ಹೈದರಾಬಾದ್: ಆಹಾರ ಬೇಯಿಸುವ ವಿಚಾರದಲ್ಲಿ ಎರಡು ವಾದಗಳಿವೆ. ಅದರಲ್ಲಿ ಒಂದು ಬೇಯಿಸುವುದು ಉತ್ತಮ ಎಂದರೆ, ಮತ್ತೊಂದು ಇದರಿಂದ ಪೌಷ್ಟಿಕಾಂಶ ನಷ್ಟ ಎಂಬ ಮಾತು. ಆದರೆ, ಆಹಾರವನ್ನು ಬೇಯಿಸಿ ತಿನ್ನುವುದು ಸದಾ ಸುರಕ್ಷಿತ. ಕಾರಣ, ಬಿಸಿ ಮಾಡುವುದರಿಂದ ಆಹಾರ ಸಾಮಗ್ರಿಗಳಲ್ಲಿನ ಪೌಷ್ಟಿಕಾಂಶ ಉಳಿಯುವ ಜೊತೆಗೆ ಸುಲಭವಾಗಿ ಅಡುಗೆ ಮಾಡಬಹುದು.
ಬೇಯಿಸಿದ ಆಹಾರ ಅನೇಕ ಪ್ರಮುಖ ಪೌಷ್ಠಿಕಾಂಶಗಳನ್ನು ಹೊಂದಿರುತ್ತದೆ. ಒಂದು ವೇಳೆ ಹಾನಿಕಾರಕ ಸೂಕ್ಷ್ಮಜೀವಿಗಳು ಇದ್ದರೆ, ಬೇಯಿಸುವುದರಿಂದ ನಾಶವಾಗಿ, ಅದು ಆರೋಗ್ಯಯುತ ಆಹಾರವಾಗಿ ರೂಪುಗೊಳ್ಳುತ್ತದೆ. ದೇಹಕ್ಕೆ ಅಗತ್ಯವಾದ ಪೋಷಕಾಂಶ ಲಭ್ಯವಾಗಿ ಜೀರ್ಣಕ್ರಿಯೆ ಸುಲಭವಾಗುತ್ತದೆ. ಅಡುಗೆಯನ್ನು ಬೇಯಿಸಿ ತಿನ್ನುವುದರಿಂದ ಆಗುವ ಪ್ರಯೋಜನಗಳ ಕುರಿತ ಮಾಹಿತಿ ಇಲ್ಲಿದೆ..
ಜೀರ್ಣಕ್ರಿಯೆ ಸಮಸ್ಯೆಗೆ ಮುಕ್ತಿ: ಸಂಸ್ಕರಿತ ಮತ್ತು ಕರಿದ ಆಹಾರಗಳಿಗಿಂತ ಸುಲಭವಾಗಿ ಬೇಯಿಸಿದ ಆಹಾರ ಬೇಗ ಜೀರ್ಣವಾಗುತ್ತದೆ. ಆದರೆ, ಜೀರ್ಣಕ್ರಿಯೆ ಅಥವಾ ಹೊಟ್ಟೆಯ ಸಮಸ್ಯೆಗಳಿಂದ ಬಳಲುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಬೇಯಿಸುವುದರಿಂದ ಆಹಾರ ಮೃದುವಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ರುಚಿ ಹೆಚ್ಚಳ: ಕಚ್ಚಾ ಆಹಾರಗಳಿಗಿಂತ ಬೇಯಿಸಿದ ಆಹಾರಗಳು ಅದರ ರುಚಿಯ ಸ್ವಾದವನ್ನು ಹೆಚ್ಚಿಸುತ್ತದೆ. ಅದರಲ್ಲಿರುವ ಎಣ್ಣೆ ಮತ್ತು ಕೊಬ್ಬಿನ ಅಂಶಗಳು ಕಡಿಮೆಯಾಗಿ, ಆಹಾರ ಹಗುರವಾಗುತ್ತದೆ. ಸಣ್ಣ ಮಕ್ಕಳು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವ ಜನರಿಗೆ ಬೇಯಿಸಿದ ಆಹಾರಗಳು ಉತ್ತಮ ಆಯ್ಕೆ.
ಪೌಷ್ಟಿಕಾಂಶ ನಷ್ಟ ತಡೆಯುತ್ತದೆ: ಆಹಾರ ಬೇಯಿಸುವುದರಿಂದ ಪೌಷ್ಟಿಕಾಂಶ ನಷ್ಟವಾಗುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ, ಇದು ಪೌಷ್ಟಿಕಾಂಶ ನಷ್ಟವನ್ನು ತಡೆಯುತ್ತದೆ. ನೀರಿನಲ್ಲಿ ಆಹಾರ ಬೇಯಿಸುವುದರಿಂದ ಆಹಾರದಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಸಂಗ್ರಹವಾಗುತ್ತವೆ.
ಶೀಘ್ರದಲ್ಲಿ ಅಡುಗೆ ತಯಾರಿ: ಬೇಯಿಸಿ ಅಡುಗೆ ಮಾಡುವುದರಿಂದ ಶೀಘ್ರ ಆಹಾರ ಸಿದ್ಧಪಡಿಸಬಹುದು. ಅಡುಗೆ ಮಾಡಲು ಬರದೆ ಇರುವವರಿಗೆ ಕೂಡ ಶೀಘ್ರದಲ್ಲಿ ಅಡುಗೆ ಕಲಿಯಲು ಇದು ಸುಲಭ ಮಾರ್ಗವಾಗಿದೆ.
ಅನಾನುಕೂಲಗಳೇನು:
- ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.
- ತರಕಾರಿಗಳನ್ನು ಬೇಯಿಸುವುದರಿಂದ ಅದರಲ್ಲಿನ ನೀರಿನ ಅಂಶ ಕಣ್ಮರೆಯಾಗುತ್ತದೆ
- ಆಹಾರ ಬೇಯಿಸುವುದರಿಂದ ನೀರು ಅದರೊಳಗಿನ ಎಲ್ಲ ಅಣುಗಳನ್ನು ಹೀರಿಕೊಳ್ಳುತ್ತದೆ.
- ಆಹಾರ ಬೇಯಿಸುವುದರಿಂದ ತರಕಾರಿ ತುಂಬಾ ಮೃದುವಾಗುತ್ತದೆ.
ಗಮನಿಸಿ: ಇಲ್ಲಿ ನೀಡಲಾಗಿರುವ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ.
ಇದನ್ನೂ ಓದಿ: ಏನಿದು ಕ್ರ್ಯಾಶ್ ಡಯಟ್, ಸತ್ಯವಾಗ್ಲೂ ಇದರಿಂದ ತೂಕ ಕಡಿಮೆ ಆಗುತ್ತಾ?; ಇದು ನಿಜವಾಗಿಯೂ ಉತ್ತಮ ಆರೋಗ್ಯಕ್ಕೆ ಸಹಕಾರಿಯೇ?