ಹೈದರಾಬಾದ್: ಇತ್ತೀಚಿನ ದಿನದಲ್ಲಿ ಸ್ಥೂಲಕಾಯ ಎಂಬುದು ಸಾಮಾನ್ಯವಾಗಿದೆ. ತೂಕ ಇಳಿಸಲು ಜನರು ಇನ್ನಿಲ್ಲದ ಕಸರತ್ತನ್ನು ನಡೆಸುತ್ತಾರೆ. ಇದಕ್ಕಾಗಿ ಬೆಳಗ್ಗೆ ಸಂಜೆ ವಾಕಿಂಗ್ ಅಭ್ಯಾಸ ರೂಢಿಸಿಕೊಳ್ಳುತ್ತಾರೆ. ಅನೇಕ ಜನರಿಗೆ ತೂಕ ಕಳೆದುಕೊಳ್ಳಲು ವಾಕಿಂಗ್ ಸಹಾಯ ಮಾಡಿದೆ ಎಂದು ಕೇಳಿರುತ್ತೇವೆ. ಆದರೆ, ಯಾರಾದರೂ ಎಷ್ಟು ದೂರದ ವಾಕಿಂಗ್ ಮಾಡಿದರೆ ತೂಕ ಇಳಿಕೆಗೆ ಸಹಕಾರಿ ಎಂದು ತಿಳಿಸಿದ್ದಾರೆಯೇ? ಇಲ್ಲ.. ಎನ್ನುವುದಾದರೆ ಅದಕ್ಕೆ ಇಲ್ಲಿದೆ ಉತ್ತರ.
ವೈಜ್ಞಾನಿಕ ಅಂಶಗಳು: ದೇಹದ ತೂಕ ಕಳೆದುಕೊಳ್ಳುವುದು ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ. ಅದರಂತೆ ನಿಮ್ಮ ತೂಕಕ್ಕೆ ಅನುಗುಣವಾಗಿ ಎಷ್ಟು ಕಿ.ಮೀ ನಡೆಯಬೇಕು ಎಂದು ನಿರ್ಧರಿಸಬೇಕು.
ದೇಹದ ತೂಕದ ಜೊತೆಗೆ ನಡಿಗೆಯ ವೇಗ ಕೂಡ ಅತ್ಯವಶ್ಯ. ಸಾಮಾನ್ಯ ನಡಿಗೆ ಬೇಕಾ ಅಥವಾ ವೇಗದ ನಡಿಗೆ ಬೇಕಾ ಎಂಬುದನ್ನು ನಾವು ತಿಳಿದುಕೊಂಡಿರಬೇಕು. ಏಕೆಂದರೆ ಇದು ತೂಕದ ಮೇಲೆ ಪರಿಣಾಮ ಬೀರುತ್ತದೆ.
ಮೂರನೆಯದು ಚಯಾಪಚಯ ಸಾಮರ್ಥ್ಯ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ವೈದ್ಯಕೀಯ ತಜ್ಞರು ಹೇಳುವಂತೆ ಒಬ್ಬ ವ್ಯಕ್ತಿ ಒಂದು ಕೆಜಿ ತೂಕ ಕಳೆದುಕೊಳ್ಳಲು 7 ಸಾವಿರ ಕ್ಯಾಲೋರಿ ಕರಗಿಸಬೇಕು.
ನಡಿಗೆ ಹಿಂದಿನ ಗಣಿತ: ತಜ್ಞರ ಪ್ರಕಾರ, ಸಾಮಾನ್ಯ ವ್ಯಕ್ತಿ ಒಂದು ಕಿ.ಮೀ ವಾಕ್ ಮಾಡಿದಾಗ 0.4 ರಿಂದ 0.5 ಕ್ಯಾಲೋರಿ ಕರಗುತ್ತದೆ. ಇದೇ ಆಧಾರದ ಮೇಲೆ 70 ಕೆಜಿ ತೂಕದ ವ್ಯಕ್ತಿ 28 ರಿಂದ 35 ಕ್ಯಾಲೋರಿ ತೂಕವನ್ನು ಒಂದು ಕಿ.ಮೀ ವಾಕಿಂಗ್ನಲ್ಲಿ ಕಳೆದುಕೊಳ್ಳಬಹುದು. ಈ ಲೆಕ್ಕಾಚಾರದಂತೆ ವ್ಯಕ್ತಿ ದೇಹದ 1 ಕೆಜಿ ಕೊಬ್ಬನ್ನು ಕರಗಿಸಲು 7000 ಕ್ಯಾಲೋರಿ ನಷ್ಟ ಮಾಡಬೇಕು. ಅಂದರೆ, ಒಂದು ಕೆಜಿ ಕೊಬ್ಬು ಕರಗಿಸಲು ಕನಿಷ್ಠ 200 ರಿಂದ 250 ಕಿ.ಮೀ ಸಾಗಬೇಕಾಗುತ್ತದೆ.
ಆದರೆ, ಈ ವಿಧಾನವೂ ಆಹಾರ ಮತ್ತು ಇತರ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೆಯೇ 200 ರಿಂದ 250 ಕಿಲೋಮೀಟರ್ ದೂರ ನಡೆದಾಗ ಮಾತ್ರ ಇದು ಕಾರ್ಯನಿರ್ವಹಿಸುತ್ತದೆ. ಇಷ್ಟು ಕಿಲೋಮೀಟರ್ ಎಂದರೆ ಸುಮಾರು 2,50,000 ರಿಂದ 3,12,500 ಅಡಿಗಳ ಉದ್ದ ಆಗುತ್ತದೆ. ಇದನ್ನು ಗಂಟೆಗಳಲ್ಲಿ ಲೆಕ್ಕ ಹಾಕಿದರೆ, ಒಬ್ಬ ವ್ಯಕ್ತಿಯು ಗಂಟೆಗೆ ಸುಮಾರು 5 ಕಿಲೋಮೀಟರ್ ನಡೆಯಬೇಕು. 40 ರಿಂದ 50 ಗಂಟೆಗಳ ಕಾಲ ನಿರಂತರವಾಗಿ ನಡೆಯಬೇಕು, ಆಗ ಮಾತ್ರ ಒಂದು ಕಿಲೋಗ್ರಾಂ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.
ತೂಕ ಕಳೆದುಕೊಳ್ಳಲು ಸಹಾಯ ಮಾಡುವ ಇತರ ಅಂಶಗಳು;
ಸಾಮಾನ್ಯ ವ್ಯಕ್ತಿ ದಿನಕ್ಕೆ 200 ರಿಂದ 250 ಕಿ.ಮೀ ವಾಕ್ ಮಾಡುವುದು ಅಸಾಧ್ಯ. ಈ ಹಿನ್ನೆಲೆ ತೂಕ ನಷ್ಟಕ್ಕೆ ಸಹಾಯ ಮಾಡುವ ಮತ್ತಿತರ ಅಂಶವನ್ನು ತಿಳಿದು, ಅಳವಡಿಸಿಕೊಳ್ಳುವುದು ಅವಶ್ಯ. ಅಂದೆಂದರೆ..
- ನಿಯಮಿತವಾಗಿ ವಾಕಿಂಗ್ ಮಾಡುವುದು
- ಕಡಿಮೆ ಕ್ಯಾಲೋರಿ ಆಹಾರ ಸೇವನೆ.
- ವ್ಯಾಯಾಮ ಮಾಡುವುದನ್ನು ತಪ್ಪಿಸದಿರುವುದು
- ದೇಹಕ್ಕೆ ಅಗತ್ಯವಾದ ನೀರನ್ನು ಸೇವನೆ ಮಾಡುತ್ತಾ ಇರಬೇಕು.
- ಲಿಫ್ಟ್ ಬದಲಾಗಿ ಮೆಟ್ಟಿಲು ಬಳಕೆ ಮಾಡುವುದು ಅತ್ಯಂತ ಕ್ಷೇಮಕರ