ETV Bharat / health

ನೀರಿನ ಬಾಟಲಿಗಳು ಎಷ್ಟೇ ತೊಳೆದರೂ ದುರ್ವಾಸನೆ ಹೋಗುತ್ತಿಲ್ಲವೇ? - ಈ ಟಿಪ್ಸ್​ ಪಾಲಿಸಿದ್ರೆ ಸ್ಮೆಲ್​ ಮಾಯ! - WATER BOTTLES CLEANING TIPS

Water Bottles Cleaning Tips : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ನೀರಿನ ಬಾಟಲಿಗಳನ್ನು ಬಳಸುತ್ತಿದ್ದಾರೆ. ಆದರೆ ಅವುಗಳನ್ನು ಸರಿಯಾಗಿ ಶುಚಿಗೊಳಿಸದಿದ್ದರೆ ಬ್ಯಾಕ್ಟೀರಿಯಾಗಳು ಒಳಗೆ ಸಂಗ್ರಹವಾಗುತ್ತವೆ ಮತ್ತು ಕೆಟ್ಟ ವಾಸನೆ ಬೀರುತ್ತವೆ. ಹಾಗಾಗಿ ನೀರಿನ ಬಾಟಲಿಗಳನ್ನು ಈ ಟಿಪ್ಸ್​ನಿಂದ ಸುಲಭವಾಗಿ ಸ್ವಚ್ಛಗೊಳಿಸಿದರೆ ವಾಸನೆ ದೂರವಾಗುತ್ತದೆ ಎನ್ನುತ್ತಾರೆ ತಜ್ಞರು.

CLEANING TIPS FOR WATER BOTTLES  EASY TIPS TO CLEAN WATER BOTTLES  HOW TO CLEAN WATER BOTTLES
ನೀರಿನ ಬಾಟಲಿಗಳು ಎಷ್ಟೇ ಸ್ವಚ್ಛವಾಗಿದ್ದರೂ ದುರ್ವಾಸನೆ ಹೋಗುತ್ತಿಲ್ಲವೇ (ETV Bharat)
author img

By ETV Bharat Karnataka Team

Published : Jul 22, 2024, 2:08 PM IST

Easy Tips To Clean Water Bottles : ಬಹುತೇಕರು ಎಲ್ಲಿಗೇ ಹೋದರೂ ನೀರಿನ ಬಾಟಲಿಯನ್ನು ಜೊತೆಗೆ ಕೊಂಡೊಯ್ಯುತ್ತೇವೆ. ಮೇಲಾಗಿ.. ಮನೆಯಲ್ಲಿಯೂ ಬಾಟಲಿ ನೀರು ಕುಡಿಯುತ್ತಿದ್ದೇವೆ. ಆದರೆ ಆ ಬಾಟಲ್​ಗಳ ಸ್ವಚ್ಛತೆಗೆ ಬಗ್ಗೆ ನಿಷ್ಕಾಳಜಿ ವಹಿಸುವುದುಂಟು.

ಒಂದು ವೇಳೆ ನಾವು ಬಾಟಲಿಗಳನ್ನು ಹೇಗೆ ಸ್ವಚ್ಛಗೊಳಿಸುತ್ತೇವೆ ಎಂದ್ರೆ, ಬಾಟಲಿ ಮೇಲ್ಭಾಗದಲ್ಲಿ ಮಾತ್ರ ಶುಚಿಗೊಳಿಸಿ ಕೈಗಳನ್ನು ತೊಳೆದುಕೊಳ್ಳುತ್ತೇವೆ. ಆದರೆ ಹೀಗೆ ಶುಚಿಗೊಳಿಸುವುದರಿಂದ ಇವುಗಳಲ್ಲಿ ಬ್ಯಾಕ್ಟೀರಿಯಾಗಳು ಶೇಖರಣೆಗೊಂಡು ದುರ್ವಾಸನೆ ಬೀರುತ್ತವೆ. ಜೊತೆಗೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಅದಕ್ಕೇ.. ಈ ಟಿಪ್ಸ್ ಪಾಲಿಸಿ ನೀರಿನ ಬಾಟಲಿಗಳನ್ನು ಕ್ಲೀನ್ ಮಾಡಿದರೆ ದುರ್ವಾಸನೆ ದೂರವಾಗಿ ಹೊಸದರಂತೆ ಕಾಣುತ್ತವೆ.

ಡಿಶ್​ ವಾಷಿಂಗ್​ ಲಿಕ್ವಿಡ್​: ಮೊದಲು ನೀರಿನ ಬಾಟಲಿಯಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ಸುರಿಯಿರಿ. ಅದರ ನಂತರ, ಡಿಶ್​ ವಾಷಿಂಗ್​ ಲಿಕ್ವಿಡ್​ನ ಕೆಲವು ಹನಿಗಳನ್ನು ಹಾಕಿ. ಬಳಿಕ ಕ್ಯಾಪ್ ಅನ್ನು ಹಾಕಿ ಚೆನ್ನಾಗಿ ಅಲ್ಲಾಡಿಸಿ ಮತ್ತು 2 ರಿಂದ 4 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ. ಬಳಿಕ ಬ್ರಶ್ ಸಹಾಯದಿಂದ ಬಾಟಲಿಯ ಒಳಭಾಗವನ್ನು ಸ್ಕ್ರಬ್ ಮಾಡಿ ತೊಳೆಯಿರಿ. ಆದರೆ, ಇದರಲ್ಲಿರುವ ರಾಸಾಯನಿಕಗಳನ್ನು ತೊಳೆಯಲು ಕೊನೆಯಲ್ಲಿ ಸ್ವಲ್ಪ ಉಪ್ಪು ಹಾಕಲು ಮರೆಯಬೇಡಿ ಅಂತಾರೆ ತಜ್ಞರು. ಅಲ್ಲದೆ ಬಾಟಲಿಯ ಮುಚ್ಚಳವನ್ನು ಸ್ವಚ್ಛವಾಗಿ ತೊಳೆಯಿರಿ. ಸ್ವಲ್ಪ ಹೊತ್ತು ಒಣಗಿಸಿ ನಂತರ ಬಳಸಿದರೆ ಉತ್ತಮ ಎನ್ನುತ್ತಾರೆ ತಜ್ಞರು.

ಆದರೆ ತಾಮ್ರದ ನೀರಿನ ಬಾಟಲಿಗಳನ್ನು ಉಪ್ಪಿನಿಂದ ತೊಳೆಯಬಾರದು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಹೀಗೆ ಮಾಡಿದರೆ ಅದು ರಾಸಾಯನಿಕವಾಗಿ ಪ್ರತಿಕ್ರಿಯಿಸಿ ಕಾಪರ್ ಕ್ಲೋರೈಡ್ ಅನ್ನು ರೂಪಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ.. ಬದಲಿಗೆ ಬಿಸಿ ನೀರಿನಿಂದ ಸ್ವಚ್ಛಗೊಳಿಸುವುದು ಉತ್ತಮ.

ನಿಂಬೆ ಮತ್ತು ಬೇವಿನ ಮಿಶ್ರಣ: ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಮತ್ತು ನೀರಿನ ಬಾಟಲಿಗಳನ್ನು ಸ್ವಚ್ಛಗೊಳಿಸುವಲ್ಲಿ ನಿಂಬೆ ಮತ್ತು ಬೇವಿನ ಮಿಶ್ರಣವು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ ಮೊದಲು ಸ್ವಲ್ಪ ಬೇವಿನ ಪುಡಿ ಮತ್ತು ನಿಂಬೆರಸವನ್ನು ಬಾಟಲಿಗೆ ಹಾಕಿ ಅದರಲ್ಲಿ ನೀರು ತುಂಬಿಸಿ ಎರಡು ಮೂರು ಗಂಟೆಗಳ ಕಾಲ ಹಾಗೆ ಇಡಿ. ಬಳಿಕ ಸ್ವಚ್ಛ ನೀರಿನಿಂದ ತೊಳೆದರೆ ಸಾಕು ಎನ್ನುತ್ತಾರೆ ತಜ್ಞರು.

ನಿಂಬೆ ರಸ: ನೀರಿನ ಬಾಟಲಿಗಳಲ್ಲಿ ಕೆಟ್ಟ ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುವಲ್ಲಿ ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ಮೊದಲು ಬಾಟಲಿಯಲ್ಲಿ ಸ್ವಲ್ಪ ಬೆಚ್ಚಗಿನ ನೀರನ್ನು ಸುರಿಯಿರಿ ಮತ್ತು ಅದರಲ್ಲಿ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಅಲ್ಲಾಡಿಸಿ. ನಂತರ ಎರಡು ಅಥವಾ ಮೂರು ಬಾರಿ ತಾಜಾ ನೀರಿನಿಂದ ತೊಳೆಯಿರಿ. ಎಣ್ಣೆಯ ಜೊತೆಗೆ ದುರ್ವಾಸನೆಯೂ ಸುಲಭವಾಗಿ ಮಾಯವಾಗುತ್ತದೆ ಎನ್ನುತ್ತಾರೆ ತಜ್ಞರು. ಇಲ್ಲವಾದರೆ ನಿಂಬೆ ರಸಕ್ಕೆ ವಿನೆಗರ್ ಸೇರಿಸಿ ತೊಳೆದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ಹೇಳಲಾಗುತ್ತದೆ.

"ಅಪ್ಲೈಡ್ ಮೈಕ್ರೋಬಯಾಲಜಿ" ಜರ್ನಲ್‌ನಲ್ಲಿ ಪ್ರಕಟವಾದ 2017 ರ ಅಧ್ಯಯನದ ಪ್ರಕಾರ, ನೀರಿನ ಬಾಟಲಿಗಳಲ್ಲಿ ವಾಸನೆಯನ್ನು ಉಂಟುಮಾಡುವ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯುವಲ್ಲಿ ನಿಂಬೆ ರಸವು ಪರಿಣಾಮಕಾರಿಯಾಗಿದೆ ಎಂದು ಕಂಡುಹಿಡಿದಿದೆ. ಚೀನಾದ ಜಿಯಾಂಗ್ನಾನ್ ವಿಶ್ವವಿದ್ಯಾಲಯದ ಡಾ. ಎಕ್ಸ್.ವಾಂಗ್ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಲಿಂಬೆರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನೀರಿನ ಬಾಟಲಿಗಳ ವಾಸನೆಯನ್ನು ಹೋಗಲಾಡಿಸಲು ಬಹಳ ಸಹಾಯಕವಾಗಿದೆ ಎಂದು ಅವರು ಹೇಳುತ್ತಾರೆ.

ಅಡಿಗೆ ಸೋಡಾ: ನೀರಿನ ಬಾಟಲಿಗಳಿಂದ ಕೆಟ್ಟ ವಾಸನೆ ಮತ್ತು ಸೂಕ್ಷ್ಮಾಣುಗಳನ್ನು ಸೇರಿದಂತೆ ಇನ್ನಿತರ ಕ್ರಿಮಿಕಿಟಗಳನ್ನು ತೆಗೆದುಹಾಕುವಲ್ಲಿ ಅಡಿಗೆ ಸೋಡಾ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ ಒಂದು ಚಮಚ ಅಡಿಗೆ ಸೋಡಾವನ್ನು ಬಾಟಲಿಗೆ ಹಾಕಿ ನೀರು ಸುರಿಯಿರಿ, ಒಂದು ಗಂಟೆ ಬಳಿಕ ಚೆನ್ನಾಗಿ ತೊಳೆಯಿರಿ. ದಿನ ಬಿಟ್ಟು ದಿನ ಹೀಗೆ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ತಜ್ಞರು.

ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಕೆಲವು ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಶಿಫಾರಸುಗಳ ಆಧಾರದ ಮೇಲೆ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.

ಓದಿ: ಮಳೆಗಾಲದಲ್ಲಿ ಸೊಳ್ಳೆ ಕಾಟ ತಡೆಯೋಕಾಗ್ತಿಲ್ವಾ? ಈ ಮನೆಮದ್ದು​ ಬಳಸಿ ಸಾಕು, ಒಂದು ಸೊಳ್ಳೆಯೂ ಕಚ್ಚಲ್ಲ! - How To Keep Away Mosquitoes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.