ETV Bharat / health

ನಿಮ್ಮ ಮನೆಯ ಫ್ರಿಡ್ಜ್​​​ನಿಂದ ಕೆಟ್ಟ ವಾಸನೆ ಬರುತ್ತಿದೆಯೇ?: ವಾಸನೆ ಹೋಗಲಾಡಿಸಲು ಈ ಸಿಂಪಲ್ ಟಿಪ್ಸ್ ಪಾಲಿಸಿ! - Tips for Cleaning Refrigerator - TIPS FOR CLEANING REFRIGERATOR

How to Clean Refrigerator At Home: ನೀವು ಬಾಗಿಲು ತೆರೆದಾಗ ಫ್ರಿಡ್ಜ್ ಕೆಟ್ಟ ವಾಸನೆ ಬರುತ್ತಿದೆಯೇ? ಆ ವಾಸನೆ ಹೋಗಲಾಡಿಸಲು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಪಾಲಿಸಿ ಫ್ರಿಡ್ಜ್ ಕ್ಲೀನ್ ಮಾಡಿದರೆ ಸಾಕು ಯಾವಾಗಲೂ ಫ್ರೆಶ್ ಆಗಿರುತ್ತದೆ. ಜೊತೆಗೆ ಹೊಸದರಂತೆ ಹೊಳೆಯುತ್ತದೆ. ಅಷ್ಟಕ್ಕೂ ನೀವು ಮಾಡಬೇಕಿರುವುದು ಇಷ್ಟೇ!

TIPS FOR CLEANING REFRIGERATOR
ಫ್ರಿಡ್ಜ್ ವಾಸನೆ ತಡೆಗಟ್ಟಲು ಸಿಂಪಲ್ ಟಿಪ್ಸ್ (ETV Bharat)
author img

By ETV Bharat Karnataka Team

Published : Jul 8, 2024, 8:54 PM IST

ರೆಫ್ರಿಜರೇಟರ್ ಅಥವಾ ಸಾಧಾರಣ ಭಾಷೆಯಲ್ಲಿ ತಂಪಾದ ಪೆಟ್ಟಿಗೆ ಇನ್ನೂ ಲೋಕಲ್ ಭಾಷೆಯಲ್ಲಿ ತಂಗಳನ್ನದ ಪೆಟ್ಟಿಗೆ ಎಂದು ಕರೆಸಿಕೊಳ್ಳುವ ಆಳೆತ್ತರದ ಡಬ್ಬಿ ಈಗಿನ ಕಾಲದಲ್ಲಂತೂ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ತರಕಾರಿಗಳು, ಹಣ್ಣುಗಳು ಮತ್ತು ಆಹಾರವನ್ನು ಸಂಗ್ರಹಿಸಲು ಮತ್ತು ತಾಜಾವಾಗಿಡಲು ಫ್ರಿಡ್ಜ್ ಅನ್ನು ಬಳಸಲಾಗುತ್ತದೆ.

ಒಮ್ಮೆ ಬಂಡವಾಳ ಹಾಕಿ ಮನೆಗೆ ತಂದರೆ ನಮ್ಮ ಎಲ್ಲ ಆಹಾರ ಪದಾರ್ಥಗಳ ಜವಾಬ್ದಾರಿಯನ್ನು ರೆಫ್ರಿಜರೇಟರ್ ಸರಾಗವಾಗಿ ವಹಿಸಿಕೊಳ್ಳುತ್ತದೆ. ಕೇವಲ ಕೆಲವೊಂದು ಆಂತರಿಕ ಸಮಸ್ಯೆಗಳಿಂದ ಅಥವಾ ವಿದ್ಯುತ್ತಿನ ಅಭಾವದಿಂದ ನಾವು ಇಟ್ಟಂತಹ ಆಹಾರ ಪದಾರ್ಥಗಳು ಹಾಳಾಗಿ ವಾಸನೆ ಬೀರಲು ಪ್ರಾರಂಭ ಮಾಡುತ್ತವೆಯೇ ಹೊರತು ಇತರ ಸಮಯದಲ್ಲಿ ಫ್ರಿಡ್ಜ್‌ನ ಕಾರ್ಯಕ್ಷಮತೆಗೆ ಸಾಟಿಯೇ ಇಲ್ಲ. ಹಾಳಾದ ಆಹಾರಗಳು ತಮ್ಮ ಕೆಟ್ಟ ವಾಸನೆಯನ್ನು ಪಕ್ಕದಲ್ಲಿರುವ ಇತರ ಆಹಾರಗಳಿಗೂ ಹಬ್ಬಿಸುತ್ತವೆ. ಜೊತೆಗೆ ಫ್ರಿಡ್ಜ್​​ನ ಎಲ್ಲ ಭಾಗಗಳಲ್ಲಿಯೂ ದುರ್ವಾಸನೆ ಉಂಟು ಮಾಡುತ್ತವೆ. ಆದ್ದರಿಂದ ಮೊದಲು ಅಂತಹ ಆಹಾರಗಳನ್ನು ತೆಗೆದು ಬೇರ್ಪಡಿಸುವುದರ ಜೊತೆಗೆ ಫ್ರಿಡ್ಜ್ ಸ್ವಚ್ಛ ಮಾಡುವ ಕಡೆಗೆ ಕೂಡ ಗಮನ ಹರಿಸಬೇಕು. ಎಷ್ಟೋ ಜನ ಅದರ ಶುಚಿತ್ವದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವರು ಸ್ವಚ್ಛತೆ ಮಾಡಿದರೂ ಮೇಲ್ನೋಟಕ್ಕೆ ಮಾತ್ರ ಮಾಡುತ್ತಾರೆ. ಹಾಗಾಗಿ ಅನೇಕರ ಮನೆಗಳಲ್ಲಿನ ಫ್ರಿಡ್ಜ್‌ಗಳು ದುರ್ವಾಸನೆ ಸೂಸುತ್ತಿವೆ. ಆದರೆ, ಫ್ರಿಡ್ಜ್ ಒಳಗೆ ಬ್ಯಾಕ್ಟೀರಿಯಾಗಳು ಶೇಖರಣೆಯಾಗುತ್ತಿರುವುದೇ ಈ ದುರ್ವಾಸನೆಗೆ ಕಾರಣ ಎನ್ನುತ್ತಾರೆ ತಜ್ಞರು. ಫ್ರಿಡ್ಜ್​​ನಿಂದ ಕೆಟ್ಟ ವಾಸನೆ ಬರದಂತೆ ಕ್ಲೀನಿಂಗ್ ಟಿಪ್ಸ್ ನೀಡಲಾಗಿದೆ. ಅದನ್ನು ಈಗ ನೋಡೋಣ.

ಸ್ವಚ್ಛಗೊಳಿಸುವ ಮೊದಲು ಫ್ರಿಡ್ಜ್ ಅನ್ನು ಆಫ್​ ಮಾಡಿ. ನಂತರ ಸ್ವಚ್ಛಗೊಳಿಸಲು ಪ್ರಾರಂಭಿಸಿ. ಮೊದಲು ಫ್ರಿಡ್ಜ್‌ನಿಂದ ಎಲ್ಲ ಪದಾರ್ಥಗಳನ್ನು ತೆಗೆದುಹಾಕಿ ಮತ್ತು ಪಕ್ಕಕ್ಕೆ ಇರಿಸಿ. ನಂತರ ಎಲ್ಲ ಕಪಾಟನ್ನು ತೆಗೆದುಹಾಕಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ. ನಂತರ ಬೆಚ್ಚಗಿನ ನೀರಿನಿಂದ ಕಪಾಟನ್ನು ತೊಳೆಯಿರಿ. ನಂತರ ಒಣ ಬಟ್ಟೆಯಿಂದ ಕಪಾಟನ್ನು ಸ್ವಚ್ಛವಾಗಿ ಒರೆಸಿ. ಹೀಗೆ ಮಾಡುವುದರಿಂದ ಕಪಾಟಿನಲ್ಲಿರುವ ಎಲ್ಲ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಅಡುಗೆ ಸೋಡಾ: ಈಗ ಒಂದು ಬಟ್ಟಲಿನಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚ ಅಡುಗೆ ಸೋಡಾವನ್ನು ಸೇರಿಸಿ. ನಂತರ ಒಣ ಬಟ್ಟೆಯನ್ನು ಈ ನೀರಿನಲ್ಲಿ ಅದ್ದಿ ಫ್ರಿಡ್ಜ್‌ನ ಒಳ ಹೊರಭಾಗವನ್ನು ಸ್ವಚ್ಛಗೊಳಿಸಿ. ನಂತರ ಸಂಪೂರ್ಣ ಫ್ರಿಡ್ಜ್ ಅನ್ನು ಒಣ ಬಟ್ಟೆಯಿಂದ ಒರೆಸಿ. ಹೀಗೆ ಮಾಡುವುದರಿಂದ ಎಲ್ಲ ದುರ್ವಾಸನೆ ದೂರವಾಗುತ್ತದೆ.

2019 ರಲ್ಲಿ 'ಜರ್ನಲ್ ಆಫ್ ಫುಡ್ ಸೇಫ್ಟಿ' ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಫ್ರಿಡ್ಜ್​​​​ಗಳಲ್ಲಿನ ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ವಾಸನೆಯನ್ನು ಕಡಿಮೆ ಮಾಡಲು ಅಡಿಗೆ ಸೋಡಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಸಂಶೋಧನೆಯಲ್ಲಿ, ಟೆಕ್ಸಾಸ್ A&M ವಿಶ್ವವಿದ್ಯಾಲಯದ ಆಹಾರ ಸುರಕ್ಷತಾ ತಜ್ಞ, ಮೈಕ್ರೋ ಬಯಾಲಜಿಸ್ಟ್ ಡಾ.ಜಾನ್ ಸನ್ ಭಾಗವಹಿಸಿದ್ದರು.

ಬಿಸಿ ನೀರಿನಲ್ಲಿ ನಿಂಬೆ ರಸ: ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವು ತಣ್ಣಗಾದ ನಂತರ, ಅದನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ ಮತ್ತು ಫ್ರಿಡ್ಜ್ ಒಳಗೆ ಸಿಂಪಡಿಸಿ. ನಂತರ ಒಣ ಬಟ್ಟೆಯಿಂದ ಎಲ್ಲವನ್ನೂ ಒರೆಸಿ. ಅರ್ಧ ಘಂಟೆಯವರೆಗೆ ಫ್ರಿಡ್ಜ್ ಬಾಗಿಲು ತೆರೆದಿಡಿ ಮತ್ತು ಅದರಲ್ಲಿ ಎಲ್ಲಾ ವಸ್ತುಗಳನ್ನು ಪ್ಯಾಕ್ ಮಾಡಿ. ತಿಂಗಳಿಗೆ ಎರಡು ಬಾರಿ ಹೀಗೆ ಫ್ರಿಡ್ಜ್ ಕ್ಲೀನ್ ಮಾಡುವುದರಿಂದ ಕೆಟ್ಟ ವಾಸನೆಯೆಲ್ಲ ಮಾಯವಾಗುತ್ತದೆ ಎನ್ನುತ್ತಾರೆ ತಜ್ಞರು. ಇದರ ಹೊರತಾಗಿ ಕೆಲವು ಸಣ್ಣ- ಪುಟ್ಟ ಸ್ವಚ್ಛತಾ ಕ್ರಮಗಳನ್ನು ಮಾಡುವುದರಿಂದ ವಾಸನೆ ನಿವಾರಿಸಬಹುದು.

  • ಹಾಳಾದ ಹಣ್ಣುಗಳು, ತರಕಾರಿಗಳು ಮತ್ತು ಇತರ ವಸ್ತುಗಳನ್ನು ಫ್ರಿಡ್ಜ್​​ ತೆಗೆದುಹಾಕಿ.
  • ಬಿಸಿ ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ. ಸಂಪೂರ್ಣವಾಗಿ ತಣ್ಣಗಾದ ನಂತರ ಇಡಿ.
  • ಎಲ್ಲಾ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟುಕೊಳ್ಳಬೇಡಿ, ಸ್ವಲ್ಪ ಜಾಗ ಉಳಿಸಿ.
  • ಈ ಸಲಹೆಗಳನ್ನು ಅನುಸರಿಸುವ ಮೂಲಕ ಫ್ರಿಡ್ಜ್​ನಿಂದ ಕೆಟ್ಟ ವಾಸನೆ ತಡೆಯಬಹುದ ಎನ್ನುತ್ತಾರೆ ಪರಿಣಿತರು.

ಇದನ್ನೂ ಓದಿ: ಹತ್ತೇ ನಿಮಿಷದಲ್ಲಿ ರೆಡಿ ಈ ರುಚಿ ರಸಂ: ಇದರ ಟೇಸ್ಟ್​​​ ಹೇಗಿದೆ ಅಂದರೆ ಬಾಯಲ್ಲಿ ನೀರೂರದಿದ್ದರೆ ಕೇಳಿ! - Hasi Saru Recipe

ETV Bharat Logo

Copyright © 2025 Ushodaya Enterprises Pvt. Ltd., All Rights Reserved.