ETV Bharat / health

ಎಚ್ಚರ!.. ಮಕ್ಕಳ IQ ಮಟ್ಟ ಕುಗ್ಗಿಸುತ್ತೆ ಈ ಸ್ಥೂಲಕಾಯ: ಇದನ್ನು ತಪ್ಪಿಸಲು ಏನು ಮಾಡಬೇಕು? - Obesity correlates with IQ - OBESITY CORRELATES WITH IQ

ಸ್ಥೂಲಕಾಯದಿಂದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಹೇಳಿದ್ದಾರೆ.

intellectual-ability-may-decrease-in-children-due-to-obesity
ಬಾಲ್ಯದ ಸ್ಥೂಲಕಾಯ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 13, 2024, 1:09 PM IST

ಹೈದರಾಬಾದ್​: ಮಕ್ಕಳಲ್ಲಿನ ಸ್ಥೂಲಕಾಯ ಅವರ ಮೆದುಳಿನ ಚಟುವಟಿಕೆ ಕುಗ್ಗಿಸಿ, ಅವರ ಐಕ್ಯೂ (ಬೌದ್ಧಿಕ ಸಾಮರ್ಥ್ಯ) ಮಟ್ಟ ಕಡಿಮೆ ಆಗುವಂತೆ ಮಾಡುತ್ತದೆ ಎಂದು ಅಮೆರಿಕದ ಸಂಶೋಧಕರು ಎಚ್ಚರಿಸಿದ್ದಾರೆ. ಸ್ಥೂಲಕಾಯದಿಂದ ಮಕ್ಕಳಲ್ಲಿ ಮಾನಸಿಕ ಖಿನ್ನತೆ ಸಮಸ್ಯೆ ಅಪಾಯ ಹೆಚ್ಚುವ ಸಾಧ್ಯತೆ ಇದೆ ಎಂದು ಕೂಡ ವಾಷಿಂಗ್ಟನ್​ ಯೂನಿವರ್ಸಿಟಿಯ ವಿಜ್ಞಾನಿಗಳು ನಡೆಸಿದ ಈ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಈ ಅಧ್ಯಯನದ ಭಾಗವಾಗಿ ಸಂಶೋಧಕರು 9 ರಿಂದ 11 ವರ್ಷದೊಳಗಿನ ವಯೋಮಿತಿಯ 5 ಸಾವಿರ ಮಕ್ಕಳನ್ನು ಗಮನಿಸಿದ್ದಾರೆ. ಈ ವೇಳೆ ಅವರ ಸಮಗ್ರ ಮಾನಸಿಕ ಸಾಮರ್ಥ್ಯವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 2016ರ ಜೂನ್​ನಿಂದ 2018ರ ಅಕ್ಟೋಬರ್​​ವರೆಗೆ ಮಕ್ಕಳ ಬೌದ್ಧಿಕ ಮಟ್ಟದ ಪ್ರಾಥಮಿಕ ದತ್ತಾಂಶವನ್ನು ಪಡೆಯಲಾಗಿದೆ. ಇದಾದ ಬಳಿಕ, ಅವರ ನಡವಳಿಕೆಯನ್ನು ಎರಡು ವರ್ಷಗಳ ಕಾಲ ಗಮನಿಸಲಾಗಿದೆ. ಅವರ ದೇಹದ ಎತ್ತರ ಮತ್ತು ತೂಕ ಹಾಗೂ ಸೊಂಟದ ಸುತ್ತಳತೆಯನ್ನು ಸಂಗ್ರಹಿಸಲಾಗಿದೆ. ಬಳಿಕ ಮಾನಸಿಕ ಸಾಮರ್ಥ್ಯದ ಪರೀಕ್ಷೆ ಕೂಡಾ ನಡೆಸಲಾಗಿದೆ. ಇದರಲ್ಲಿ ವಾರ್ಷಿಕವಾಗಿ ಶೇ 1.6ರಷ್ಟು ತೂಕ ಹೆಚ್ಚಳಗೊಳ್ಳುವ ಮಕ್ಕಳ ಬೌದ್ಧಿಕ ಸಾಮರ್ಥ್ಯವೂ ಆರೋಗ್ಯಯುತ ತೂಕ ಹೊಂದಿರುವ ಮಕ್ಕಳಿಗೆ ಹೋಲಿಕೆ ಮಾಡಿದಾಗ, ತೂಕ ಹೊಂದಿರುವವರಲ್ಲಿ ಒಂದು ಪಾಯಿಂಟ್​ ಕಡಿಮೆ ಇರುವುದು ಕಂಡು ಬಂದಿದೆ. ಬಿಎಂಐ ಹೆಚ್ಚಳ ಸ್ಕ್ವಾಟಿಂಗ್ ಸಮಸ್ಯೆಯೂ ಕಂಡು ಬರುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ

ಇದೇ ಕಾರಣ: ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಪ್ರಕಾರ, ಬಾಲ್ಯದ ಸ್ಥೂಲಕಾಯಕ್ಕೆ ಅನೇಕ ಕಾರಣಗಳು ಇರುತ್ತವೆ. ಸ್ಥೂಲಕಾಯದಲ್ಲಿ ಚಯಾಪಚಯ, ಡಯಟ್​, ದೈಹಿಕ ಚಟುವಟಿಕೆ ಮಾದರಿ, ಕಳಪೆ ನಿದ್ದೆ, ಅನುವಂಶಿಕ ಅಂಶಗಳು ಕೂಡ ಸಂಬಂಧ ಹೊಂದಿದ್ದು, ಇದನ್ನು ಬದಲಾಯಿಸಲು ಸಾಧ್ಯವಿಲ್ಲ.

ಆದರೆ, ಜನರು ಮತ್ತು ಸ್ಥಳವೂ ಮಕ್ಕಳಲ್ಲಿ ಆರೋಗ್ಯಯುತ ದೇಹ ತೂಕ ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಮಕ್ಕಳು ಹೆಚ್ಚಿನ ಸಮಯವನ್ನು ಕಳೆಯುವ ಶಾಲೆಗಳು ಮತ್ತು ಮನೆಗಳಲ್ಲಿ ಪೌಷ್ಟಿಕಾಂಶವು ಲಭ್ಯವಾಗುವಂತೆ ನೋಡಿಕೊಳ್ಳುವುದು ಅಗತ್ಯ. ಅವರನ್ನು ದೈಹಿಕವಾಗಿ ಸಕ್ರಿಯವಾಗಿಡುವಂತೆ ವ್ಯವಸ್ಥೆ ಮಾಡುವುದು ಪ್ರಯೋಜನಕಾರಿಯಾಗಿದೆ ಎಂದು ಸಿಡಿಸಿ ತಿಳಿಸಿದೆ.

ಶಾಲೆಗಳು, ಮಕ್ಕಳು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಹಾಗೂ ಸಕ್ಕರೆ ಆಹಾರ, ಪಾನೀಯಗಳನ್ನು ಕಡಿಮೆ ಮಾಡುವಂತಹ ನೀತಿಗಳನ್ನು ಅಭಿವೃದ್ಧಿಪಡಿಸಬೇಕು. ಮಕ್ಕಳು ದೈಹಿಕವಾಗಿ ಸಕ್ರಿಯವಾಗಿರುವಂತಹ ಸಮಯವನ್ನು ಹೆಚ್ಚಿಸಲು ಸೂಚಿಸಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದ ಮಕ್ಕಳಲ್ಲಿ ಹೆಚ್ಚುತ್ತಿರುವ ಎನ್​ಸಿಡಿ ಹೊರೆ: ಕಾರಣವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.