ETV Bharat / health

ಮಾತು ಮಾತಿಗೂ ಕೋಪ, ಕಿರಿಕಿರಿಯಾದರೆ ಅದು ಬರ್ನೌಟ್​​ನ​ ಲಕ್ಷಣ: ನಿಮ್ಮ ಆತ್ಮೀಯರಿಗೆ ಬೇಕಿದೆ ತುರ್ತು ಸಹಾಯ - suffering from burnout - SUFFERING FROM BURNOUT

ಇಂದಿನ ಒತ್ತಡದ ಬದುಕಿನಲ್ಲಿ ನಮ್ಮ ಸುತ್ತಮುತ್ತಲಿನ ಮಂದಿ ಗೊತ್ತೇ ಆಗದಂತೆ ಬರ್ನೌಟ್​ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಬೇಕಿದೆ ನೆರವಿನ ಹಸ್ತ

long period of stress Burnout cab negatively affects your wellbeing

author img

By IANS

Published : Apr 16, 2024, 11:10 AM IST

ಬರ್ಲಿನ್​, ಜರ್ಮನಿ: ದೀರ್ಘಕಾಲದ ಮತ್ತು ಅಧಿಕ ಸಮಯದ ಒತ್ತಡಗಳು ವ್ಯಕ್ತಿಯೊಬ್ಬನನ್ನು ಮಾನಸಿಕ, ಭಾವನಾತ್ಮಕ ಮತ್ತು ದೈಹಿಕವಾಗಿ ಬಳಲುವಂತೆ ಮಾಡುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಬರ್ನ್​ಔಟ್​ ಎಂದು ಕೂಡ ಕರೆಯುತ್ತೇವೆ. ಇಂದಿನ ವೇಗದ ಜಗತ್ತಿನಲ್ಲಿ ಈ ರೀತಿಯ ಬರ್ನೌಟ್​ನಿಂದ ಅನೇಕ ಮಂದಿ ಬಳಲುತ್ತಿರುತ್ತಾರೆ. ಅನೇಕ ಬಾರಿ ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ಇದರಿಂದಾಗಿ ಒಳಗೊಳಗೆ ಕುಗ್ಗುತ್ತಿರುತ್ತಾರೆ. ಈ ದೀರ್ಘವಾದ ಒತ್ತಡ ಅವರ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಇಂತಹ ಪರಿಸ್ಥಿತಿಯಲ್ಲಿ ಮೊದಲಿಗೆ ಅವರಿಗೆ ವೃತ್ತಿಪರರ ಸಹಾಯ ಬೇಕಾಗುತ್ತದೆ. ಅವರ ಸಮಸ್ಯೆ ಪತ್ತೆ ಮಾಡುವ ಅವಶ್ಯಕತೆಯೂ ಇರುತ್ತದೆ. ಇದರ ಜೊತೆಗೆ ಅವರಿಗೆ ಸಂಬಂಧಿಕರು ಮತ್ತು ಸ್ನೇಹಿತರಿಂದಲೂ ಪರಿಸ್ಥಿತಿ ನಿಭಾಯಿಸಲು ಬೆಂಬಲ ಸಿಗುವುದು ಅವಶ್ಯಕವಾಗಿದೆ. ಇದರಿಂದ ಸಮಸ್ಯೆಯನ್ನು ಸುಲಭವಾಗಿ ನಿವಾರಣೆ ಮಾಡಬಹುದಾಗಿದೆ.

ಮತ್ತೊಂದು ಪ್ರಮುಖ ಅಂಶ ಎಂದರೆ, ನಿಮ್ಮ ಸುತ್ತಮುತ್ತಲಿನ ಆತ್ಮೀಯರು ಈ ರೀತಿಯ ಒತ್ತಡಗಳಿಂದ ಬಳಲುತ್ತಿದ್ದಾರಾ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಸೈಕೊಥೇರಪಿ ಮತ್ತು ಸೈಕೋಸೊಮ್ಯಾಟಿಕ್ ಮೆಡಿಸಿನ್​ನ ಮನೋವೈದ್ಯರಾಗಿರುವ ಪೆಟ್ರಾ ಬೆಸ್ಕೊನರ್ ತಿಳಿಸಿದ್ದಾರೆ. ಈ ಅನಾರೋಗ್ಯ ಪರಿಸ್ಥಿತಿಗಳ ಕುರಿತು ಸಂಬಂಧಿಕರು ಶಿಕ್ಷಣ ಪಡೆದು, ತಮಗೂ ಕೂಡ ವೃತ್ತಿಪರರಿಂದ ಸಹಾಯ ಪಡೆದುಕೊಳ್ಳಬೇಕು ಎನ್ನುತ್ತಾರೆ.

ಈ ರೀತಿಯ ಒತ್ತಡದಿಂದ ಬಳಲುತ್ತಿರುವವರು ಹೆಚ್ಚು ಕಿರಿಕಿರಿ,ಕೋಪದಿಂದ ಪ್ರತಿಕ್ರಿಯಿಸುತ್ತಾರೆ. ಅವರ ಸುತ್ತಮುತ್ತಲಿನ ಸಾಮಾಜಿಕ ಪರಿಸರವೂ ಕಿರಿಕಿರಿಯಾಗುತ್ತದೆ. ಈ ರೀತಿ ನಿಮ್ಮ ಆತ್ಮೀಯರು ವರ್ತಿಸಿದಾಗ ಅದನ್ನು ಅಪರಾಧವಾಗಿ ನೋಡಬಾರದು. ಬದಲಾಗಿ ಬರ್ನ್ಔಟ್​ನ ಲಕ್ಷಣಗಳಾಗಿ ಕಾಣಬೇಕು.

ಈ ರೀತಿಯ ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಯನ್ನು ಅನೇಕ ಬಾರಿ ಸಂಬಂಧಿಕರು ಅವರನ್ನು ಎಲ್ಲರಿಂದ ದೂರವಿಡುತ್ತಾರೆ. ಒತ್ತಡಕ್ಕೆ ಒಳಗಾಗಿರುವ ವ್ಯಕ್ತಿ ಕೂಡ ಇದರ ಜವಾಬ್ದಾರಿಗೆ ತಮ್ಮನ್ನು ತಾವು ದೂಷಿಸಿಕೊಳ್ಳುತ್ತಾರೆ. ಈ ರೀತಿ ಅವರ ಸ್ವಾತಂತ್ರ್ಯವನ್ನು ನಿರ್ಬಂಧಿಸುವುದು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ.

ಆಯಾಸ, ಖಿನ್ನತೆಯ ಜೊತೆ ಅತಿಕ್ರಮಣ ಈ ಬರ್ನ್​ಔಟ್​ನ ಲಕ್ಷಣವಾಗಿರಬಹುದು. ವೈದ್ಯರ ಪ್ರಕಾರ, ತಜ್ಞರಿಂದ ಈ ರೋಗ ನಿರ್ಣಯ ಮಾಡುವುದು ಅಗತ್ಯವಾಗಿದೆ. ಅವರು ತಮ್ಮ ಅನುಭವದ ಮೇಲೆ ಬೇಗ ರೋಗ ನಿರ್ಣಯವನ್ನು ಮಾಡುತ್ತಾರೆ. ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯ ಪ್ರಕಾರ, ಸ್ನಾಯು ನೋವು, ತಲೆನೋವು, ನಿದ್ರೆಯ ಸಮಸ್ಯೆಗಳು, ತೂಕ ಹೆಚ್ಚಳ ಅಥವಾ ನಷ್ಟ ಮತ್ತು ಸ್ಮರಣೀಯ ಸಮಸ್ಯೆಗಳು ಇದರ ಪ್ರಮುಖ ಲಕ್ಷಣವಾಗಿದೆ. (ಐಎಎನ್​ಎಸ್​​)

ಇದನ್ನೂ ಓದಿ: ಕೆಲಸದ ಸ್ಥಳದಲ್ಲಿನ ಒತ್ತಡ ನಿಭಾಯಿಸುವುದೇಗೆ? ಇಲ್ಲಿದೆ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.