Health Benefits of Rice porridge: ಚಳಿಗಾಲದಲ್ಲಿ ಹವಾಮಾನ ಬದಲಾವಣೆಯು ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಶುಷ್ಕತೆಯಿಂದ ತೇವಾಂಶವು ಕಡಿಮೆಯಾಗುತ್ತದೆ. ಕೂದಲು ನಿರ್ಜೀವವಾಗುತ್ತದೆ ಜೊತೆಗೆ ಅತಿಯಾಗಿ ಕೂದಲು ಉದುರುವುದು ಮತ್ತು ತಲೆಹೊಟ್ಟು ಸಮಸ್ಯೆ ಅನೇಕರನ್ನು ಕಾಡುತ್ತದೆ.
ಇದರಿಂದಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಶ್ಯಾಂಪೂ, ಕಂಡೀಷನರ್ಗಳನ್ನು ಹೆಚ್ಚಿನವರು ಬಳಸುತ್ತಾರೆ. ಆದರೆ, ಮನೆಯಲ್ಲಿ ವ್ಯರ್ಥವಾಗುವ ಅನ್ನದ ಗಂಜಿಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಲಭಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಚೈನೀಸ್ ಹಾಗೂ ಕೊರಿಯನ್ ಸೌಂದರ್ಯ ಆರೈಕೆಯಲ್ಲಿ ಅನ್ನದ ಗಂಜಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅನ್ನದ ಗಂಜಿಯನ್ನು ಹೇಗೆ ಬಳಸುವುದು? ಇದರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಕೂದಲಿಗೆ ಹೊಳಪು ಲಭಿಸುತ್ತೆ: ಅನ್ನದ ಗಂಜಿಯಲ್ಲಿ ಇನೋಸಿಟಾಲ್, ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ. ಇದು ಕೂದಲಿನ ಕಿರುಚೀಲಗಳಿಗೆ ಬಲವನ್ನು ನೀಡುತ್ತದೆ. ಜೊತೆಗೆ ಕೂದಲು ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಗಂಜಿಗೆ ಸ್ವಲ್ಪ ನಿಂಬೆರಸ ಸೇರಿಸಿ ಬಟ್ಟಲಿಗೆ ಹಾಕಿ ತಲೆಗೆ ಹಚ್ಚಿದರೆ ಸಾಕು, ಕೂದಲು ಚೆನ್ನಾಗಿ ಹೊಳೆಯುತ್ತವೆ.
ಕೂದಲು ಬಲಗೊಳ್ಳುತ್ತೆ: ಅನ್ನದ ಗಂಜಿಯಲ್ಲಿ ವಿಟಮಿನ್ ಬಿ, ಇ ಮತ್ತು ಸಿ ಜೀವಸತ್ವಗಳು ಸಮೃದ್ಧವಾಗಿವೆ. ಅನ್ನದ ಗಂಜಿಯು ಕೂದಲನ್ನು ಪೋಷಿಸುತ್ತದೆ. ಕೂದಲನ್ನು ಬಲಗೊಳಿಸುವುದರ ಜೊತೆಗೆ ಆರೋಗ್ಯಕ್ಕೆ ಉತ್ತಮವಾಗಿದೆ. ಗಂಜಿಯನ್ನು ಕಂಡೀಷನರ್ ಆಗಿ ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಉದ್ದವಾಗಿಯೂ ಬೆಳೆಯುತ್ತವೆ.
ಕೂದಲಿಗೆ ಹೊಳಪು: ಚಳಿಗಾಲದಲ್ಲಿ ಅನೇಕರು ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಾರೆ. ಸ್ವಲ್ಪ ಬೆಚ್ಚಗಿರುವಾಗ, ಗಂಜಿ ತಲೆಗೆ ಅನ್ವಯಿಸಿ ಮತ್ತು 15 ನಿಮಿಷಗಳ ಕಾಲ ಅದನ್ನು ಬಿಡಿ. ಬಳಿಕ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಕೂದಲು ಮೃದುವಾಗುವುದಲ್ಲದೆ, ಗಂಜಿಯಲ್ಲಿರುವ ನೈಸರ್ಗಿಕ ಪ್ರೊಟೀನ್ ಕೂದಲಿಗೆ ನೈಸರ್ಗಿಕವಾಗಿ ಹೊಳಪು ನೀಡುತ್ತದೆ.
ಗಂಜಿಯಿಂದ ಲಭಿಸುವ ಮತ್ತಷ್ಟು ಪ್ರಯೋಜನಗಳು:
- ಸಾಮಾನ್ಯವಾಗಿ ವಯಸ್ಸಾದಂತೆ ಕೆಲಸ ಮಾಡುವ ಶಕ್ತಿಯು ಕೂಡ ಕಡಿಮೆಯಾಗುತ್ತದೆ. ಸಣ್ಣಪುಟ್ಟ ಕೆಲಸಗಳನ್ನು ಮಾಡಿದರೂ ಸುಸ್ತಾಗುವುದು ಸಾಮಾನ್ಯವಾಗಿದೆ. ನಿಮಗೂ ಹಾಗೇ ಅನಿಸಿದರೆ ಸ್ವಲ್ಪ ಅನ್ನದ ಗಂಜಿ ಕುಡಿಯಿರಿ. ಗಂಜಿ ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ಸಮತೋಲನಗೊಳಿಸುತ್ತದೆ ಹಾಗೂ ನಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ.
- ಕೆಲವರಿಗೆ ಏನು ತಿಂದರೂ ಜೀರ್ಣವಾಗುವುದಿಲ್ಲ. ಈ ಸಮಸ್ಯೆಯಿಂದ ಬಳಲುತ್ತಿರುವ ಜನರು ಪ್ರತಿದಿನ ಬೆಳಗ್ಗೆ ಒಂದು ಸಣ್ಣ ಲೋಟ ಬೆಚ್ಚಗಿನ ಗಂಜಿ ಕುಡಿಯಬೇಕು ಎಂದು ತಜ್ಞರು ಸೂಚಿಸುತ್ತಾರೆ.
- ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಹೊಟ್ಟೆ ನೋವು ಮತ್ತು ಇತರ ಸಮಸ್ಯೆಗಳು ಸಹ ಕಡಿಮೆಯಾಗುತ್ತವೆ.
- ಪ್ರತಿ ಹುಡುಗಿಯೂ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಇವುಗಳಿಂದ ಪರಿಹಾರ ಸಿಗಬೇಕಾದರೆ.. ಆ ಸಮಯದಲ್ಲಿ ಪ್ರತಿದಿನ ಒಂದು ಲೋಟ ಗಂಜಿ ಕುಡಿಯುವುದು ಒಳ್ಳೆಯ ಪರಿಹಾರ. ಅಲ್ಲದೆ ಒತ್ತಡ ಹಾಗೂ ಭಾವನೆಗಳು ನಿಯಂತ್ರಣದಲ್ಲಿರುತ್ತವೆ.
- ಅಕ್ಕಿಯನ್ನು ಬೇಯಿಸಿದ ನೀರಿನಲ್ಲಿ ವಿಟಮಿನ್ ಬಿ ಮತ್ತು ಕಬ್ಬಿಣ, ಸತು ಮತ್ತು ಮೆಗ್ನೀಸಿಯಂನಂತಹ ಖನಿಜಗಳು ಸಮೃದ್ಧವಾಗಿರುತ್ತದೆ. ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಸೋಂಕುಗಳು, ರೋಗಗಳನ್ನು ತಡೆಯಲು ಪೂರಕವಾಗಿದೆ.
- ತೂಕ ಇಳಿಸಿಕೊಳ್ಳಲು ಬಯಸುವವರು ಗಂಜಿ ಕುಡಿದರೆ ಉತ್ತಮ ಫಲಿತಾಂಶವನ್ನು ತ್ವರಿತವಾಗಿ ಕಾಣಬಹುದು. ಇದು ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಹೊಂದಿರುತ್ತದೆ. ಇದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹೊಟ್ಟೆ ತುಂಬಿದಂತಾಗುತ್ತದೆ. ಅತಿಯಾಗಿ ತಿನ್ನುವ ಅಭ್ಯಾಸ ನಿಯಂತ್ರಣವಾಗುತ್ತದೆ. ಇದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಓದುಗರಿಗೆ ಪ್ರಮುಖ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.