ETV Bharat / health

ಇಂಟರ್​ಮಿಟ್ಟೆಂಟ್​​​​​​ ಫಾಸ್ಟಿಂಗ್​ ಡಯಟ್​ನಿಂದ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಿಲ್ಲ; ಕಾರಣ ಇದು - intermittent fasting diet plan

ಪುರುಷರಿಗೆ ಹೋಲಿಕೆ ಮಾಡಿದಾಗ ಮಹಿಳೆಯರಲ್ಲಿ ಈ ಮಧ್ಯಂತರ ಉಪವಾಸ ಹೆಚ್ಚಿನ ಪ್ರಯೋಜನ ನೀಡುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

author img

By ETV Bharat Karnataka Team

Published : Mar 27, 2024, 4:11 PM IST

intermittent fasting diet plan may not be good for women

ನವದೆಹಲಿ: ತೂಕ ನಷ್ಟ, ರಕ್ತದೊತ್ತಡ ಮತ್ತು ಉತ್ತಮ ಕೊಬ್ಬಿನ ನಿಯಂತ್ರಣಕ್ಕೆ ಇಂಟರ್​ಮಿಟ್ಟೆಂಟ್​​​​​​ ಫಾಸ್ಟಿಂಗ್​ (ಮಧ್ಯಂತರ ಉಪವಾಸ) ಸಾಕಷ್ಟು ಜನಪ್ರಿಯವಾಗಿದೆ. ಆದರೆ, ಈ ಜನಪ್ರಿಯ ಡಯಟ್​​ ಮಹಿಳೆಯರಿಗೆ ಉತ್ತಮವಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಈ ಮಧ್ಯಂತರ ಉಪವಾಸ ಅನುಕರಿಸುವ ಪುರುಷರಿಗೆ ಹೋಲಿಕೆ ಮಾಡಿದಾಗ ಮಹಿಳೆಯರಲ್ಲಿ ಇದರ ಆರೋಗ್ಯ ಪರಿಣಾಮ ವಿಭಿನ್ನವಾಗಿದೆ ಎಂದು ಬೆಂಗಳೂರಿನ ಅಸ್ಟರ್​​ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್​ ನ್ಯೂಟ್ರಿಷಿಯನ್​ ಅಂಡ್​ ಡಯಾಬೀಟಿಕ್ಸ್​​​ನ ಸೇವಾ ಮುಖ್ಯಸ್ಥ ಎಡ್ವಿನ್​ ರಾಜ್​ ತಿಳಿಸಿದ್ದಾರೆ.

ಮಹಿಳೆಯರ ಹಾರ್ಮೋನ್​ಗಳಾದ ಈಸ್ಟ್ರೋಜನ್​ ಮತ್ತು ಪ್ರೊಜೆಸ್ಟರಾನ್​ಗಳು ಈ ಉಪವಾಸ ಸಂದರ್ಭದಲ್ಲಿ​ ಪ್ರಭಾವಕ್ಕೆ ಒಳಗಾಗುತ್ತದೆ. ಇದು ಋತುಚಕ್ರ ಮತ್ತು ಫಲವತ್ತತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ. ಋತುಚಕ್ರದ ಸಮಯದಲ್ಲಿ ಹಾರ್ಮೋನ್​ಗಳ ಏರಿಳಿತ ಕಾಣಬಹುದು. ಇದನ್ನು ಮತ್ತೊಂದು ಹಾರ್ಮೋನ್​ ಆದ ಜಿಎನ್​ಆರ್​ಎಚ್​ ನಿಯಂತ್ರಿಸುತ್ತದೆ. ಮಹಿಳೆಯರು ಉಪವಾಸ ಮಾಡಿದಾಗ ಜಿಎನ್​ಆರ್​ಎಚ್​ ಹಾರ್ಮೋನ್​ಗೆ ಅಡ್ಡಿಯಾಗುತ್ತದೆ. ಇದರಿಂದ ಈಸ್ಟ್ರೋಜನ್​ ಮತ್ತು ಪ್ರೊಜೆಸ್ಟರಾನ್​ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಈ ಈಸ್ಟ್ರೋಜನ್​ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್​ ಅಡ್ಡಿಯಿಂದ ಮಹಿಳೆಯರಲ್ಲಿ ತಲೆನೋವು, ನಿದ್ರೆ ಭಂಗ ಸೇರಿದಂತೆ ಇನ್ನಿತರ ಸಮಸ್ಯೆ ಕಾಣಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಮಧ್ಯಂತರ ಉಪವಾಸವೂ ಮಹಿಳೆಯರ ಆರೋಗ್ಯದ ಮೇಲೆ ಅಡ್ಡಿ ಉಂಟು ಮಾಡುತ್ತದೆ. ಗರ್ಭಿಣಿ ಅಥವಾ ಹಾಲುಣಿಸುವವರು, ಗರ್ಭಿಣಿಯಾಗಲು ಪ್ರಯತ್ನಿಸುವವರಿಗೆ ಇದರಿಂದ ತೊಂದರೆಯಾಗುತ್ತದೆ. ಈ ಹಿನ್ನೆಲೆ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವವರು ಉಪವಾಸ ತಪ್ಪಿಸಬೇಕು. ಇದು ಅಂಡಾಣು ದರವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ಅಥವಾ ಹಾಲುಣಿಸುವವರು ಕೂಡ ಈ ಉಪವಾಸ ಮಾಡದಿರುವುದು ಒಳಿತು. ಕಾರಣ ಇವರ ದೇಹಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ.

ಆಹಾರ ಸಮಸ್ಯೆ ಹೊಂದಿರುವವರಿಗೆ ಕೂಡ ಈ ಡಯಟ್​ ಪ್ಲಾನ್​ ಸಹಾಯ ಮಾಡುವುದಿಲ್ಲ. ಅಲ್ಲದೇ, ಇದು ಅನಾರೋಗ್ಯಕರ ತಿನ್ನುವ ಅಭ್ಯಾಸಕ್ಕೆ ಕೂಡ ಉತ್ತೇಜನ ಮಾಡುತ್ತದೆ. ಚಿಕಿತ್ಸೆಯಲ್ಲಿರುವರಿಗೂ ಕೂಡ ಈ ಡಯಟ್​​​ ಅಭ್ಯಾಸ ಮಾಡುವುದರಿಂದ ಕೆಲವು ಔಷಧಗಳಿಗೆ ಅಡ್ಡಿ ಉಂಟು ಮಾಡುತ್ತದೆ.

ಈ ಮಧ್ಯಂತರ ಉಪವಾಸ ಮಾಡಬೇಕು ಎನ್ನುವ ಮಹಿಳೆಯರು ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಇದನ್ನು ಅನುಕರಿಸಬಹುದು. ಆರೋಗ್ಯದ ಮೇಲೆ ಯಾವುದೇ ರೀತಿ ಪರಿಣಾಮ ಬೀರದಂತೆ ಪ್ರಯೋಜನ ಪಡೆಯಬಹುದು. ಈ ವೇಳೆ ಆಹಾರದಲ್ಲಿ ನೇರ ಪ್ರೋಟಿನ್​, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಸಂಸ್ಕರಿಸಿದ ಆಹಾರವನ್ನು ತಪ್ಪಿಸಬೇಕು.

ನಿಮ್ಮ ಋತುಚಕ್ರದ ಸಮಯದ ಒಂದು ದಿನ ಅಥವಾ ಎರಡು ದಿನಗಳ ನಂತರ ಅಥವಾ ಒಂದು ವಾರ ಅಥವಾ ನಂತರ ಈ ಉಪವಾಸ ನಡೆಸಬಹುದು. ಈ ವೇಳೆ, ಹೆಚ್ಚಿನ ಪ್ರೊಟೀನ್ ಅಥವಾ ಹೆಚ್ಚಿನ ಫೈಬರ್ ಇರುವಂತೆ ನೋಡಿಕೊಳ್ಳಬಹುದು. ಈ ಆಹಾರ ಕ್ರಮ ಅನುಸರಿಸುವ ಮೊದಲು ತಜ್ಞ ನೋಂದಾಯಿತ ಡಯಟಿಷನ್​ ಸಲಹೆ ಪಡೆಯುವುದು ಅವಶ್ಯ. (ಐಎಎನ್​ಎಸ್​​)

ಇದನ್ನೂ ಓದಿ: ಆರೋಗ್ಯದ ಗುಟ್ಟು ಉಪವಾಸದಲ್ಲಿ: ಮಧ್ಯಂತರ ಉಪವಾಸದ ಏಳು ದಾರಿಗಳ ನಕ್ಷೆ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.