ETV Bharat / health

ಲೋ ಬಿಪಿಯಾದರೆ ಏನಾಗುತ್ತದೆ?: ನಿಮಗಾಗಿ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ ನೋಡಿ! - Low Blood Pressure

Low Blood Pressure: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೇ ಹೆಚ್ಚಿನ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಅಧಿಕ ರಕ್ತದೊತ್ತಡವೂ ಒಂದು. ಹೆಚ್ಚಿನ ಜನರಿಗೆ ಅಧಿಕ ರಕ್ತದೊತ್ತಡದ ತೀವ್ರತೆ ಬಗ್ಗೆ ಮಾತ್ರ ತಿಳಿದಿದೆ. ಆದರೆ, ಲೋ ಬಿಪಿ ಆದರೆ ಏನಾಗುತ್ತದೆ? ಇದು ಅಪಾಯಕಾರಿಯೇ? ಎಂಬ ಪ್ರಶ್ನೆಗೆ ತಜ್ಞರು ನೀಡಿರುವ ಸಲಹೆ ಮತ್ತು ಉತ್ತರಗಳು ಇಲ್ಲಿವೆ ಓದಿ..

LOW BP PRECAUTIONS  HYPOTENSION CAUSES  LOW BLOOD PRESSURE SYMPTOMS  PRECAUTIONS FOR LOW BLOOD PRESSURE
ಲೋ ಬಿಪಿಯಾದರೆ ಏನಾಗುತ್ತದೆ? (ETV Bharat)
author img

By ETV Bharat Health Team

Published : Sep 19, 2024, 8:11 PM IST

Low Blood Pressure: ಅಧಿಕ ರಕ್ತದೊತ್ತಡವನ್ನು ಎಲ್ಲರೂ ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಹೃದಯಾಘಾತದಿಂದ ಹಿಡಿದು ಪಾರ್ಶ್ವವಾಯು, ಕಿಡ್ನಿ ವೈಫಲ್ಯದವರೆಗೆ ಎಲ್ಲವೂ ಕಾರಣ ಎಂದು ಹೇಳಲಾಗುತ್ತದೆ. ಈ ಕ್ರಮದಲ್ಲಿ.. ಕಡಿಮೆ ರಕ್ತದೊತ್ತಡ ಇದ್ದರೆ ಒಳ್ಳೆಯದು ಎಂದು ಹಲವರು ನಂಬುತ್ತಾರೆ. ಆದ್ರೆ, ಲೋ ಬಿಪಿ ಕೂಡ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹೈ - ಬಿಪಿ, ಲೋ-ಬಿಪಿ ಕೂಡ ಅಪಾಯಕಾರಿ ಎನ್ನುತ್ತಾರೆ ವೈದ್ಯರು. ಹಾಗಾದ್ರೆ.. ಬಿಪಿ ಯಾಕೆ ಹೆಚ್ಚುತ್ತದೆ? ಕಡಿಮೆ ರಕ್ತದೊತ್ತಡದಿಂದ ಯಾವೆಲ್ಲಾ ಸಮಸ್ಯೆಗಳು ಎದುರಾಗುತ್ತವೆ? ಬಿಪಿ ನಿಯಂತ್ರಣಕ್ಕೆ ತರಬೇಕಾದರೆ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು? ಎಂಬುದನ್ನು ಇಲ್ಲಿ ತಿಳಿಯೋಣ.

ಸಾಮಾನ್ಯವಾಗಿ, 120/80 mmHg ಬಿಪಿ ಇರಬೇಕಾಗುತ್ತದೆ. ಆದರೆ, ಅದಕ್ಕಿಂತ ಹೆಚ್ಚಾದರೆ ಅದನ್ನು ಹೈ ಬಿಪಿ (ಅಧಿಕ ರಕ್ತದೊತ್ತಡ) ಎನ್ನುತ್ತಾರೆ. ಹಾಗೆಯೇ.. ಅದಕ್ಕಿಂತ ಕಡಿಮೆಯಾದರೆ ಲೋ-ಬಿಪಿ (ಹೈಪೋ ಟೆನ್ಷನ್) ಎನ್ನುತ್ತಾರೆ. ಇಲ್ಲದಿದ್ದರೆ.. ವೈದ್ಯಕೀಯವಾಗಿ 90/60 mmHg ಗಿಂತ ಕಡಿಮೆ ಇದ್ದರೆ ಲೋ-ಬಿಪಿ ಎಂದು ಪರಿಗಣಿಸಲಾಗುವುದು ಎನ್ನುತ್ತಾರೆ ಸಾಮಾನ್ಯ ವೈದ್ಯ ಡಾ.ಡಿ. ಪ್ರಮೋದ್ ಕುಮಾರ್.

ಲೋ ಬಿಪಿಗೆ ಕಾರಣಗಳೇನು?: ಬಿಪಿಗೆ ಹಲವು ಕಾರಣಗಳಿವೆ ಎನ್ನುತ್ತಾರೆ ಡಾ.ಪ್ರಮೋದ್ ಕುಮಾರ್. ಅದರಲ್ಲೂ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾದಾಗ ರಕ್ತದೊತ್ತಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಗರ್ಭಾವಸ್ಥೆಯಲ್ಲಿ ಲೋ ಬಿಪಿ ಸಮಸ್ಯೆ ಬರುವ ಸಾಧ್ಯತೆಯೂ ಇದೆ. ಥೈರಾಯ್ಡ್ ಸಮಸ್ಯೆಗಳಿರುವ ಜನರಲ್ಲಿ ಹಾರ್ಮೋನ್ ಅಸಮತೋಲನದಿಂದಲೂ ಲೋ ಬಿಪಿ ಉಂಟಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದಾಗಲೂ ಈ ಸಮಸ್ಯೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸುತ್ತಾರೆ.

ಇದಲ್ಲದೇ.. ನಿರ್ಜಲೀಕರಣ ಹೆಚ್ಚಾದಾಗ, ಅಪಘಾತಗಳ ಸಂದರ್ಭದಲ್ಲಿ ರಕ್ತಸ್ರಾವ ಹೆಚ್ಚಾದಾಗ ರಕ್ತದ ಪ್ರಮಾಣ ಕಡಿಮೆಯಾಗಿ ಲೋ ಬಿಪಿ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಇದಲ್ಲದೇ ಕೆಲವು ಔಷಧಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದಾಗ ಬಿಪಿ ನಾರ್ಮಲ್ ಆಗಿದ್ದರೂ ಕೆಲವೊಮ್ಮೆ ರಕ್ತದೊತ್ತಡ ಕುಸಿದು ‘ಲೋ ಬಿಪಿ’ ಬರುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರೆ ವೈದ್ಯರು.

ಲೋ ಬಿಪಿ ಯಾವಾಗ ಅಪಾಯಕಾರಿ?: ರಕ್ತದೊತ್ತಡ ಕಡಿಮೆಯಾಗುವುದರಿಂದ ತಲೆನೋವು, ತಲೆಸುತ್ತು, ವಾಕರಿಕೆ, ದೃಷ್ಟಿ ಮಂಜಾಗುವುದು, ಉಸಿರಾಟದ ತೊಂದರೆ, ಹೃದಯ ಬಡಿತದಂತಹ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ಎಚ್ಚರಿಕೆ ವಹಿಸಬೇಕು. ನಂತರ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

ರಕ್ತದೊತ್ತಡ ನಿಯಂತ್ರಣದಲ್ಲಿಡಲು ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯ:

  • ರಕ್ತದೊತ್ತಡ ತಪ್ಪಿಸಲು, ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು.
  • ನೀವು ಪ್ರತಿದಿನ ಸರಿಯಾದ ಪೋಷಣೆ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಅದೇ ರೀತಿ ಉಪ್ಪು ಹೆಚ್ಚು ಮತ್ತು ಕಡಿಮೆ ಆಗದಂತೆ ನೋಡಿಕೊಳ್ಳಲು ಹೇಳಲಾಗುತ್ತದೆ. ಅಲ್ಲದೆ, ಪ್ರತಿದಿನ ಸಾಕಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ.
  • ಆಲ್ಕೋಹಾಲ್ ಮತ್ತು ಕೆಫೀನ್ ಹೊಂದಿರುವ ಪಾನೀಯಗಳನ್ನು ಸಾಧ್ಯವಾದಷ್ಟು ದೂರವಿಡಬೇಕು.
  • ವ್ಯಾಯಾಮ ಮತ್ತು ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡಬೇಕು.
  • ರಕ್ತದೊತ್ತಡ ಕಡಿಮೆಯಾಗಿದೆ ಎಂದು ಅನಿಸಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಪರೀಕ್ಷೆಗಳಿಗೆ ಒಳಗಾಗುವುದು ಉತ್ತಮ ಎಂದು ಡಾ.ಪ್ರಮೋದ್ ಕುಮಾರ್ ಅವರು ಸಲಹೆ ನೀಡುತ್ತಾರೆ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.