ETV Bharat / health

ನೆನೆಸಿಟ್ಟ ಖರ್ಜೂರ ಸೇವನೆಯಿಂದ ಮೂಳೆಗೆ ಬಲ, ಮಧುಮೇಹ ದೂರ; ಪುರುಷರಿಗೆ ಈ ಪ್ರಯೋಜನ! - Soaked Dates Benefits

ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳಿವೆ.

ನೆನೆಸಿದ ಖರ್ಜೂರ ಸೇವನೆಯ ಪ್ರಯೋಜನ
ಖರ್ಜೂರ (ETV Bharat)
author img

By ETV Bharat Karnataka Team

Published : Jul 4, 2024, 8:30 PM IST

ಡ್ರೈ ಫ್ರೂಟ್ಸ್ (ಒಣ ಹಣ್ಣುಗಳು) ಹೇರಳ ಪೋಷಕಾಂಶಗಳನ್ನು ಒಳಗೊಂಡಿದ್ದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಕೆಲವರು ಇದನ್ನು ಹಾಗೆಯೇ ತಿಂದರೆ, ಇನ್ನು ಕೆಲವರು ನೀರಿನಲ್ಲಿ ನೆನೆಸಿ ಅಥವಾ ಜ್ಯೂಸ್​ ಮಾಡಿ ಸೇವಿಸುತ್ತಾರೆ. ಈ ಒಣಹಣ್ಣುಗಳ ಪೈಕಿ ಖರ್ಜೂರ ಪ್ರಮುಖವಾದದ್ದು. ಖರ್ಜೂರ ಅನೇಕ ಪೋಷಕಾಂಶಗಳನ್ನು ಹೊಂದಿದ್ದು ಜನರು ಹೆಚ್ಚು ಇಷ್ಟಪಡುತ್ತಾರೆ. ಇದನ್ನು ನೆನೆ ಹಾಕಿ ತಿನ್ನುವುದರಿಂದ ಆರೋಗ್ಯಕ್ಕೆ ಇನ್ನೂ ಹೆಚ್ಚು ಪ್ರಯೋಜನವಿದೆ.

ಹೇರಳ ಫೈಬರ್​: ನೆನೆ ಹಾಕಿದ ಖರ್ಜೂರ ಆಹಾರದಲ್ಲಿರುವ ಫೈಬರ್‌ನ ಅತ್ಯುತ್ತಮ ಮೂಲ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕರುಳನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಹಸಿವು ನೀಗಿಸುತ್ತದೆ.

ದೇಹದ ಶಕ್ತಿ ವೃದ್ಧಿ: ಖರ್ಜೂರ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳ ನೈಸರ್ಗಿಕ ಮೂಲವಾಗಿದೆ. ಕಾರ್ಬೋಹೈಡ್ರೇಟ್‌ಗಳು ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ. ವ್ಯಾಯಾಮಕ್ಕೂ ಮೊದಲು ಸೇವಿಸಿದರೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಮೂಳೆಗಳಿಗೆ ಬಲ: ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ರಂಜಕದಂತಹ ಖನಿಜಗಳು ಸಮೃದ್ಧ. ಇವು ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳಲು ಅವಶ್ಯಕ.

ಮಧುಮೇಹ ನಿಯಂತ್ರಣ: ಖರ್ಜೂರ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕರುಳಿನಿಂದ ಗ್ಲೂಕೋಸ್​ ಹೀರಿಕೊಳ್ಳುವ ಪ್ರಮಾಣವನ್ನು ತಗ್ಗಿಸಲು ನೆರವಾಗುವ ಅನೇಕ ಗುಣಗಳು ಇದರಲ್ಲಿವೆ. ಇದು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಪುರುಷರಲ್ಲಿ ಫಲವತ್ತತೆ ವೃದ್ಧಿ: ಖರ್ಜೂರದಲ್ಲಿ ಅನೇಕ ಜೀವಸತ್ವಗಳು, ಖನಿಜಗಳಿವೆ. ಪುರುಷರಲ್ಲಿ ವೀರ್ಯ ಸಂಖ್ಯೆಯನ್ನು ಸುಧಾರಿಸಲು ಮತ್ತು ಅವರ ಲೈಂಗಿಕತೆ ಶಕ್ತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ. ಖರ್ಜೂರದಲ್ಲಿ ಫ್ಲೇವನಾಯ್ಡ್‌ಗಳು ಮತ್ತು ವಿವಿಧ ಅಮೈನೋ ಆಮ್ಲಗಳ ಉಪಸ್ಥಿತಿ ಸಾಕಷ್ಟು ಶಕ್ತಿಯೊಂದಿಗೆ ಲೈಂಗಿಕ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.

ಗಮನಿಸಿ: ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಸಂದೇಹ ಮತ್ತು ಸಮಸ್ಯೆಗಳಿದ್ದರೆ ನಿಮ್ಮ ವೈಯಕ್ತಿಕ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನೂ ಓದಿ: ತಿಂಗಳಲ್ಲೇ ಕರಗಿಸಿ ಡೊಳ್ಳು ಹೊಟ್ಟೆ; ಈ ಆಹಾರದಿಂದ ದೂರವಿದ್ರೆ ನೀವು ಸ್ಲಿಮ್​ ಅಂಡ್​​ ಫಿಟ್​ - HOW TO REDUCE BELLY FAT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.