ETV Bharat / health

ಮಳೆಗಾಲದಲ್ಲಿ ಹಲ್ಲಿಗಳಿಂದ ತೊಂದರೆಯೇ?: ಅಡುಗೆ ಮನೆಯಲ್ಲಿರುವ ನೀರು, ತರಕಾರಿಯೇ ಈ ಸಮಸ್ಯೆಗೆ ಬೆಸ್ಟ್​ ಪರಿಹಾರ! - TIPS TO GET RID OF LIZARDS - TIPS TO GET RID OF LIZARDS

ಇದು ಮಳೆಗಾಲ, ಈ ಸಮಯದಲ್ಲಿ ಬೇಡದ ಅತಿಥಿಗಳು ಮನೆಯೊಳಗೆ ಬರುತ್ತಾರೆ ಹುಷಾರ್​. ಅಂತಹ ಬೇಡದ ಅತಿಥಿಗಳಲ್ಲಿ ಹಲ್ಲಿಯೂ ಒಂದು. ಈ ಸಣ್ಣ ಜೀವಿಗೆ ಜನ ತುಂಬಾ ಹೆದರುತ್ತಾರೆ. ಇದು ನೇರವಾಗಿ ಮನುಷ್ಯರಿಗೆ ಏನು ಮಾಡದಿದ್ದರೂ ಭಾರಿ ತೊಂದರೆ ಇದ್ದೇ ಇದೆ. ಭಾರಿ ವಿಷಕಾರಿ ಆಗಿರುವ ಈ ಹಲ್ಲಿಯನ್ನು ನಿಮ್ಮ ಮನೆಯಿಂದ ಹೇಗೆ ದೂರವಿಡಬಹುದು ಎಂಬುದನ್ನು ನಾವು ನಿಮಗೆ ಈ ಸ್ಟೋರಿಯಲ್ಲಿ ಹೇಳುತ್ತಿದ್ದೇವೆ.

how-to-get-rid-of-common-house-lizard-in-rainy-season-
ಮಳೆಗಾಲದಲ್ಲಿ ಹಲ್ಲಿಗಳಿಂದ ತೊಂದರೆಯೇ?: ಅಡುಗೆ ಮನೆಯಲ್ಲಿರುವ ನೀರು, ತರಕಾರಿಯೇ ಈ ಸಮಸ್ಯೆಗೆ ಬೆಸ್ಟ್​ ಪರಿಹಾರ! (Getty Images)
author img

By ETV Bharat Karnataka Team

Published : Jun 29, 2024, 8:17 AM IST

ಬೆಂಗಳೂರು: ಕಳೆದ ಬಾರಿಯ ಬಿರುಬೇಸಿಗೆ ನಂತರ ಈ ಬಾರಿ ಮುಂಗಾರು ಜೋರಾಗಿಯೇ ಅಬ್ಬರಿಸುತ್ತಿದೆ. ರಾಜ್ಯಾದ್ಯಂತ ಹಿತಕರ ವಾತಾವರಣ ನಿರ್ಮಾಣವಾಗುತ್ತಿದೆ. ಆದರೆ ಈ ಆಹ್ಲಾದಕರ ವಾತಾವರಣದೊಂದಿಗೆ ಮಳೆಗಾಲದ ಕೀಟಗಳು, ಸೊಳ್ಳೆಗಳು ಮತ್ತು ಹಲ್ಲಿಗಳು ಮನೆಯೊಳಗೆ ಕಿರಿಕಿರಿ ಮಾಡುತ್ತಿರುತ್ತವೆ. ಹೌದು, ಜನರು ಹೆಚ್ಚಾಗಿ ಈ ಕೀಟಗಳಿಂದ ಅಸಹನೆಗೆ ಒಳಗಾಗುತ್ತಾರೆ. ಅವುಗಳು ಹತ್ತಿರ ಬಂದಾಗ ಭಯಪಡುತ್ತಾರೆ. ಅಪಾಯಕಾರಿ ಆಗಗಿರುವ ಪಲ್ಲಿ ಅಥವಾ ಹಲ್ಲಿಯನ್ನು ಓಡಿಸುವ ಉಪಾಯ ಬಹುತೇಕರಿಗೆ ತಿಳಿದಿಲ್ಲ.ಇವುಗಳನ್ನು ಮನೆಯಿಂದ ದೂರವಿಡಲು ಇಲ್ಲಿ ನಾವು ನಿಮಗೆ ತುಂಬಾ ಸುಲಭವಾದ ಉಪಾಯವನ್ನು ಹೇಳಲಿದ್ದೇವೆ.

ತಣ್ಣೀರು: ಚಳಿಗಾಲದಲ್ಲಿ ಹಲ್ಲಿಗಳು ಕಾಣಿಸುವುದಿಲ್ಲ ಅನ್ನೋ ವಿಚಾರ ನಿಮಗೆ ತಿಳಿದಿದೆ ಅಂದುಕೊಂಡಿದ್ದೇವೆ. ಏಕೆಂದರೆ ವಾಸ್ತವವಾಗಿ ಹಲ್ಲಿಯು ಉಷ್ಣವಲ್ಲದ ಜೀವಿಯಾಗಿದೆ. ಅದರ ರಕ್ತವು ತಂಪಾಗಿರುತ್ತದೆ ಮತ್ತು ಉಷ್ಣತೆಯನ್ನು ಪಡೆಯುವುದಕ್ಕಾಗಿ ಅದು ಬಿಸಿಯಾದ ವಾತಾವರಣದಿಂದ ಶಾಖವನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಚಳಿಗಾಲದಲ್ಲಿ ಕಡಿಮೆ ತಾಪಮಾನದ ಕಾರಣ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ನಿಮ್ಮ ಮನೆಯಲ್ಲಿ ಏನಾದರೂ ಹಲ್ಲಿಗಳ ಕಾಟ ವಿಪರೀತವಾಗಿದ್ದರೆ ಅದನ್ನು ಓಡಿಸಲು ತಣ್ಣೀರು ಉಪಯೋಗಿಸಬಹುದು.

ಮೊಟ್ಟೆಯ ಚಿಪ್ಪು: ನೀವು ಈ ಬಗ್ಗೆ ಕೇಳಿರಬಹುದು. ಹೌದು ನಿಮ್ಮ ಮನೆಯಲ್ಲಿ ವಾಸಿಸುವ ಹಲ್ಲಿಗೆ ನಿಮ್ಮಷ್ಟು ಆಮ್ಲೆಟ್ ಇಷ್ಟವಾಗುವುದಿಲ್ಲ. ಈ ಆಮ್ಲೆಟ್ ಅನ್ನು ಪಲ್ಲಿಗೆ ತಿನ್ನಿಸಲೂ ಸಾಧ್ಯವಿಲ್ಲ. ಆದರೆ ಹಲ್ಲಿಯನ್ನು ಮನೆಯಿಂದ ದೂರವಿರಿಸಲು ಈ ಮೊಟ್ಟೆಯ ಚಿಪ್ಪು ಉಪಯೋಗಕ್ಕೆ ಬರುತ್ತದೆ. ಏಕೆಂದರೆ ಹಲ್ಲಿಗಳು ಮೊಟ್ಟೆಯ ವಾಸನೆಯನ್ನು ಇಷ್ಟಪಡುವುದಿಲ್ಲ. ಹಾಗಾಗಿ ಹಲ್ಲಿ ಬರುವ ಹಾದಿಯಲ್ಲಿ ಮೊಟ್ಟೆಯ ಚಿಪ್ಪನ್ನು ಇಟ್ಟರೆ ಅದು ನಿಮ್ಮ ಮನೆಗೆ ಬರಲ್ಲ.

ಬೆಳ್ಳುಳ್ಳಿ ಮತ್ತು ಈರುಳ್ಳಿ : ನೀವು ಈ ಹಿಂದೆ ಈ ಬಗ್ಗೆ ಕೇಳಿರಲಿಕ್ಕಿಲ್ಲ. ಆದರೆ ನಿಮ್ಮ ಅಡುಗೆ ಮನೆಯಲ್ಲಿ ಇಟ್ಟಿರುವ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆಯ ಕಿಟಕಿ ಬಾಗಿಲುಗಳ ಮೇಲೆ ನೇತು ಹಾಕಿದರೆ ಸಾಕು ಹಲ್ಲಿಗಳು ಮನೆಯೊಳಗೆ ಬರುವುದಿಲ್ಲ. ಏಕೆಂದರೆ ಹಲ್ಲಿಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯ ವಾಸನೆಯನ್ನು ಇಷ್ಟಪಡುವುದಿಲ್ಲ.

ನಾಫ್ತಲೀನ್ ಗುಳಿಗೆ: ಫೀನೈಲ್ ಗುಳಿಗೆ ಎಂದು ಕರೆಯಲ್ಪಡುವ ನಾಫ್ತಲೀನ್ ಚೆಂಡುಗಳನ್ನು ಸಾಮಾನ್ಯವಾಗಿ ಸಣ್ಣ ಕೀಟಗಳನ್ನು ಮನೆಯಿಂದ ದೂರವಿರಿಸಲು ಬಳಸಲಾಗುತ್ತದೆ. ಹಲ್ಲಿಗಳು ಸಹ ಈ ಡಾಂಬರ್​​ ಗುಳಿಗೆಗಳಿದ್ದಲ್ಲಿ ಬರುವುದಿಲ್ಲ.

ಇದನ್ನು ಓದಿ:ಮಕ್ಕಳನ್ನು ಸಮಾಧಾನಪಡಿಸಲು ಮೊಬೈಲ್​ ನೀಡುತ್ತಿದ್ದೀರಾ? ಕಾದಿದೆ ಅಪಾಯ! - Digital Emotion Regulation

ETV Bharat Logo

Copyright © 2025 Ushodaya Enterprises Pvt. Ltd., All Rights Reserved.