ನವದೆಹಲಿ: ಹೆಪಟೈಟಿಸ್ ಬಿ ಮತ್ತು ಸಿ ರೋಗದ ಮೂರನೇ ಎರಡರಷ್ಟು ಹೊರೆ ಹೊಂದಿರುವ ಜಗತ್ತಿನ ಮೊದಲ 10 ದೇಶದಲ್ಲಿ ಭಾರತ ಕೂಡ ಒಂದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) 2024 ಜಾಗತಿಕ ಹೆಪಟೈಟಿಸ್ ವರದಿ ತಿಳಿಸಿದೆ.
ಈ ರೋಗದ ಹೊರೆ ಹೊಂದಿರುವ ವಿಶ್ವದ ಪ್ರಮುಖ 10 ದೇಶ ಎಂದರೆ, ಚೀನಾ, ಭಾರತ, ಇಂಡೋನೇಷ್ಯಾ, ನೈಜೀರಿಯಾ, ಪಾಕಿಸ್ತಾನ, ಇಥಿಯೋಪಿಯಾ, ಬಾಂಗ್ಲಾದೇಶ, ವಿಯೆಟ್ನಾಂ, ಫಿಲಿಪ್ಪಿನ್ಸ್ ಮತ್ತು ದಿ ರಷ್ಯಾ ಫೆಡರೇಷನ್.
ಒಟ್ಟಾರೆ ಜಾಗತಿಕ 2022ರ ಹೈಪಟೈಟಿಸ್ ಹೊರೆಯಲ್ಲಿ ಶೇಕಡಾ 50 ರಷ್ಟು ಅಂದರೆ, ಅರ್ಧದಷ್ಟು ಪಾಲು ಚೀನಾ, ಭಾರತ ಮತ್ತು ಇಂಡೋನೇಷ್ಯಾ ರಾಷ್ಟ್ರಗಳೇ ಹೊಂದಿವೆ. ಉಳಿದ ಹೊರೆಯ ಪಾಲನ್ನು ನೈಜೀರಿಯಾ, ಇಥಿಯೋಪಿಯಾ, ಬಾಂಗ್ಲಾದೇಶ, ವಿಯೆಟ್ನಾಂ, ಫಿಲಿಪ್ಪಿನ್ಸ್ ಮತ್ತು ಪಾಕಿಸ್ತಾನ ದೇಶಗಳು ಹೊಂದಿವೆ.
ವಿಶ್ವ ಹೆಪಟೈಟಿಸ್ ಶೃಂಗಸಭೆಯಲ್ಲಿ ಒಟ್ಟಾರೆ 187 ದೇಶದ ದತ್ತಾಂಶವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಆರು ದೇಶಗಳಲ್ಲಿ ಅಂದರೆ, ಚೀನಾ, ಭಾರತ, ಇಂಡೋನೇಷ್ಯಾ, ಪಾಕಿಸ್ತಾನ, ದಿ ರಷ್ಯಾ ಫೆಡರೇಷನ್ ಮತ್ತು ಅಮೆರಿಕವೂ ಹೈಪಟೈಟಿಸ್ ಸಿಯ ಜಾಗತಿಕ ಹೊರೆಯ ಶೇ 50ರಷ್ಟನ್ನು ಹೊಂದಿವೆ. ಹೆಪಟೈಟಿಸ್ ಸಿ ಹೊರೆ ಹೊಂದಿರುವ ಉಳಿದ ದೇಶಗಳೆಂದರೆ ಉಕ್ರೇನ್, ಉಜೆಕಿಸ್ತಾನ, ಬಾಂಗ್ಲಾದೇಶ, ವಿಯೆಟ್ನಾಂ, ಇಥಿಯೋಪಿಯಾ, ಮೆಕ್ಸಿಕೊ, ಬ್ರೆಜಿಲ್, ಮಲೇಷ್ಯಾ ರಾಷ್ಟ್ರಗಳಾಗಿವೆ. ಈ ದೇಶದಲ್ಲಿನ ರೋಗದ ಪ್ರಗತಿಯು ಜಾಗತಿಕ ಪ್ರತಿಕ್ರಿಯೆಯಲ್ಲಿ ನಿರ್ಣಾಯಕವಾಗಿದೆ ಎಂದು ವರದಿ ತಿಳಿಸಿದೆ.
ನಿತ್ಯ 3,500 ಮಂದಿ ಸಾವು: ಜಾಗತಿಕವಾಗಿ ವೈರಲ್ ಹೆಪಟೈಟಿಸ್ ಸೋಂಕು ಏರಿಕೆಯನ್ನು ವರದಿಯಲ್ಲಿ ಗಮನಿಸಲಾಗಿದೆ. ಅಲ್ಲದೇ ನಿತ್ಯ ಈ ಸೋಂಕಿಗೆ 3,500 ಮಂದಿ ಸಾವನ್ನಪ್ಪುತ್ತಿದ್ದು, ವರ್ಷಕ್ಕೆ 1.3 ಮಿಲಿಯನ್ ಮರಣಗಳು ಸಂಭವಿಸುತ್ತಿದೆ. ಜಾಗತಿಕವಾಗಿ ಕ್ಷಯದ ಬಳಿಕ ಸಾವಿಗೆ ಕಾರಣವಾಗುತ್ತಿರುವ ಎರಡನೇ ರೋಗ ಇದಾಗಿದೆ.
2019ರಲ್ಲಿ 1.1 ಮಿಲಿಯನ್ ಜನರು ಈ ರೋಗದಿಂದ ಸಾವನ್ನಪ್ಪಿದ್ದಾರೆ. 2022ರಲ್ಲಿ 1.3 ಮಿಲಿಯನ್ ಜನರ ಸಾವಿಗೆ ಹೆಪಟೈಟಿಸ್ ಕಾರಣವಾಗುತ್ತಿದೆ. ಶೇ 83ರಷ್ಟು ಹೆಪಟೈಟಿಸ್ ಬಿ ಸಾವಿಗೆ ಕಾರಣವಾದರೆ, ಹೆಪಟೈಟಿಸ್ ಸಿ ಶೇ 17ರಷ್ಟು ಸಾವಿಗೆ ಕಾರಣವಾಗುತ್ತದೆ. ಹೆಪಟೈಟಿಸ್ ಸೋಂಕು ತಡೆಗಟ್ಟುವಲ್ಲಿ ಜಾಗತಿಕವಾಗಿ ಪ್ರಗತಿಯ ಹೊರತಾಗಿಯೂ, ಹೆಪಟೈಟಿಸ್ ಹೊಂದಿರುವ ಕೆಲವೇ ಜನರು ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆಯುತ್ತಿರುವ ಕಾರಣ ಸಾವುಗಳು ಹೆಚ್ಚುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕರಾದ ಡಾ ಟೆಡ್ರೊಸ್ ಅದೊನೊಮ್ ಗೇಬ್ರಿಯೆಸೆಸ್ ತಿಳಿಸಿದ್ದಾರೆ.
ರೋಗದಿಂದ ರೋಗಿಗಳಲ್ಲಿ ಉಳಿಸಲು ಮತ್ತು ಈ ರೋಗದ ಪರಿಹಾರಕ್ಕೆ ಕೈ ಕೆಟುಕುವ ಬೆಲೆಯಲ್ಲಿ ಸಾಧನಗಳ ಬಳಕೆ ಮಾಡಲು ಎಲ್ಲ ದೇಶಗಳಿಗೆ ಬೆಂಬಲ ನೀಡಲು ವಿಶ್ವ ಆರೋಗ್ಯ ಸಂಸ್ಥೆ ಬದ್ದವಾಗಿದೆ ಎಂದರು. ಕೈಗೆಟುಕುವ ದರದಲ್ಲಿ ವೈರಲ್ ಹೆಪಟೈಟಿಸ್ ಔಷಧ ಲಭ್ಯತೆ ಮತ್ತು ಅನೇಕ ದೇಶಗಳು ಕಡಿಮೆ ದರದಲ್ಲಿ ಔಷಧಗಳ ನೀಡುವಿಕೆಯಲ್ಲಿ ಹಲವು ದೇಶಗಳಿಗೆ ಸೋತಿವೆ ಎಂದು ಕೂಡ ವರದಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ವಿಶ್ವ ಆರೋಗ್ಯ ಸಂಸ್ಥೆ ರೋಘದ ಪರೀಕ್ಷೆ ಮತ್ತು ಪತ್ತೆ ವಿಸ್ತರಣೆ, ಪ್ರಾಥಮಿಕ ಆರೈಕೆ ತಡೆ ಪ್ರಯತ್ನ ಬಲಗೊಳಿಸುವಿಕೆ ಮತ್ತು ಕಾರ್ಯಾಚರಣೆಗೆ ಸುಧಾರಿತ ದತ್ತಾಂಶ ಬಳಕೆ ಕುರಿತು ಶಿಫಾರಸು ಮಾಡಿದೆ. (ಐಎಎನ್ಎಸ್)
ಇದನ್ನೂ ಓದಿ: Hepatitis C: ವೇಗವಾಗಿ ಹರಡುತ್ತಿದೆ ಹೆಪೆಟೈಟಿಸ್ ಸಿ ಸೋಂಕು: ನಿರ್ಲಕ್ಷಿಸಿದರೆ ಜೀವಕ್ಕೆ ಕುತ್ತು