ETV Bharat / health

ಮನೆ ಮದ್ದಿನಲ್ಲಿ ಯಕೃತ್​​ ಶುದ್ಧೀಕರಣ ಅವೈಜ್ಞಾನಿಕ: IMA - Liver Detoxification

author img

By ETV Bharat Karnataka Team

Published : Aug 8, 2024, 3:03 PM IST

ಯಕೃತ್ತಿನ​ ಆರೋಗ್ಯವನ್ನು ಜೀವನಶೈಲಿಯ ಮಾರ್ಪಾಡುಗಳ ಮೂಲಕ ಕಾಪಾಡಬಹುದೇ ಹೊರತು ಇದಕ್ಕೆ ಬೇರಾವುದೇ ಶಾರ್ಟ್​ಕಟ್‌ ಇಲ್ಲ​ ಎಂದು ಭಾರತೀಯ ವೈದ್ಯಕೀಯ ಸಂಘದ ತಜ್ಞರು ಎಚ್ಚರಿಸಿದ್ದಾರೆ.

Homemade recipes claimed on social media to be liver detoxifiers have no scientific validity
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)

ನವದೆಹಲಿ: ಯಕೃತ್​ ಆರೋಗ್ಯ ಕಾಪಾಡಿಕೊಳ್ಳಲು ಇಂದು ಅನೇಕರು ಮನೆಯಲ್ಲೇ ಸಾಮಾಜಿಕ ಜಾಲತಾಣಗಳನ್ನು ಅನುಸರಿಸಿ ಡಿಟಾಕ್ಸಿಫೈಯರ್ಸ್ (ಕೆಟ್ಟ ಅಂಶಗಳನ್ನು ತೊಡೆದು ಹಾಕುವುದು)ಗೆ ಮುಂದಾಗುತ್ತಾರೆ. ಆದರೆ, ಈ ರೀತಿಯ ಕ್ರಮಗಳಿಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಎಚ್ಚರವಹಿಸಬೇಕು ಎಂದು ಕೇರಳ ರಾಜ್ಯ ಐಎಂಎ ಸಂಶೋಧನಾ ಘಟಕದ ಮುಖ್ಯಸ್ಥ ಡಾ.ರಾಜೀವ್​ ಜಯದೇವನ್​ ತಿಳಿಸಿದ್ದಾರೆ.

ಕೊಚ್ಚಿಯಲ್ಲಿ ನಡೆಯುತ್ತಿರುವ ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್‌ನ 32ನೇ ವಾರ್ಷಿಕ ವೈಜ್ಞಾನಿಕ ಸಭೆಯಲ್ಲಿ ಮಾತನಾಡಿದ ಅವರು, ಯಕೃತ್​ ರಕ್ಷಣೆಗೆ ಯಾವುದೇ ಶಾರ್ಟ್​ಕಟ್​ ಇಲ್ಲ. ಯಕೃತ್​ ದೇಹದಲ್ಲಿ ಉತ್ಪನ್ನವಾಗುವ ತ್ಯಾಜ್ಯ ಹೊರಹಾಕಲು ಸ್ವಯಂ ಸಾಮರ್ಥ್ಯ ಹೊಂದಿದೆ ಎಂದರು.

ಅನೇಕರು ಇಂದು ಆಧುನಿಕ ಸಮಯದಲ್ಲಿ ಡಿಟಾಕ್ಸ್​​ ಎಂಬ ಪದ ಬಳಸುತ್ತಿದ್ದಾರೆ. ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಶುದ್ಧಗೊಳಿಸುವ ಪ್ರಕ್ರಿಯೆಗಳಿಗೆ ಡಿಟಾಕ್ಸ್​ ಎಂಬ ಪದವನ್ನು ಈ ಹಿಂದೆ ಬಳಸುತ್ತಿದ್ದರು. ಆದರೆ, ಈ ರೀತಿಯ ಶುದ್ಧತೆಯನ್ನು ಶಾರ್ಟ್​ಕಟ್​​ಗಳ ಮೂಲಕ ಯಕೃತ್​ನಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಯಕೃತ್​ ಸ್ವಯಂ ಶುದ್ಧೀಕರಣ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಯಕೃತ್​ ಆರೋಗ್ಯದಲ್ಲಿ ತೆಗೆದುಕೊಳ್ಳಬಹುದಾದ ಪ್ರಮುಖ ಮಾರ್ಗವೆಂದರೆ ಆಲ್ಕೋಹಾಲ್​ ಸೇರಿದಂತೆ ಅದಕ್ಕೆ ಹಾನಿಯಾಗುವಂತಹ ಪದಾರ್ಥಗಳಿಂದ ದೂರ ಇರುವುದು ಎಂದರು.

ಇದೇ ವೇಳೆ, ಸಾಮಾಜಿಕ ಜಾಲತಾಣಗಳ ಸ್ವಯಂ ಘೋಷಿತ ಆರೋಗ್ಯ ತಜ್ಞರ ಕುರಿತು ಎಚ್ಚರಿಸಿದರು. ವಾಣಿಜ್ಯ ಹಿತಾಸಕ್ತಿಯೊಂದಿಗೆ ಜ್ಞಾನದ ಕೊರತೆ ಅವರಲ್ಲಿದೆ ಎಂಬುದನ್ನು ಮರೆಯಬೇಡಿ ಎಂದು ತಿಳಿಸಿದರು.

ಯಕೃತ್ ದೇಹದ ಅತೀ ದೊಡ್ಡ ಅಂಗ. ಇದು ರಾಸಾಯನಶಾಸ್ತ್ರದ ಪ್ರಯೋಗಾಲಯದಂತೆ ಕಾರ್ಯ ನಿರ್ವಹಿಸುತ್ತದೆ. ಯಕೃತ್ ಹೊಟ್ಟೆ ಪ್ರವೇಶಿಸುವ ಪ್ರಯೋಜನಕಾರಿ ಮತ್ತು ಹಾನಿಕಾರಕ ವಸ್ತುಗಳನ್ನು ಪರಿಣಾಮಕಾರಿಯಾಗಿ ವಿಂಗಡಿಸುವುದು. ಆದಾಗ್ಯೂ, ಆರಂಭಿಕ ಹಂತದ ಯಕೃತ್ತಿನ ರೋಗವು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ.

ಜೀವನಶೈಲಿಯಲ್ಲಿ ಮಾರ್ಪಾಡು ಅಗತ್ಯ: ಜೀವನಶೈಲಿ ಆಧರಿತದ ರೋಗಗಳ ಹೆಚ್ಚಳವೂ ಫ್ಯಾಟಿ ಲಿವರ್​, ಆಲ್ಕೋಹಾಲೇತರ ಫ್ಯಾಟಿ ಲಿವರ್​ ಮತ್ತು ಆಲ್ಕೋಹಾಲೇತರ ಸ್ಟೆಟೊಹೆಪಟೈಟಿಸ್​​ನಂತಹ ಸಮಸ್ಯೆಗೆ ಕಾರಣವಾಗುತ್ತಿದ್ದು, ಇದು ಭಾರತದಲ್ಲಿ ತಡೆಯಬಹುದಾದ ರೋಗಗಳು.

ಕಳೆದ ತಿಂಗಳು ಯಕೃತ್​ ಸಮಸ್ಯೆ ಕುರಿತು ಮಾತನಾಡಿದ್ದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್​​, ಭಾರತದಲ್ಲಿ ಪ್ರತಿ ಮೂವರ ಪೈಕಿ ಒಬ್ಬರಲ್ಲಿ ಈ ಫ್ಯಾಟಿ ಲಿವರ್​ ಸಮಸ್ಯೆ ಇದೆ ಎಂದು ಎಚ್ಚರಿಸಿದ್ದರು.

ಈ ನಡುವೆ ಆರೋಗ್ಯ ತಜ್ಞರು ಕೂಡ ಅನಾರೋಗ್ಯಕರ ಜೀವನಶೈಲಿ ಮತ್ತು ಆಲ್ಕೋಹಾಲ್​ ಸೇವನೆಯಿಂದ ಹೆಚ್ಚುತ್ತಿರುವ ಫ್ಯಾಟಿ ಲಿವರ್​ ಸಮಸ್ಯೆ ಬಗ್ಗೆ ಎಚ್ಚರಿಸಿದ್ದಾರೆ. ಜೊತೆಗೆ, ಜೀವನಶೈಲಿಯಲ್ಲಿ ಮಾರ್ಪಾಡು ಮಾಡಿಕೊಳ್ಳುವ ಮೂಲಕ ಇದನ್ನು ತಡೆಯಬೇಕೇ ಹೊರತು ಶಾರ್ಟ್​ಕಟ್​ಗಳಿಂದ ಅಲ್ಲ ಎಂದಿದ್ದಾರೆ. ಯಕೃತ್​ ಆರೋಗ್ಯ ಕಾಪಾಡಲು ಆಲ್ಕೋಹಾಲ್​ ತ್ಯಜಿಸುವಿಕೆ, ಆರೋಗ್ಯಯುತ ತೂಕ ನಿರ್ವಹಣೆ, ಮಧುಮೇಹ ನಿಯಂತ್ರಣ ನಿಯಮಿತ ದೈಹಿಕ ಚಟುವಟಿಕೆ ಮತ್ತು ಸಮತೋಲಿತ ಡಯಟ್​ ಅಳವಡಿಕೆ ಅವಶ್ಯ ಎಂದು ಅವರು ಸಲಹೆ ನೀಡಿದ್ದಾರೆ.(ಐಎಎನ್​ಎಸ್​)

ಇದನ್ನೂ ಓದಿ: ಯಕೃತ್​ ಆರೋಗ್ಯ ಕಾಪಾಡುವುದು ಅತ್ಯವಶ್ಯ; ಕಾರಣ ಇದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.