ETV Bharat / health

ಹೋಳಿ ಹಬ್ಬದಲ್ಲಿ ಯಾವ ಬಣ್ಣ ಬಳಸುತ್ತಿದ್ದೀರಿ: ಇವುಗಳನ್ನು ಉಪಯೋಗಿಸಿದ್ರೆ ನಿಮ್ಮ ಕಥೆ ಅಷ್ಟೇ! - Holi Colours Harmful Side Effects - HOLI COLOURS HARMFUL SIDE EFFECTS

ಹಿಂದೆ ಹೋಳಿ ಹಬ್ಬಕ್ಕೆ ಹೂವಿನಿಂದ ಸ್ಮೂತ್​ ಆಗಿ ಬಣ್ಣಗಳನ್ನು ತಯಾರಿಸುತ್ತಿದ್ದರು. ಬಣ್ಣ ಬಣ್ಣದ ರಂಗೋಲಿಗಳು ಹಾಕಿ ನಂತರ ಬಣ್ಣಗಳನ್ನು ನೀರಿನಲ್ಲಿ ಬೆರೆಸಿ ಎರಚಲಾಗುತ್ತಿತ್ತು. ಆದರೆ ಕ್ರಮೇಣ ಈ ಪರಿಸ್ಥಿತಿ ಬದಲಾಯಿತು. ವಿಷಕಾರಿ ರಾಸಾಯನಿಕಗಳಿಂದ ತಯಾರಿಸಿದ ಬಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನೀವು ಈ ಬಣ್ಣಗಳನ್ನು ಬಳಸುತ್ತಿದ್ದೀರಾ? ಆ ಬಣ್ಣಗಳಲ್ಲಿ ಯಾವ ರೀತಿಯ ರಾಸಾಯನಿಕಗಳಿವೆ ಎಂಬುದರ ಬಗ್ಗೆ ನಿಮಗೆ ಗೊತ್ತೇ?

HOLI 2024  PROBLEMS WITH HOLI COLOURS  HEALTH PROBLEMS
ಇವುಗಳನ್ನು ಉಪಯೋಗಿಸಿದ್ರೆ ನಿಮ್ಮ ಕಥೆ ಅಷ್ಟೇ
author img

By ETV Bharat Karnataka Team

Published : Mar 23, 2024, 9:27 PM IST

Health Risks of Synthetic Holi Colors : ಹಬ್ಬವು ಸಂತೋಷದಿಂದ ಕೂಡಿರಬೇಕು. ಈ ರೀತಿ ನಡೆಯಬೇಕಂದರೆ ಸಿಂಥೆಟಿಕ್ ಬಣ್ಣಗಳನ್ನು ಬಳಸದಂತೆ ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಈ ಬಣ್ಣಗಳ ತಯಾರಿಕೆಯಲ್ಲಿ ತಾಮ್ರ, ಸಿಲಿಕಾ, ಸೀಸ, ಆರ್ಸೆನಿಕ್ ಮುಂತಾದ ಅನೇಕ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹಾಗೆಯೇ.. ಅಭ್ರಕ, ಗ್ಲಾಸ್ ಗ್ರ್ಯಾನ್ಯೂಲ್ಸ್, ಕಲ್ನಾರಿನಂತಹ ಕೆಲವು ವಸ್ತುಗಳನ್ನು ಸಹ ಬಳಸಲಾಗುತ್ತದೆ. ಹಾಗಾಗಿ ಇವುಗಳನ್ನು ಬಳಸದಂತೆ ಸೂಚಿಸಲಾಗಿದೆ.

ಹಬ್ಬದಲ್ಲಿ ಸಿಂಥೆಟಿಕ್ ಬಣ್ಣಗಳಿಂದಾಗಿ ಚರ್ಮ, ಕಣ್ಣು ಮತ್ತು ಶ್ವಾಸನಾಳವು ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. ನೇತ್ರಶಾಸ್ತ್ರಜ್ಞರಾದ ಡಾ. ಅರೋರಾ ಅವರು ಕಣ್ಣುಗಳ ವಿಷಯದಲ್ಲಿ ವಿಶೇಷ ಕಾಳಜಿಯ ಅಗತ್ಯವಿದೆ ಎಂದು ಸೂಚಿಸುತ್ತಾರೆ. ಏಕೆಂದರೆ.. ಈ ಬಣ್ಣಗಳಿಂದ ಕಣ್ಣಿಗೆ ಹೆಚ್ಚಿನ ನಷ್ಟ ಉಂಟು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವೊಮ್ಮೆ ದೃಷ್ಟಿ ಕಳೆದುಕೊಳ್ಳುವ ಅಪಾಯವೂ ಇದೆ. 2020 ರಲ್ಲಿ ನಡೆಸಿದ "Clinical profile of eye injuries due to Holi colours" ಎಂಬ ಅಧ್ಯಯನದ ಪ್ರಕಾರ.. ಈ ಬಣ್ಣಗಳು ಕಣ್ಣುಗಳಿಗೆ ಪ್ರವೇಶಿಸುವುದರಿಂದ ಕೆಲವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಕಂಡುಬಂದಿದೆ.

  • ಈ ಮುನ್ನೆಚ್ಚರಿಕೆಗಳು ಕಡ್ಡಾಯ
  1. ಸಿಂಥೆಟಿಕ್ ಬಣ್ಣಗಳನ್ನು ಬಳಸಿದರೆ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಡಾ. ಅರೋರಾ ಸೂಚಿಸುತ್ತಾರೆ. ಮುಖದ ಮೇಲೆ ನೇರವಾಗಿ ಬಣ್ಣಗಳನ್ನು ಸಿಂಪಡಿಸಬೇಡಿ. ಇದರಿಂದಾಗಿ ಕಣ್ಣಿಗೆ ಬೀಳುವ ಸಾಧ್ಯತೆ ಇದೆ.
  2. ಬಣ್ಣವು ಕಣ್ಣುಗಳಲ್ಲಿ ಬಿದ್ದರೆ, ಕಣ್ಣುಗಳನ್ನು ಉಜ್ಜಬಾರದು ಅಥವಾ ತಿಕ್ಕಿಕೊಳ್ಳಬಾರದು. ಹಾಗೆ ಮಾಡಿದರೆ ಕಣ್ಣಿನ ಪದರಗಳ ನಡುವೆ ಘರ್ಷಣೆ ಉಂಟಾಗಿ ಕಾರ್ನಿಯಾಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
  3. ಕಣ್ಣುಗಳಲ್ಲಿ ಬಣ್ಣ ಬಿದ್ರೆ ತಕ್ಷಣವೇ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ, ಶುದ್ಧ ನೀರನ್ನು ತೆಗೆದುಕೊಂಡು ನಿಮ್ಮ ಕಣ್ಣುಗಳನ್ನು ಅದರಲ್ಲಿ ಮುಳುಗಿಸಿ.
  4. ಕಣ್ಣಿನಲ್ಲಿ ನೀರು ಎರಚುವುದು, ಕರವಸ್ತ್ರ ಅಥವಾ ಟಿಶ್ಯೂ ಬಳಸಿ ಕಣ್ಣಿನಲ್ಲಿ ಅಂಟಿಕೊಂಡಿರುವ ಬಣ್ಣವನ್ನು ತೆಗೆಯುವುದು ಮಾಡಬೇಡಿ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
  5. ಕಣ್ಣುಗಳನ್ನು ಸ್ವಚ್ಛಗೊಳಿಸಿದರೂ ಸಮಸ್ಯೆ ಹಾಗೇ ಮುಂದುವರಿದ್ರೆ, ತಕ್ಷಣವೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸೂಚನೆಯಿಲ್ಲದೇ ಕಣ್ಣಿನ ಡ್ರಾಪ್​ಗಳನ್ನು ಬಳಸಬೇಡಿ.
  6. ಹೋಳಿ ಬಣ್ಣಗಳಲ್ಲಿ ಇರುವ ರಾಸಾಯನಿಕಗಳು ಕಣ್ಣಿಗೆ ಅಷ್ಟೇ ಅಲ್ಲ ಚರ್ಮದ ಮೇಲೆಯೂ ಪರಿಣಾಮ ಬೀರುತ್ತವೆ. ಅದರಿಂದ ಅಲರ್ಜಿಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ಕಾಂಟ್ಯಾಕ್ಟ್ ಡರ್ಮಟೈಟಿಸ್ ನಂತಹ ಸಿಂಥೆಟಿಕ್ ಬಣ್ಣಗಳ ಬಳಕೆಯಿಂದ.. ವಿವಿಧ ಚರ್ಮದ ಅಲರ್ಜಿಗಳು ಉಂಟಾಗುವ ಸಾಧ್ಯತೆಯಿದೆ ಎಂಬುದು ಅಧ್ಯಯನಗಳ ಪ್ರಕಾರ ತಿಳಿದು ಬಂದಿದೆ.
  7. ಹೋಳಿ ಆಡಿದ ನಂತರ ಚರ್ಮದ ಮೇಲೆ ತುರಿಕೆ, ದದ್ದುಗಳಂತಹ ಲಕ್ಷಣಗಳು ಕಾಣಿಸಿಕೊಂಡರೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಅಗತ್ಯ ಎಂದು ಸೂಚಿಸಲಾಗಿದೆ.
  8. ಸಿಂಥೆಟಿಕ್ ಬಣ್ಣಗಳಿಂದ ಉಸಿರಾಟ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಆರೋಗ್ಯ ತಜ್ಞರು.
  9. ಅಸ್ತಮಾ, ಬ್ರಾಂಕೈಟಿಸ್ ಅಥವಾ COPD ಯಂತಹ ಉಸಿರಾಟದ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರು ಈ ಬಣ್ಣಗಳನ್ನು ತಪ್ಪಿಸಲು ಸಲಹೆ ನೀಡುತ್ತಾರೆ ಆರೋಗ್ಯ ತಜ್ಞರು. ನೀವು ಸಿಂಥೆಟಿಕ ರಾಸಾಯನಿಕಗಳಿಗೆ ಒಡ್ಡಿಕೊಂಡರೆ ಗೊರಕೆ, ಕೆಮ್ಮು ಸೇರಿದಂತೆ ಇತರೆ ಸಮಸ್ಯೆಗಳು ಉಂಟಾಗುತ್ತವೆ ಎಂದು ಎಚ್ಚರಿಸಲಾಗಿದೆ.
  10. ಹಾಗಾಗಿ.. ಸಾಧ್ಯವಾದಷ್ಟು ನೈಸರ್ಗಿಕ ಬಣ್ಣಗಳನ್ನೇ ಬಳಸುವಂತೆ ಆರೋಗ್ಯ ತಜ್ಞರು ಸೂಚಿಸುತ್ತಾರೆ.

ಓದಿ: 'ಹೋಳಿ' ಸಂಭ್ರಮಕ್ಕೆ ಸಿದ್ಧತೆ: ಮನೆಯಲ್ಲೇ 'ನೈಸರ್ಗಿಕ ಗುಲಾಲ್' ತಯಾರಿಸುವುದು ಹೇಗೆ? - HOLI FESTIVAL

ETV Bharat Logo

Copyright © 2024 Ushodaya Enterprises Pvt. Ltd., All Rights Reserved.