ETV Bharat / health

ಬ್ರೈನ್​ ಡೆಡ್​ ಆದ ಮಗನ ಲಿವರ್‌​ ಮುಸ್ಲಿಂ ವ್ಯಕ್ತಿಗೆ ದಾನ; ಮಾನವೀಯತೆ ಮೆರೆದ ಹಿಂದೂ ಕುಟುಂಬ - Liver Donation - LIVER DONATION

ಮಿದುಳು ನಿಷ್ಕ್ರಿಯಗೊಂಡ ಯುವಕನ ಯಕೃತ್​ ಅನ್ನು ಅದೇ ಆಸ್ಪತ್ರೆಯಲ್ಲಿ ಯಕೃತ್​ ಹಾನಿಗೊಳಗಾದ ವ್ಯಕ್ತಿಗೆ ನೀಡಲು ಪೋಷಕರು ಒಪ್ಪಿಗೆ ನೀಡಿದ್ದರು.

Hindu family donated their brain dead sons liver to Muslim man from liver cirrhosis
ಮೊಹಮ್ಮದ್​ ಅಬ್ರರ್ (IANS)
author img

By ETV Bharat Karnataka Team

Published : Aug 13, 2024, 6:34 PM IST

ನವದೆಹಲಿ: ಇಂದು ವಿಶ್ವ ಅಂಗಾಂಗ ದಿನ. ಇದೇ ದಿನ ಹಿಂದೂ ಕುಟುಂಬವೊಂದು ಮುಸ್ಲಿಂ ವ್ಯಕ್ತಿಯ ಬದುಕು ಬೆಳಗಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಲಿವರ್​ ಸಿರೋಸಿಸ್​ನಿಂದ ಬಳಲುತ್ತಿದ್ದ ಮುಸ್ಲಿಂ ವ್ಯಕ್ತಿಯ ಜೀವ ಉಳಿಸಲು ಮಿದುಳು ನಿಷ್ಕ್ರಿಯಗೊಂಡ ತಮ್ಮ ಮಗನ ಯಕೃತ್​ ಅನ್ನು ಹಿಂದೂ ಕುಟುಂಬ ದಾನ ಮಾಡಿದೆ.

ಈ ಕುರಿತು ಮಾತನಾಡಿರುವ ಸರ್​ ಗಂಗಾ ರಾಮ್​ ಆಸ್ಪತ್ರೆಯ ವೈದ್ಯರು, ಮೊಹಮ್ಮದ್​ ಅಬ್ರರ್​ ಎಂಬಾತ​ ಹೆಪಟೈಟಿಸ್​ ಬಿಯಿಂದ ಬಳಲುತ್ತಿದ್ದರು. ಆತನಲ್ಲಿ ಲಿವರ್​ ಸಿರೋಸಿಸ್​ ಅಂತಿಮ ಹಂತದಲ್ಲಿದ್ದು, ಆಂತರಿಕ ಸ್ತ್ರಾವವಾಗುತ್ತಿತ್ತು. ದೈಹಿಕ ಸವಾಲುಗಳ ನಡುವೆ ಅಬ್ರರ್​ ಸಕ್ರಿಯ ಜೀವನ ನಡೆಸುತ್ತಿದ್ದರು. ಜೀವನ ನಿರ್ವಹಣೆಗೆ ಶಾಪ್​ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.

ಈ ಹಿನ್ನೆಲೆಯಲ್ಲಿ ತತ್​​ಕ್ಷಣದ ಯಕೃತ್​ ಕಸಿ ಚಿಕಿತ್ಸೆ ಅವಶ್ಯಕವಾಗಿತ್ತು. ಯಕೃತ್​ ಸಮಸ್ಯೆಯಿಂದಾಗಿ ಶ್ವಾಸಕೋಶ ಮತ್ತು ಹೃದಯ ಸಮಸ್ಯೆ ತಲೆದೋರಿತ್ತು. ಇದಕ್ಕೆ ಸರ್ಜರಿ ಕೂಡ ಬಹಳ ಕ್ಲಿಷ್ಟಕರವಾಗಿತ್ತು. ಪೋಲಿಯೋ ಪೀಡಿತರಾಗಿರುವ ಹಿನ್ನೆಲೆಯಲ್ಲೂ ಶಸ್ತ್ರಚಿಕಿತ್ಸೆ ನಡೆಸಲು ಪ್ರದೇಶ ಕೂಡ ಸೀಮಿತವಾಗಿತ್ತು.

ಇಂತಹ ಪರಿಸ್ಥಿತಿಯಲ್ಲಿ ಇದೇ ಆಸ್ಪತ್ರೆಯಲ್ಲಿ ಮಿದುಳು ನಿಷ್ಕ್ರಿಯಗೊಂಡ ಯುವಕನ ಯಕೃತ್​ ಅನ್ನು ಅಬ್ರರ್​​ಗೆ ನೀಡಲು ಅವರ ಕುಟುಂಬ ನಿರ್ಧರಿಸಿತು. ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಮಾನವೀಯತೆ ತೋರಿಸಿತು. ಇದೀಗ ಶಸ್ತ್ರಚಿಕಿತ್ಸೆ ನಡೆದು 15 ದಿನ ಕಳೆದಿದ್ದು, ಅಬ್ರರ್​​ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ.

ವಿಶ್ವ ಅಂಗಾಂಗ ದಾನ ದಿನ: ಆಗಸ್ಟ್​​ 13ರಂದು ವಿಶ್ವ ಅಂಗಾಂಗ ದಾನ ದಿನವನ್ನಾಗಿ ಆಚರಿಸಲಾಗುವುದು. ಈ ದಿನದ ಮೂಲಕ ಅಂಗಾಂಗ ದಾನದ ಕುರಿತು ಜಾಗೃತಿ ಮತ್ತು ಅವಶ್ಯಕತೆಗಳ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ. ಭಾರತದಲ್ಲಿ ಅಂಗಾಂಗ ದಾನದ ದರ ಸಾಕಷ್ಟು ಕಡಿಮೆ ಇದೆ. ಆದರೆ, ಪಾಶ್ಚಿಮಾತ್ಯ ದೇಶದಲ್ಲಿ ಈ ದರ ಶೇ 70-80ರಷ್ಟಿದೆ. (ಐಎಎನ್​ಎಸ್​)

ಇದನ್ನೂ ಓದಿ: ಜೀವಂತ ಇರುವಾಗಲೂ ಅಂಗಾಂಗ ದಾನ ಮಾಡಬಹುದು: ಡಾ.ಮಯೂರ್ ವಿ.ಪ್ರಭು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.