How To Make Jowar Roti Easily At Home: ಅಧಿಕ ತೂಕ ಮತ್ತು ಮಧುಮೇಹದಿಂದ ಬಳಲುತ್ತಿರುವವರಿಗೆ ಜೋಳದಿಂದ ಸಿದ್ಧವಾಗುವ ಆಹಾರಗಳು ತುಂಬಾ ಸಹಾಯವಾಗುತ್ತವೆ. ಅದರಲ್ಲೂ ಹೆಚ್ಚಿನವರು ಜೋಳದ ರೊಟ್ಟಿಯನ್ನು ಸೇವಿಸುತ್ತಾರೆ. ಜೋಳದ ರೊಟ್ಟಿಯನ್ನು ಮನೆಯಲ್ಲಿ ಮಾಡಲು ತುಂಬಾ ಸಮಯ ತೆಗೆದುಕೊಳ್ಳುವುದರಿಂದ ಕೆಲವರು ಹೊರಗಿನಿಂದ ಖರೀದಿಸುತ್ತಾರೆ. ಮನೆಯಲ್ಲಿ ತಯಾರು ಮಾಡಿದರೂ ಆ ಜೋಳದ ರೊಟ್ಟಿಗಳು, ಸ್ವಲ್ಪ ಸಮಯದ ನಂತರ ಅದು ಗಟ್ಟಿಯಾಗುತ್ತದೆ ಮತ್ತು ಇವು ಮುರಿಯುತ್ತವೆ. ಈ ರೀತಿಯ ತೊಂದರೆ ಅನುಭವಿಸುವವರು ಈ ಸಲಹೆಗಳನ್ನು ಪಾಲಿಸಿದರೆ, ಜೋಳದ ರೊಟ್ಟಿಯನ್ನು ತುಂಬಾ ಸುಲಭವಾಗಿ ಮಾಡಬಹುದು.
ಜೋಳದ ರೊಟ್ಟಿ ತಯಾರಿಸಲು ಬೇಕಾಗುವ ಪದಾರ್ಥಗಳು:
ಜೋಳದ ಹಿಟ್ಟು - 1 ಕಪ್
ನೀರು - 1 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ತುಪ್ಪ - ಅಗತ್ಯವಿರುವಷ್ಟು
ತಯಾರಿಸುವ ವಿಧಾನ ಹೇಗೆ?
- ಇದಕ್ಕಾಗಿ.. ಮೊದಲು ಒಲೆಯ ಮೇಲೆ ಒಂದು ಚಿಕ್ಕ ಬಟ್ಟಲನ್ನು ಇಟ್ಟು ಒಂದು ಕಪ್ ನೀರು ಹಾಕಿ ಮತ್ತು ಅದಕ್ಕೆ ಚಿಟಿಕೆ ಉಪ್ಪು ಹಾಕಿ. ನೀರನ್ನು ಚೆನ್ನಾಗಿ ಕುದಿಸಿ ಮತ್ತು ಒಲೆ ಆಫ್ ಮಾಡಿ.
- ಈಗ ಜೋಳದ ಹಿಟ್ಟನ್ನು ಕುದಿಯುವ ನೀರಿಗೆ ಹಾಕಿ, ಹಿಟ್ಟನ್ನು ಸಂಪೂರ್ಣ ನಾದಿಕೊಳ್ಳಬೇಕು (ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು). ಇದನ್ನು ಮುಚ್ಚಿ ಮತ್ತು ಪಕ್ಕಕ್ಕೆ ಇಡಿ. ಏಕೆಂದರೆ, ಈ ಮಿಶ್ರಣವು ತುಂಬಾ ಬಿಸಿಯಾಗಿರುತ್ತದೆ. ಆದ್ದರಿಂದ ಸ್ವಲ್ಪ ತಣ್ಣಗಾಗುವವರೆಗೆ ಪಕ್ಕಕ್ಕೆ ಇಡಬೇಕು.
- ಆದರೆ, ಇಲ್ಲಿ ನೆನಪಿಡಬೇಕಾದ ಅಂಶವೆಂದರೆ, ನೀವು ನೀರನ್ನು ಸುರಿಯುವ ಅದೇ ಕಪ್ನಷ್ಟೇ ಜೋಳದ ಹಿಟ್ಟನ್ನು ತೆಗೆದುಕೊಳ್ಳಬೇಕು.
- ಹಿಟ್ಟು ತಣ್ಣಾದ ನಂತರ ಅದನ್ನು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಹಿಟ್ಟು ಮೃದುವಾಗುವವರೆಗೆ 5 ನಿಮಿಷಗಳ ಕಾಲ ಕೈಯಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ಹಿಟ್ಟು ಜಿಗುಟಾಗಿದ್ದರೆ ಇನ್ನೂ ಸ್ವಲ್ಪ ಜೋಳದ ಹಿಟ್ಟು ಸೇರಿಸಿ. ಇಲ್ಲದಿದ್ದರೆ, ಹಿಟ್ಟು ಗಟ್ಟಿಯಾಗಿದ್ದರೆ, ನಿಮ್ಮ ಕೈಗಳನ್ನು ಸ್ವಲ್ಪ ಒದ್ದೆ ಮಾಡಿ ಮತ್ತು ಹಿಟ್ಟನ್ನು ಮಿಶ್ರಣ ಮಾಡಿ.
- ಈ ರೀತಿ ಹಿಟ್ಟನ್ನು ತಯಾರಿಸಿದ ನಂತರ, ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಸಮಾನ ಗಾತ್ರದ ಉಂಡೆಗಳನ್ನು ಮಾಡಿ. ಮತ್ತು ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿ. ಇಲ್ಲದಿದ್ದರೆ, ಅವು ಗಾಳಿಗೆ ಒಣಗುತ್ತವೆ.
- ಈಗ ಒಂದು ತಟ್ಟೆಯಲ್ಲಿ ಸ್ವಲ್ಪ ಜೋಳದ ಹಿಟ್ಟು ತೆಗೆದುಕೊಳ್ಳಿ. ನಂತರ ಹಿಟ್ಟಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಹಿಟ್ಟಿನಲ್ಲಿ ಅದ್ದಿ ತಕ್ಷಣವೇ ಅಂಗೈಯಿಂದ ರೊಟ್ಟಿಗಳನ್ನು ತೆಳುವಾಗಿ ತಟ್ಟಬೇಕಾಗುತ್ತದೆ.
- ಅದರ ನಂತರ, ಚಪಾತಿ ಮಾಡುವ ಮಣೆಯ ಮೇಲೆ ಸ್ವಲ್ಪ ಒಣ ಹಿಟ್ಟು ಹಾಕಿ ಮತ್ತು ಒತ್ತಿದ ಹಿಟ್ಟನ್ನು ಇರಿಸಿ, ಅದರ ಮೇಲೆ ಸ್ವಲ್ಪ ಒಣ ಹಿಟ್ಟು ಹಾಕಿ ಚಪಾತಿ ಲಟ್ಟಣಿಗೆಯಿಂದ ಉದ್ದಬೇಕು. ಪಕ್ಕದಲ್ಲಿ ಒಣ ಹಿಟ್ಟನ್ನು ಇಟ್ಟುಕೊಳ್ಳಿ. ಇಲ್ಲದಿದ್ದರೆ, ಹಿಟ್ಟು ಲಟ್ಟಣಿಗೆ ಅಂಟಿಕೊಳ್ಳುತ್ತಿದ್ದರೆ, ಸ್ವಲ್ಪ ಒಣ ಹಿಟ್ಟನ್ನು ಉದುರಿಸಿ ಸಿದ್ಧಪಡಿಬೇಕು. ಲಟ್ಟಣಿಗೆಯಿಂದ ರೌಂಡ್ ಮತ್ತು ತೆಳ್ಳಗೆ ಬರುವಂತೆ ತೀಡಿಕೊಳ್ಳಬೇಕು.
- ಈ ಚಿಕ್ಕ ಸಲಹೆಯನ್ನು ಪಾಲಿಸಿದರೆ ಜೋಳದ ರೊಟ್ಟಿಯನ್ನು ಲಟ್ಟಣಿಗೆಯಿಂದ ತುಂಬಾ ಸುಲಭವಾಗಿ ಮತ್ತು ತೆಳುವಾಗಿ ತಯಾರು ಮಾಡಬಹುದು. ಅದರ ನಂತರ ಕಾದ ಬಾಣಲೆಯ ಮೇಲೆ ಜೋಳದ ರೊಟ್ಟಿಯನ್ನು ಹಾಕಿ ಅರ್ಧ ನಿಮಿಷ ಬಿಡಿ. ನಂತರ ಸ್ವಲ್ಪ ನೀರು ಚಿಮುಕಿಸಿ ರೊಟ್ಟಿ ಅನ್ನು ಒದ್ದೆ ಮಾಡಿ, ಒದ್ದೆಯಾದ ಬಟ್ಟೆಯಿಂದ ಒರೆಸಬೇಕು.
- ಮತ್ತೆ ಅರ್ಧ ನಿಮಿಷದ ನಂತರ ರೊಟ್ಟಿ ಅನ್ನು ತಿರುಗಿಸಿ ಮತ್ತು ಎರಡೂ ಬದಿಗಳಲ್ಲಿ ನಿಧಾನವಾಗಿ ಬೇಯಿಸಿ. ರೊಟ್ಟಿ ತಯಾರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಬೇಗ ಬೇಯಿದರೆ ಬಣ್ಣ ಬರುತ್ತದೆ. ಆದರೆ, ಹಿಟ್ಟು ಒಳಗೆ ಬೇಯಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
- ಆದ್ದರಿಂದ, ರೊಟ್ಟಿಯನ್ನು ನಿಧಾನವಾಗಿ ಬೇಯಿಸಿ. ಸರಿಯಾಗಿ ಬೇಯಿಸಿದರೆ ಈ ರೊಟ್ಟಿಗಳು ಉಬ್ಬುತ್ತವೆ. ನಂತರ ಅವುಗಳನ್ನು ಹಾಟ್ ಬಾಕ್ಸ್ನಲ್ಲಿ ಇರಿಸಿ. ಹೆಚ್ಚಾಗಿ ಈ ರೊಟ್ಟಿಗಳು ಮೃದುವಾಗಿರುತ್ತವೆ. ಯಾವುದೇ ವಿವಿಧ ಪಲ್ಯದೊಂದಿಗೆ ಬಿಸಿಬಿಸಿಯಾದ ರೊಟ್ಟಿಗಳನ್ನು ತಿಂದರೆ ತುಂಬಾ ರುಚಿ ಅನಿಸುತ್ತದೆ. ಜೊತೆಗೆ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.