನ್ನು ಪುನರ್ಸ್ಥಾಪಿಸಲು ಇರುವ ಪ್ರಮುಖ ಮಾರ್ಗ ಎಂದರೆ, ಕಡಿಮೆ ಉಪ್ಪು ಸೇವನೆ ಮತ್ತು ಕಡಿಮೆ ದೇಹ ದ್ರವ ಎಂದು ಅಮೆರಿಕದ ವಿಜ್ಞಾನಿಗಳು ತಿಳಿಸಿದ್ದಾರೆ. ಕಿಡ್ನಿ ಪುನರ್ಸ್ಥಾಪನೆ ಪ್ರಚೋದಿಸುವ ಅಂಶಗಳ ಕುರಿತು ಅಂಗಾಂಶ ಕೋಶ ವಿಜ್ಞಾನಿ ಪೆಟಿ ಪೆಟೆರ್ಡಿ ನೇತೃತ್ವದಲ್ಲಿ ಇಲಿಗಳ ಮೇಲೆ ಅಧ್ಯಯನ ನಡೆಸಲಾಗಿದೆ.
ಕಿಡ್ನಿಯ ಜೀವಕೋಶಗಳು ಮಕುಲಾ ಡೆನ್ಸಾ ಎಂಬ ಪ್ರದೇಶದ ಮೇಲೆ ಅವಲಂಬಿತವಾಗಿರುತ್ತದೆ. ಇದು ಉಪ್ಪನ್ನು ಗ್ರಹಿಸುತ್ತದೆ. ಹಾಗೇ ಶೋಧನೆಯ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಹಾರ್ಮೋನ್ ಸ್ರವಿಸುವಿಕೆ ಸೇರಿದಂತೆ ಇತರೆ ಪ್ರಮುಖ ಕಾರ್ಯದಲ್ಲಿ ಇದು ಪ್ರಮುಖವಾಗಿದೆ ಎಂದಿದ್ದಾರೆ. ಈ ಕುರಿತು ಅಧ್ಯಯನವನ್ನು ದಿ ಜರ್ನಲ್ ಆಫ್ ಕ್ಲಿನಿಕಲ್ ಇನ್ವೆಸ್ಟಿಗೇಶನ್ನಲ್ಲಿ ಪ್ರಕಟಿಸಲಾಗಿದೆ.
ಪ್ರಸ್ತುತ, ಸದ್ದಿಲ್ಲದೇ ಕಾಡುವ ಮೂತ್ರಪಿಂಡ ರೋಗಕ್ಕೆ ಯಾವುದೇ ಉಪಶಮನವಿಲ್ಲ. ಕಿಡ್ನಿ ಸಮಸ್ಯೆ ಗೊತ್ತಾಗುವ ಹೊತ್ತಿಗೆ ಅದು ಹಾನಿಗೊಂಡಿದ್ದು, ಅದಕ್ಕೆ ಉಳಿಯುವ ಮಾರ್ಗ ಕಸಿ ಅಥವಾ ಡಯಾಲಿಸಿಸ್ ಆಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆ ಹೆಚ್ಚುತ್ತಿದ್ದು, ಮೊದಲ ಬಾರಿಗೆ ಪೆಟಿ ಪೆಟೆರ್ಡಿ ಮತ್ತು ಅವರ ಸಹೋದ್ಯೋಗಿಗಳು ಸಾಂಪ್ರದಾಯಿಕ ವಲ್ಲದ ಪದ್ಧತಿ ಅನುಸರಿಸಿದ್ದಾರೆ. ಇದಕ್ಕಾಗಿ ಅವರು ಕಿಡ್ನಿ ಹೇಗೆ ಪುನರ್ಚೇತರಿಕೆ ಕಾಣುವುದರಿಂದ ವಿಫಲ ಹೊಂದುತ್ತದೆ ಎಂಬುದನ್ನ ಅಧ್ಯಯನದ ಬದಲಾಗಿ ಆರೋಗ್ಯಕರ ಮೂತ್ರಪಿಂಡಗಳು ಮೂಲತಃ ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ಗಮನಿಸಿದ್ದಾರೆ.
ಇದಕ್ಕಾಗಿ ಪ್ರಯೋಗಾಲಯದಲ್ಲಿ ಇಲಿಗಳಿಗೆ ಕಡಿಮೆ ಉಪ್ಪಿನ ಆಹಾರದ ಜೊತೆಗೆ ಶಿಫಾರಸು ಮಾಡಲಾದ ಎಸಿಇ ಪ್ರತಿರೋಧಕ ಮಾತ್ರೆ ನೀಡಿದ್ದಾರೆ. ಬಳಿಕ ಉಪ್ಪು ಮತ್ತು ದ್ರವದ ಮಟ್ಟ ಕಡಿಮೆ ಮಾಡಲಾಗಿದೆ. ಎರಡು ವಾರಗಳ ಕಾಲ ನಡೆಸಲಾದ ಈ ಅಧ್ಯಯನದಲ್ಲಿ ಕಡಿಮೆ ಉಪ್ಪಿನ ಆಹಾರವು ಗಂಭೀರ ಆರೋಗ್ಯ ಸಮಸ್ಯೆ ವಿರುದ್ಧ ಹೋರಾಡಲು ಸಹಾಯಕವಾಗಿದೆ ಎಂಬುದು ಕಂಡುಬಂದಿದೆ. ಪುನರ್ಸ್ಥಾಪಿಸುವ ಈ ಚುಟುವಟಿಕೆಯಲ್ಲಿ ಎಂಡಿ ಕಳುಹಿಸಿದ ಸಂಕೇತಗಳಿಗೆ ಅಡ್ಡಿಪಡಿಸುವ ಔಷಧಗಳನ್ನು ನೀಡುವ ಮೂಲಕ ನಿರ್ಬಂಧಿಸಬಹುದು ಎಂದು ಕಂಡುಕೊಂಡಿದ್ದಾರೆ. ಎಂಡಿ ಕೋಶವನ್ನು ಮತ್ತಷ್ಟು ವಿಶ್ಲೇಷಿಸಿದಾಗ, ಅವರು ನರ ಕೋಶಗಳಿಗೆ ಸಾಮಾನ್ಯವಾಗಿರುವ ಅನುವಂಶಿಕ ಮತ್ತು ವಿನ್ಯಾಸದ ಲಕ್ಷಣವನ್ನು ಪತ್ತೆ ಮಾಡಿದ್ದಾರೆ.
ಕಿಡ್ನಿ ದುರಸ್ತಿ ಮತ್ತು ಪುನರ್ಸ್ಥಾಪಿಸುವಲ್ಲಿ ಕಡಿಮೆ ಉಪ್ಪು ಸೇವನೆ ಪ್ರಮುಖವಾಗಿದೆ ಎಂಬುದನ್ನು ನಾವು ಬಲವಾಗಿ ನಂಬುತ್ತೇವೆ. ಶಕ್ತಿಯುತವಾದ ಈ ಹೊಸ ಚಿಕಿತ್ಸಕ ಪ್ರಸ್ತಾವನೆ ಶೀಘ್ರದಲ್ಲೇ ಮುಕ್ತಾಯವಾಗುತ್ತದೆ ಎಂಬ ಭರವಸೆ ಇದೆ ಎಂದು ಲೇಖಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಹೆಚ್ಚುತ್ತಿರುವ ಮೂತ್ರಪಿಂಡ ಕಲ್ಲಿನ ಸಮಸ್ಯೆ; ಈ ಬಗ್ಗೆ ಜನರಲ್ಲಿ ಬೇಕಿದೆ ಸಾಮಾನ್ಯ ಅರಿವು