ETV Bharat / health

ನಿಪಾಹ್ ತಡೆಗೆ ಮಹತ್ವದ ಹೆಜ್ಜೆ: 2025ರಲ್ಲಿ ಭಾರತದಲ್ಲಿ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗ - Human Clinical Trials

author img

By ETV Bharat Karnataka Team

Published : Jul 4, 2024, 8:03 PM IST

ನಿಪಾಹ್ ವೈರಸ್ ವಿರುದ್ಧ ಹೋರಾಡುವ ಹೊಸ ಮೊನೊಕ್ಲೋನಲ್ ಪ್ರತಿಕಾಯ ಲಸಿಕೆಯನ್ನು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸಲಾಗುವುದು.

2025ರಲ್ಲಿ ಭಾರತದಲ್ಲಿ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ನಿಪಾಹ್ ವೈರಸ್ ವಿರುದ್ಧ ಹೋರಾಡುವ ಹೊಸ ಮೊನೊಕ್ಲೋನಲ್ ಪ್ರತಿಕಾಯ ಲಸಿಕೆಯನ್ನು 2025ರಲ್ಲಿ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಮಾನವ ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಡಿಸಲಾಗುವುದು ಎಂದು ವರದಿಯೊಂದು ತಿಳಿಸಿದೆ.

ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಬಹುತೇಕ ಪ್ರತಿವರ್ಷವೂ ನಿಪಾಹ್ ವೈರಸ್​ ಸೋಂಕಿನ ಪ್ರಕರಣಗಳು ವರದಿಯಾಗುವುದು ಗಮನಾರ್ಹ.

ಪ್ಯಾರಮೈಕ್ಸೊವೈರಸ್ ಕುಟುಂಬಕ್ಕೆ ಸೇರಿದ ಝೂನೋಟಿಕ್ ಕಾಯಿಲೆಯಾದ ನಿಪಾಹ್ ವೈರಸ್ ಸೋಂಕಿಗೆ ಒಳಗಾದ ಶೇಕಡಾ 75 ರಷ್ಟು ಜನ ಸಾವಿಗೀಡಾಗುತ್ತಾರೆ. ಈ ಮಾರಣಾಂತಿಕ ರೋಗವು ಹೆಚ್ಚಿನ ಪ್ರಸರಣ ದರವನ್ನು ಹೊಂದಿದೆ. ಆದರೆ ಈವರೆಗೂ ಈ ವೈರಸ್ ವಿರುದ್ಧ ಹೋರಾಡಬಲ್ಲ ಯಾವುದೇ ಅನುಮೋದಿತ ಚಿಕಿತ್ಸೆ ಅಥವಾ ಲಸಿಕೆಗಳು ಲಭ್ಯವಿಲ್ಲ.

ಯುಎಸ್ ಮೂಲದ ಮ್ಯಾಪ್ ಬಯೋಫಾರ್ಮಾಸ್ಯುಟಿಕಲ್ (Mapp Biopharmaceutical) ಅಭಿವೃದ್ಧಿಪಡಿಸಿದ ನಿಪಾಹ್ ಮೊನೊಕ್ಲೋನಲ್ ಆಂಟಿಬಾಡಿ (ಎಂಎಬಿ) ಎಂಬಿಪಿ 1 ಎಫ್ 5ನ (mAb) MBP1F5) ಸುರಕ್ಷತೆ ಮತ್ತು ಸಹಿಷ್ಣುತೆಯನ್ನು ನಿರ್ಣಯಿಸುವ ಉದ್ದೇಶದಿಂದ ಈ ಕ್ಲಿನಿಕಲ್ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಎಂಬಿಪಿ 1 ಎಫ್ 5 ಇದು ವೈರಸ್​ಗೆ ಅಂಟಿಕೊಳ್ಳುವ ಮತ್ತು ಸೋಂಕನ್ನು ತಡೆಗಟ್ಟುವ ಮೂಲಕ ನೈಸರ್ಗಿಕ ಪ್ರತಿಕಾಯಗಳಂತೆ ಕೆಲಸ ಮಾಡುವ ಪ್ರೋಟೀನ್ ಆಗಿದೆ.

ಕ್ಲಿನಿಕಲ್ ಪ್ರಯೋಗಗಳಿಗಾಗಿ ಕಂಪನಿಯು ಸಾಂಕ್ರಾಮಿಕ ಸನ್ನದ್ಧತೆ ನಾವೀನ್ಯತೆಗಳ ಒಕ್ಕೂಟದಿಂದ (ಸಿಇಪಿಐ) (Coalition for Epidemic Preparedness Innovations -CEPI) 43.5 ಮಿಲಿಯನ್ ಡಾಲರ್ ಧನಸಹಾಯ ಪಡೆದಿದೆ ಮತ್ತು 2025 ರಲ್ಲಿ ಮಾನವರ ಮೇಲೆ ಪ್ರತಿಕಾಯದ ಪ್ರಯೋಗಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ. ಈ ಪ್ರಯೋಗಗಳಿಗೆ ನಿಯಂತ್ರಕ ಪ್ರಾಧಿಕಾರಗಳ ಅನುಮತಿ ಸಿಗುವುದು ಇನ್ನೂ ಬಾಕಿ ಇದೆ.

ಈ ಪ್ರಯೋಗವು ಭಾರತ ಮತ್ತು ಬಾಂಗ್ಲಾದೇಶದ ಅನೇಕ ಕ್ಲಿನಿಕಲ್ ಪ್ರಯೋಗ ತಾಣಗಳಲ್ಲಿ ಆರೋಗ್ಯವಂತ ವಯಸ್ಕರಲ್ಲಿ ಎಂಬಿಪಿ 1 ಎಫ್ 5ಯ ಪರಿಣಾಮವನ್ನು ಅಳೆಯಲಿದೆ.

ಹೊಸ ನಿಪಾಹ್ ಎಂಎಬಿ ಪ್ರತಿಕಾಯವು ನಿಪಾಹ್ ವೈರಸ್ ಎಫ್ ಪ್ರೋಟೀನ್​​ನೊಂದಿಗೆ ಬಂಧನಗೊಂಡು ಆ ವೈರಸ್ ಮತ್ತೊಂದು ಜೀವಕೋಶಕ್ಕೆ ಪ್ರವೇಶಿಸುವುದನ್ನು ತಡೆಯುತ್ತದೆ. ಈ ಚಿಕಿತ್ಸಾ ವಿಧಾನವು ನಿಪಾಹ್ ವೈರಸ್ (ಬಾಂಗ್ಲಾದೇಶ ಮತ್ತು ಮಲೇಷ್ಯಾ) ಮತ್ತು ಅದರ ನಿಕಟ ಸಂಬಂಧಿತ ವೈರಸ್​ ಆಗಿರುವ ಹೆಂಡ್ರಾ ವೈರಸ್ ವಿರುದ್ಧ ಕನಿಷ್ಠ ಆರು ತಿಂಗಳವರೆಗೆ ರಕ್ಷಣೆ ನೀಡುತ್ತದೆ. ಲಸಿಕೆಯು ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಇಷ್ಟು ಸಮಯ ಸಾಕು ಎಂದು ಕಂಪನಿಯ ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಎಸ್-350 ವಿಟ್ಯಾಜ್: ರಷ್ಯಾದಿಂದ ಪಾಶ್ಚಿಮಾತ್ಯ ಕ್ಷಿಪಣಿಗಳನ್ನು ಧ್ವಂಸ ಮಾಡಬಲ್ಲ ರಕ್ಷಣಾ ವ್ಯವಸ್ಥೆ - Russian Air Defence System

ETV Bharat Logo

Copyright © 2024 Ushodaya Enterprises Pvt. Ltd., All Rights Reserved.