ಲಂಡನ್: ಇತ್ತೀಚೆಗಷ್ಟೇ ಬ್ರಿಟನ್ ರಾಜ ಚಾರ್ಲ್ಸ್ III ಕ್ಯಾನ್ಸರ್ಗೆ ಪತ್ತೆಯಾಗಿದ್ದು, ಈ ಸಂಬಂಧ ಚಿಕಿತ್ಸೆ ಆರಂಭಿಸಿ, ಅವರು ಗುಣಮುಖವಾಗಿದ್ದರು. ಆದರೆ ಇದೀಗ ಬ್ರಿಟನ್ ರಾಜಮನೆತನದ ಮತ್ತೊಬ್ಬ ಸದಸ್ಯೆ ಕ್ಯಾನ್ಸರ್ಗೆ ತುತ್ತಾಗಿದ್ದಾರೆ. ಅವರೇ ದಿ ಪ್ರಿನ್ಸಸ್ ಆಫ್ ವೇಲ್ಸ್.
ರಾಜಕುಮಾರಿ ಡಯಾನಾ ಸೊಸೆ ಅಂದರೆ, ಪ್ರಿನ್ಸ್ ವಿಲಿಯಂ ಹೆಂಡತಿ ಕೇಟ್ ಮಿಡಲ್ಟನ್, ಪ್ರಿನ್ಸಸ್ ಆಫ್ ವೇಲ್ಸ್ ಇದೀಗ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ವಿವರ ಹಂಚಿಕೊಂಡಿರುವ ಕೇಟ್, ತಮಗೆ ಕ್ಯಾನ್ಸರ್ ಪತ್ತೆಯಾಗಿದ್ದು, ಈ ಸಂಬಂದ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ರಾಜಕುಮಾರಿ, ಕಳೆದೆರಡು ತಿಂಗಳ ಹಿಂದೆ ಜನವರಿಯಲ್ಲಿ ಹೊಟ್ಟೆ ಸರ್ಜರಿಗೆ ಒಳಗಾಗಿದ್ದೆ. ಅದು ಕಷ್ಟದ ದಿನವಾಗಿದ್ದು, ಕ್ಯಾನ್ಸರ್ರಹಿತ ಪರಿಸ್ಥಿತಿ ಹೊಂದಿದ್ದೆ. ಆ ಸರ್ಜರಿ ಯಶಸ್ವಿಯಾಗಿತ್ತು. ಆಪರೇಷನ್ ಬಳಿಕದ ಪರೀಕ್ಷೆಯಲ್ಲಿ ನನಗೆ ಕ್ಯಾನ್ಸರ್ ಇರುವುದನ್ನು ಪತ್ತೆ ಮಾಡಿದೆ. ನನ್ನ ವೈದ್ಯಕೀಯ ತಂಡವೂ ಕಿಮೋಥೆರಪಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿತು. ಇದೀಗ ನಾನು ಆರಂಭಿಕ ಹಂತದ ಚಿಕಿತ್ಸೆಯಲ್ಲಿದ್ದೇನೆ ಎಂದಿದ್ದಾರೆ.
ಇದು ನಿಜಕ್ಕೂ ದೊಡ್ಡ ಆಘಾತ. ನಾನು ಮತ್ತು ವಿಲಿಯಂ ನಮ್ಮ ಕುಟುಂಬದ ಕಾರಣದಿಂದ ಖಾಸಗಿಯಾಗಿ ಈ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದು, ಇದಕ್ಕಾಗಿ ಸ್ಪಲ್ಪ ಸಮಯ ತೆಗೆದುಕೊಂಡೆವು. ನಾನು ಇದೀಗ ಸುರಕ್ಷಿತವಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚು ಶಕ್ತಿಶಾಲಿಯಾಗುತ್ತಿದ್ದೇನೆ. ಪ್ರತಿನಿತ್ಯ ಗುಣಮುಖವಾಗುವತ್ತ ನನ್ನ ಗುರಿ ನೆಟ್ಟಿದ್ದೇನೆ ಎಂದು ಹೇಳಿದ್ದಾರೆ.
ಕೇಟ್ ತಮಗೆ ಕ್ಯಾನ್ಸರ್ ಇರುವುದರ ಬಗ್ಗೆ ತಿಳಿಸಿದ್ದಾರೆ. ಆದರೆ, ಯಾವ ರೀತಿ ಕ್ಯಾನ್ಸರ್ಗೆ ಒಳಗಾಗಿದ್ದಾರೆ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಈ ಕುರಿತು ಪ್ರಕಟಣೆ ಹೊರಡಿಸಿರುವ ಕೆನ್ಸಿಂಗ್ಟನ್ ಅರಮನೆ ರಾಜಕುಮಾರಿ ಸಂಪೂರ್ಣ ಗುಣಮುಖವಾಗಿರುವುದಾಗಿ ತಿಳಿಸಿದೆ.
ಕೇಟ್ ಆರೋಗ್ಯ ಸುಧಾರಣೆಗೆ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಮಾರ್ಕೆಲ್ ಶುಭ ಹಾರೈಸಿದ್ದಾರೆ. ಕೇಟ್ ಮತ್ತು ಕುಟುಂಬವು ಆರೋಗ್ಯ ಮತ್ತು ಕ್ಯಾನ್ಸರ್ನಿಂದ ಬೇಗ ಗುಣಮುಖಗೊಳ್ಳುವಂತೆ ಬಯಸುತ್ತೇವೆ. ಈ ಸಮಯದಲ್ಲಿ ಖಾಸಗಿತನ ಕಾಪಾಡುವ ಮೂಲಕ ಅವರು ನೆಮ್ಮದಿಯಾಗಿರಲು ಸಾಧ್ಯ ಎಂದು ಭಾವಿಸುತ್ತೇವೆ ಎಂದಿದ್ದಾರೆ.
ಕೇಟ್ ಚೇತರಿಕೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಹಾರೈಸಿದ್ದಾರೆ. ತಮ್ಮ ಧೈರ್ಯದಿಂದ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಬ್ರಿಟನ್ ರಾಜ ಚಾರ್ಲ್ಸ್ III ಕ್ಯಾನ್ಸರ್: ಚೇತರಿಕೆಗೆ ಪ್ರಧಾನಿ ರಿಷಿ ಸುನಕ್ ಹಾರೈಕೆ