ನವದೆಹಲಿ: ಅಧಿಕ ಉಪ್ಪು ಸೇವನೆಯು ರಕ್ತದೊತ್ತಡ, ಹೃದಯ ಸಮಸ್ಯೆ, ಹೊಟ್ಟೆ ಕ್ಯಾನ್ಸರ್ ಸೇರಿದಂತೆ ಹಲವು ಅಪಾಯಗಳನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆ ಅತಿ ಹೆಚ್ಚಿನ ಉಪ್ಪು ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಆರೋಗ್ಯಯುತ ದೇಹಕ್ಕೆ ಎಷ್ಟು ಪ್ರಮಾಣದ ಐಯೋಡಿನ್ ಉಪ್ಪು ಅಗತ್ಯ ಎಂಬ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಲಹೆ ನೀಡಿದೆ. ಅದರ ಅನುಸಾರ ದಿನಕ್ಕೆ ಹೆಚ್ಚು ಎಂದರೆ 5ಗ್ರಾಂ ಐಯೋಡಿನ್ಯುಕ್ತ ಉಪ್ಪು (ಸೋಡಿಯಂ ಕ್ಲೋರೈಡ್) ಸೇವನೆ ಮಾಡಬೇಕು.
ಉಪ್ಪು ಆಹಾರದ ರುಚಿ ಹೆಚ್ಚಿಸುತ್ತದೆ. ಅದರಲ್ಲೂ ಸಂಸ್ಕರಿತ ಆಹಾರಗಳು ಹೆಚ್ಚು ಉಪ್ಪಿನಿಂದ ಕೂಡಿರುತ್ತದೆ. ಇದರಿಂದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಉಪ್ಪು ದೇಹ ಸೇರುತ್ತದೆ. ಈ ಹಿನ್ನೆಲೆಯಲ್ಲಿ ಉಪ್ಪಿನ ಸೇವನೆಗೆ ಕಡಿವಾಣ ಹಾಕುವುದು ಅವಶ್ಯ ಎಂದು ಐಸಿಎಂಆರ್ ಮತ್ತು ಎನ್ಐಎನ್ ತಿಳಿಸಿದೆ.
ಈ ಕುರಿತು ಈ ಟಿವಿ ಭಾರತದ ಜತೆ ಮಾತನಾಡಿರುವ ಐಎಂಎ ಆಹಾರ ಸುರಕ್ಷತಾ ಉಪಕ್ರಮದ ಅಧ್ಯಕ್ಷರಾಗಿರುವ ಡಾ ಶ್ರೀಜಿತ್ ಎನ್ ಕುಮಾರ್, ಅಧಿಕ ಪ್ರಮಾಣದ ಉಪ್ಪು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಧಿಕ ಪ್ರಮಾಣದ ಉಪ್ಪು ಸೇವನೆ ಆರೋಗ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡ ಮತ್ತು ಹೃದಯ ರೋಗ ಮತ್ತು ಪಾರ್ಶ್ವವಾಯುಗೆ ಕಾರಣವಾಗುತ್ತದೆ ಎಂದಿದ್ದಾರೆ.
ಅಧಿಕ ಪ್ರಮಾಣದ ಸೋಂಡಿಯಂ ಸೇವನೆ ಮೂತ್ರಪಿಂಡಗಳ ನೀರು ತೆಗೆದುಹಾಕಿ, ಅದರ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ, ದೇಹದ ರಕ್ತನಾಳಗಳ ಮೇಲೆ ಒತ್ತಡ ಉಂಟುಮಾಡುತ್ತದೆ. ಅಧಿಕ ರಕ್ತದೊತ್ತಡವೂ ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. ಉಪ್ಪು ಸೇವನೆಯು ದೇಹದಲ್ಲಿ ರಕ್ತದೊತ್ತಡ ಹೆಚ್ಚಿಸಿದರೆ, ಪೊಟಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಸೋಡಿಯಂ - ಪೊಟಾಶಿಯಂ ಮೂಲಗಳು: ಧಾನ್ಯಗಳು, ಕಾಳುಗಳು, ತರಕಾರಿ, ಹಾಲು, ಮಾಂಸ ಮತ್ತು ಸಮುದ್ರಾಹಾರಗಳು ಸೋಡಿಯಂ ಮೂಲಗಳಾಗಿದೆ. ಬೀನ್ಸ್, ಬಾಳೆಹಣ್ಣು, ಡ್ರೈ ಪ್ರೂಟ್ಸ್ ಮತ್ತು ಎಳನೀರು ಪೋಟಾಶಿಯಂ ಮೂಲವಾಗಿದೆ. ಭಾರತೀಯ ಆಹಾರದಲ್ಲಿ ಉಪ್ಪಿನ ಪ್ರಮಾಣ ಸಾಮಾನ್ಯವಾಗಿ 3 ರಿಂದ 10 ಗ್ರಾಂ ಇದೆ. ಆದರೆ, ವಿವಿಧ ಪ್ರದೇಶದಲ್ಲಿ ಇದರ ಪ್ರಮಾಣ ಭಿನ್ನವಾಗಿದ್ದು, ಸರಾಸರಿ 5 ಗ್ರಾಂಗಿಂತ ಹೆಚ್ಚು ಸೇವನೆ ಮಾಡುತ್ತಾರೆ.
ಬಾಲ್ಯಾವಸ್ಥೆಯಲ್ಲಿಯೇ ಉಪ್ಪಿನ ಅಧಿಕ ಸೇವನೆಗೆ ಕಡಿವಾಣ ಹಾಕುವುದು ಸೂಕ್ತ. ಸೋಡಿಯಾಂ ಜಠರ ಕರುಳಿನಲ್ಲಿ ಸುಲಭವಾಗಿ ಗ್ರಹಿಕೆಯಾಗುತ್ತದೆ. ಜೊತೆಗೆ ವ್ಯಕ್ತಿಯೊಬ್ಬನ ಮೂತ್ರ, ಬೆವರು ಮತ್ತು ಮಲದ ನಷ್ಟದ ಮೇಲೆ ಕೂಡ ಈ ಸೋಡಿಯಂ ಅವಶ್ಯಕತೆ ಉಂಟಾಗುತ್ತದೆ. ಅಧಿಕ ಬೆವರುವಿಕೆ ಸ್ಥಳ ಮತ್ತು ಹವಾಮಾನ ಬದಲಾವಣೆ, ದೈಹಿಕ ಚಟುವಟಿಕೆಗೆ ಅನುಸಾರವಾಗಿ ಸೋಡಿಯಂ ನಷ್ಟಗೊಂಡರೆ, ಇದರ ಪ್ರಮಾಣ ಹೆಚ್ಚಳ ಮಾಡುವಂತೆ ಐಸಿಎಂಆರ್-ಎನ್ಐಎನ್ ತಿಳಿಸಿದೆ.
ಸೋಡಿಯಂ ಮತ್ತು ಪೊಟಾಶಿಯಂ ಪ್ರಮಾಣ: ಆರೋಗ್ಯಯುತ ದೇಹಕ್ಕೆ ಇದೆರಡು ಅವಶ್ಯವಾಗಿದೆ. ಡಬ್ಲೂಎಚ್ಒ ಶಿಫಾರಸು ಮಾಡಿದಂತೆ ದಿನಕ್ಕೆ ಒಂದು ಟೇಬಲ್ ಸ್ಪೂನ್ ಅಥವಾ 5 ಗ್ರಾಂ ಉಪ್ಪು ಸೇವಿಸಬೇಕು. ಈ ಪ್ರಮಾಣಟದಲ್ಲಿ ಪೋಟಾಶಿಯಂ ಅನ್ನು ದಿನಕ್ಕೆ 3,800ಎಂಜಿ ಸೇವಿಸಬೇಕು. ಈ ಮಟ್ಟವನ್ನು ಸುಲಭವಾಗಿ ಹಣ್ಣು ಮತ್ತು ತರಕಾರಿಗಳಲ್ಲಿ ಪಡೆಯಬಹುದು.
ಉಪ್ಪು ಹೆಚ್ಚು ಸೇವಿಸಿದರೇನಾಗುತ್ತದೆ?: ಪ್ರಸ್ತುತ ಇರುವ ಪುರಾವೆಗಳು ತಿಳಿಸುವಂತೆ ಅಧಿಕ ಉಪ್ಪು ಸೇವನೆ ರಕ್ತ ನಾಳ, ರಕ್ತದೊತ್ತಡ, ಮೂಳೆ ಮತ್ತು ಜಠರ ಕರುಳಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಉಪ್ಪು ಸೇವನೆ ಮತ್ತು ರಕ್ತದೊತ್ತಡ ಒಂದಕ್ಕೊಂದು ಸಂಬಂಧ ಹೊಂದಿದೆ. ದಿನಕ್ಕೆ 3 ಗ್ರಾಂಗಿಂತ ಕಡಿಮೆ ಉಪ್ಪು ಸೇವನೆ ಮಾಡುವರಲ್ಲೂ ರಕ್ತದೊತ್ತಡ ಕಡಿಮೆ ಇರುತ್ತದೆ. ಅತಿ ಹೆಚ್ಚು ಉಪ್ಪು ಸೇವನೆ ರಕ್ತದೊತ್ತಡ ಹೆಚ್ಚಿಸುವ ಜೊತೆಗೆ ಇದು ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಸೋಡಿಯಂ ಸೇವನೆ ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗುತ್ತದೆ. ಇದರಿಂದ ಮೂಳೆಗಳ ಸಾಂದ್ರತೆ ಮೇಲೆ ಪರಿಣಾಮ ಬೀರುತ್ತದೆ.
ಉಪ್ಪಿನ ಬಗೆಗಳು: ಐಸಿಎಂಆರ್ - ಎನ್ಐಎನ್ ಮಾರ್ಗಸೂಚಿ ಅನುಸಾರ, ಎಲ್ಲ ಉಪ್ಪಿನ ಮೂಲ ಸಮುದ್ರ ಉಪ್ಪಾಗಿದೆ. ಇದು ಎರಡು ರೀತಿಯಲ್ಲಿ ಲಭ್ಯ ಒಂದು ರಿಫೈಂಡ್, ಅನ್ರಿಫೈಂಡ್. ಇದರಲ್ಲಿ ಪರಿಶುದ್ದತೆ ಮಟ್ಟ ಕ್ರಮವಾಗಿ 99 ಮತ್ತು 96ರಷ್ಟಿರುತ್ತದೆ. ಸಾಮಾನ್ಯವಾಗಿ ರಿಫೈಂಡ್ ಅಥವಾ ನಾನ್ ರಿಫೈಂಡ್ ಬಿಳಿ ಉಪ್ಪು ಬಳಕೆ ಮಾಡುತ್ತೇವೆ. ಇದರ ಜತೆಗೆ ಪಿಂಕ್ ಉಪ್ಪು, ಕಲ್ಲು ಉಪ್ಪು, ಕಪ್ಪು ಉಪ್ಪು ಬಳಕೆ ಮಾಡುತ್ತೇವೆ. ಪಿಂಕ್ ಮತ್ತು ಕಪ್ಪು ಉಪ್ಪುಗಳನ್ನು ಅದರ ಬಣ್ಣ, ವಿನ್ಯಾಸ ಮತ್ತು ವಾಸನೆ ಮೇಲೆ ವರ್ಗಿಕರಿಸಲಾಗಿದೆ. ಯಾವುದೇ ಉಪ್ಪಿನ ಬಗೆ ಇದ್ದರೂ ಅವುಗಳ ಮಿತಿಯನ್ನು ಕಡಿಮೆ ಮಾಡುವುದು ಉತ್ತಮ ಎಂದು ಐಸಿಎಂಆರ್ ಎನ್ಐಎನ್ ತಿಳಿಸಿದೆ.
ಇದನ್ನೂ ಓದಿ: ಆಹಾರದ ರುಚಿ ಹೆಚ್ಚಿಸಲು ಈ ಕೆಲಸ ಮಾಡುವ ಮುನ್ನ ಒಮ್ಮೆ ಯೋಚಿಸಿ!