ETV Bharat / health

ಭಾರತದ ಯುವಜನತೆಯಲ್ಲಿ 'ಕೊಲೊನಲ್​ ಕ್ಯಾನ್ಸರ್' ಹೆಚ್ಚಳ​​: ಕಾರಣವೇನು? ತಜ್ಞರ ಸಲಹೆಗಳು ಹೀಗಿವೆ - Colon Cancer - COLON CANCER

ಈ ಹಿಂದೆಲ್ಲಾ ದೇಶದಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೊಲೊನಲ್‌ ಕ್ಯಾನ್ಸರ್​ ಇದೀಗ 30-40 ವರ್ಷದ ನಡುವಿನ ವಯಸ್ಕರಲ್ಲೂ ಹೆಚ್ಚಾಗಿದೆ.

India is seeing a significant rise in the number of colon cancer

author img

By ETV Bharat Karnataka Team

Published : Mar 26, 2024, 11:51 AM IST

Updated : Mar 26, 2024, 12:00 PM IST

ನವದೆಹಲಿ: ಭಾರತೀಯ ಯುವ ಜನತೆಯಲ್ಲಿ ಇತ್ತೀಚಿನ ದಿನಮಾನಗಳಲ್ಲಿ ಕೊಲೊನ್ ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್​ ಪ್ರಕರಣಗಳು ಏರಿಕೆ ಕಾಣುತ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಕಾರಣವೇನು?: ತಡವಾದ ಪತ್ತೆ ಕಾರ್ಯ, ಪರೀಕ್ಷೆಗೆ ಒಳಪಡದೇ ಇರುವುದು ಹಾಗು ಪಾಶ್ಚಿಮಾತ್ಯ ಆಹಾರ ಅಭ್ಯಾಸ ಕ್ರಮಗಳು ಕ್ಯಾನ್ಸರ್​​ ಪ್ರಕರಣಗಳು ಹೆಚ್ಚಲು ಕಾರಣ. ಪಾಶ್ಚಿಮಾತ್ಯ ಆಹಾರಗಳು ಹೆಚ್ಚು ಸಂಸ್ಕರಿಸಿದ್ದು, ಕ್ಯಾಲೊರಿ ಸಮೃದ್ದವಾಗಿವೆ ಎಂಬುದನ್ನು ಗಮನಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ ಕೋವಿಡ್ ಕಾರ್ಯಪಡೆಯ ಸಹ ಮುಖ್ಯಸ್ಥರಾಗಿರುವ ಡಾ.ರಾಜೀವ್​ ಜಯದೇವನ್​, "ಭಾರತದಲ್ಲಿ ಬಹುತೇಕ ಮಂದಿಯಲ್ಲಿ ಕೊಲೊರೆಕ್ಟಲ್​ ಕ್ಯಾನ್ಸರ್​​ ಅಂತಿಮ ಹಂತದಲ್ಲಿ ಪತ್ತೆಯಾಗುತ್ತಿದೆ. ಈ ರೋಗದ ಕುರಿತು ಹೆಚ್ಚಿನ ತಿಳುವಳಿಕೆ ಮತ್ತು ರೋಗ ಪತ್ತೆಯ ಸೌಲಭ್ಯ, ಜಾಗೃತಿ ಇಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ" ಎಂದು ತಿಳಿಸಿದ್ದಾರೆ.

ಪಾಶ್ಚಿಮಾತ್ಯ ದೇಶಗಳಂತೆ ಭಾರತದಲ್ಲಿ ಈ ನಿರ್ದಿಷ್ಟ ಕ್ಯಾನ್ಸರ್​ ಪತ್ತೆ ಕಾರ್ಯ ವಿಧಾನ ನಡೆಸುವ ವೈದ್ಯರಿಲ್ಲ. ಪರೀಕ್ಷಾ ಸೌಲಭ್ಯವೂ ಇಲ್ಲ. ಬಹುತೇಕರು ಈ ರೋಗದ ಪ್ರಮುಖ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ರಕ್ತಸ್ರಾವದಂತಹ ಪ್ರಮುಖ ಲಕ್ಷಣವನ್ನು ಹೆಮೊರಾಯ್ಡ್​​ ಅಥವಾ ಪೈಲ್ಸ್​ ಎಂದು ತಪ್ಪಾಗಿ ಗುರುತಿಸುವುದೂ ಉಂಟು. ಇಂಥ ಸಂದರ್ಭಗಳಲ್ಲಿ ಅನೇಕ ಸಲ ಚಿಕಿತ್ಸೆಗೆ ಸ್ಥಳೀಯ ವೈದ್ಯರ ಬಳಿ ಹೋಗುತ್ತಾರೆ. ಇದರಿಂದ ಕ್ಯಾನ್ಸರ್​ ಅಂತಿಮ ಹಂತದಲ್ಲಿ ಗಮನಕ್ಕೆ ಬರುತ್ತದೆ ಎಂದು ಕೊಚ್ಚಿ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್​​ ಡಾ.ರಾಜೀವ್ ಮಾಹಿತಿ ನೀಡಿದರು.

2023ರಲ್ಲಿ ದೆಹಲಿ ರಾಜ್ಯ ಕ್ಯಾನ್ಸರ್​ ಸಂಸ್ಥೆ ತೋರಿಸಿದಂತೆ 50 ವರ್ಷ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್​ ಪತ್ತೆಯಾಗುತ್ತಿತ್ತು. ಇದೀಗ 31ರಿಂದ 40 ವರ್ಷದ ಯುವ ವಯಸ್ಕರಲ್ಲೇ ಕಂಡುಬರುತ್ತಿದೆ ಎಂಬುದು ಆತಂಕದ ವಿಚಾರ ಎನ್ನುತ್ತಾರೆ ತಜ್ಞರು.

ದೇಶದಲ್ಲೀಗ ಕೊಲೊನಿಕ್​ ಕ್ಯಾನ್ಸರ್​​ ಪ್ರಕರಣ ಏರಿಕೆ ಕಾಣುತ್ತಿದೆ. ಅಂಕಿಅಂಶಗಳ ಪ್ರಕಾರ ಮೂರನೇ ಒಂದು ಭಾಗದಷ್ಟು ಕೊಲೊನ್​ ಕ್ಯಾನ್ಸರ್​ ಯುವ ಜನತೆಯನ್ನು ಕಾಡುತ್ತಿದೆ ಎಂದು ಶ್ರೀ ಎಚ್​ಎನ್​ ರಿಲಯನ್ಸ್​​ ಫೌಂಡೇಶನ್​ ಹಾಸ್ಪಿಟಲ್​ನ ಗ್ಯಾಸ್ಟ್ರೋ ಸೈನ್ಸ್​​ ಸಂಸ್ಥೆಯ ಮುಖ್ಯಸ್ಥ ಡಾ.ಅಮಿತ್​ ಮೆಡಿಯೊ ತಿಳಿಸಿದ್ದಾರೆ.

ಯುವ ಜನತೆಯಲ್ಲಿ ಈ ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣ ಪಾಶ್ಚಿಮಾತ್ಯ ಜೀವನ ಶೈಲಿ. ಅವರು ಸೇವಿಸುವ ಆಹಾರ ಹೆಚ್ಚಿನ ಕ್ಯಾಲೊರಿ ಮತ್ತು ಸಂಸ್ಕರಣೆಗೆ ಒಳಗಾಗಿರುತ್ತದೆ.ಧೂಮಪಾನ, ಆಲ್ಕೋಹಾಲ್​, ಸ್ಥೂಲಕಾಯ ಮತ್ತು ಊರಿಯೂತಗಳೂ ಕೂಡ ಇದಕ್ಕೆ ಕಾರಣವಾಗುತ್ತದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕೊಲೊನೋಸ್ಕೋಪಿ ಪ್ರಮಾಣಿತ ಸ್ಕ್ರೀನಿಂಗ್ ವಿಧಾನ ಮೂಲಕ ಇದರ ಪತ್ತೆ ಕಾರ್ಯ ನಡೆಯುತ್ತದೆ. ಆದರೆ ಭಾರತದಲ್ಲಿ ಇದು ವ್ಯಾಪಕವಾಗಿ ಬಳಕೆಯಲ್ಲಿಲ್ಲ ಎಂದು ಡಾ.ರಾಜೀವ್ ಮಾಹಿತಿ ನೀಡಿದರು.

ಇದರೊಂದಿಗೆ ಕುಟುಂಬದ ಇತಿಹಾಸ ಮತ್ತು ದೀರ್ಘಕಾಲದಿಂದ ಮಾಂಸಾಹಾರ ಸೇವನೆಯೂ ಕೂಡ ಪ್ರಮುಖ ಅಪಾಯದ ಅಂಶವೇ. ಆದರೆ, ಸಸ್ಯಾಹಾರಿಗಳಲ್ಲಿ ಈ ಕ್ಯಾನ್ಸರ್​ ಸಾಮಾನ್ಯ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿವೆ. ಆದಾಗ್ಯೂ ಇದು ಕುಟುಂಬದ ಇತಿಹಾಸ ಹೊಂದಿದೆ. ಶೇ.90ರಷ್ಟು ಪ್ರಕರಣಗಳಲ್ಲಿ ಅವರಿಗೆ ಕುಟುಂಬದ ಇತಿಹಾಸಗಳ ಬಗ್ಗೆ ತಿಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಉಪವಿಭಾಗದ ಜನರನ್ನು ಮಾತ್ರ ನೋಡುತ್ತಿದ್ದಾರೆ. ಈ ವಿಧಾನ ಮತ್ತು ಮನಸ್ಥಿತಿಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಪ್ರಿನ್ಸಸ್​ ಆಫ್​ ವೇಲ್ಸ್​​ಗೆ ಕ್ಯಾನ್ಸರ್​; ಕಿಮೋಥೆರಪಿಯಲ್ಲಿ ಕೇಟ್​ ಮಿಡಲ್​ಟನ್​ - Kate Middleton Cancer

Last Updated : Mar 26, 2024, 12:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.