ETV Bharat / health

ಜಪಾನ್‌ಗೆ ಕೋವಿಡ್​ 10ನೇ ಅಲೆ ಭೀತಿ - ಕೋವಿಡ್ 19

ಜಪಾನ್​ನಲ್ಲಿ ಕೋವಿಡ್ 19 ಸೋಂಕು ಹರಡುವಿಕೆ ಪ್ರಮಾಣ ಹೆಚ್ಚುತ್ತಿದೆ. ಇದು ಹತ್ತನೇ ಅಲೆಗೆ ಕಾರಣವಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

Covid infection cases Rising in Japan
Covid infection cases Rising in Japan
author img

By ETV Bharat Karnataka Team

Published : Jan 30, 2024, 11:54 AM IST

ಟೊಕಿಯೋ: ಜಪಾನ್​ನಲ್ಲಿ ಕಳೆದ 9 ವಾರಗಳಿಂದ ನಿರಂತರವಾಗಿ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿವೆ. ಈ ಬೆಳವಣಿಗೆಯನ್ನು ಗಮನಿಸಿದರೆ ದೇಶವು ಕೋವಿಡ್​ 10ನೇ ಅಲೆಯ ಮಧ್ಯದಲ್ಲಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಸದ್ಯ ಜೆಎನ್​.1 ತಳಿ ಪ್ರಬಲವಾಗಿದ್ದು, ವೇಗವಾಗಿ ಹರಡುತ್ತಿದೆ ಎಂದು ಜಪಾನ್​ ಟೈಮ್ಸ್​​ ವರದಿ ಮಾಡಿದೆ.

ಜನವರಿ 21ರ ವಾರಾಂತ್ಯದ ಸಂದರ್ಭದಲ್ಲಿ ಪ್ರತಿ ಸಂಸ್ಥೆಯಲ್ಲಿ ಶೇ.12.23 ರಷ್ಟು ಸೋಂಕಿತ ವ್ಯಕ್ತಿಗಳು ವರದಿಯಾಗಿದ್ದಾರೆ. ಇದು ಹಿಂದಿನ ವಾರಕ್ಕಿಂತ 1.4 ಪಟ್ಟು ಹೆಚ್ಚು. ಕಳೆದ ವರ್ಷ ಎರಡು ತಿಂಗಳಿನಿಂದ​ ಅಂದರೆ, 2023ರ ನವೆಂಬರ್​​ನಿಂದ ಈ ರೀತಿಯ ಬೆಳವಣಿಗೆ ಕಂಡುಬಂದಿದೆ.

ದೇಶದಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕೆವಹಿಸಬೇಕು ಎಂದು ಕೆಯೊ ವಿಶ್ವವಿದ್ಯಾಲಯದ ವಿಸಿಟಿಂಗ್​ ಪ್ರೊಫೆಸರ್​ ನೊರಿಯೊ ಸುಗಯಾ ಮನವಿ ಮಾಡಿದ್ದಾರೆ.

ವರದಿಯನುಸಾರ, ಬಿಎ.2.86 ಓಮ್ರಿಕಾನ್​ ತಳಿಯ ರೂಪಾಂತರಿ ಜೆಎನ್​.1 ದೇಶದಲ್ಲಿ ಮತ್ತೆ ಕೋವಿಡ್ ವೈರಸ್​ ಉಲ್ಬಣಕ್ಕೆ ಕಾರಣವಾಗಿದೆ. ಜೆಎನ್​.1 ಪ್ರತಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಸದ್ಯದ ಪರಿಸ್ಥಿತಿಯನ್ನು ಸೋಂಕಿನ 10ನೇ ಅಲೆ ಎಂದು ವಿವರಿಸಬಹುದು. ಜೆಎನ್.1 ಹರಡುವಿಕೆಯಿಂದಾಗಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿಯಿದೆ. ಇದಕ್ಕಿಂತ ಹೆಚ್ಚಾಗಿ ಈ ಸೋಂಕು ಜಪಾನ್​ ಹೊರತಾಗಿ ಬೇರೆಡೆಯೂ ವೇಗವಾಗಿ ಹರಡುತ್ತಿದೆ.

ಜನವರಿ 1ರಿಂದ ಜನವರಿ 7ರವರೆಗೆ ನಡೆಸಿದ ಕೋವಿಡ್​ ಪರೀಕ್ಷಾ ಮಾದರಿಗಳಲ್ಲಿ ಜೆಎನ್​.1 ಪ್ರಬಲ ಸೋಂಕು ಎಂದು ಪರಿಗಣಿಸಲಾಗಿದೆ ಎಂದು ನ್ಯಾಷನಲ್​ ಇನ್ಸುಟಿಟ್ಯೂಟ್​​ ಆಫ್​​ ಇನ್ಫೆಕ್ಷನ್​ ಡಿಸೀಸ್​ ತಿಳಿಸಿದೆ. ಮುಂದಿನ ವಾರದ ಆರಂಭದಲ್ಲೂ ಸೋಂಕಿನ ಪ್ರಸರಣ ಇರಲಿದ್ದು, ಇದು ಶೇ.43ರಷ್ಟು ಪ್ರಮಾಣದಲ್ಲಿ ಹರಡಲಿದೆ ಎಂಬ ನಿರೀಕ್ಷೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇತರೆ ಸೋಂಕಿನ ತಳಿಗಳಿಂತ ಜೆಎನ್​.1 ವೇಗವಾಗಿ ಹರಡಿದರೂ ಸಾವಿನಂತಹ ಯಾವುದೇ ಗಂಭೀರ ಅಪಾಯ ಒಡ್ಡುವುದಿಲ್ಲ ಎಂದು ತಿಳಿಸಿದೆ.

ಭಾರತದಲ್ಲಿ ಕೋವಿಡ್ ಸೋಂಕು: ಭಾರತದಲ್ಲಿ ಕಳೆದೊಂದು ದಿನದಲ್ಲಿ 112 ಕೋವಿಡ್​ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ 1,460 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಡಿಸೆಂಬರ್​ 5ರಿಂದ ಜನವರಿ ಮೊದಲ ವಾರದವರೆಗೆ ಸೋಂಕಿನ ಹೆಚ್ಚಳದಲ್ಲಿ ಜೆಎನ್​.1 ರೂಪಾಂತರ ತಳಿ ಪ್ರಮುಖವಾಗಿತ್ತು. ಸದ್ಯದ ಮಾಹಿತಿಯನುಸಾರ ಜೆಎನ್​.1 ರೂಪಾಂತರ ಹೊಸ ಪ್ರಕರಣದ ಏರಿಕೆಗೆ ಕಾರಣವಾಗುತ್ತಿಲ್ಲ. ಅಲ್ಲದೇ, ಆಸ್ಪತ್ರೆಗ ದಾಖಲಾಗುವ ಮತ್ತು ಮರಣ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿಲ್ಲ.

2021ರ ಏಪ್ರಿಲ್-ಜೂನ್ ಅವಧಿಯಲ್ಲಿ ಡೆಲ್ಟಾ ಅಲೆಯಿಂದ ಕೋವಿಡ್​ ಪ್ರಕರಣಗಳಲ್ಲಿ ಭಾರಿ ಏರಿಕೆ ಮತ್ತು ಸಾವುಗಳು ವರದಿಯಾಗುವ ಮೂಲಕ ಭಾರತ 3ನೇ ಅಲೆ ಎದುರಿಸಿತ್ತು. 2020ರಲ್ಲಿ ಸಾಂಕ್ರಾಮಿಕತೆ ಆರಂಭವಾದಾಗಿನಿಂದ 4.5 ಕೋಟಿ ಜನರು ಸೋಂಕಿಗೆ ಒಳಗಾಗಿದ್ದು, 5.3 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಸದ್ಯ ಚೇತರಿಕೆ ದರ 98.81ರಷ್ಟಿದೆ. ಇಲ್ಲಿಯವರೆಗೆ 220.67 ಕೋಟಿ ಕೋವಿಡ್​ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ವೆಬ್​​ಸೈಟ್​ ಮಾಹಿತಿ ನೀಡಿದೆ.(ಐಎಎನ್​ಎಸ್​)

ಇದನ್ನೂ ಓದಿ: ಹೊಸ ಸಾಂಕ್ರಾಮಿಕತೆಗೆ ಕಾರಣವಾಗಲಿದೆ ಸೈಬೀರಿಯಾದಲ್ಲಿ ಘನೀಕೃತವಾಗಿರುವ ಝೊಂಬಿವೈರಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.