Benefits Of Ghee Coffee: ಬುಲೆಟ್ ಪ್ರೂಫ್ ಕಾಫಿ ಎಂಬುದನ್ನು ಪ್ರಸ್ತುತ ಅನೇಕರು ಬಳಕೆ ಮಾಡುತ್ತಿದ್ದು, ದೊಡ್ಡ ಮಟ್ಟದ ಟ್ರೆಂಡ್ ಆಗಿ ಬದಲಾಗಿದೆ. ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಕೂಡ ಇದನ್ನು ಕುಡಿಯುತ್ತಿದ್ದಾರೆ ಎನ್ನಲಾಗಿದೆ. ಬುಲೆಟ್ ಪ್ರೂಫ್ ಕಾಫಿ ಎಂದರೆ ಕಾಫಿಯೊಂದಿಗೆ ತುಪ್ಪ ಬೆರೆಸಿ ಕುಡಿಯುವುದನ್ನೇ ಈ ಹೆಸರಿನಿಂದ ಕರೆಯಲಾಗುತ್ತಿದೆ. ಹಾಗಾದರೆ ಈ ತುಪ್ಪದ ಕಾಫಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
ತುಪ್ಪದ ಕಾಫಿ ಕುಡಿಯುವ ಪ್ರಯೋಜನಗಳು: ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ - ಕಾಫಿಗೆ ತುಪ್ಪವನ್ನು ಸೇರಿಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಎ ಮತ್ತು ಇ ಹಾಗೂ ಸಮೃದ್ಧವಾದ ಖನಿಜಗಳು ದೊರೆಯುತ್ತವೆ ಎಂದು ತಜ್ಞರು ಹೇಳುತ್ತಾರೆ. ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತವೆ. ಅಷ್ಟೇ ಅಲ್ಲ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ: ತುಪ್ಪದಲ್ಲಿ ಬ್ಯುಟ್ರಿಕ್ ಆಮ್ಲವಿದೆ. ಇದು ಜೀರ್ಣಾಂಗದಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಉಬ್ಬುವುದು ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವಂತೆ ಮಾಡುತ್ತದೆ ಎನ್ನುವುದು ತಜ್ಞರ ಅಭಿಮತವಾಗಿದೆ. 2021 ರಲ್ಲಿ "ನ್ಯೂಟ್ರಿಷನ್ ಮತ್ತು ಮೆಟಾಬಾಲಿಸಮ್" ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತುಪ್ಪದೊಂದಿಗೆ ಕಾಫಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನ ಲೌಬರೋ ವಿಶ್ವವಿದ್ಯಾಲಯದ ಡಾ ಮೈಕೆಲ್ ಗ್ಲೀಸನ್ ಈ ಸಂಶೋಧನೆಯಲ್ಲಿ ಭಾಗವಹಿಸಿ, ಇದರ ಅನುಭವ ಪಡೆದುಕೊಂಡಿದ್ದಾರೆ.
ಮೆದುಳು ಸಕ್ರಿಯತೆ ಹೆಚ್ಚಿಸುತ್ತದೆ: ತುಪ್ಪದಲ್ಲಿರುವ ಸ್ಯಾಚುರೇಟೆಡ್ ಕೊಬ್ಬುಗಳು ಮೆದುಳು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕಾಫಿಗೆ ತುಪ್ಪ ಸೇರಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ.
ಶಕ್ತಿ ನೀಡುತ್ತದೆ : ತುಪ್ಪವು ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳನ್ನು (MCT) ಹೊಂದಿರುತ್ತದೆ. ಅವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತವೆ. ಕಾಫಿಗೆ ತುಪ್ಪವನ್ನು ಸೇರಿಸುವುದರಿಂದ ಶಕ್ತಿಯ ಮಟ್ಟ ಮತ್ತು ತ್ರಾಣ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ.
ತೂಕ ನಿಯಂತ್ರಣ: ತುಪ್ಪದಲ್ಲಿ ಆರೋಗ್ಯಕರ ಕೊಬ್ಬುಗಳಿವೆ. ಇವು ತೂಕ ಇಳಿಸಲು ಸಹಾಯ ಮಾಡುತ್ತವೆ. ಕಾಫಿಗೆ ತುಪ್ಪವನ್ನು ಮಿತವಾಗಿ ಸೇರಿಸುವುದರಿಂದ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಒಂದು ತಿಂಗಳು ಕಾಫಿ, ಟೀ ಕುಡಿಯದಿದ್ದರೆ ನಿಮ್ಮ ದೇಹಕ್ಕೆ ಏನಾಗುತ್ತೆ?
ಆರೋಗ್ಯಕರ ಹೃದಯ: ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ತುಪ್ಪದೊಂದಿಗೆ ಕಾಫಿ ಕುಡಿಯುವುದರಿಂದ ಹೃದಯವು ಆರೋಗ್ಯವಾಗಿರುತ್ತದೆ ಮತ್ತು ಹೃದಯದ ತೊಂದರೆಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಹೊಳೆಯುವ ತ್ವಚೆ: ತುಪ್ಪದಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿವೆ. ಇವು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಪ್ರತಿದಿನ ಬುಲೆಟ್ ಪ್ರೂಫ್ ಕಾಫಿ ಕುಡಿಯುವುದರಿಂದ ವಯಸ್ಸಾದ ತ್ವಚೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು. ಅಲ್ಲದೇ ತುಪ್ಪ ಬೆರೆಸಿದ ಕಾಫಿ ಕುಡಿಯುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ. ಅಲ್ಲದೆ ಮೂಳೆಗಳು ಆರೋಗ್ಯಕರ ಮತ್ತು ಬಲವಾಗಿರುತ್ತವೆ. ತುಪ್ಪ ಬೆರೆಸಿದ ಕಾಫಿಯಿಂದ ಎಷ್ಟೇ ಪ್ರಯೋಜನಗಳಿದ್ದರೂ.. ಈ ಕಾಫಿಯನ್ನು ನಿಮ್ಮ ಆಹಾರದಲ್ಲಿ ತೆಗೆದುಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಬುಲೆಟ್ ಪ್ರೂಫ್ ಕಾಫಿ ತಯಾರಿಸುವ ಬಗೆ:
ಬೇಕಾಗುವ ಪದಾರ್ಥಗಳು:
- ನೀರು - 1 ಗ್ಲಾಸ್
- ಕಾಫಿ ಪುಡಿ - 1 ಟೀಸ್ಪೂನ್
- ತುಪ್ಪ - 1 ಟೀಸ್ಪೂನ್
ತಯಾರಿಸುವ ವಿಧಾನ:
- ಮೊದಲು ಸ್ಟವ್ ಆನ್ ಮಾಡಿ ಮತ್ತು ಒಂದು ಬೌಲ್ ನೀರನ್ನು ಹಾಕಿ ಬಿಸಿ ಮಾಡಿ.
- ಅದರ ನಂತರ ಇನ್ನೊಂದು ಲೋಟ ತೆಗೆದುಕೊಂಡು ಅದರಲ್ಲಿ ಕಾಫಿ ಪುಡಿ ಮತ್ತು ತುಪ್ಪ ಹಾಕಿ ಮಿಶ್ರಣ ಮಾಡಿ.
- ಈಗ ಅದಕ್ಕೆ ಬಿಸಿನೀರನ್ನು ಹಾಕಿ ಮತ್ತು ಹ್ಯಾಂಡ್ ಬ್ಲೆಂಡರ್ ಸಹಾಯದಿಂದ 30 ಸೆಕೆಂಡುಗಳ ಕಾಲ ಮಿಶ್ರಣ ಮಾಡಿ.
- ಅದರ ನಂತರ ಅದನ್ನು ಒಂದು ಕಪ್ಗೆ ಸುರಿಯಿರಿ ಮತ್ತು ಕುಡಿಯಿರಿ.
ಓದುಗರ ಗಮನಕ್ಕೆ: ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.