ETV Bharat / health

ಉಪವಾಸ ಮಾಡಿ-ಆರೋಗ್ಯ ಕಾಪಾಡಿಕೊಳ್ಳಿ: ದೇಹದಲ್ಲಿ ಆಗುತ್ತವೆ ಇಷ್ಟೊಂದು ಬದಲಾವಣೆಗಳು! - Fasting Benefits - FASTING BENEFITS

Fasting Benefits : ಜನರು ತಮ್ಮ ಧಾರ್ಮಿಕ ನಂಬಿಕೆಗಳಿಂದ ಉಪವಾಸ ಮಾಡುತ್ತಾರೆ, ಆದರೆ ಕೆಲವರು ತೂಕ ಇಳಿಸಿಕೊಳ್ಳಲು ಅಥವಾ ಆರೋಗ್ಯದ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಆದರೆ, ಈ ರೀತಿ ಉಪವಾಸ ಮಾಡುವುದರಿಂದ ದೇಹದಲ್ಲಿ ಕೆಲವು ಅಚ್ಚರಿಯ ಬದಲಾವಣೆಗಳು ಉಂಟಾಗುತ್ತವೆ ಎನ್ನುತ್ತಾರೆ ತಜ್ಞರು.

EFFECTS OF FASTING ON BODY  BENEFITS OF FASTING  UPAVASA
ಉಪವಾಸ ಮಾಡಿ-ಆರೋಗ್ಯ ಕಾಪಾಡಿಕೊಳ್ಳಿ (ETV Bharat)
author img

By ETV Bharat Karnataka Team

Published : Aug 3, 2024, 3:41 PM IST

ಹೈದರಾಬಾದ್: ದೇವರ ಮೇಲಿನ ಭಕ್ತಿ ಮತ್ತು ಧಾರ್ಮಿಕ ನಂಬಿಕೆಗಳಿಂದ ಅನೇಕ ಜನರು ವಾರದಲ್ಲಿ ಒಂದು ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಉಪವಾಸ ಮಾಡುತ್ತಾರೆ. ಆದರೆ ಕೆಲವರು ತೂಕ ಇಳಿಸಿಕೊಳ್ಳಲು ಅಥವಾ ಆರೋಗ್ಯದ ಕಾರಣಗಳಿಗಾಗಿ ಉಪವಾಸ ಮಾಡುತ್ತಾರೆ. ಕೆಲವರು ನೀರು, ಜ್ಯೂಸ್ ಕುಡಿದು ಉಪವಾಸ ಮಾಡಿದರೆ ಇನ್ನೂ ಕೆಲವರು ಊಟ, ನೀರು ಇಲ್ಲದೆ ಉಪವಾಸ ಮಾಡುತ್ತಾರೆ. ಆದರೆ ನೀವು ಕೆಲವು ಗಂಟೆಗಳ ಕಾಲ ಆಹಾರ ಅಥವಾ ನೀರನ್ನು ಸೇವಿಸದಿದ್ದರೆ ನಿಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎಂದು ನಿಮಗೆ ತಿಳಿದಿದೆಯೇ?.. ಇದರ ತಿಳಿದುಕೊಳ್ಳುವುದು ಅವಶ್ಯಕ ಎನ್ನುತ್ತಾರೆ ತಜ್ಞರು.

ಹೃದಯದ ಆರೋಗ್ಯ: ಉಪವಾಸವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಹೃದಯವನ್ನು ಆರೋಗ್ಯವಾಗಿಡುತ್ತದೆ ಎನ್ನುತ್ತಾರೆ ತಜ್ಞರು. ಆದರೆ, ಜೀವನಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಹಾಗೂ ಮಧ್ಯಂತರ ಉಪವಾಸ ಮಾಡುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ.

ಸಕ್ಕರೆ ಮಟ್ಟ ನಿಯಂತ್ರಣ: ಉಪವಾಸವು ನಮ್ಮ ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ ಎನ್ನುತ್ತಾರೆ ತಜ್ಞರು.

ಮೆದುಳು ಸಕ್ರಿಯ: ನಮ್ಮ ದೇಹವು ಉಪವಾಸ ಮಾಡಿದಾಗ, ಕೊಬ್ಬು ಶಕ್ತಿಯಾಗಿ ಪರಿವರ್ತನೆಗೊಳ್ಳಲು ಪ್ರಾರಂಭಿಸುತ್ತದೆ. ಈ ಪ್ರಕ್ರಿಯೆಯನ್ನು 'ಕೀಟೋಸಿಸ್' ಎಂದು ಕರೆಯಲಾಗುತ್ತದೆ. ಇದಲ್ಲದೇ ಉಪವಾಸದ ನಂತರ ಆಹಾರ ಸೇವಿಸಿದಾಗ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಇದು ನಮ್ಮನ್ನು ಹೆಚ್ಚು ಸಕ್ರಿಯವಾಗಿ ಮತ್ತು ಎಚ್ಚರವಾಗಿರಿಸಲು ಸಹಾಯ ಮಾಡುತ್ತದೆ.

ಬೆಳವಣಿಗೆಯ ಹಾರ್ಮೋನ್ ಹೆಚ್ಚಿಸುತ್ತದೆ: ಉಪವಾಸವು ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ. ಆದರೂ ಕಾರ್ಟಿಸೋಲ್ ಬೆಳವಣಿಗೆಯ ಹಾರ್ಮೋನ್ ಸ್ರವಿಸುವಿಕೆಯನ್ನು ಪ್ರಚೋದಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಬೆಳವಣಿಗೆಯ ಹಾರ್ಮೋನ್ ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೋಶಗಳು ಮತ್ತು ಸ್ನಾಯುಗಳ ಪುನರುತ್ಪಾದನೆಯು ಸ್ವಲ್ಪ ಮಟ್ಟಿಗೆ ಒಳ್ಳೆಯದು ಎಂದು ತಜ್ಞರು ಸೂಚಿಸುತ್ತಾರೆ.

ತೂಕ ಇಳಿಕೆ: ಉಪವಾಸದ ಸಮಯದಲ್ಲಿ ನಾವು ಸೇವಿಸುವ ಆಹಾರದಿಂದ ತೂಕದಲ್ಲಿ ಇಳಿಕೆ ಕಂಡುಬರುತ್ತದೆ. ಆದ್ದರಿಂದ ದೇಹದ ಕ್ಯಾಲೋರಿ ಸೇವನೆಯೂ ಕಡಿಮೆಯಾಗುತ್ತದೆ. ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಕಡಿಮೆ ಕ್ಯಾಲೊರಿಗಳನ್ನು ಸೇವಿಸಿದಾಗ, ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಗಾಗಿ ಬಳಸಲಾಗುತ್ತದೆ. ಇದರಿಂದ ತೂಕ ಕಡಿಮೆಯಾಗುತ್ತದೆ. ಇದಲ್ಲದೆ, ಕೆಲವು ರೀತಿಯ ಉಪವಾಸವು ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಂದರೆ ದೇಹವು ಹೆಚ್ಚು ಕ್ಯಾಲೊರಿಗಳನ್ನು ಸೇವಿಸಲು ಪ್ರಾರಂಭಿಸುತ್ತದೆ. ಆಗ ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಉಪವಾಸದಿಂದ ತೂಕ ಇಳಿಸುವ ಬಗ್ಗೆಯೂ ಕೆಲವು ಸಂಶೋಧನೆಗಳು ನಡೆದಿವೆ. 2018 ರಲ್ಲಿ "ನ್ಯೂಟ್ರಿಷನ್ ರಿವ್ಯೂಸ್" ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯ ಪ್ರಕಾರ, ತೂಕ ನಷ್ಟಕ್ಕೆ ವಿವಿಧ ರೀತಿಯ ಉಪವಾಸ ವಿಧಾನಗಳು ಉಪಯುಕ್ತವಾಗಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಪ್ರೊಫೆಸರ್ ಡಾ. ಜಾನ್ ಡಾನ್ಸನ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ, ಉಪವಾಸದ ಕೆಲವು ಪ್ರಯೋಜನಗಳ ಹೊರತಾಗಿಯೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಉಪವಾಸ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸೂಚಿಸುತ್ತಾರೆ.

ಓದಿ: ಅಚ್ಚರಿ..ಆಶ್ಚರ್ಯ: ಎಣ್ಣೆ ಇಲ್ಲದೆಯೇ ಪೂರಿ ಮಾಡಬಹುದು ಗೊತ್ತಾ?; ತಯಾರಿಕೆಯೂ ಸುಲಭ - ತುಂಬಾ ರುಚಿ! - How to make Oil Free Poori Recipe

ETV Bharat Logo

Copyright © 2025 Ushodaya Enterprises Pvt. Ltd., All Rights Reserved.