ETV Bharat / health

ಪಾರ್ಕಿನ್ಸನ್ ಪ್ಲಸ್ ಸಿಂಡ್ರೋಮ್‌ ರೋಗ: ಫ್ರಾನ್ಸ್‌ ಮಹಿಳೆಗೆ ಹೈ ಸರ್ವಿಕಲ್‌ ಸ್ಪೈನಲ್‌ಕಾರ್ಡ್‌ ಸ್ಟಿಮುಲೇಷನ್‌ ಚಿಕಿತ್ಸೆ ಯಶಸ್ವಿ - Cervical Spinal Cord Stimulation

ಪಾರ್ಕಿನ್ಸನ್ ಪ್ಲಸ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಫ್ರಾನ್ಸ್‌ ಮೂಲದ ಮಹಿಳೆಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ಪಾರ್ಕಿನ್ಸನ್ ಪ್ಲಸ್ ಸಿಂಡ್ರೋಮ್‌ ರೋಗ: ಹೈ ಸರ್ವಿಕಲ್‌ ಸ್ಪೈನಲ್‌ಕಾರ್ಡ್‌ ಸ್ಟಿಮುಲೇಷನ್‌ ಚಿಕಿತ್ಸೆ ನೀಡಿದ ಫೋರ್ಟಿಸ್‌ ಆಸ್ಪತ್ರೆ

author img

By ETV Bharat Karnataka Team

Published : Apr 15, 2024, 10:55 PM IST

ಬೆಂಗಳೂರು: ಪಾರ್ಕಿನ್ಸನ್ ಪ್ಲಸ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ 65 ವರ್ಷದ ಫ್ರಾನ್ಸ್‌ ಮೂಲದ ಮಹಿಳೆಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ "ಹೈ ಸರ್ವಿಕಲ್‌ ಸ್ಪೈನಲ್‌ಕಾರ್ಡ್‌ ಸ್ಟಿಮುಲೇಷನ್‌" (ಉನ್ನತ ಗರ್ಭಕಂಠದ ಬೆನ್ನುಹುರಿಯ ಚಿಕಿತ್ಸೆ)ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ದೇಶದಲ್ಲೇ ಮೊದಲ ಬಾರಿ ಈ ಶಸ್ತ್ರಚಿಕಿತ್ಸೆ ನಡೆಸಿರುವುದು ವಿಶೇಷ. ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಹೆಚ್ಚುವರಿ ನಿರ್ದೇಶಕ ಡಾ.ರಘುರಾಮ್ ಜಿ ಮತ್ತು ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ.ಗುರುಪ್ರಸಾದ್ ಹೊಸೂರ್ಕರ್‌ ಅವರ ತಂಡವು ಈ ಅಪರೂಪದ ಚಿಕಿತ್ಸೆ ನಡೆಸಿದೆ.

ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಹೆಚ್ಚುವರಿ ನಿರ್ದೇಶಕ ಡಾ. ರಘುರಾಮ್, ಇಳಿವಯಸ್ಸಿನಲ್ಲಿ ಕೈ-ಕಾಲು ನಡುಕ ಉಂಟು ಮಾಡುವ ಪಾರ್ಕಿನ್ಸನ್‌ ಕಾಯಿಲೆ ಸರ್ವೆ ಸಾಮಾನ್ಯ. ಆದರೆ, ಫ್ರಾನ್ಸ್‌ ಮೂಲದ ಮಹಿಳೆಗೆ ಪಾರ್ಕಿನ್ಸನ್ ಪ್ಲಸ್ ಸಿಂಡ್ರೋಮ್‌ ಸಮಸ್ಯೆ ಕಾಡುತ್ತಿತ್ತು. ಇವರಿಗೆ ಕಾಲುಗಳಲ್ಲಿ ಬಿಗಿತ, ನಡಿಗೆಯಲ್ಲಿ ಆರಂಭಿಕ ತೊಂದರೆ, ಕಾಲು ಮರಗಟ್ಟುವುದು, ದೌರ್ಬಲ್ಯ, ಖಿನ್ನತೆ ಇತರೆ ಸಮಸ್ಯೆಗಳು ಕಾಡುತ್ತಿದ್ದವು. ಇದರಿಂದ ಅವರು 8 ತಿಂಗಳ ಕಾಲ ಗಾಲಿಕುರ್ಚಿಯಲ್ಲಿಯೇ ಜೀವನ ನಡೆಸಬೇಕಾಗಿತ್ತು ಎಂದು ವಿವರಿಸಿದರು.

ಆಫ್ರಿಕಾ, ಇಂಗ್ಲೆಂಡ್ ಮತ್ತು ಪ್ಯಾರಿಸ್‌ನಂತಹ ಮುಂದುವರೆದ ದೇಶಗಳಲ್ಲಿಯೂ ಇವರಿಗೆ ಸೂಕ್ತ ರೀತಿಯ ಚಿಕಿತ್ಸೆ ಲಭ್ಯವಾಗಲಿಲ್ಲ. ಆದರೆ ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಸಂಪೂರ್ಣ ತಪಾಸಣೆ ನಡೆಸಿ, ಅವರಿಗೆ ಪಾರ್ಕಿನ್ಸನ್ ಪ್ಲಸ್ ಸಿಂಡ್ರೋಮ್‌ ಇರುವುದನ್ನು ಪತ್ತೆ ಹಚ್ಚಲಾಯಿತು. ಈ ಸಮಸ್ಯೆಯನ್ನು ಪಾರ್ಕಿನ್ಸೋನಿಸಂ ಎಂದೂ ಕರೆಯಲ್ಪಡುವ ಇದು ಪಾರ್ಕಿನ್ಸನ್ ಕಾಯಿಲೆಯ ಲಕ್ಷಣಗಳನ್ನೇ ಹೊಂದಿದ್ದರು, ಚಿಕಿತ್ಸೆ ಮಾತ್ರ ಪಾರ್ಕಿನ್ಸನ್‌ಗೆ ನೀಡುವ ಚಿಕಿತ್ಸೆ ಇದಕ್ಕೆ ಪರಿಹಾರ ನೀಡುವುದಿಲ್ಲ. ಹೀಗಾಗಿ ಹೊಸ ವಿಧಾನದ ಚಿಕಿತ್ಸೆಯಾದ “ಹೈ ಸರ್ವಿಕಲ್‌ ಸ್ಪೈನಲ್‌ಕಾರ್ಡ್‌ ಸ್ಟಿಮುಲೇಷನ್‌” ಚಿಕಿತ್ಸೆಯನ್ನು ಆಯ್ದುಕೊಂಡೆವು. ಈ ಚಿಕಿತ್ಸೆಯು ಭಾರತದಲ್ಲೇ ಮೊದಲ ಬಾರಿಗೆ ನಡೆಸಿರುವುದು ವಿಶೇಷ ಎಂದು ತಿಳಿಸಿದರು.

ಫೋರ್ಟಿಸ್‌ ಆಸ್ಪತ್ರೆ
ಫೋರ್ಟಿಸ್‌ ಆಸ್ಪತ್ರೆ

ಇವರ ಮೆದುಳಿಗೆ ಸಂಪರ್ಕ ಹೊಂದಿರುವ ಸ್ಪೈನಲ್‌ಕಾರ್ಡ್‌ ಉದ್ದಕ್ಕೂ ವಿದ್ಯುಚ್ಛಕ್ತಿ ಹರಿಸುವ ಮೂಲಕ ವಿಭಿನ್ನ ರೀತಿಯ ಪ್ರಯತ್ನ ನಡೆಸಲಾಯಿತು. ಹೈ ಸರ್ವಿಕಲ್‌ ಸ್ಪೈನಲ್‌ಕಾರ್ಡ್‌ ಸ್ಟಿಮುಲೇಷನ್‌" ಚಿಕಿತ್ಸೆ ಮೂಲಕ ಆಕೆಯು ಸಂಪೂರ್ಣ ಗುಣಮುಖರಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ಕೇವಲ 10 ದಿನಗಳಲ್ಲಿಯೇ ಆಸ್ಪತ್ರೆಯಿಂದ ಡಿಸ್ಚಾರ್ಚ್‌ ಆದರು ಎಂದರು.

ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ಗುರುಪ್ರಸಾದ್ ಹೊಸೂರ್ಕರ್ ಮಾತನಾಡಿ, ರೋಗಿಯು ಕೇವಲ ನಡುಕದಂತಹ ಸಮಸ್ಯೆ ಅಷ್ಟೇ ಅಲ್ಲದೆ, ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಹೈ ಸರ್ವಿಕಲ್‌ ಸ್ಪೈನಲ್‌ಕಾರ್ಡ್‌ ಸ್ಟಿಮುಲೇಷನ್‌ ಮಾಡಲು ನಿರ್ಧರಿಸಿದೆವು. ರೋಗಿಯು ಇದೀಗ ಸಂಪೂರ್ಣ ಗುಣಮುಖರಾಗಿ ತಮ್ಮ ಕಾಲ ಮೇಲೆ ನಡೆದಾಡುವ ಸಾಮರ್ಥ್ಯವನ್ನೂ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಜಲಮಂಡಳಿ ತೋಡಿದ್ದ ಗುಂಡಿಗೆ ಬಿದ್ದು ಯುವಕ ಸಾವು: ಇಬ್ಬರ ಸ್ಥಿತಿ ಗಂಭೀರ - young man died

ETV Bharat Logo

Copyright © 2024 Ushodaya Enterprises Pvt. Ltd., All Rights Reserved.