ETV Bharat / health

ನಿಮ್ಮ ದೃಷ್ಟಿ ಮಂದವಾಗುತ್ತಿದೆಯಾ? ಈ ವ್ಯಾಯಾಮ ಮಾಡಿ ನೋಡಿ ಸ್ಪಷ್ಟವಾಗಿ ಕಾಣಿಸುತ್ತೆ..!!, ನೀವೂ ಒಮ್ಮೆ ಟ್ರೈ ಮಾಡಿ! - HOW TO IMPROVE EYE VISION - HOW TO IMPROVE EYE VISION

EYE CARE TIPS ; ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗ. ದೃಷ್ಟಿ ಇಲ್ಲದಿದ್ದರೆ ಜೀವನವೇ ಕತ್ತಲೆ ಎಂಬುದಂತೂ ಸತ್ಯ. ಹೀಗಾಗಿ ಅಮೂಲ್ಯವಾಗಿರುವ ಕಣ್ಣುಗಳನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ ಅಂತಾರೆ ತಜ್ಞರು. ನಿಧಾನ ದೃಷ್ಟಿ ಹೊಂದಿರುವ ಯಾರಾದರೂ ಇದ್ದರೆ, ಸರಳ ವ್ಯಾಯಾಮದಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

Eye Vision Improve Exercises
ನಿಮ್ಮ ದೃಷ್ಟಿ ಮಂದವಾಗುತ್ತಿದೆಯಾ? ಈ ವ್ಯಾಯಾಮ ಮಾಡಿದರೆ ಸ್ಪಷ್ಟವಾಗಿ ಕಾಣಿಸುತ್ತೆ.. ನೀವೂ ಒಮ್ಎ ಟ್ರೈ ಮಾಡಿ! (ETV Bharat)
author img

By ETV Bharat Karnataka Team

Published : Jun 11, 2024, 8:20 AM IST

Eye Vision Improve Exercises: ಇಂದಿನ ಡಿಜಿಟಲ್ ಯುಗದಲ್ಲಿ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡಗಳು ಉಂಟಾಗುತ್ತಿವೆ. ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಹೆಚ್ಚಿದ ಬಳಕೆಯಿಂದಾಗಿ ಅನೇಕ ಜನರು ವಿವಿಧ ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವು ವ್ಯಾಯಾಮಗಳಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು ಅಂತಾರೆ ನೇತ್ರ ತಜ್ಞರು.

ಪಾಮಿಂಗ್: ಈ ಸರಳ ಕಣ್ಣಿನ ವ್ಯಾಯಾಮವು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ.. ಮೊದಲು ಶಾಂತ ಚಿತ್ತವಾಗಿ, ಆರಾಮದಾಯಕವಾಗಿ ನೆಲದ ಮೇಲೆ ಕುಳಿತು, ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಧಾನವಾಗಿ ಆಳವಾದ ಉಸಿರನ್ನು ತೆಗೆದುಕೊಳ್ಳಿ. ಆ ಸಮಯದಲ್ಲಿ ನಿಮ್ಮ ಅಂಗೈಗಳನ್ನು ಗಟ್ಟಿಯಾಗಿ ಉಜ್ಜಿ. ಹೀಗೆ ಮಾಡುವುದರಿಂದ ಅವು ಬೆಚ್ಚಗಾಗುತ್ತವೆ. ಅದನ್ನು ನಿಮ್ಮ ಮುಚ್ಚಿದ ಕಣ್ಣುರೆಪ್ಪೆಗಳ ಮೇಲೆ ನಿಧಾನವಾಗಿ ಇರಿಸಿ. ಈ ರೀತಿ ಮಾಡುವುದರಿಂದ, ಕಣ್ಣುಗಳು ನಿಮ್ಮ ಕೈಗಳ ಉಷ್ಣತೆಯನ್ನು ಅನುಭವಿಸುತ್ತವೆ ಮತ್ತು ಕಣ್ಣಿನ ಸ್ನಾಯುಗಳನ್ನು ವಿಶ್ರಾಂತಿ ಪಡೆದುಕೊಳ್ಳುತ್ತವೆ. ಈ ಪ್ರಕ್ರಿಯೆಯನ್ನು 5 ರಿಂದ 10 ನಿಮಿಷಗಳ ಕಾಲ ಪುನರಾವರ್ತಿಸುವುದರಿಂದ ಹೆಚ್ಚು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.

ಕಣ್ಣಿನ ರೋಲ್: ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುವುದು ನೇತ್ರ ತಜ್ಞರ ಹೇಳಿಕೆಯಾಗಿದೆ. ಇದಕ್ಕಾಗಿ ಮೊದಲು ನೆಲದ ಮೇಲೆ ಕುಳಿತುಕೊಳ್ಳಿ ಮತ್ತು ಬೆನ್ನನ್ನು ನೇರವಾಗಿ ಇರಿಸಿ. ನಂತರ ನಿಮ್ಮ ಕೈಗಳನ್ನು ನಿಮ್ಮ ಮಡಿಲಲ್ಲಿ ಇರಿಸಿ ಮತ್ತು ನಿಮ್ಮ ತಲೆಯನ್ನು ಚಲಿಸದೇ 10-15 ಸೆಕೆಂಡುಗಳ ಕಾಲ ಪ್ರದಕ್ಷಿಣಾಕಾರವಾಗಿ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಕಣ್ಣುಗಳನ್ನು ನಿಧಾನವಾಗಿ ತಿರುಗಿಸಿ. ನಂತರ ಇನ್ನೊಂದು 10-15 ಸೆಕೆಂಡುಗಳ ಕಾಲ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ. ನಿಮ್ಮ ಕಣ್ಣುಗಳನ್ನು ರಿಫ್ರೆಶ್ ಮಾಡಲು ಕೆಲವು ಬಾರಿ ಮಿಟುಕಿಸಿ. 5 ರಿಂದ 10 ನಿಮಿಷಗಳ ಕಾಲ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಹೀಗೆ ಮಾಡುವುದರಿಂದ ಕಣ್ಣಿನಲ್ಲಿರುವ ಸ್ನಾಯುಗಳಿಗೆ ಉತ್ತಮ ವ್ಯಾಯಾಮದ ಅನುಭವವಾಗುತ್ತದೆ. ಅಷ್ಟೇ ಏಕೆ ಕಣ್ಣುಗಳಲ್ಲಿ ರಕ್ತದ ಹರಿವು ಸುಧಾರಿಸುತ್ತದೆ. ಕಣ್ಣಿನ ದೃಷ್ಟಿವೂ ಸುಧಾರಿಸುತ್ತದೆ

ಕಣ್ಣು ಮಿಟುಕಿಸುವುದು: ಇದೊಂದು ಸರಳ ವ್ಯಾಯಾಮ. ಇದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಡಿಜಿಟಲ್ ಪರದೆಗಳನ್ನು ಬಳಸುವಾಗ, ದೀರ್ಘಕಾಲದವರೆಗೆ ವಸ್ತುವಿನ ಮೇಲೆ ಗಮನ ಕೇಂದ್ರೀಕರಿಸುವಾಗ ಕಣ್ಣುಗಳು ಪ್ರತಿ ಕೆಲವು ಸೆಕೆಂಡುಗಳಲ್ಲಿ ಮಿಟುಕಿಸುತ್ತಿರುತ್ತೇವೆ. ಹೀಗೆ ಮಿಟುಕಿಸುವುದು ಕಣ್ಣುಗಳಿಗೆ ಉಲ್ಲಾಸ ನೀಡುತ್ತದೆ. ಅಲ್ಲದೇ.. ಶುಷ್ಕತೆಯನ್ನು ತಡೆಯುತ್ತದೆ. ಇದು ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಅಂತಾರೆ ತಜ್ಞರು.

2019 ರಲ್ಲಿ "ಓಪನ್ ಜರ್ನಲ್ ಆಫ್ ನೇತ್ರವಿಜ್ಞಾನ" ದಲ್ಲಿ ಪ್ರಕಟವಾದ ವರದಿಯ ಪ್ರಕಾರ, 10 ನಿಮಿಷಗಳ ಕಾಲ ದಿನಕ್ಕೆ ಎರಡು ಬಾರಿ ಕಣ್ಣುಗಳನ್ನು ಮಿಟುಕಿಸುವುದರಿಂದ ಕಣ್ಣಿನ ಆಯಾಸ ಮತ್ತು ದೃಷ್ಟಿ ಆಯಾಸದಲ್ಲಿ ಗಮನಾರ್ಹವಾದ ಇಳಿಕೆಯನ್ನು ಕಾಣಬಹುದಾಗಿದೆಯಂತೆ. ಈ ಸಂಶೋಧನೆಯಲ್ಲಿ ಅಮೆರಿಕದ ಸಿನ್ಸಿನಾಟಿ ವಿಶ್ವವಿದ್ಯಾನಿಲಯದ ಖ್ಯಾತ ನೇತ್ರತಜ್ಞ ಡಾ.ಜಾನ್ ಟಿ. ಶೇನ್ ಭಾಗವಹಿಸಿದ್ದರು. ಕಣ್ಣಿನ ರೆಪ್ಪೆಗಳನ್ನು ಮುಚ್ಚುವ ಸರಳ ವ್ಯಾಯಾಮವು ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಂತಾರೆ ಅವರು.

ಗಮನ ಕೇಂದ್ರೀಕರಣ: ಪೆನ್ನಿನಂತಗ ಸಣ್ಣ ವಸ್ತುವನ್ನು ತೋಳಿನ ವ್ಯಾಪ್ತಿಯಲ್ಲಿ ಹಿಡಿದುಕೊಳ್ಳಿ ಮತ್ತು ಅದರ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ನಂತರ ಫೋಕಸ್ ಮಾಡುವಾಗ ವಸ್ತುವನ್ನು ನಿಧಾನವಾಗಿ ನಿಮ್ಮ ಮೂಗಿನ ಕಡೆಗೆ ತನ್ನಿ. ಹಾಗೆಯೇ ವಸ್ತುವನ್ನು ಗಮನದಲ್ಲಿಟ್ಟುಕೊಂಡು ಮತ್ತೆ ದೂರ ಸರಿಯಿರಿ. ಇದನ್ನು 10-15 ಬಾರಿ ಪುನರಾವರ್ತಿಸಿ. ಇದು ಕಣ್ಣಿನ ಆರೋಗ್ಯಕ್ಕೆ ಸಹಕಾರಿ ಎನ್ನುತ್ತಾರೆ ತಜ್ಞರು.

ಮೇಲಿನಿಂದ ಕೆಳಕ್ಕೆ ಚಲನೆ: ಈ ವ್ಯಾಯಾಮವು ಕಣ್ಣಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಕಣ್ಣುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಮೊದಲು ಸಮತಟ್ಟಾದ ನೆಲದ ಮೇಲೆ ನೇರವಾಗಿ ನಿಂತು ಸೀಲಿಂಗ್ ಕಡೆಗೆ ನೋಡಿ. ನಂತರ ನಿಮ್ಮ ನೋಟವನ್ನು ನೆಲದ ಮೇಲೆ ತನ್ನಿ. ಇದನ್ನು 10 ರಿಂದ 15 ಬಾರಿ ಪುನರಾವರ್ತಿಸಬೇಕು. ಹೀಗೆ ಮಾಡುವಾಗ ಮಧ್ಯೆ ಕಣ್ಣು ಮಿಟುಕಿಸಬೇಡಿ. ಮುಗಿದ ನಂತರ ಕಣ್ಣುಗಳನ್ನು ಮುಚ್ಚಿ ಮತ್ತು ಅವುಗಳನ್ನು ನಿಮ್ಮ ಅಂಗೈಗಳಿಂದ ನಿಧಾನವಾಗಿ ಒತ್ತಿರಿ. ಹೀಗೆ ಮಾಡುವುದರಿಂದ ಕಣ್ಣಿನ ಒತ್ತಡ ಕಡಿಮೆಯಾಗುತ್ತದೆ.

ವಿಶೇಷ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಆಪ್ತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿ: ನಿದ್ರೆ ವೇಳೆ ಗೊರಕೆ; ಯಾವ ಸಂದರ್ಭದಲ್ಲಿ ಬೇಕು ವೈದ್ಯಕೀಯ ಚಿಕಿತ್ಸೆ? - Snoring association with sleep apnoea

ನಿಮ್ಮ ಉಗುರುಗಳು ಸುಲಭವಾಗಿ ಮುರಿಯುತ್ತವೆಯೇ? ಬಲವಾಗಿ, ಉದ್ದವಾಗಿ ಬೆಳೆಯಲು ಈ ಸಲಹೆಗಳನ್ನು ಅನುಸರಿಸಿ! - Best Nail Care Tips

ತೂಕ ಇಳಿಸಿಕೊಳ್ಳಲು ನೀವು ಅನ್ನ ತ್ಯಜಿಸಲೇಬೇಕಾ? ಇಲ್ಲಿದೆ ಮಾಹಿತಿ - Losing Weight should we avoid rice

ETV Bharat Logo

Copyright © 2025 Ushodaya Enterprises Pvt. Ltd., All Rights Reserved.