ETV Bharat / health

ಭಾರತದ ಎಲ್ಲ ಮಕ್ಕಳಿಗೆ ಹೊಟ್ಟೆ ತುಂಬ ಆಹಾರ ಸಿಗ್ತಿದೆಯೇ? ಯುನಿಸೆಫ್ ವರದಿ ಹೀಗಿದೆ - Child Food Poverty

ಜಾಗತಿಕವಾಗಿ 181 ಮಿಲಿಯನ್​ ಮಕ್ಕಳು ಅಥವಾ ಪ್ರತೀ ನಾಲ್ಕರಲ್ಲಿ ಒಂದು ಮಗು 5 ವರ್ಷ ತುಂಬುವುದರೊಳಗೆ ಗಂಭೀರ ಸ್ವರೂಪದ ಆಹಾರ ಸಮಸ್ಯೆ ಎದುರಿಸುತ್ತಿದೆ ಎಂದು ಯುನಿಸೆಫ್‌ ವರದಿ ಹೇಳುತ್ತದೆ.

author img

By ETV Bharat Karnataka Team

Published : Jun 6, 2024, 3:53 PM IST

India has successfully narrowed the inequities in severe child food poverty
ಸಂಗ್ರಹ ಚಿತ್ರ (IANS)

ನವದೆಹಲಿ: ಕಳೆದೊಂದು ದಶಕದಿಂದ ಭಾರತದಲ್ಲಿ ಬಡ ಮತ್ತು ಶ್ರೀಮಂತ ಕುಟುಂಬಗಳ ಮನೆಯ ಮಕ್ಕಳ ಆಹಾರದ ಅಸಮಾನತೆ ಕನಿಷ್ಠ ಶೇ 5ರಷ್ಟು ತಗ್ಗಿದೆ ಎಂದು ಯುನಿಸೆಫ್​ ತಿಳಿಸಿದೆ.

'ಚೈಲ್ಡ್​ ಫುಡ್​ ಪವರ್ಟಿ: ನ್ಯೂಟ್ರಿಷಿಯನ್​ ಡಿಪ್ರಿವೇಷನ್ ಇನ್​​ ಅರ್ಲಿ ಚೈಲ್ಡ್​ಹುಡ್'​ (ಮಕ್ಕಳ ಆಹಾರ ಬಡತನ: ಆರಂಭಿಕ ಬಾಲ್ಯದಲ್ಲಿಪೌಷ್ಟಿಕಾಂಶದ ಕೊರತೆ) ಎಂಬ ಹೆಸರಿನಲ್ಲಿ ಈದಕ್ಕೆ ಸಂಬಂಧಿಸಿದ ವರದಿ ಪ್ರಕಟಿಸಲಾಗಿದೆ.

ಈ ವರದಿಯಂತೆ, 2018ರಿಂದ 2022ರ ನಡುವಿನ ಆಹಾರ ಬಡತನದಲ್ಲಿ ವಾಸಿಸುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಭಾರತ 20ನೇ ಸ್ಥಾನದಲ್ಲಿದ್ದು, ಇಲ್ಲಿ ಶೇ.65ರಷ್ಟು ಮಕ್ಕಳು ಆಹಾರ ಬಡತನ ಎದುರಿಸುತ್ತಿದ್ದಾರೆ. ಅಫ್ಘಾನಿಸ್ಥಾನ (ಶೇ.49) ಬಾಂಗ್ಲಾದೇಶ (ಶೇ.20) ಹಾಗು ಪಾಕಿಸ್ತಾನ ಶೇ.38 ರಷ್ಟು ಆಹಾರ ಬಡತನವಿದೆ.

ಜಾಗತಿಕವಾಗಿ, 181 ಮಿಲಿಯನ್​ ಮಕ್ಕಳು ಅಥವಾ ನಾಲ್ಕರಲ್ಲಿ ಒಂದು ಮಗು ತನ್ನ ಐದು ವರ್ಷದೊಳಗೆ ಗಂಭೀರ ಆಹಾರ ಬಡತನ ಅನುಭವಿಸುತ್ತಿದೆ ಎಂದು ಈ ವರದಿ ಹೇಳುತ್ತದೆ. ಇದರಲ್ಲಿ ದಕ್ಷಿಣ ಏಷ್ಯಾದ 64 ಮಿಲಿಯನ್​ ತೀವ್ರ ಪರಿಣಾಮಕ್ಕೆ ಒಳಗಾದರೆ, ಉಪ ಸಹಾರನ್​ ಆಫ್ರಿಕಾದ ಶೇ.59 ಮಿಲಿಯನ್​ ಮಕ್ಕಳು ಈ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಭಾರತ ಸೇರಿದಂತೆ 11 ರಾಷ್ಟ್ರಗಳು ಪ್ರಗತಿ ಹೊಂದಿವೆ. ಭಾರತದ ಜೊತೆಗೆ ಏಷ್ಯಾದ ಅರ್ಮೇನಿಯಾ ದೇಶವೂ ಪ್ರಗತಿ ಹೊಂದುತ್ತಿದೆ. ಆಫ್ರಿಕಾದ 9 ರಾಷ್ಟ್ರಗಳಾದ ಬುರ್ಕಿನಾ ಫಾಸೊ, ಕೊಟೆ ಡಿಐವರಿ, ದಿ ಡೆಮಾಕ್ರಟಿಕ್ಸ್​ ರಿಪಬ್ಲಿಕ್​ ಆಫ್​ ಕಾಂಗೊ, ದಿ ಡೊಮಿನಿಕನ್​ ರಿಪಬ್ಲಿಕನ್​, ಗಿನಿಯಾ, ಲೆಸೊಥೊ, ಲೈಬೀರಿಯಾ, ಸೆನೆಗಲ್ ಮತ್ತು ಸಿಯೆರಾ ಲಿಯೋನ್‌ನಲ್ಲೂ ಪರಿಸ್ಥಿತಿ ಸುಧಾರಣೆಯಾಗಿದೆ.

ತೀವ್ರತರದ ಆಹಾರ ಬಡತನದಲ್ಲಿರುವ ಮಕ್ಕಳು ಆರೋಗ್ಯದ ಅಂಚಿನಲ್ಲಿ ಜೀವಿಸುತ್ತಿದ್ದಾರೆ. ಸದ್ಯ ಇದು ಮಿಲಿಯಾಂತರ ಮಕ್ಕಳ ನೈಜ ಸ್ಥಿತಿಯಾಗಿದೆ. ಈ ಪರಿಸ್ಥಿತಿಯು ಮಕ್ಕಳ ಉಳಿಯುವಿಕೆ, ಬೆಳವಣಿಗೆ ಮತ್ತು ಮಿದುಳಿನ ಅಭಿವೃದ್ಧಿಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಯುನಿಸೆಫ್​ ಕಾರ್ಯಕಾರಿ ನಿರ್ದೇಶಕ ಕ್ಯಾಥೆರಿನ್​ ರುಸೆಲ್​ ಹೇಳಿದ್ದಾರೆ.

ದಿನದಲ್ಲಿ ಎರಡು ಹೊತ್ತು ಅಥವಾ ಇದಕ್ಕೂ ಕಡಿಮೆ ಹಾಲು ಸೇವಿಸುತ್ತಿರುವ ಮಕ್ಕಳು ಗಂಭೀರ ಸ್ವರೂಪದ ಅಪೌಷ್ಟಿಕತೆ ಅನುಭವಿಸುತ್ತಿದ್ದಾರೆ. ಬಾಲ್ಯದ ಮಕ್ಕಳ ಬಡತನ ಎಂದರೆ, ಮಕ್ಕಳು ತಮ್ಮ ಆರಂಭಿಕ ಬಾಲ್ಯಾವಸ್ಥೆಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಲಭ್ಯತೆ ಮತ್ತು ಸೇವನೆ ನಡೆಸದೇ ಇರುವುದಾಗಿದೆ.

ಯುನಿಸೆಫ್​ ಶಿಫಾರಸು ಮಾಡಿದಂತೆ ಮಕ್ಕಳು ತಮ್ಮ ಆರಂಭಿಕ ಬಾಲ್ಯಾವಸ್ಥೆಯಲ್ಲಿ 8 ಮುಖ್ಯ ಆಹಾರ ಸೇವನೆ ಮಾಡಬೇಕು. ಅವುಗಳೆಂದರೆ, ಎದೆಹಾಲು, ಡೈರಿ ಉತ್ಪನ್ನ, ಮೊಟ್ಟೆ, ಮಾಂಸ, ಕೋಳಿ, ಮೀನು, ಧಾನ್ಯಗಳು, ಬೀಜಗಳು, ವಿಟಮಿನ್​ ಎ ಸಮೃದ್ಧ ಹಣ್ಣು ಮತ್ತು ತರಕಾರಿ. ಕೋವಿಡ್​ 19 ಸಾಂಗ್ರಾಮಿಕತೆ, ಬೆಳೆಯುತ್ತಿರುವ ಅಸಮಾನತೆ, ಸಂಘರ್ಷ, ಹವಾಮಾನ ಬಿಕ್ಕಟ್ಟು, ಆಹಾರ ಬೆಲೆ ಮತ್ತು ಜೀವನದ ವೆಚ್ಚ ಹೆಚ್ಚಿಸಿದ್ದು, ಇದು ವಿಶ್ವದೆಲ್ಲೆಡೆ ಆಹಾರ ಬಡತನದ ಮಟ್ಟ ಹೆಚ್ಚಲು ಕಾರಣವಾಗಿದೆ ಎಂದು ವರದಿ ತಿಳಿಸಿದೆ.(ಐಎಎನ್​ಎಸ್​)

ಇದನ್ನೂ ಓದಿ: ಭಾರತ ಅಧಿಕೃತವಾಗಿ 'ಕಡು ಬಡತನ' ನಿರ್ಮೂಲನೆ ಮಾಡಿದೆ: ಬ್ರೂಕಿಂಗ್ಸ್ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.