ETV Bharat / health

ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಳಿಗಾಲದ ಮಾರುತಗಳಿಂದ ಭಾರೀ ಪ್ರವಾಹದ ಅಪಾಯ; ಅಧ್ಯಯನ - late arrived Northern Winter storms

ಚಳಿಗಾಲದಲ್ಲಿ ಬೀಳಬೇಕಿದ್ದ ಹಿಮ ಈ ಬಾರಿ ಬೇಸಿಗೆಯಲ್ಲಿ ಬಿದ್ದಿರುವ ಪರಿಣಾಮ ಹಿಮ ಕರಗುವ ಸಮಯ ಬದಲಾವಣೆ ಆಗಿದ್ದು, ಪ್ರವಾಹ ಎದುರಾಗುವ ಪರಿಸ್ಥಿತಿ ಎದುರಾಗಲಿದೆ.

late arrived Northern Winter storms in India rise flood risk

author img

By ETV Bharat Karnataka Team

Published : Mar 13, 2024, 1:24 PM IST

ನವದೆಹಲಿ: ಕಳೆದ 70 ವರ್ಷದ ಇತಿಹಾಸದಲ್ಲಿ ಭಾರತದಲ್ಲಿ ಉತ್ತರ ಚಳಿಗಾಲದ ಮಾರುತವು ಈ ವರ್ಷ ಬಹಳ ತಡವಾಗಿ ಆಗಮಿಸಿದೆ. ಈ ಮಾರುತದ ವಿಳಂಬದಿಂದ ಈ ಬಾರಿ ಹೆಚ್ಚಿನ ಪ್ರವಾಹ ಎದುರಾಗುವ ಅಪಾಯ ಮತ್ತು ಲಕ್ಷಾಂತರ ಜನರಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನದಲ್ಲಿ ಕಂಡು ಬಂದಿದೆ. ಕಾಶ್ಮೀರದ ಕೆಲವು ಪ್ರದೇಶಗಳು ಡಿಸೆಂಬರ್​ ಅಥವಾ ಜನವರಿಯಲ್ಲಿ ಯಾವುದೇ ಹಿಮವನ್ನು ಕಂಡಿಲ್ಲ. ಈ ಹವಾಮಾನ ಬದಲಾವಣೆಯೂ ನೀರಿನ ಪೂರೈಕೆಗೆ ಚಳಿಗಾಲದ ಹಿಮದ ಮೇಲೆ ಅವಲಂಬಿತರಾಗಿರುವ ಹಿಂದೂ ಮತ್ತು ಗಂಗಾ ನದಿ ಬಯಲಿನ ಪ್ರದೇಶದ 750 ಮಿಲಿಯನ್​ ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಅಧ್ಯಯನದ ಸಹ ಲೇಖಕ ಕೀರನ್ ಹಂಟ್ ತಿಳಿಸಿದ್ದಾರೆ. ಈ ಅಧ್ಯಯನವು ವೆದರ್​ ಅಂಡ್​ ಕ್ಲೈಮೆಟ್​ ಡೈನಾಮಿಕ್ಸ್​ ಜರ್ನಲ್​​ನಲ್ಲಿ ಪ್ರಕಟವಾಗಿದೆ.

ಚಳಿಗಾಲದ ಹಿಮದ ನಷ್ಟ ಮತ್ತು ತಡವಾದ ಋತುಮಾನದ ಮಾರುತವು ಪ್ರವಾಹದ ಅಪಾಯವನ್ನು ಸೂಚಿಸಿದೆ. ಈ ಸೂಕ್ಷ್ಮ ಪ್ರದೇಶದಲ್ಲಿನ ಹವಾಮಾನ ಬದಲಾವಣೆಯ ಪರಿಣಾಮವನ್ನು ಎದುರಿಸುವ ತುರ್ತು ಅಗತ್ಯವಿದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನದಲ್ಲಿ ಪಾಶ್ಚಿಮಾತ್ಯ ಅಡಚಣೆಗಳು ಎಂದು ಪರಿಚಿತವಾಗಿರುವ ಸೈಕ್ಲೋನ್​ ಮಾರುತಗಳು ಏಪ್ರಿಲ್​ನಿಂದ ಜುಲೈವರೆಗೆ ಬೇಸಿಗೆಯಲ್ಲಿ ಶೇ 60ರಷ್ಟು ಪ್ರಮಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತವೆ ಎಂದು ಸೂಚಿಸಿದೆ.

ಪಾಶ್ಚಿಮಾತ್ಯ ಅಡಚಣೆಗಳು ಡಿಸೆಂಬರ್​ನಿಂದ ಮಾರ್ಚ್​ವರೆಗೆ ಭಾರೀ ಹಿಮವನ್ನು ತರುತ್ತವೆ. ಬಳಿಕ ಈ ಹಿಮಗಳು ಕರಗಿ ಕೆಳ ಪ್ರದೇಶದಲ್ಲಿನ ಗೋಧಿ ಮತ್ತು ಇತರೆ ಬೆಳೆಗಳಿಗೆ ನೀರಿನ ಪೂರೈಕೆ ಮಾಡುತ್ತವೆ. ಆದರೆ, ಇದೀಗ ಪೂರ್ವ ಮಾನ್ಸೂನ್​ ಶಾಖದ ಆಗಮನದ ಸಂದರ್ಭದಲ್ಲಿ ಕಾಣಿಸಿಕೊಂಡಿರುವ ತಡವಾದ ಋತುಮಾನದ ಮಾರುತದಿಂದ ಹಿಮ ಕರಗುವ ಸಮಯ ಬದಲಾಗಿದೆ. ಇದು ಪ್ರವಾಹದ ಅಪಾಯವನ್ನು ಹೆಚ್ಚಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರದೇಶದಲ್ಲಿನ ಶಾಖವು ಚಳಿಗಾಲದ ಹಿಮಪಾತವನ್ನು ಕಡಿಮೆ ಮಾಡಿದ್ದು, ವಸಂತ ಋತುವಿನ ನೀರಿನ ಪೂರೈಕೆಗೆ ಅಡ್ಡಿ ಮಾಡಿದೆ. ಕಳೆದ 70 ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಜೂನ್​ನಲ್ಲಿ ಉತ್ತರ ಭಾರತದಲ್ಲಿ ಕೆಲವು ಬಲವಾದ ಮಾರುತಗಳು ಎರಡು ಬಾರಿ ಅಪ್ಪಳಿಸುವ ಸಾಧ್ಯತೆ ಇದೆ. ಈ ಬಾರಿ ಶಾಖ ಮತ್ತು ಆರ್ದ್ರತೆಯ ಗಾಳಿ ಇರಲಿದೆ. ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಚಳಿಗಾಲದ ಮಾರುತವು ಭಾರೀ ಮಳೆ ತರಲಿದೆ ಎಂದು ಯುಕೆಯ ರೀಡಿಂಗ್​​ ವಿಶ್ವವಿದ್ಯಾಲಯದ ಸಂಶೋಧಕ ಹಂಟ್​ ತಿಳಿಸಿದ್ದಾರೆ.

ಇದು 2013ರ ಉತ್ತರಾಖಂಡ್​​ ಮತ್ತು ದೆಹಲಿಯಲ್ಲಿ 2023ರಲ್ಲಿ ಕಂಡ ರೀತಿಯಲ್ಲಿ ಭಾರೀ ಪ್ರವಾಹದ ಅಪಾಯ ಎದುರಾಗುವ ಸಾಧ್ಯತೆ ಇದೆ. ಜಾಗತಿಕ ತಾಪಮಾನದಲ್ಲಿನ ಏರಿಕೆಯಲ್ಲಿನ ಬದಲಾವಣೆಯು ಉಷ್ಣವಲಯದ ಮಾರುತಗಳ ಬದಲಾವಣೆಗೆ ಕಾರಣವಾಗಲಿದೆ. ಇಲ್ಲಿನ ಎತ್ತರದ ಗಾಳಿಯು ಪಾಶ್ಚಿಮಾತ್ಯ ಅಡಚಣೆಯನ್ನು ನಿಯಂತ್ರಿಸುತ್ತದೆ. (ಪಿಟಿಐ)

ಇದನ್ನೂ ಓದಿ: ಕಾಶ್ಮೀರ ಕಣಿವೆಗೆ ಹಿಮದ ಹೊದಿಕೆ: ಫೋಟೋಗಳನ್ನು ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.