ETV Bharat / health

ಹೆಚ್ಚುತ್ತಿರುವ ಮೂತ್ರಪಿಂಡ ಕಲ್ಲಿನ ಸಮಸ್ಯೆ; ಈ ಬಗ್ಗೆ ಜನರಲ್ಲಿ ಬೇಕಿದೆ ಸಾಮಾನ್ಯ ಅರಿವು - Rising Cases Of Kidney Stones

ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕೇವಲ ಹಿರಿಯ ವಯಸ್ಕರಷ್ಟೇ ಎಲ್ಲಾ ವಯಸ್ಸಿನವರನ್ನ ಸಹ ಬಾಧಿಸುತ್ತದೆ. ಹೀಗಾಗಿ ಈ ಸಮಸ್ಯೆ ಕುರಿತು ಜಾಗೃತಿ ಅವಶ್ಯಕವಾಗಿದೆ.

kidney stones have become a prevalent health concern

author img

By ETV Bharat Karnataka Team

Published : Apr 8, 2024, 11:04 AM IST

Updated : Apr 8, 2024, 2:45 PM IST

ಹೈದರಾಬಾದ್: ಇತ್ತೀಚಿನ ವರ್ಷಗಳಲ್ಲಿ, ಮೂತ್ರಪಿಂಡದ ಕಲ್ಲಿನ ಸಮಸ್ಯೆ ಹೆಚ್ಚು ಎಲ್ಲಾ ವಯೋಮಾನದವರನ್ನು ಕಾಡುತ್ತಿದೆ. ಇದು ಅನೇಕರಲ್ಲಿ ಅನಾರೋಗ್ಯದ ತೊಂದರೆಗಳಿಗೆ ಕಾರಣವಾಗುತ್ತಿದೆ. ಸೌಮ್ಯ ಸ್ವಭಾವದ ಪ್ರಕರಣಗಳು ಹೆಚ್ಚು ತೊಂದರೆಗೆ ಕಾರಣವಾಗದಿದ್ದರೂ ಗಂಭೀರವಾದ ಪ್ರಕರಣಗಳು ಸಮಸ್ಯೆಗೆ ಕಾರಣವಾಗುತ್ತವೆ.

ಈ ಸಂಬಂಧ ಈಟಿವಿ ಭಾರತ್​​ ಜೊತೆಗೆ ಕಾಶ್ಮೀರದ ಖ್ಯಾತ ಯುರೋಲಾಜಿಸ್ಟ್​ ಆಗಿರುವ ಡಾ ತನ್ವೀರ್​​ ಇಕ್ಬಾಲ್​ ಮಾತನಾಡಿದ್ದಾರೆ.

ಮೂತ್ರಪಿಂಡದ ಕಲ್ಲುಗಳನ್ನು ಮೂತ್ರಪಿಂಡದ ಕ್ಯಾಲ್ಕುಲಿ ಎಂದೂ ಕರೆಯಲಾಗುವುದು. ಇದು ಸ್ಫಟಿಕದಂತಹ ಮಿನರಲ್ಸ್​​ಗಳ ಶೇಖರಣೆಯಿಂದ ಉಂಟಾಗುತ್ತದೆ. ಮೂತ್ರಪಿಂಡ ಅಥವಾ ಮೂತ್ರನಾಳದೊಳಗೆ ರೂಪುಗೊಳ್ಳುತ್ತದೆ. ಈ ಕಲ್ಲುಗಳು ಕ್ಯಾಲ್ಸಿಯಂ ಆಕ್ಸಲೇಟ್, ಕ್ಯಾಲ್ಸಿಯಂ ಫಾಸ್ಫೇಟ್, ಯೂರಿಕ್ ಆಸಿಡ್ ಮತ್ತು ಸಿಸ್ಟೈನ್ ಕಲ್ಲುಗಳು ಸೇರಿದಂತೆ ವಿವಿಧ ಪ್ರಕಾರದಲ್ಲಿರುತ್ತವೆ.

ಈ ಕಲ್ಲಿನ ಆಕಾರದ ಮೇಲೆ ಮೇಲೆ ಹೆಚ್ಚು ಅಥವಾ ಕಡಿಮೆ ಅಪಾಯಕಾರಿ ಎಂದು ವರ್ಗೀಕರಿಸುವುದು ಕಷ್ಟ. ಈ ಕಲ್ಲಿನಿಂದ ಪರಿಣಾಮಕ್ಕೆ ಒಳಗಾದ ಪ್ರದೇಶ ಮತ್ತು ಮೂತ್ರನಾಳದ ಅಡಚಣೆಯ ಪ್ರಮಾಣವನ್ನು ಅವಲಂಬಿಸಿ ಇದರ ತೀವ್ರತೆ ಹೊಂದಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೂತ್ರಪಿಂಡ ಕಲ್ಲುಗಳು ಸಾಮಾನ್ಯವಾಗಿ ರಕ್ತವನ್ನು ಫಿಲ್ಟರ್ ಮಾಡುವ ಮತ್ತು ಮೂತ್ರಪಿಂಡದ ಕಾರ್ಯದಿಂದಾಗಿ ರೂಪುಗೊಳ್ಳುತ್ತವೆ. ಮೂತ್ರ ಪಿಂಡದ ಪ್ರಮುಖ ಕಾರ್ಯ ದೇಹದಿಂದ ಕೆಲವು ವಿಷಕಾರಿ ಪದಾರ್ಥಗಳನ್ನು ಒಳಗೊಂಡಂತೆ ತ್ಯಾಜ್ಯಗಳನ್ನು ತೆಗೆದುಹಾಕುವುದಾಗಿದೆ. ಮೂತ್ರಪಿಂಡ ಈ ಕಾರ್ಯ ನಡೆಸಲು ಸಾಧ್ಯವಾಗದೇ ಹೋದಾಗ ಖನಿಜಾಂಶಗಳು ಶೇಖರಣೆಗೊಳ್ಳುತ್ತದೆ. ಇದು ಕಲ್ಲುಗಳಾಗಿ ಗಟ್ಟಿಯಾಗುತ್ತವೆ. ಇದನ್ನು ವೈದ್ಯಕೀಯವಾಗಿ ನೆಫ್ರೋಲಿಥಿಯಾಸಿಸ್ ಎನ್ನಲಾಗುವುದು.

ಈ ಕಲ್ಲುಗಳ ರಚನೆಯಲ್ಲಿ ಪರಿಸರದ ಅಂಶ, ಆಹಾರ ಪದ್ಧತಿ ಮತ್ತು ಜನೆಟಿಕ್ಸ್​​​ ಪಾತ್ರವೂ ಇದೆ. ಶಾಖದ ವಾತಾವರಣದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಅಥವಾ ಸಿಹಿತಿಂಡಿಗಳಲ್ಲಿ ಕಂಡುಬರುವ ಆಕ್ಸಲೇಟ್‌ಗಳಂತಹ ಕೆಲವು ಪದಾರ್ಥಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವವರಲ್ಲಿ ಕೂಡ ಇದು ಕಾಣಿಸಿಕೊಳ್ಳುತ್ತದೆ. ಇದಲ್ಲದೆ, ಕುಟುಂಬದ ಇತಿಹಾಸ ಮತ್ತು ಅನುಚಿತ ಆಹಾರ ಪದ್ಧತಿಗಳಿಂದ ಈ ಸಮಸ್ಯೆ ಹೆಚ್ಚುತ್ತದೆ.

ಮಹಿಳೆಯರಿಗೆ ಹೋಲಿಕೆ ಮಾಡಿದಾಗ ಪುರುಷರಲ್ಲಿ ಮೂತ್ರಪಿಂಡದ ಕಲ್ಲುಗಳ ರಚನೆ ಹೆಚ್ಚಿರುತ್ತದೆ. ಪುರುಷರ ಆಹಾರ ಪದ್ಧತಿ, ಹೆಚ್ಚಿನ ಪ್ರೋಟೀನ್ ಸೇವನೆಯು ಯೂರಿಕ್ ಆಮ್ಲದ ಉತ್ಪಾದನೆಯು ಯೂರಿಕ್ ಆಸಿಡ್ ಕಲ್ಲುಗಳಿಗೆ ಕಾರಣವಾಗಬಹುದು.

ಮೂತ್ರಪಿಂಡದ ಕಲ್ಲಿನ ಗಾತ್ರ, ಸ್ಥಳ ಮತ್ತು ತೀವ್ರತೆಯನ್ನು ಅವಲಂಬಿಸಿ ಔಷಧಿ ಅಥವಾ ಶಸ್ತ್ರಚಿಕಿತ್ಸೆ ಚಿಕಿತ್ಸೆಗಳನ್ನು ನಡೆಸಲಾಗುವುದು. ಈ ಮೂತ್ರಪಿಂಡದ ಕಲ್ಲು ಮತ್ತೆ ಬಾರದಂತೆ ತಡೆಯುವುದು ಕೂಡ ಅಗತ್ಯವಿರುತ್ತದೆ. ಈ ಹಿನ್ನೆಲೆ ಹೆಚ್ಚಿನ ಪ್ರಮಾಣದ ನೀರು ಸೇವನೆ ಮೂಲಕ ಇದನ್ನು ನಿಯಂತ್ರಿಸಬಹುದು. ಜೊತೆಗೆ ಹೆಚ್ಚು ತ್ರಾಸದಾಯಕ ಕೆಲಸ ಅಥವಾ ಹವಾಮಾನ ವೈಪರೀತ್ಯಕ್ಕೆ ಒಳಗಾಗುವುದನ್ನು ತಡೆಯುವ ಮೂಲಕ ಅಗತ್ಯ ಮುನ್ನೆಚ್ಚರಿಕೆ ನಡೆಸಿ ಈ ಪರಿಸ್ಥಿತಿ ತಡೆಗಟ್ಟಬಹುದು.

ತೂಕ ನಿರ್ವಹಣೆ ಮತ್ತು ಆಹಾರದ ಮಾರ್ಪಾಡುಗಳು ಈ ಸಮಸ್ಯೆ ಬಾರದಂತೆ ತಡೆಯುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತವೆ. ಆಕ್ಸಲೇಟ್ ಭರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಮತ್ತು ಸಮತೋಲಿತ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಅವಶ್ಯ.

ಮೂತ್ರಪಿಂಡದ ಕಲ್ಲುಗಳು ಆರೋಗ್ಯದ ಮೇಲೆ ಗಂಭೀರವಾದ ಸಮಸ್ಯೆಗೆ ಕಾರಣವಾಗುತ್ತವೆ. ಈ ಕುರಿತು ಜಾಗೃತಿ, ತಡೆಗಟ್ಟುವ ಕ್ರಮ, ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆಗಳು ಈ ಕಾಯಿಲೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ವಾಪ್​ ಕಿಡ್ನಿ ಟ್ರಾನ್ಸ್​​ಪ್ಲಾಂಟೇಶನ್' ಮೂಲಕ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಹೊಸ ರೂಪ; ಮಣಿಪಾಲ್ ಆಸ್ಪತ್ರೆ ಮಹತ್ವದ ಹೆಜ್ಜೆ

Last Updated : Apr 8, 2024, 2:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.