ETV Bharat / health

ನಿಮ್ಮ ಬಿಪಿ ಹೆಚ್ಚುತ್ತಿದೆಯೇ? ಈ ಆಹಾರ ಪದ್ಧತಿ ನಿಮಗೆ ಬೆಸ್ಟ್‌ - HIGH BLOOD PRESSURE DIET FOODS

High Blood Pressure Diet Foods: ನಿಮ್ಮ ಬಿಪಿ ಹೆಚ್ಚುತ್ತಿದೆಯೇ? ಹಾಗಾದ್ರೆ, ಈ ಆಹಾರ ಕ್ರಮಗಳು ಅಧಿಕ ರಕ್ತದೊತ್ತಡ ಸಮಸ್ಯೆಗೆ ಪರಿಹಾರವಾಗುತ್ತವೆ. ಒತ್ತಡ, ಆತಂಕವೂ ಕಡಿಮೆಯಾಗುತ್ತದೆ ಎಂಬುದು ವೈದ್ಯರ ಸಲಹೆ.

HIGH BP TREATMENT  HIGH BP CONTROL FOODS  HIGH BP CONTROL DIET CHART  HIGH BP CONTROL WITHOUT MEDICINE
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Oct 25, 2024, 3:13 PM IST

High Blood Pressure Diet Foods: ಆಧುನಿಕ ಕಾಲದಲ್ಲಿ ಹೆಚ್ಚಿನವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಬಿಡುವಿಲ್ಲದ ಜೀವನಶೈಲಿ ಮತ್ತು ಒತ್ತಡದ ಕೆಲಸಗಳೇ ಇದಕ್ಕೆ ಕಾರಣವಾಗುತ್ತಿದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಆಹಾರದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕು ಎನ್ನುತ್ತಾರೆ ಪ್ರಮುಖ ಪೌಷ್ಟಿಕತಜ್ಞೆ ಡಾ.ಜಾನಕಿ ಶ್ರೀನಾಥ್.

ಅನಾರೋಗ್ಯಕರ ಜೀವನಶೈಲಿ, ವಂಶವಾಹಿಗಳು, ಕುಟುಂಬದ ಇತಿಹಾಸ, ತೂಕ ಮತ್ತು ದೇಹದಲ್ಲಿನ ಅಧಿಕ ಪ್ರಮಾಣದ ಕೊಬ್ಬಿನಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ ಎಂದು ಡಾ.ಜಾನಕಿ ಶ್ರೀನಾಥ್ ಹೇಳುತ್ತಾರೆ. ಅಲ್ಲದೆ ಸಮಸ್ಯೆಗಳು, ಆತಂಕ ಮತ್ತು ಒತ್ತಡವನ್ನು ನಾವು ಎದುರಿಸುವ ವಿಧಾನವೂ ಅಧಿಕ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಮೊದಲು ನಮ್ಮ ದೇಹದ ಅಗತ್ಯಗಳನ್ನು ಗುರುತಿಸಿ ಮತ್ತು ಸೂಕ್ತ ಪೋಷಕಾಂಶಗಳನ್ನು ತೆಗೆದುಕೊಂಡು ವ್ಯಾಯಾಮ ಮಾಡುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಲು ಅವರು ಸಲಹೆ ನೀಡಿದ್ದಾರೆ.

ಆರೋಗ್ಯವಂತ ಸಾಮಾನ್ಯ ವ್ಯಕ್ತಿ ಪ್ರತಿದಿನ ಒಂದು ಚಮಚ ಉಪ್ಪು ಸೇವಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೆ ಕ್ಯಾಲ್ಸಿಯಂ, ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂನಂತಹ ಇತರ ಖನಿಜಗಳು ದೇಹಕ್ಕೆ ಬೇಕು. ಆಹಾರದಲ್ಲಿ ಉತ್ತಮ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸಲು ವಿಟಮಿನ್ ಇ, ಸಿ, ಸೆಲೆನಿಯಂ ಮತ್ತು ಸತುಗಳಂತಹ ಪೋಷಕಾಂಶಗಳ ಅಗತ್ಯವಿದೆ. ಫೋಲಿಕ್ ಆಮ್ಲ ಮತ್ತು ಫೈಟೊಕೆಮಿಕಲ್ಸ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.

ಇದಕ್ಕಾಗಿ ಸರಿಯಾದ ಆಹಾರ ಪದ್ಧತಿ ಅಳವಡಿಸಿಕೊಳ್ಳಲು ಸೂಚಿಸಲಾಗುತ್ತದೆ. ಬೀಜಗಳು, ಹಸಿರು ಎಲೆಗಳ ತರಕಾರಿಗಳು, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇವಿಸುವಂತೆ ಹೇಳಲಾಗುತ್ತದೆ. ಅಲ್ಲದೆ, ಪ್ರತಿದಿನ ಕನಿಷ್ಠ 30 ಗ್ರಾಂ ಎಣ್ಣೆ ಬೀಜಗಳು ಮತ್ತು ಬೀಜಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಮತ್ತು ದಿನಕ್ಕೆ ನಾಲ್ಕರಿಂದ ಐದು ಚಮಚಕ್ಕಿಂತ ಹೆಚ್ಚು ಎಣ್ಣೆ ಬಳಸಬೇಡಿ. ವಿಶೇಷವಾಗಿ ರೈಸ್​ ಬ್ರಾನ್ (Rice Bran Oil), ಎಳ್ಳು ಮತ್ತು ಸಾಸಿವೆ ಎಣ್ಣೆಗಳನ್ನು ಬಳಸಲು ಸಲಹೆ ನೀಡಲಾಗುತ್ತದೆ. ಬೇಯಿಸದ ಆಹಾರವನ್ನು ಹೆಚ್ಚು ತಿನ್ನಲು ಸೂಚಿಸಲಾಗಿದೆ.

ಸಲಾಡ್, ನಾಟಿಕೋಳಿ, ಮೀನು ತಿನ್ನಬಹುದು ಎನ್ನುತ್ತಾರೆ. ಕ್ಯಾಲ್ಸಿಯಂ ಕೂಡ ಅಧಿಕ ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ ಎಂದು ಹೇಳಲಾಗುತ್ತದೆ. ಇವುಗಳನ್ನು ಸೇವಿಸಿದರೆ ತೂಕ ಕೂಡಾ ಕಡಿಮೆಯಾಗುತ್ತದೆ. ಒತ್ತಡವನ್ನು ನಿಯಂತ್ರಿಸುವುದರ ಜೊತೆಗೆ, ದೈನಂದಿನ ವ್ಯಾಯಾಮ ಮತ್ತು ಸಾಕಷ್ಟು ವಿಶ್ರಾಂತಿ ಕೂಡ ಅಗತ್ಯವಿದೆ. ಈ ಎಲ್ಲ ಅಭ್ಯಾಸಗಳನ್ನು ಅನುಸರಿಸಿದರೆ ಅಧಿಕ ರಕ್ತದೊತ್ತಡದ ಸಮಸ್ಯೆ ಬರದಂತೆ ನೋಡಿಕೊಳ್ಳಬಹುದು ಎಂಬುದು ತಜ್ಞರ ಸಲಹೆ.

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.