ETV Bharat / health

ಸಾವಿನ ದರ ಕಡಿಮೆ ಮಾಡುವಲ್ಲಿ ಶಿಕ್ಷಣ ಪಾತ್ರ ಪ್ರಮುಖ; ಅಧ್ಯಯನ - ಶಿಕ್ಷಣ ಪ್ರಮುಖ ಪಾತ್ರವಹಿಸಿದೆ

ಶಿಕ್ಷಣವು ಯಾವ ರೀತಿ ವ್ಯಕ್ತಿಯನ್ನು ಸಾವಿನ ಅಪಾಯದಿಂದ ತಪ್ಪಿಸಬಹುದು ಎಂಬ ಕುರಿತು ಈ ಅಧ್ಯಯನ ತಿಳಿಸಿದೆ.

education-can-lower-the-risk-of-death-and-save-life

author img

By PTI

Published : Jan 29, 2024, 3:12 PM IST

ನವದೆಹಲಿ: ಶಾಲೆ ಅಥವಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮಟ್ಟವು ಜನರ ಜೀವಿತಾವಧಿಯನ್ನು ಸುಧಾರಿಸುತ್ತದೆ. ಅದೇ ರೀತಿ ವ್ಯಕ್ತಿಗಳು ಶಿಕ್ಷಣ ಸಂಸ್ಥೆಗಳಂತಹ ಕಲಿಕೆಯಲ್ಲಿ ಭಾಗಿಯಾಗದೇ ಹೋಗುವುದು ಧೂಮಪಾನ ಅಥವಾ ಹೆಚ್ಚಿನ ಮದ್ಯ ಸೇವನೆಯಷ್ಟೇ ಅಪಾಯಕಾರಿ ಎಂದು ದಿ ಲ್ಯಾನ್ಸೆಟ್​ ಪಬ್ಲಿಕ್​ ಹೆಲ್ತ್​ ಜರ್ನಲ್​​ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.

ಶಿಕ್ಷಣ ಜೀವಿತಾವಧಿ ಸುಧಾರಿಸುವಲ್ಲಿ ಪ್ರಾಮುಖ್ಯತೆ ಕುರಿತು ತಿಳಿಯುವ ಉದ್ದೇಶದಿಂದ ಸಂಶೋಧಕರು ಈ ಅಧ್ಯಯನ ನಡೆಸಿದ್ದು, ಇದಕ್ಕಾಗಿ 59 ದೇಶಗಳ ದತ್ತಾಂಶ ಸೇರಿದಂತೆ 600 ಪ್ರಕಟವಾದ ಲೇಖನದಿಂದ 10 ಸಾವಿರ ದತ್ತಾಂಶದ ಪ್ರಮುಖಾಂಶವನ್ನು ಸಂಗ್ರಹಿಸಲಾಗಿದೆ.

ನಾರ್ವೇಜಿಯನ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಸಂಶೋಧಕರ ತಂಡವು ವಯಸ್ಸು, ಲಿಂಗ, ಸ್ಥಳ ಮತ್ತು ಸಾಮಾಜಿಕ ಮತ್ತು ಭೌಗೋಳಿಕ ಹಿನ್ನೆಲೆ ಹೊರತಾಗಿ ಶಿಕ್ಷಣವು ಜೀವಿತಾವಧಿಯನ್ನು ಹೆಚ್ಚಿಸಲಿದೆ. ಅಲ್ಲದೇ, ಪ್ರತಿ ವರ್ಷದ ಹೆಚ್ಚುವರಿ ಅಧ್ಯಯನವು ಶೇ 2ರಷ್ಟು ಸಾವಿನ ದರದ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಅಂದರೆ, ಆರು ವರ್ಷಗಳ ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣವಾಗಿ ಪೂರೈಸಿದ ವ್ಯಕ್ತಿಯ ಸಾವಿನ ಅಪಾಯವು ಶೇ 13ರಷ್ಟು ಕಡಿಮೆ ಎಂದಿದೆ. ಇನ್ನು ಮಾಧ್ಯಮಿಕ ಶಿಕ್ಷಣ ಕಲಿಕೆ ಕಲಿತ ವ್ಯಕ್ತಿ ಶೇ 25ರಷ್ಟು ಕಡಿಮೆ ಸಾವಿನ ದರವನ್ನು ಹೊಂದಿದರೆ, 18 ವರ್ಷಗಳ ಶಿಕ್ಷಣವೂ ಶೇ 34ರಷ್ಟು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಸಂಶೋಧಕರು ಆರೋಗ್ಯಯುತ ಆಹಾರ ಪದ್ಧತಿ, ಧೂಮಪಾನ ಮತ್ತು ಆಲ್ಕೋಹಾಲ್​ ಸೇವನೆ ಸೇರಿದಂತೆ ಇತರೆ ಅಂಶಗಳ ಮೇಲೆ ಶಿಕ್ಷಣವು ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಹೋಲಿಕೆ ಮಾಡಿದ್ದಾರೆ. ಉದಾಹರಣೆಗೆ 18 ವರ್ಷಗಳ ಕಾಲ ಶಿಕ್ಷಣ ಪಡೆದ ವ್ಯಕ್ತಿಯು ತರಕಾರಿಯನ್ನು ಸಂಪೂರ್ಣವಾಗಿ ತಿನ್ನಲು ವಿರೋಧಿಸುವುದಕ್ಕಿಂತ ನಿಗದಿತ ಪ್ರಮಾಣದ ತರಕಾರಿ ಸೇವನೆ ಅಭ್ಯಾಸ ಹೊಂದಿರುತ್ತಾರೆ.

ಶಿಕ್ಷಣದ ಪ್ರಯೋಜನ: ಶಾಲೆಯ ಅಭ್ಯಾಸ ಮಾಡದೇ ಇರುವವರು 10 ವರ್ಷಗಳ ಕಾಲ ದಿನಕ್ಕೆ ಐದು ಅಥವಾ ಹೆಚ್ಚಿನ ಬಾರಿ ಆಲ್ಕೋಹಾಲ್​ ಸೇವನೆ ಅಥವಾ 10 ಬಾರಿ ಧೂಮಪಾನ ಸೇವನೆ ಮಾಡುತ್ತಿರುವುದು ​ಅಧ್ಯಯನದಲ್ಲಿ ಕಂಡು ಬಂದಿದೆ.

ಶಿಕ್ಷಣವು ತನ್ನದೇ ಆದ ಮೌಲ್ಯವನ್ನು ಹೊಂದಿದೆ. ಇದು ಕೇವಲ ಆರೋಗ್ಯಕ್ಕೆ ಮಾತ್ರ ಪ್ರಯೋಜನಕಾರಿಯಲ್ಲ. ಬದಲಾಗಿ ಇದು ಗಮನಾರ್ಹ ಅಭಿವೃದ್ಧಿಯಲ್ಲಿ ಪ್ರಯೋಜನವನ್ನು ಹೊಂದಿದೆ ಎಂದು ಅಧ್ಯಯನದ ಸಹ ಲೇಖಕ ಟೆರ್ಜೆ ಆಂಡ್ರಿಯಾಸ್ ಐಕೆಮೊ ತಿಳಿಸಿದ್ದಾರೆ.

ಶಿಕ್ಷಣದ ಪ್ರಯೋಜನವು ಕೇವಲ ಯುವ ಜನರಿಗೆ ಪ್ರಯೋಜನಕಾರಿಯಾಗಿಲ್ಲ. 50 ಮತ್ತು 70 ವರ್ಷದವರಲ್ಲೂ ಪ್ರಯೋಜನವನ್ನು ಹೊಂದಿದ್ದು, ಶಿಕ್ಷಣವು ರಕ್ಷಣಾತ್ಮಕ ಪರಿಣಾಮವನ್ನು ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸಾವಿನ ದರದ ಅಪಾಯ: ಅಭಿವೃದ್ಧಿಯಲ್ಲಿ ವಿವಿಧ ಹಂತವನ್ನು ತಲುಪಿರುವ ವಿವಿಧ ದೇಶಗಳ ನಡುವೆ ಶಿಕ್ಷಣದ ಪರಿಣಾಮದಲ್ಲಿ ಯಾವುದೇ ಗಮನಾರ್ಹ ಪರಿಣಾಮ ಕಂಡು ಬಂದಿಲ್ಲ. ಇದರರ್ಥ ಬಡ ಮತ್ತು ಶ್ರೀಮಂತ ದೇಶಗಳಲ್ಲಿ ಶಿಕ್ಷಣದಲ್ಲಿನ ಪರಿಣಾಮಗಳು ಒಂದೇ ರೀತಿಯಲ್ಲಿವೆ. ನಾವು ಉತ್ತಮ ಲಭ್ಯತೆಗೆ ಸಾಮಾಜಿಕ ಹೂಡಿಕೆ ಹೆಚ್ಚಿಸಬೇಕಿದೆ. ಜಗತ್ತಿನಾದ್ಯಂತ ಹೆಚ್ಚಿನ ಶಿಕ್ಷಣ ಮಟ್ಟವು ಸಮಾನತೆಯನ್ನು ತರುತ್ತದೆ ಎಂದು ಅಧ್ಯಯನದ ಮತ್ತೊಬ್ಬ ಲೇಖಕರಾದ ಮಿರ್ಜಾ ಬಲಾಜ್​ ತಿಳಿಸಿದ್ದಾರೆ.

ಉತ್ತಮ ಶಿಕ್ಷಣವು ಉದ್ಯೋಗ ಮತ್ತು ಅಧಿಕ ವೇತನ, ಉತ್ತಮ ಆರೋಗ್ಯ ಸೇವೆ ಮತ್ತು ನಮ್ಮ ಆರೈಕೆಗೆ ನಾವೇ ಕಾಳಜಿಯನ್ನು ನೀಡಲು ಸಹಾಯ ಮಾಡುತ್ತದೆ. ಹೆಚ್ಚಿನ ಶಿಕ್ಷಣ ಪಡೆದ ಜನರು ಅವರ ಆರೋಗ್ಯ ಮತ್ತು ಜೀವಿತಾವಧಿಗೆ ಕೊಡುಗೆ ನೀಡುತ್ತಾರೆ ಎಂದಿದ್ದಾರೆ.

ಈ ಸಂಶೋಧನೆಯಲ್ಲಿ ಬಹುತೇಕ ಅಧ್ಯಯನಗಳು ಅಧಿಕ ಆದಾಯ ಗುರಿಯನ್ನು ಹೊಂದಿವೆ. ಈ ಹಿನ್ನೆಲೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಹೆಚ್ಚಿನ ಅಧ್ಯಯನ ಅವಶ್ಯವಿದೆ. ವಿಶೇಷವಾಗಿ ಉಪ ಸಹಾರನ್​ ಮತ್ತು ಉತ್ತರ ಆಫ್ರಿಕಾದ ದತ್ತಾಂಶಗಳು ಭೀತಿ ಮೂಡಿಸುತ್ತವೆ.

ಶಿಕ್ಷಣದ ಅಂತರವನ್ನು ಭರ್ತಿ ಮಾಡುವುದು ಎಂದರೆ, ಸಾವಿನ ಅಂತರ ಭರ್ತಿ ಮಾಡುವುದಾಗಿದೆ. ನಾವು ಅಂತಾರಾಷ್ಟ್ರೀಯ ಸಮಿತಿ ಮೂಲಕ ಬಡತನ ಮತ್ತು ತಡೆಗಟ್ಟಬಹುದಾದ ಸಾವಿನಲ್ಲಿ ಮಧ್ಯಪ್ರವೇಶ ಮಾಡಬಹುದು. ಸಾವಿನ ಅಸಮಾನತೆಯನ್ನು ಕಡಿಮೆ ಮಾಡಲು, ಜನರಿಗೆ ಶಿಕ್ಷಣದ ಅವಕಾಶವನ್ನು ಪಡೆಯುವಂತೆ ಉತ್ತೇಜಿಸಬೇಕಿದೆ. ಇದು ಎಲ್ಲಾ ದೇಶಗಳ ಜನರ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ತರುತ್ತದೆ ಎಂದು ಮತ್ತೊಬ್ಬ ಸಹ ಲೇಖಕ ಕ್ಲೈರೆ ಹೆನ್ಸನ್ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಮೀನು ಬೆಳೆಯಲು ಮುಂದಾದ ಸಿಎಂಎಫ್​ಆರ್​ಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.